Morning Digest: ಕರಾವಳಿ ಸೇರಿ ವಿವಿಧ ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ- ಸತತ 12ನೇ ದಿನ ಏರಿಕೆ ಕಂಡ ತೈಲ ಬೆಲೆ- ಬೆಳಗಿನ ಟಾಪ್​ ನ್ಯೂಸ್​ಗಳು

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು? ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:

  1. Zameer Ahmed: ಜಾರಿ ನಿರ್ದೇಶನಾಲಯದ ಅಧಿಕಾರಿಗಳು ನನ್ನನ್ನು ಬಂಧಿಸಿದ್ದಾರೆ ಎಂಬುದು ನಿಜವಲ್ಲ'; ಜಮೀರ್ ಅಹ್ಮದ್


ನವ ದೆಹಲಿ (ಅಕ್ಟೋಬರ್​ 10); "ಜಾರಿ ನಿರ್ದೇಶನಾಲಯ (Enforcement Department) ಅಧಿಕಾರಿಗಳು ನನ್ನನ್ನು ಬಂಧಿಸಿದ್ದಾರೆ ಎಂಬ ಸುದ್ದಿ ನಿಜವಲ್ಲ. ಆಸ್ತಿ ಸಂಪಾದನೆ ಕುರಿತು ವಿಚಾರಣೆಗೆ ಕರೆದಿದ್ದರು, ಇದೀಗ ವಿಚಾರಣೆ ಮುಗಿಸಿ ತೆರಳಿದ್ದೇನೆ. ನನ್ನನ್ನು ಬಂಧಿಸಿಲ್ಲ" ಎಂದು ಮಾಜಿ ಸಚಿವ ಕಾಂಗ್ರೆಸ್​ ನಾಯಕ ಜಮೀರ್​ ಅಹ್ಮದ್ ಖಾನ್ (Zameer Ahmed Khan) ಸ್ಪಷ್ಟಪಡಿಸಿದ್ದಾರೆ. ಐಎಂಎ ಹಗರಣ ಬೆಳಕಿಗೆ ಬಂದಾಗಿನಿಂದಲೂ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಜಮೀರ್ ಅಹ್ಮದ್ ಅವರ ಆಸ್ತಿ ಗಳಿಕೆ, ಅಕ್ರಮ ಆಸ್ತಿ ಮತ್ತು ಹಣದ ವ್ಯವಹಾರದ ಬಗ್ಗೆ ವಿಚಾರಣೆ ನಡೆಸುತ್ತಲೇ ಇದ್ದಾರೆ. ಇದೀಗ ಇಡಿ (ED) ಅಧಿಕಾರಿಗಳು ಕಳೆದ 3 ದಿನಗಳಿಂದ ಜಮೀರ್ ಅಹಮದ್ ಗೆ ನಿರಂತರ ವಿಚಾರಣೆ ನಡೆಸುತ್ತಿದ್ದಾರೆ. ಪ್ರತಿದಿನವೂ ಇಡಿ ಕಚೇರಿಗೆ ಬಂದು ವಿಚಾರಣೆ ಎದುರಿಸುವಂತೆ ಸೂಚನೆ ನೀಡಲಾಗಿದೆ. ಹೀಗಾಗಿ ಅವರನ್ನು ಇಡಿ ಅಧಿಕಾರಿಗಳು ಬಂಧಿಸಿದ್ದಾರೆ ಎಂಬ ಸುದ್ದಿ ಹಬ್ಬಿತ್ತು.

2. Karnataka Weather Today: ರಾಜ್ಯದಲ್ಲಿ ಮುಂದುವರೆಯಲಿದೆ ವರುಣನ ಆರ್ಭಟ- ಮೂರು ದಿನಗಳ ಕಾಲ ವಿವಿಧ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್

Karnataka Rains Today ಬೆಂಗಳೂರು(ಅ.10):ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನೆಲೆ ರಾಜ್ಯದಲ್ಲಿ ಇನ್ನೂ ಮೂರು ದಿನಗಳ ಕಾಲ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ರಾಜ್ಯದ 19 ಜಿಲ್ಲೆಗಳಲ್ಲಿ ಅಧಿಕ ಮಳೆಯಾಗುವ ನಿರೀಕ್ಷೆ ಇದ್ದು,  ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಉತ್ತರ ಒಳನಾಡಿನ ಎಲ್ಲಾ ಜಿಲ್ಲೆಗಳಲ್ಲಿ  ಅಂದರೆ ಬೆಳಗಾವಿ, ಹಾವೇರಿ, ಗದಗ, ಬಾಗಲಕೋಟೆ, ವಿಜಯಪುರ ಮತ್ತು ಕೊಪ್ಪಳ ಜಿಲ್ಲೆಗಳ ಕೆಲವು ಕಡೆ ಇಂದು ಭಾರಿ ಮಳೆಯಾಗುವ ಸಾಧ್ಯತೆ ಇದೆ

3. Bengaluru Power Cut: ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ ಪವರ್ ಕಟ್ - ಎಲ್ಲೆಲ್ಲಿ ಕರೆಂಟ್ ಇರಲ್ಲ- ಇಲ್ಲಿದೆ ಲಿಸ್ಟ್ 

ಇದನ್ನೂ ಓದಿ: 'ಜಾರಿ ನಿರ್ದೇಶನಾಲಯದ ಅಧಿಕಾರಿಗಳು ನನ್ನನ್ನು ಬಂಧಿಸಿದ್ದಾರೆ ಎಂಬುದು ನಿಜವಲ್ಲ'; ಜಮೀರ್ ಅಹ್ಮದ್

ಬೆಂಗಳೂರು(Bengaluru) ನಗರದಲ್ಲಿ ಕಳೆದ ಕೆಲವು ದಿನಗಳಿಂದ ಪವರ್ ಕಟ್(Power Cut) ಸಮಸ್ಯೆ ಆಗದೆ ಇರುವುದಿಲ್ಲ ಎಂಬತಾಗಿದೆ. ಒಂದೆಲ್ಲ ಒಂದು ಪ್ರದೇಶದಲ್ಲಿ ಜನರು ವಿದ್ಯುತ್ ಸಮಸ್ಯೆ ಎದುರಿಸುತ್ತಿದ್ದಾರೆ. ಇಂದು ಸಹ ನಗರದ ಹಲವು  ಏರಿಯಗಳಲ್ಲಿ ಪವರ್ ಕಟ್ ಆಗಲಿದೆ ಎಂದು ಬೆಸ್ಕಾಂ(BESCOM) ಮಾಹಿತಿ ನೀಡಿದೆ.  ಸಣ್ಣಕ್ಕಿ ಬಯಲು , ದಕ್ಷಿಣ ವೃತ್ತದ ಜಯನಗರ, ಕೋರಮಂಗಲ ಹಾಗೂ ಹೆಚ್.ಎಸ್.ಆರ್ ಲೇಔಟ್ ವಿಭಾಗಗಳಲ್ಲಿ ಅಡಚಣೆ ಉಂಟಾಗಲಿದೆ ಎಂದು ತಿಳಿಸಿದೆ.

 4. Gold Price: ಯಥಾಸ್ಥಿತಿ ಕಾಯ್ದುಕೊಂಡ ಚಿನ್ನ- 800 ರೂ ಏರಿಕೆ ಕಂಡ ಬೆಳ್ಳಿ-ಇಂದಿನ ಬೆಲೆ ಹೀಗಿದೆ 

Gold Rate on October 10 2021: ನಿನ್ನೆ ಏರಿಕೆಯಾಗಿದ್ದ ಚಿನ್ನದ ಬೆಲೆ ಇಂದು ಯಥಾಸ್ಥಿತಿ ಕಾಯ್ಡುಕೊಂಡಿದೆ. ಆದರೆ  ಕಳೆದ ಕೆಲ ದಿನಗಳಿಂದ ಬಂಗಾರದ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದ್ದು, ಆಭರಣ ಪ್ರಿಯರಿಗೆ ಶಾಕ್ ಕೊಟ್ಟಿದೆ. ಭಾರತದಲ್ಲಿ ನಿನ್ನೆ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 45,940 ರೂ. ಇತ್ತು. ಇಂದು ಸಹ 45,940 ರೂ ಇದೆ. ಅಂತೆಯೇ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಸಹ ಯಾವುದೇ ವ್ಯತ್ಯಾಸವಾಗಿಲ್ಲ. ನಿನ್ನೆ 46,940 ರೂ. ಇತ್ತು. ಇಂದು ಸಹ  46,940 ರೂ ಇದೆ.

5. Petrol Price: ಸತತ 12ನೇ ದಿನ ಏರಿಕೆ ಕಾಣುತ್ತಿರುವ ತೈಲ ಬೆಲೆ; ಪೆಟ್ರೋಲ್-ಡೀಸೆಲ್ ಸಾರ್ವಕಾಲಿಕ ದಾಖಲೆ 

ಇದನ್ನೂ ಓದಿ: ಯಥಾಸ್ಥಿತಿ ಕಾಯ್ದುಕೊಂಡ ಚಿನ್ನ- 800 ರೂ ಏರಿಕೆ ಕಂಡ ಬೆಳ್ಳಿ-ಇಂದಿನ ಬೆಲೆ ಹೀಗಿದೆ

ಬೆಂಗಳೂರು (ಅಕ್ಟೋಬರ್​ 10); ದೇಶದಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ (Petrol - Diesel Price) ಸತತ 12ನೇ ದಿನ ಏರಿಕೆ ಕಾಣುತ್ತಿದ್ದು, ಬೆಲೆ ಏರಿಕೆ ನಾಗಾಲೋಟ ಸದ್ಯಕ್ಕೆ ನಿಲ್ಲುವ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ. ತೈಲ ಬೆಲೆ ಇಂದು ಮತ್ತೆ ಹೊಸ ಸಾರ್ವಕಾಲಿಕ ದಾಖಲೆ ಬರೆದಿದೆ. ಇಂದು ಬೆಂಗಳೂರಿನಲ್ಲಿ (Banglore) ಪೆಟ್ರೋಲ್ ಬೆಲೆ 32 ಪೈಸೆ ಏರಿಸಿ 1 ಲೀಟರ್ ಪೆಟ್ರೋಲ್ ಅನ್ನು 107.46 ರೂ.ಗೆ ಮಾರಾಟ ಮಾಡಲಾಗಿದ್ದರೆ, ಚಿಕ್ಕಮಗಳೂರಿನಲ್ಲಿ (Chikmanglore) 1 ಲೀಟರ್​ ಪೆಟ್ರೋಲ್​ಗೆ 07 ಪೈಸೆ ಏರಿಸಲಾಗಿದ್ದು, ಅತ್ಯಧಿಕ 109.22 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಅಲ್ಲದೆ, ಪೆಟ್ರೋಲ್ ಬೆಲೆ ಶೀಘ್ರದಲ್ಲೆ 110 ರೂ ದಾಟುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ. ಡೀಸೆಲ್​ ಬೆಲೆಯನ್ನೂ ಏರಿಸಲಾಗಿದ್ದು, ದಾವಣಗೆರೆಯಲ್ಲಿ (Davanagere) ಅತ್ಯಧಿಕ ಲೀಟರ್​ಗೆ 99.93 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಪ್ರಸ್ತುತ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಸಹ ಇಂದು ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಗಣನೀಯ ಏರಿಕೆ ಕಂಡು ಬಂದಿದ್ದು, ಆ ಕುರಿತ ವಿವರ ಇಲ್ಲಿದೆ.
Published by:Sandhya M
First published: