Morning Digest: ಬೆಂಗಳೂರಿನಲ್ಲಿ ಏರಿಕೆ ಕಂಡ ತೈಲ ದರ- ರಾಜ್ಯದಲ್ಲಿ ಚಳಿ ಹೆಚ್ಚಳ ಸಾಧ್ಯತೆ: ಬೆಳಗಿನ ಟಾಪ್ ನ್ಯೂಸ್​ಗಳು

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು? ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
Karnataka Weather Today: ರಾಜ್ಯದಲ್ಲಿ ಚಳಿ ಹೆಚ್ಚಳ; ನಿಮ್ಮ ಜಿಲ್ಲೆಯ ಹವಾಮಾನ ವರದಿ ಇಲ್ಲಿದೆ

ಕಳೆದ ಒಂದು ವಾರದಿಂದ ರಾಜ್ಯದಲ್ಲಿ ಮಳೆ (Rainfall) ಅಬ್ಬರ ತಣ್ಣಗಾಗಗಿದ್ದು, ಚಳಿ (Winter) ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬಯಲು ಸೀಮೆ ಮೋಡ ಮುಸುಕಿದ ವಾತಾವರಣದಿಂದ (Cloud Weather) ಹೊರ ಬಂದಿದೆ. ಆದ್ರೆ ಅಲ್ಲಲ್ಲಿ ಕೆಲವು ಭಾಗಗಳಲ್ಲಿ ಅಕಾಲಿಕ ಮಳೆ(Unseasonal Rains)ಯಾಗಿದೆ. ಈ ಮಳೆಗೆ ರೈತನ (Farmers) ಬದುಕು ಸಂಕಷ್ಟದಲ್ಲಿ ಸಿಲುಕಿದೆ. ಭಾರತೀಯ ಹವಾಮಾನ ಇಲಾಖೆ (IMD), ಕರಾವಳಿ ಆಂಧ್ರಪ್ರದೇಶ, ರಾಯಲಸೀಮಾ, ಕರ್ನಾಟಕದ ದಕ್ಷಿಣ ಒಳನಾಡು, ಪುದುಚೇರಿ ಮತ್ತು ಕೇರಳದಲ್ಲಿ ಡಿಸೆಂಬರ್‌ನಿಂದ ಫೆಬ್ರುವರಿ ವರೆಗೆ ವಾಡಿಕೆಗಿಂತ ಹೆಚ್ಚಿನ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ. ಕಳೆದ ಎರಡು ದಿನಗಳಿಂದ ಮಂಡ್ಯ ಮತ್ತು ಹಾಸನ (Mandya And Hassan) ಸೇರಿದಂತೆ ಹಳೆ ಮೈಸೂರು ಭಾಗದಲ್ಲಿ ಭಾರೀ ಮಳೆಯಾಗಿತ್ತು.

Petrol, Diesel Price: ಗಮನಿಸಿ, ಬೆಂಗಳೂರಿನಲ್ಲಿ ಏರಿಕೆಯಾಯ್ತು ತೈಲ ದರ: ಇಲ್ಲಿದೆ ಇವತ್ತಿನ ಬೆಲೆ ಪಟ್ಟಿ

Petrol And Diesel Price Today:  ಕೇಂದ್ರ ಹಾಗೂ ರಾಜ್ಯ ಸರ್ಕಾರದ ದೀಪಾವಳಿ ಕೊಡುಗೆಯಾಗಿ ಪೆಟ್ರೋಲ್‌, ಡೀಸೆಲ್‌ ಮೇಲಿನ ಸುಂಕವನ್ನು ಕಡಿತಗೊಳಿಸಿದ್ದವು. ಇದರ ಪರಿಣಾಮವಾಗಿ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ಕೊಂಚ ಇಳಿಕೆಯಾಗಿದೆ. ಎಲ್​ಪಿಜಿ ಬೆಲೆ (LPG) ಏರಿಕೆಯಿಂದ ಕಂಗಾಲಾಗಿದ್ದ ಜನ ದಿನನಿತ್ಯ ಏರುತ್ತಿದ್ದ ಪೆಟ್ರೋಲ್-ಡೀಸೆಲ್ ಬೆಲೆಯಿಂದಾಗಿ ಮತ್ತಷ್ಟು ಸಂಕಷ್ಟಕ್ಕೆ ಒಳಗಾಗಿದ್ದರು. ಈ ಹಿನ್ನೆಲೆ ಜನ ಸಾಮಾನ್ಯರಿಗೆ ತೈಲ ದರದ ಹೊರೆ ಸ್ವಲ್ಪ ಕಡಿಮೆಯಾಗಿದೆ. ಆದರೆ, ಇಂದು ಬೆಂಗಳೂರಿನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಕಂಡಿದೆ. ಉಳಿದ ಹಲವು ಜಿಲ್ಲೆಗಳಲ್ಲಿ ಏರಿಳಿತ ಕಂಡಿದೆ. ಪ್ರಸ್ತುತ ರಾಜಧಾನಿ ಬೆಂಗಳೂರಿನಲ್ಲಿ (Bangalore) ಇಂದು 1 ಲೀಟರ್ ಪೆಟ್ರೋಲ್​ ಅನ್ನು 100.58 ರೂಗೆ ಮಾರಾಟ ಮಾಡುತ್ತಿದ್ದರೆ, ಡೀಸೆಲ್​ ಅನ್ನು 85.01 ರೂ. ಗೆ ಮಾರಾಟ ಮಾಡಲಾಗುತ್ತಿದೆ.

 Gold Rate Today: ಇಳಿಕೆಯಾಯ್ತು ಬೆಳ್ಳಿ ದರ; ನಿಮ್ಮ ನಗರಗಳಲ್ಲಿಇಂದಿನ ಚಿನ್ನದ ದರ ಹೀಗಿದೆ..

 Gold Rate on Dec 7, 2021: ದೇಶದಲ್ಲಿಂದು ಚಿನ್ನದ ಬೆಲೆ (Gold Price) ಯಥಾಸ್ಥಿತಿ ಕಾಯ್ದುಕೊಂಡಿದೆ. ಬೆಂಗಳೂರಿನಲ್ಲಿ (Bengaluru) ಇಂದು ಚಿನ್ನದ ಬೆಲೆ ಏರಿಕೆಯಾಗಿದೆ. ಭಾರತದಲ್ಲಿ ನಿನ್ನೆ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 46,510 ರೂ. ಇತ್ತು. ಇಂದೂ ಸಹ ಅದೇ ಬೆಲೆ ಇದೆ. ಅಂತೆಯೇ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ನಿನ್ನೆ 47,510 ರೂ. ಇತ್ತು. ಇಂದೂ ಸಹ ಅಷ್ಟೇ ಬೆಲೆ ಇದೆ.

ಇದೇ ಮೊದಲ ಬಾರಿಗೆ ಸಂಸತ್ತಿನ ಹೊರಗೆ ಸಂಸದೀಯ ಸಭೆ ನಡೆಸಲಿರುವ ಬಿಜೆಪಿ

 ಭಾರತೀಯ ಜನತಾ ಪಕ್ಷದ (BJP)ಇತಿಹಾಸದಲ್ಲಿ(History) ಮೊದಲ ಬಾರಿಗೆ, ಪ್ರತಿ ಮಂಗಳವಾರ ನಡೆಯುವ ಪಕ್ಷದ ವಾರದ ಸಂಸದೀಯ ಸಭೆಯು(Parliamentary Meet) ಈಗ ಸಂಸತ್ತಿನ ಸಂಕೀರ್ಣದ ಹೊರಗೆ ನಡೆಯಲಿದೆ. ಈ ಬಾರಿ ಸಂಸತ್ ಭವನದಿಂದ ಒಂದು ಕಿಲೋ ಮೀಟರ್ ದೂರದಲ್ಲಿರುವ ದೆಹಲಿಯ ಅಂಬೇಡ್ಕರ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ಸಭೆ ನಡೆಯಲಿದೆ. ಸಭೆ ನಡೆಯುವ ಸಾಮಾನ್ಯ ಸ್ಥಳವಾಗಿರುವ ಸಂಸದೀಯ ಗ್ರಂಥಾಲಯ ಕಟ್ಟಡದಲ್ಲಿ ದುರಸ್ತಿ ಕಾರ್ಯ ನಡೆಯುತ್ತಿರುವ ಕಾರಣ ಈ ಬಾರಿ ಒಂದು ಕಿಲೋ ಮೀಟರ್ ದೂರದಲ್ಲಿರುವ ದೆಹಲಿಯ ಅಂಬೇಡ್ಕರ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ಸಭೆ ನಡೆಸಲಾಗುತ್ತಿದೆ.

21st India-Russia Summit: ಇಂಡೋ-ರಷ್ಯಾ ಸ್ನೇಹವನ್ನು ಬಣ್ಣಿಸಿದ ಮೋದಿ- ಶೃಂಗಸಭೆಯಲ್ಲಿ ಹಲವಾರು ಒಪ್ಪಂದಕ್ಕೆ ಸಹಿ

ಪ್ರಧಾನಿ ನರೇಂದ್ರ ಮೋದಿ(PM Narendra Modi) ಅವರು ಸೋಮವಾರ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್(Russia President  Vladimir Putin) ಅವರನ್ನು ನವದೆಹಲಿಯಲ್ಲಿ (New Delhi) ಭೇಟಿಯಾಗಿ ಚರ್ಚೆ ನಡೆಸಿದ್ದು, ಅವರನ್ನು ಸ್ವಾಗತಿಸುವಾಗ ಕೊರೊನಾ(Corona) ಸಾಂಕ್ರಾಮಿಕ ರೋಗವನ್ನು ಲೆಕ್ಕಿಸದೆ ಭಾರತದ ವಿಶೇಷ ಕಾರ್ಯತಂತ್ರದ ಪಾಲುದಾರಿಕೆಯು ಬಲಗೊಳ್ಳುವುದನ್ನು ಮುಂದುವರೆಸಿದೆ ಎಂದು ಹೇಳಿದ್ದಾರೆ. ಸಾಂಕ್ರಾಮಿಕ ಸಮಯದಲ್ಲಿ ಉಭಯ ದೇಶಗಳು ಲಸಿಕೆ ಪ್ರಯೋಗಗಳು ಮತ್ತು ಉತ್ಪಾದನೆಯಿಂದ ಆಯಾ ರಾಷ್ಟ್ರಗಳಿಗೆ ಹಿಂದಿರುಗುವ ಪ್ರಜೆಗಳಿಗೆ ಸಹಾಯ ಮಾಡುವವರೆಗೆ ಒಬ್ಬರಿಗೊಬ್ಬರು ಬಲವಾಗಿ ಸಹಕರಿಸಿವೆ ಎಂದು ಅವರು ಹೇಳಿದರು.
Published by:Sandhya M
First published: