Morning Digest: ಯಥಾಸ್ಥಿತಿ ಕಾಯ್ದುಕೊಂಡ ಪೆಟ್ರೋಲ್ ಬೆಲೆ- ಕಿರಾತಕ ಖ್ಯಾತಿಯ ನಿರ್ದೇಶಕ ಪ್ರದೀಪ್ ರಾಜ್ ನಿಧನ : ಬೆಳಗಿನ ಟಾಪ್ ಸುದ್ದಿಗಳು

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು? ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
Karnataka Weather Report: ರಾಜ್ಯದ ಬಹುತೇಕ ಭಾಗಗಳಲ್ಲಿ ಒಣ ಹವೆ: ತಗ್ಗಿದ ಚಳಿ

Karnataka Weather Report: ಇಂದು ರಾಜ್ಯದ ಬಹುತೇಕ ಭಾಗಗಳಲ್ಲಿ ಒಣ ಹವೆ ಇರಲಿದ್ದು, ಎಂದಿನಂತೆ ಚಳಿ (Winter) ಇರಲಿದೆ. ರಾಜ್ಯದಲ್ಲಿ ಕನಿಷ್ಠ 15 ಡಿಗ್ರಿ ಸೆಲ್ಸಿಯಸ್ ಇರಲಿದೆ. ಸದ್ಯ ಕರ್ನಾಟಕದಲ್ಲಿ ಮಳೆಯ (Karnataka Rainfall) ಪ್ರಮಾಣ ಕಡಿಮೆಯಾಗಿದೆ. ಆದರೆ ಬೇರೆ ರಾಜ್ಯಗಳಲ್ಲಿ ಇನ್ನೂ ಸಹ ವರುಣನ ಅಬ್ಬರ ನಿಂತಿಲ್ಲ. ಜನವರಿ 21ರಿಂದ 23ರವರೆಗೆ ದೆಹಲಿ, ಉತ್ತರ ಪ್ರದೇಶ, ಉತ್ತರ ರಾಜಸ್ಥಾನ, ಕೇರಳ, ಆಂಧ್ರಪ್ರದೇಶ, ತಮಿಳುನಾಡು, ಪಂಜಾಬ್, ಹರಿಯಾಣ, ಚಂಡೀಗಢ ಮತ್ತು ಮಧ್ಯಪ್ರದೇಶದಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.

Petrol Price Today: ಬೆಂಗಳೂರಿನಲ್ಲಿ ಯಥಾಸ್ಥಿತಿ ಕಾಯ್ದುಕೊಂಡ ಪೆಟ್ರೋಲ್- ಜಿಲ್ಲೆಗಳಲ್ಲಿ ಇಂದಿನ ದರ ಹೀಗಿದೆ

ರಾಜ್ಯದ (State) ವಿವಿಧ ನಗರಗಳಲ್ಲಿ ಹಾಗೂ ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್‌, ಡೀಸೆಲ್‌ ಬೆಲೆ (Petrol-Diesel Price) ಎಷ್ಟು ಅಂತ ತಿಳ್ಕೋಬೇಕಾ..?  ಪ್ರಸ್ತುತ ರಾಜಧಾನಿ ಬೆಂಗಳೂರಿನಲ್ಲಿ (Bangalore) ಇಂದು 1 ಲೀಟರ್ ಪೆಟ್ರೋಲ್​ ಅನ್ನು 100.58 ರೂಗೆ ಮಾರಾಟ ಮಾಡುತ್ತಿದ್ದರೆ, ಡೀಸೆಲ್​ ಅನ್ನು 85.01 ರೂ. ಗೆ ಮಾರಾಟ ಮಾಡಲಾಗುತ್ತಿದೆ.

 Gold Price Today: ಚಿನ್ನ ಖರೀದಿಗೆ ಹೋಗ್ತಿದ್ದೀರಾ? ಬೆಲೆ ಏರಿಕೆಯಾಗಿದೆಯಾ? ಇಳಿಕೆಯಾಗಿದೆಯಾ? ಇಲ್ಲಿದೆ ಮಾಹಿತಿ

Gold Rate on Jan 20, 2022: ದೇಶದಲ್ಲಿಂದು ಚಿನ್ನದ ಬೆಲೆ (Gold Price)ಯಲ್ಲಿ ಏರಿಕೆಯಾಗಿದೆ.. ಬೆಂಗಳೂರಿನಲ್ಲಿ (Bengaluru) ಸಹ ಇಂದು ಬಂಗಾರದ ಬೆಲೆ ಏರಿಕೆಯಾಗಿದೆ ಭಾರತದಲ್ಲಿ ನಿನ್ನೆ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 47,090 ರೂ. ಇತ್ತು. ಇಂದು 70  ರೂ. ಹೆಚ್ಚಾಗಿ 47,160 ರೂ. ಆಗಿದೆ. ಅಂತೆಯೇ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ನಿನ್ನೆ 49,090 ರೂ. ಇತ್ತು. ಇಂದು 70  ರೂ. ಹೆಚ್ಚಾಗಿ 49,160 ರೂ. ಆಗಿದೆ.

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ (Gold Price) 49,070 ರೂ. ಇತ್ತು. ಇಂದು 130 ರೂ. ಹೆಚ್ಚಾಗಿ 49,200 ರೂ. ಆಗಿದೆ. ಅದೇ ರೀತಿ 22 ಕ್ಯಾರೆಟ್ 10 ಗ್ರಾಂ ಚಿನ್ನ ನಿನ್ನೆ 44,970 ರೂ. ಇತ್ತು. ಇಂದು 130 ರೂ. ಹೆಚ್ಚಾಗಿ 45,100 ರೂ. ಆಗಿದೆ. ಇನ್ನು, ರಾಜ್ಯದ ಇತರೆ ಪ್ರಮುಖ ನಗರಗಳಾದ ಮೈಸೂರು, ಮಂಗಳೂರಿನಲ್ಲೂ ಇದೇ ಬೆಲೆ ಇದೆ.

Director Pradeep Raj: 'ಕಿರಾತಕ' ಸಿನಿಮಾ ಖ್ಯಾತಿಯ ನಿರ್ದೇಶಕ ಪ್ರದೀಪ್ ರಾಜ್ ನಿಧನ

ಕಿರಾತಾಕ ಸಿನಿಮಾ ಖ್ಯಾತಿಯ ನಿರ್ದೇಶಕ ಪ್ರದೀಪ್ ರಾಜ್ ನಿಧನ ಹೊಂದಿದ್ದಾರೆ. ಪ್ರದೀಪ್ ರಾಜ್ ಹಲವು ವರ್ಷಗಳಿಂಡ ಡಯಾಬಿಟಿಸ್ ನಿಂದ ಬಳಲುತ್ತಿದ್ದರು. ಕೆಲ ದಿನಗಳ ಹಿಂದೆ ಪ್ರದೀಪ್ ರಾಜ್ ಕೊರೊನಾ ಸೋಂಕಿಗೆ ತುತ್ತಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಗಿನ ಜಾವ ಮೂರು ಗಂಟೆಗೆ  ಪಾಂಡಿಚೇರಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ ಎಂದು ಸೋದರ ಪ್ರಶಾಂತ್ ಮಾಹಿತಿ ಹಂಚಿಕೊಂಡಿದ್ದಾರೆ.

POWER CUT: ಎರಡು ದಿನ ಬೆಂಗಳೂರಿನಲ್ಲಿ 2 ದಿನ ವಿದ್ಯುತ್ ವ್ಯತ್ಯಯ

ಕೊರೋನಾ(Corona) ಮಹಾಮಾರಿ ಓಮೈಕ್ರಾನ್(Omicron) ಹೆಸರಲ್ಲಿ ತನ್ನ ಆರ್ಭಟವನ್ನ ಮತ್ತೆ ಶುರು ಮಾಡಿದೆ. ರಾಜ್ಯದಲ್ಲಿ(State) ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಪ್ರಕರಣಗಳು(Case) ಪತ್ತೆಯಾಗುತ್ತಿವೆ. ಜನರು ಮನೆಯಿಂದ(Home) ಆಚೆ ಹೋಗಲು ಭಯ(Fear) ಪಡುವ ವಾತವಾರಣ ನಿರ್ಮಾಣವಾಗಿದೆ. ಅದ್ರಲ್ಲೂ ರಾಜಧಾನಿ (Capital)ಬೆಂಗಳೂರಿನ(Bengaluru) ಪರಿಸ್ಥಿತಿ ನಿಜಕ್ಕೂ ಬೆಚ್ಚಿ ಬೀಳುವಂತಿದ್ದು ಜನ ಮನೆಯಿಂದ ಕಾಲಿಡಲು ಹಿಂದೆ-ಮುಂದೆ ನೋಡಬೇಕಾದ ಪರಿಸ್ಥಿತಿ ಇದೆ. ಹೀಗಾಗಿ ಮನೆಯಲ್ಲಿ ನೆಮ್ಮದಿಯಾಗಿ ಕಾಲ ಕಳೆಯೋಣಾ ಎಂದು ಬೆಂಗಳೂರಿನ ಜನರು ಅಂದುಕೊಳ್ಳುತ್ತಿರುವ ಸಮಯದಲ್ಲಿ ಬೆಸ್ಕಾಂ (BESCOM) ಎಂದಿನಂತೆ ಶಾಕ್ ನೀಡಿದ್ದು, 2 ದಿನಗಳ ಕಾಲ ಬೆಂಗಳೂರಿನ ಹಲವೆಡೆ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆ ವಿದ್ಯುತ್ ಕಡಿತಗೊಳಿಸುತ್ತಿದೆ.
Published by:Sandhya M
First published: