Morning Digest: ರಾಜ್ಯದಲ್ಲಿ ಮೋಡ ಕವಿದ ವಾತಾವರಣ- ಏರಿಕೆ ಕಂಡ ಪೆಟ್ರೋಲ್ ದರ: ಬೆಳಗಿನ ಟಾಪ್ ನ್ಯೂಸ್​ಗಳು

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು? ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
Karnataka Weather Report Today: ಮೋಡ ಕವಿದ ವಾತಾವರಣ: ಈ ರಾಜ್ಯಗಳಲ್ಲಿ ಮಳೆ ಸಾಧ್ಯತೆ

Karnataka Weather Report: ಕಳೆದ 15 ದಿನಗಳಿಂದ ಹೆಚ್ಚಾಗಿದ್ದ ಚಳಿಯ (Winter) ಪ್ರಮಾಣ ಕೊಂಚ ಇಳಿಕೆಯಾಗುತ್ತಿದೆ. ಚಳಿ ತಗ್ಗಿದ್ರೂ ದಟ್ಟವಾದ ಮಂಜು ವಾತಾವರಣ ಮುಂದುವರಿದಿದೆ. ಉತ್ತರ ಕರ್ನಾಟಕ (North Karnataka) ಬೀದರ್, ಕಲಬುರಗಿ, ಯಾದಗಿರಿ, ವಿಜಯಪುರ, ಬಾಗಲಕೋಟೆ, ಕೊಪ್ಪಳ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ (Cloudy Weather) ಇರಲಿದೆ. ಶನಿವಾರ ರಾಜ್ಯದ ಕೆಲವು ಭಾಗಗಳಲ್ಲಿ ಮಳೆಯಾಗಿರುವ (Rainfall) ವರದಿಗಳು ಬಂದಿವೆ. ರಾಜಧಾನಿ ಬೆಂಗಳೂರಿನಲ್ಲಿ (Bengaluru Weather) ಗರಿಷ್ಠ 28 ಮತ್ತು ಕನಿಷ್ಠ 17 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ. ಮಧ್ಯಾಹ್ನದ ವೇಳೆಗೆ ಸೂರ್ಯನ ಪ್ರಖರತೆ ಇರಲಿದೆ.

Gold Price Today: ಚಿನ್ನ ಖರೀದಿಗೆ ಸಿಕ್ತು ಇನ್ನೊಂದು ದಿನ: ಇವತ್ತು ಬೆಲೆಯಲ್ಲಿ ಇಲ್ಲ ವ್ಯತ್ಯಾಸ: ಈ ದರ ಮಿಸ್ ಮಾಡ್ಕೋಬೇಡಿ

Gold Rate on Jan 9, 2022: ದೇಶದಲ್ಲಿಂದು ಚಿನ್ನದ ಬೆಲೆ (Gold Price)ಯಲ್ಲಿ ಇಳಿಕೆಯಾಗಿದೆ. ಬೆಂಗಳೂರಿನಲ್ಲಿ (Bengaluru Gold Price) ಇಂದು ಬಂಗಾರದ ಬೆಲೆ  ಯಥಾಸ್ಥಿತಿ ಕಾಯ್ದುಕೊಂಡಿದೆ.  ಭಾರತದಲ್ಲಿ ನಿನ್ನೆ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 46,510 ರೂ. ಇತ್ತು. ಇಂದು 90 ರೂ. ಏರಿಕೆಯಾಗಿದ್ದು 46,600 ರೂ ಆಗಿದೆ. ಅಂತೆಯೇ 10 ಗ್ರಾಂ 24  ಕ್ಯಾರೆಟ್ ಚಿನ್ನದ ನಿನ್ನೆ 48,510 ರೂ. ಇತ್ತು. ಇಂದು 90 ರೂ. ಏರಿಕೆಯಾಗಿದ್ದು, 48,600 ರೂ. ಆಗಿದೆ.

Bengaluru Power Cut: ಇಂದಿನಿಂದ ಜ.11ರವರೆಗೆ ಬೆಂಗಳೂರಿನ ಈ ಏರಿಯಾಗಳಲ್ಲಿ ವಿದ್ಯುತ್ ವ್ಯತ್ಯಯ ಆಗಲಿದೆ

ಬೆಂಗಳೂರು: ಕೊರೊನಾ (Corona) ಹೆಚ್ಚಳದಿಂದ ವೀಕೆಂಡ್​ ಕರ್ಫ್ಯೂ (Weekend Curfew) ಜಾರಿಯಾಗಿದ್ದು, ಭಾನುವಾರವಾದ (Sunday) ಇಂದು ಬೆಂಗಳೂರಿಗರು ಮನೆಯಲ್ಲೇ ಕಾಲ ಕಳೆಯಬೇಕು. ಟಿವಿ-ಮೊಬೈಲ್​ ಅಂತ ಟೈಂ ಪಾಸ್​ ಮಾಡೋಣ ಅಂದುಕೊಂಡಿದ್ದರೆ, ನೀವು ಓದಲೇಬೇಕಾದ ಸುದ್ದಿ ಇಲ್ಲಿದೆ. ಇಂದು ನಗರದ ಹಲವು ಏರಿಯಾಗಳಲ್ಲಿ ವಿದ್ಯುತ್​ ಕಡಿತಗೊಳ್ಳಲಿದೆ(Power Cut). ನಗರದಾದ್ಯಂತ ಜನವರಿ 9 ರ ಭಾನುವಾರದಿಂದ ಜನವರಿ 11 ರ ಮಂಗಳವಾರದವರೆಗೆ ಹಲವಾರು ಪ್ರದೇಶಗಳು ವಿದ್ಯುತ್ ಕಡಿತವನ್ನು ಎದುರಿಸಲಿವೆ. ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (BESCOM) ನಿರ್ವಹಣೆ ಮತ್ತು ಇತರ ಕೆಲಸಗಳಿಂದಾಗಿ ವಿದ್ಯುತ್ ಕಡಿತ ಆಗಲಿದೆ ಎಂದು ತಿಳಿಸಿದೆ. ಹಾಗಾದರೆ ಯಾವತ್ತು, ಯಾವ ಸಮಯದಲ್ಲಿ, ಯಾವ ಏರಿಯಾದಲ್ಲಿ ಕರೆಂಟ್​ ಇಲ್ಲ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ. ಇದರ ಅನ್ವಯ ನಿಮ್ಮ ದಿನನಿತ್ಯದ ಕೆಲಸಗಳನ್ನು ಶೆಡ್ಯೂಲ್​ ಮಾಡಿಕೊಂಡರೆ ಅನಗತ್ಯ ತೊಂದರೆ ತಪ್ಪುತ್ತದೆ.

PM Modi ಪತ್ನಿ ಭೇಟಿ ಬಳಿಕ ಎಲ್ಲವೂ ಬದಲಾಯ್ತು.. ಈಗ ಅಂಜನಾದ್ರಿಯೂ ಅಯೋಧ್ಯೆ ಮಾದರಿ ಆಗಲಿದೆಯಂತೆ

ಕೊಪ್ಪಳ: ಅಯೋಧ್ಯೆಯಲ್ಲಿ ಮರ್ಯಾದಾ ಪುರಷೋತ್ತಮ ಶ್ರೀರಾಮನ ಮಂದಿರ (Ayodhya Temple) ನಿರ್ಮಾಣವಾಗುತ್ತಿದೆ. ಈ ಮಧ್ಯೆ ರಾಮನ ಭಂಟ ಹನುಮನ (God Hanuman) ಜನ್ಮ ಸ್ಥಳವು ಸಹ ಈಗ ಅಭಿವೃದ್ದಿಯಾಗಲಿದೆ. ಈ ನಿಟ್ಟಿನಲ್ಲಿ ಅಂಜನಾದ್ರಿ (Anjanadri) ಮಾಸ್ಟರ್ ಪ್ಲಾಸ್ ಸಿದ್ದವಾಗುತ್ತಿದೆ. ರಾಜ್ಯ ಸರಕಾರದಿಂದಲೂ ಅಂಜನಾದ್ರಿ ಅಭಿವೃದ್ದಿಗಾಗಿ ಶ್ರಮಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಹ ಹೇಳಿದ್ದಾರೆ. ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬರುವ ದಿನಗಳಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ದಿ ಪಡೆಯಲಿದೆ, ಇದಕ್ಕೆ ಹನುಮ ಭಕ್ತರಲ್ಲಿ ಹರ್ಷ ಮೂಡಿಸಿದೆ.ಕರುನಾಡಿನ ಇತಿಹಾಸದಲ್ಲಿ " ಜಲಧಿನೂ ಜೀಗಿದ ಹನುಮನೂದಿಸಿದ ನಾಡು" ಎಂದು ಹಾಡಿ ಹೊಗಳಿದ್ದಾರೆ. ರಾಮಾಯಣದ ಕಿಷ್ಕಾಂದಾ ಎಂದು ಖ್ಯಾತಿ ಹೊಂದಿರುವ ಹಂಪಿ ಸುತ್ತ ಮುತ್ತಲಿನ ಪ್ರದೇಶವಾಗಿದೆ.

Petrol And Diesel Price Today: ಉ.ಕನ್ನಡದಲ್ಲಿ ಪೆಟ್ರೋಲ್ ಬೆಲೆ 1.99 ರೂ. ಏರಿಕೆ: ನಿಮ್ಮ ನಗರದಲ್ಲಿ ಎಷ್ಟಿದೆ ತೈಲ ದರ?

Petrol And Diesel Price Today: ಕೇಂದ್ರ ಹಾಗೂ ರಾಜ್ಯ ಸರ್ಕಾರದ ದೀಪಾವಳಿ ಕೊಡುಗೆಯಾಗಿ ಪೆಟ್ರೋಲ್‌, ಡೀಸೆಲ್‌ ಮೇಲಿನ ಸುಂಕವನ್ನು ಕಡಿತಗೊಳಿಸಿದ್ದವು. ಇದರ ಪರಿಣಾಮವಾಗಿ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ಕೊಂಚ ಇಳಿಕೆಯಾಗಿದೆ. ಎಲ್​ಪಿಜಿ ಬೆಲೆ (LPG) ಏರಿಕೆಯಿಂದ ಕಂಗಾಲಾಗಿದ್ದ ಜನ ದಿನನಿತ್ಯ ಏರುತ್ತಿದ್ದ ಪೆಟ್ರೋಲ್-ಡೀಸೆಲ್ ಬೆಲೆಯಿಂದಾಗಿ ಮತ್ತಷ್ಟು ಸಂಕಷ್ಟಕ್ಕೆ ಒಳಗಾಗಿದ್ದರು. ಈ ಹಿನ್ನೆಲೆ ಜನ ಸಾಮಾನ್ಯರಿಗೆ ತೈಲ ದರದ ಹೊರೆ ಸ್ವಲ್ಪ ಕಡಿಮೆಯಾಗಿದೆ. ಆದರೆ, ಇಂದು ಬೆಂಗಳೂರಿನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಕಂಡಿದೆ. ಉಳಿದ ಹಲವು ಜಿಲ್ಲೆಗಳಲ್ಲಿ ಏರಿಳಿತ ಕಂಡಿದೆ. ಪ್ರಸ್ತುತ ರಾಜಧಾನಿ ಬೆಂಗಳೂರಿನಲ್ಲಿ (Bangalore) ಇಂದು 1 ಲೀಟರ್ ಪೆಟ್ರೋಲ್​ ಅನ್ನು 100.58 ರೂಗೆ ಮಾರಾಟ ಮಾಡುತ್ತಿದ್ದರೆ, ಡೀಸೆಲ್​ ಅನ್ನು 85.01 ರೂ. ಗೆ ಮಾರಾಟ ಮಾಡಲಾಗುತ್ತಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಪೆಟ್ರೋಲ್-ಡೀಸೆಲ್ ಬೆಲೆ ಕುರಿತ ವಿವರ ಇಲ್ಲಿದೆ.
Published by:Sandhya M
First published: