Morning Digest: ಚಿನ್ನದ ಬೆಲೆಯಲ್ಲಿ ಇಳಿಕೆ, ಉತ್ತಮ ಆದಾಯ ನೀಡಿದ ಸ್ಟ್ರಾಬೆರ್ರಿ: ಶೋಕಿ ಹೆಂಡ್ತಿ ಬಣ್ಣ ಬಯಲು

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು? ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
1.Karnataka Weather Report: ರಾಜ್ಯದಲ್ಲಿ ಬೇಸಿಗೆ ಆರಂಭದ ಸುಳಿವು; ಜನವರಿ ಅಂತ್ಯದಲ್ಲಿಯೂ ದಟ್ಟವಾದ ಮಂಜು

Karnataka Weather Report Jan 23, 2022: ಜನವರಿ ಅಂತ್ಯಕ್ಕೆ ಬರುತ್ತಿದ್ದಂತೆ ಬೇಸಿಗೆ (Summer) ಚುರುಕು ಬಿಸಿಲು ಜನರನ್ನು ತಾಗುತ್ತಿದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 30 ಡಿಗ್ರಿ ಸೆಲ್ಸಿಯಸ್ ತಲುಪಿದೆ. ಅದೇ ರೀತಿ ಮಲೆನಾಡು, ಮೈಸೂರು ಭಾಗದಲ್ಲಿ ಚಳಿ (Winter) ಸಹ ಹಾಗೇ ಇದೆ. ರಾಜ್ಯದಲ್ಲಿ ಕೆಲ ವಾರಗಳಿಂದ ಕೊಪ್ಪಳ, ಗದಗ, ವಿಜಯಪುರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ದಟ್ಟವಾದ ಮಂಜು ಕಾಣಿಸಿಕೊಳ್ಳುತ್ತಿದೆ. ಬೆಳಗ್ಗೆ 10 ಗಂಟೆಯಾದರೂ ಜನರು ಚಳಿಯಿಂದ ನಡಗುವಂತಾಗಿದೆ. ಇದೀಗ ಕೊಪ್ಪಳದಲ್ಲಿ ಬೆಳಗ್ಗೆ 6.45 ಸಮಯವಾದ್ರೂ ಮಂಜು ಆವರಿಸಿಕೊಂಡಿದ್ದರಿಂದ ಕತ್ತಲು ಆವರಿಸಿತ್ತು, ವಾಹನಗಳು ದೀಪಗಳನ್ನು ಹಾಕಿಹೊಂಡು ರಸ್ತೆಗೆ ಇಳಿದಿದ್ದವು.

2.Gold Price Today: ಚಿನ್ನಾಭರಣ ಪ್ರಿಯರಿಗೆ ಗುಡ್ ನ್ಯೂಸ್

Gold Rate on Jan 23, 2022: ದೇಶದಲ್ಲಿಂದು ಚಿನ್ನದ ಬೆಲೆ (Gold Price)ಯಲ್ಲಿ ಕೊಂಚ ಇಳಿಕೆಯಾಗಿದೆ.. ಬೆಂಗಳೂರಿನಲ್ಲಿ (Bengaluru) ಸಹ ಇಂದು ಬಂಗಾರದ ಬೆಲೆ ಇಳಿಕೆಯಾಗಿದೆ ಭಾರತದಲ್ಲಿ ನಿನ್ನೆ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 47,640 ರೂ. ಇತ್ತು. ಇಂದು 110  ರೂ. ಇಳಿಕೆಯಾಗಿ 47,530 ರೂ. ಆಗಿದೆ. ಅಂತೆಯೇ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ನಿನ್ನೆ 49,640 ರೂ. ಇತ್ತು. ಇಂದು 110 ರೂ. ಇಳಿಕೆಯಾಗಿ 49,530 ರೂ. ಆಗಿದೆ.

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ (Gold Price) 45,650 ರೂ. ಇತ್ತು. ಇಂದು 150 ರೂ. ಇಳಿಕೆಯಾಗಿ 45,500 ರೂ. ಆಗಿದೆ. ಅದೇ ರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನ ನಿನ್ನೆ 49,800 ರೂ. ಇತ್ತು. ಇಂದು 160 ರೂ. ಇಳಿಕೆಯಾಗಿ 49,640 ರೂ. ಆಗಿದೆ.

3.Petrol And Diesel Price Today: ಇವತ್ತಿನ ಪೆಟ್ರೋಲ್ ಡೀಸೆಲ್ ದರ

ರಾಜ್ಯದ (State) ವಿವಿಧ ನಗರಗಳಲ್ಲಿ ಹಾಗೂ ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್‌, ಡೀಸೆಲ್‌ ಬೆಲೆ (Petrol-Diesel Price) ಎಷ್ಟು ಅಂತ ತಿಳ್ಕೋಬೇಕಾ..?  ಪ್ರಸ್ತುತ ರಾಜಧಾನಿ ಬೆಂಗಳೂರಿನಲ್ಲಿ (Bangalore) ಇಂದು 1 ಲೀಟರ್ ಪೆಟ್ರೋಲ್​ ಅನ್ನು 100.58 ರೂಗೆ ಮಾರಾಟ ಮಾಡುತ್ತಿದ್ದರೆ, ಡೀಸೆಲ್​ ಅನ್ನು 85.04 ರೂ. ಗೆ ಮಾರಾಟ ಮಾಡಲಾಗುತ್ತಿದೆ.

4.Agriculture: ರೈತರ ಮೊಗದ ಮೇಲೆ ನಗು ತರಿಸಿದ ಸ್ಟಾಬೆರ್ರಿ

ಜಾರ್ಖಂಡ್ ರಾಜ್ಯದ ಗರ್ವಾ ಕೃಷಿ ಆಧಾರಿತ ಜಿಲ್ಲೆಯಾಗಿದೆ. ಇಲ್ಲಿನ ರೈತರು ಧಾನ್ಯಗಳು, ದ್ವಿದಳ ಧಾನ್ಯಗಳು ಮತ್ತು ಎಣ್ಣೆಕಾಳುಗಳನ್ನು ಹೆಚ್ಚು ಬೆಳೆಯುತ್ತಾರೆ. ಈಗ ಗರ್ವಾ ಪ್ರದೇಶದ ರೈತರು ತಮ್ಮ ಕೃಷಿ ವಿಧಾನದಲ್ಲಿ ಹೊಸ ಪ್ರಯೋಗಗಳನ್ನು ಮಾಡುತ್ತಿದ್ದಾರೆ. ಇಲ್ಲಿನ ರೈತ ಅಯೋಧ್ಯಾ ಬಿಂದ್ ಸಾಂಪ್ರದಾಯಿಕ ಕೃಷಿ ಬಿಟ್ಟು ಸ್ಟ್ರಾಬೆರಿ ಮತ್ತು ಸ್ವೀಟ್ ಕಾರ್ನ್ಗೆ ಕೈ ಹಾಕಿದ್ದಾರೆ. ಇಂದು ಅವರ ಇಡೀ ಜಮೀನು ಕೆಂಪು-ಕೆಂಪು ಸ್ಟ್ರಾಬೆರಿಗಳಿಂದ ಹೊಳೆಯುತ್ತಿವೆ. ಕೃಷಿ ಇಲಾಖೆಯ ನೆರವಿನೊಂದಿಗೆ ಅಯೋಧ್ಯೆ ಬಿಂದು ಅವರು ಗರ್ವಾ ಮುಂತಾದ ಭೂಮಿಯಲ್ಲಿ ಸ್ಟ್ರಾಬೆರಿ ಮತ್ತು ಸಿಹಿ ಜೋಳವನ್ನು ಬೆಳೆದಿದ್ದಾರೆ.

5.JOBS: ತಿಂಗಳಿಗೆ 2 ಲಕ್ಷದವರೆಗೆ ಸಂಬಳ, IISc Bangaloreನಲ್ಲಿ ಉದ್ಯೋಗ

ಭಾರತೀಯ ವಿಜ್ಞಾನ ಸಂಸ್ಥೆ(Indian Institute of Science)-ಬೆಂಗಳೂರಿನಲ್ಲಿ ಅನೇಕ ಹುದ್ದೆಗಳು ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಒಟ್ಟು 1 ಪ್ರಾಜೆಕ್ಟ್​ ಎಂಜಿನಿಯರ್ & ಎಸ್ಟೇಟ್ ಆಫೀಸರ್(Project Engineer & Estate Officer) ಹುದ್ದೆ ಖಾಲಿ ಇದ್ದು, ಸಿವಿಲ್​ ಎಂಜಿನಿಯರಿಂಗ್​ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರು. ಜನವರಿ 13ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅಭ್ಯರ್ಥಿಗಳು ಆನ್​ಲೈನ್​(Online) ಮೂಲಕ ಅರ್ಜಿ ಸಲ್ಲಿಸಬೇಕು. ಫೆಬ್ರವರಿ 4, 2022 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.

6.Mandya ಶೋಕಿ ಹೆಂಡ್ತಿಯ ಬಣ್ಣ ಬಯಲು

ಜನವರಿ 13ರಂದು ಆರು ವರ್ಷದ ಮಗನನ್ನು ಸೊಂಟಕ್ಕೆ ಕಟ್ಟಿಕೊಂಡು ತೊರೆಗೆ ಹಾರಿದ್ದ ವ್ಯಕ್ತಿಯ ಪ್ರಕರಣದಲ್ಲಿ ಮತ್ತಷ್ಟು ವಿಷಯಗಳು ಬೆಳಕಿಗೆ ಬಂದಿದೆ. ಇನಿಯನಿಗೆ ಬೆತ್ತಲೆ ವಿಡಿಯೋ ಕಾಲ್ ಮಾಡುತ್ತಿದ್ದ ಶೋಕಿ ಹೆಂಡ್ತಿಯ ಬಣ್ಣ ಬಯಲಾಗಿದೆ.

ಆರು ವರ್ಷದ ಜಶ್ವಿತ್ ಮತ್ತು ಗಂಗಾಧರ್ ಮೃತರು. ಆತ್ಮಹತ್ಯೆಗೂ ಮುನ್ನ ಗಂಗಾಧರ್ ಮಾಡಿದ್ದ ವಿಡಿಯೋ ಲಭ್ಯವಾಗಿದೆ. ವಿಡಿಯೋದಲ್ಲಿ ತಮ್ಮ ನಿರ್ಧಾರಕ್ಕೆ ಪತ್ನಿ ಸಿಂಧು ಮತ್ತು ಆಕೆಯ ಇನಿಯ LIC ಏಜೆಂಟ್ ನಂಜುಂಡೆಗೌಡ ಕಾರಣ ಎಂದು ಹೇಳಿದ್ದಾರೆ. ಮಂಡ್ಯದ ನಾಗಮಂಗಲ ತಾಲೂಕಿನ ಪಿಟ್ಟೆಕೊಪ್ಪಲು ಗ್ರಾಮದ ಹೊರವಲಯದ ತೊರೆಗೆ ಮಗನೊಂದಿಗೆ ಹಾರಿ ಗಂಗಾಧರ್ ಆತ್ಮಹತ್ಯೆ ಮಾಡಿಕೊಂಡಿದ್ದರು.

7.Viral News: 125ಕ್ಕೂ ಹೆಚ್ಚು ವಿವಿಧ ಬಗೆಯ ವಿಷಕಾರಿ ಹಾವುಗಳು ಜೊತೆಗೆ ಪತ್ತೆಯಾಯಿತು ಮೃತದೇಹ

ಅಮೆರಿಕದ(America) ಮೇರಿಲ್ಯಾಂಡ್‌ನ (Maryland)ಚಾರ್ಲ್ಸ್ ಕೌಂಟಿಯಲ್ಲಿರುವ ತನ್ನ ಮನೆಯಲ್ಲಿ 49 ವರ್ಷದ ವ್ಯಕ್ತಿ ಶವವಾಗಿ(Dead Body) ಪತ್ತೆಯಾಗಿದ್ದಾನೆ. ಹೀಗಾಗಿ ಈತನ ಮನೆಗೆ ತಪಾಸಣೆಗೆಂದು ಹೋದ ಪೊಲೀಸರಿಗೆ(Police) ದೊಡ್ಡ ಶಾಕ್(Shock) ಉಂಟಾಗಿದೆ.ಯಾಕಂದ್ರೆ ಆತನ ಮನೆಯಲ್ಲಿ ಬರೋಬ್ಬರಿ 125ಕ್ಕೂ ಹೆಚ್ಚು ವಿಷಕಾರಿ ಹಾವುಗಳು(Snakes) ಪತ್ತೆಯಾಗಿದ್ದು ಪೊಲೀಸರಿಗೆ ಆಘಾತ ಉಂಟಾಗಿದೆ..ಇವುಗಳಲ್ಲಿ ಹೆಚ್ಚು ವಿಷಕಾರಿ ಮತ್ತು ವಿಷ ಉಗುಳುವ ನಾಗರ ಹಾವುಗಳು ಮತ್ತು ಅತ್ಯಂತ ಅಪಾಯಕಾರಿ ಕಪ್ಪು ಮಾಂಬಾಗಳು ಕೂಡ ಇದ್ದವು. ಸದ್ಯ ಪೊಲೀಸರು ಮೃತವ್ಯಕ್ತಿಯ ಮನೆಯಲ್ಲಿ ಇದ್ದ 125ಕ್ಕೂ ಹೆಚ್ಚು ಬಗೆಯ ಹಾವುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
Published by:Mahmadrafik K
First published: