1.Karnataka Rain Today: ಕರಾವಳಿ, ಮಲೆನಾಡಿನಲ್ಲಿ ಇಂದು ಭಾರೀ ಮಳೆ
ಇಂದು ಕೂಡ ಕರ್ನಾಟಕದ ಮಲೆನಾಡು, ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಮಳೆಯ ಆರ್ಭಟ ಮುಂದುವರೆಯಲಿದೆ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ ಇಂದು ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಕರ್ನಾಟಕದ ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಇಂದು ಮಳೆ ಆರ್ಭಟಿಸಲಿದೆ. ಭಾರೀ ಮಳೆಯಿಂದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ ಇಂದು ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
2.Petrol Price in Karnataka:ಚಿಕ್ಕಮಗಳೂರು, ಶಿರಸಿ, ಬಳ್ಳಾರಿಯಲ್ಲಿ 100 ರೂ. ದಾಟಿದ ಪೆಟ್ರೋಲ್ ಬೆಲೆ!
ಕೊರೋನಾ ಲಾಕ್ಡೌನಿಂದ ಸಂಕಷ್ಟದಲ್ಲಿ ಸಿಲುಕಿರುವ ಜನರಿಗೆ ಬೆಲೆಯೇರಿಕೆಯ ಶಾಕ್ ಕೂಡ ಉಂಟಾಗಿದೆ. ಕರ್ನಾಟಕದಲ್ಲಿ ಮೊದಲ ಬಾರಿಗೆ ಪೆಟ್ರೋಲ್ ಬೆಲೆ 100 ರೂ. ಗಡಿ ದಾಟಿದೆ.ಕರ್ನಾಟಕದ ಉತ್ತರ ಕನ್ನಡದ ಶಿರಸಿ, ಬಳ್ಳಾರಿ, ಚಿಕ್ಕಮಗಳೂರಿನಲ್ಲಿ ಪೆಟ್ರೋಲ್ ಬೆಲೆ 100 ರೂ. ದಾಟಿದೆ. ಶಿರಸಿ ಸೇರಿದಂತೆ ಮಲೆನಾಡು ಭಾಗದಲ್ಲಿ 1 ಲೀಟರ್ ಪೆಟ್ರೋಲ್ ಬೆಲೆ 100.22 ರೂ. ಆಗಿದೆ. ಕರಾವಳಿ ಭಾಗದಲ್ಲೂ ಪೆಟ್ರೋಲ್ ದರ 100 ರೂ. ಸಮೀಪಿಸುತ್ತಿದೆ. ಕಾರವಾರದಲ್ಲಿ 99.85 ರೂ. ಇದೆ. ಡೀಸೆಲ್ ಬೆಲೆಯೂ ಏರಿಕೆಯಾಗುತ್ತಿದ್ದು, ಶಿರಸಿಯಲ್ಲಿ 92.88 ರೂ.ಗೆ ಏರಿಕೆಯಾಗಿದೆ.
3.ಅಭಿವೃದ್ಧಿ ಸೂಚ್ಯಾಂಕದಲ್ಲಿ ಮತ್ತೆ ಎರಡು ಸ್ಥಾನ ಕುಸಿದ ಭಾರತ
2015ರಲ್ಲಿ 193 ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳು 2030ರ ಕಾರ್ಯಸೂಚಿಯ ಅಂಗವಾಗಿ 17 ಸುಸ್ಥಿರ ಅಭಿವೃದ್ಧಿ ಗುರಿಗಳನ್ನು (ಎಸ್‌ಡಿಜಿ-ಸಸ್ಟೇನಬಲ್ ಡೆವೆಲಪ್‍ಮೆಂಟ್ ಗೋಲ್ಸ್) ಅಂಗೀಕರಿಸಿದ್ದವು. ಈ ಪಟ್ಟಿಯಲ್ಲಿ ಭಾರತದ ಶ್ರೇಣಿ ಕಳೆದ ವರ್ಷದಿಂದ ಎರಡು ಸ್ಥಾನ ಕುಸಿದು 117ಕ್ಕೆ ಇಳಿದಿದೆ ಎಂದು ಹೊಸ ವರದಿ ಉಲ್ಲೇಖಿಸಿ ಎನ್‍ಡಿಟಿವಿ ವರದಿ ಮಾಡಿದೆ. "ಭಾರತದ ಪರಿಸರ ವರದಿ 2021" ಅನ್ನು ಬಹಿರಂಗಪಡಿಸಿದ್ದು, ಕಳೆದ ವರ್ಷ ಭಾರತದ ಶ್ರೇಯಾಂಕ 115 ಇದ್ದುದು ಈಗ ಎರಡು ಸ್ಥಾನಗಳಿಂದ ಕೆಳಗಿಳಿದಿದೆ.
4. Gold Price Today: ಚಿನ್ನದ ಬೆಲೆಯಲ್ಲಿ ಕೊಂಚ ಏರಿಕೆ
ಇಂದು ಮತ್ತೆ ಚಿನ್ನದ ಬೆಲೆಯಲ್ಲಿ ಕೊಂಚ ಏರಿಕೆಯಾಗಿದ್ದು, ಬೆಂಗಳೂರಿನಲ್ಲಿ 50 ಸಾವಿರ ದಾಟಿದೆ. ನಿನ್ನೆ 10 ಗ್ರಾಂ 22 ಕ್ಯಾರೆಟ್ ಚಿನ್ನಕ್ಕೆ 48,300 ರೂ. ಇತ್ತು. ಆದರೆ ಇಂದು 48,310ಕ್ಕೆ ಏರಿಕೆಯಾಗಿದೆ. ಅಂತೆಯೇ 10 ಗ್ರಾಂ 24 ಕ್ಯಾರೆಟ್ ಚಿನ್ನಕ್ಕೆ ನಿನ್ನೆ 49,300 ಇತ್ತು. ಆದರೆ ಇಂದು 49,310ಕ್ಕೆ ಏರಿಕೆಯಾಗಿದೆ. ಅಂತೆಯೇ ಬೆಂಗಳೂರಿನಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನಕ್ಕೆ 45,910 ರೂ. ಇದೆ. 10 ಗ್ರಾಂ 24 ಕ್ಯಾರೆಟ್ ಚಿನ್ನಕ್ಕೆ 50,080 ರೂ. ಇದೆ.
5.Chiranjeevi Sarja: ಚಿರು ಸರ್ಜಾರ ಮೊದಲ ವರ್ಷದ ಪುಣ್ಯ ಸ್ಮರಣೆ
ಸ್ಯಾಂಡಲ್ವುಡ್ ಯುವ ಸಾಮ್ರಾಟ್ ಚಿರಂಜೀವಿ ಸರ್ಜಾ ಅವರ ಮೊದಲ ಪುಣ್ಯ ಸ್ಮರಣೆ ಇಂದು. ಕಳೆದ ವರ್ಷ ಅಂದರೆ 2020ರ ಜೂನ್ 07ರಂದು ಚಿರು ಇಹಲೋಕ ತ್ಯಜಿಸಿದ್ದರು. ಮೇಘನಾ ರಾಜ್ ಆಗಾಗ ಚಿರು ಫೋಟೋವನ್ನು ಹಂಚಿಕೊಳ್ಳುತ್ತಾ ಭಾವುಕರಾಗಿ ಪೋಸ್ಟ್ ಮಾಡುತ್ತಲೇ ಇರುತ್ತಾರೆ. ನಿನ್ನೆ ರಾತ್ರಿಯೂ ಮೇಘನಾ ಚಿರು ಜೊತೆಗಿರುವ ಒಂದು ಫೋಟೋ ಹಂಚಿಕೊಂಡಿದ್ದಾರೆ. ಜೊತೆಗೆ ನಾನು ಹಾಗೂ ನನ್ನವನು ಎಂದು ಶೀರ್ಷಿಕೆ ನೀಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ