Morning Digest: ಕರ್ನಾಟಕ ಅನ್​ಲಾಕ್​ 3.0 ಗೈಡ್​​ಲೈನ್ಸ್​ ರಿಲೀಸ್, ಜಮ್ಮು-ಕಾಶ್ಮೀರದಲ್ಲಿ ಮತ್ತೆ ಡ್ರೋನ್ ಪತ್ತೆ; ಇಂದಿನ ಪ್ರಮುಖ ಸುದ್ದಿಗಳಿವು

ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು? ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  1. Drone Attack| ಜಮ್ಮು-ಕಾಶ್ಮೀರದ ಸಾಂಬಾ ಜಿಲ್ಲೆಯಲ್ಲಿ ಮತ್ತೆ ಡ್ರೋನ್ ಪತ್ತೆ; ಗಡಿಯಲ್ಲಿ ಕಟ್ಟೆಚ್ಚರ

  ಕಳೆದ ಜೂನ್ 27 ರಂದು ಮುಂಜಾನೆ 1.40ಕ್ಕೆ ಜಮ್ಮು ವಾಯುನೆಲೆಯ ಮೇಲೆ ಭಯೋತ್ಪಾದಕರು ಡ್ರೋನ್​ ದಾಳಿ ನಡೆಸಿದ್ದರು. 6 ನಿಮಿಷಗಳ ಅಂತರದಲ್ಲಿ ಎರಡು ಬಾಂಬ್ ಬ್ಲಾಸ್ಟ್​ ಆಗಿದ್ದು, ಇ್ಬಬರು ಸೈನಿಕರು ಗಾಯಕ್ಕೆ ಒಳಗಾಗಿದ್ದರು. ಈ ಸುದ್ದಿ ರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಸದ್ದು ಮಾಡಿತ್ತು. ಈ ಸ್ಪೋಟ 2016ರ ಪಠಾಣ್ ಕೋಟ್​ ವಾಯನೆಲೆ ದಾಳಿಯ ಮುಂದುವರಿಕೆಯಾಗಿದ್ದು, ಇದರ ಹಿಂದೆ ಜೈಶ್​-ಎ-ಮೊಹಮ್ಮದ್​ ಉಗ್ರ ಸಂಘಟನೆಯ ಕೈವಾಡ ಇರುವ ಶಂಕೆ ಇದೆ ಎಂದು ಗುಪ್ತಚರ ಇಲಾಖೆ ಉನ್ನತ ಮೂಲಗಳು ಶಂಕೆ ವ್ಯಕ್ತಪಡಿಸಿತ್ತು. ಈ ಪ್ರಕರಣದ ತನಿಖೆಗೆಯನ್ನು ಎನ್ಐಎ (NIA-National Investigation Agency) ಗೆ ವಹಿಸಲಾಗಿದ್ದು, ಎನ್​ಐಎ ಅಧಿಕಾರಿಗಳು ಸಹ ಈ ದಾಳಿಯ ಹಿಂದೆ ಜೈಶ್​-ಎ-ಮೊಹಮ್ಮದ್ ಸಂಘಟನೆಯ ಕೈವಾಡ ಇದೆ ಎಂಬ ನಿಟ್ಟಿನಲ್ಲಿಯೇ ತನಿಖೆಗೆ ಮುಂದಾಗಿದ್ದಾರೆ. ಆದರೆ, ಈ ನಡುವೆ ಇಂದು ಮತ್ತೆ ಜಮ್ಮು ಕಾಶ್ಮೀರದ ಸಾಂಬಾ ಜಿಲ್ಲೆಯಲ್ಲಿ ಡ್ರೋನ್ ಪತ್ತೆಯಾಗಿದ್ದು ಈ ಭಾಗದಲ್ಲಿ ಇನ್ನಷ್ಟು ಸೇನೆಯನ್ನು ನಿಯೋಜನೆ ಮಾಡಲಾಗಿದೆ ಎಂದು ಉನ್ನತ ಮೂಲಗಳು ನ್ಯೂಸ್ 18 ಗೆ ತಿಳಿಸಿವೆ.

  2.Karnataka Weather Today: ಕರ್ನಾಟಕ ಸೇರಿ ಈ ರಾಜ್ಯಗಳಲ್ಲಿ ಮುಂದಿನ 5 ದಿನ ಭಾರೀ ಮಳೆ

  Karnataka Monsoon 2021: ಬೆಂಗಳೂರು (ಜುಲೈ 4): ಕರ್ನಾಟಕಕ್ಕೆ ಮುಂಗಾರು ಪ್ರವೇಶಿಸಿ ತಿಂಗಳಾಗಿದೆ. ಪ್ರಾರಂಭದಲ್ಲಿ ಕೆಲವು ದಿನ ಆರ್ಭಟ ತೋರಿದ್ದ ಮಳೆರಾಯ, ಬಳಿಕ ಒಂದು ವಾರ ವುರಾಮ ನೀಡಿತ್ತು. ಈಗ ಕಳೆದ ಒಂದು ವಾರದಿಂದ ವರುಣದೇವ ಮತ್ತೆ ತನ್ನ ಆರ್ಭಟವನ್ನು ತೋರಿಸುತ್ತಿದ್ದಾನೆ. ಮಲೆನಾಡು, ಕರಾವಳಿ ಮತ್ತು ಉತ್ತರ ಕರ್ನಾಟಕದ ಕೆಲ ಭಾಗಗಳಲ್ಲಿ ವರ್ಷಧಾರೆ ಮುಂದುವರೆದಿದೆ. ಮುಂಗಾರು ಪ್ರಾರಂಭವಾದಾಗಿನಿಂದಲೇ ಜನರ ಕೃಷಿ ದುಪ್ಪಟ್ಟಾಗಿದ್ದು, ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ಜೂನ್ ಮಧ್ಯದವರೆಗೆ ಸುರಿದಿದ್ದ ಮಳೆ ಬಳಿಕ ಕಡಿಮೆಯಾಗಿತ್ತು. ಕಳೆದ ಒಂದು ವಾರದಿಂದ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಮತ್ತೆ ಮಳೆಯಾಗುತ್ತಿದೆ. ಇಂದು ಕೂಡ ಕರಾವಳಿ, ಉತ್ತರ ಒಳನಾಡು, ದಕ್ಷಿಣ ಒಳನಾಡಿನಲ್ಲಿ ಮಳೆಯ ಅಬ್ಬರ ಮುಂದುವರೆಯಲಿದೆ.

  3.Rafale Deal| ರಫೇಲ್ ಡೀಲ್​ನಲ್ಲಿ ಭ್ರಷ್ಟಾಚಾರದ ವಾಸನೆ, ಒಪ್ಪಂದದ ತನಿಖೆಗೆ ನ್ಯಾಯಾಧೀಶರನ್ನು ನೇಮಿಸಿದ ಫ್ರಾನ್ಸ್‌ ಸರ್ಕಾರ

  ಭಾರತದ ವಾಯಪಡೆಯನ್ನು ಮತ್ತಷ್ಟು ಬಲಿಷ್ಠಗೊಳಿಸುವ ಸಲುವಾಗಿ ಕೇಂದ್ರ ಸರ್ಕಾರ 2016 ಬಹುಕೋಟಿ ಮೊತ್ತದ ರಫೇಲ್​ ಯುದ್ಧ ವಿಮಾನಗಳ ಖರೀದಿಗೆ ಫ್ರಾನ್ಸ್​ ಜೊತೆ ಒಪ್ಪಂದ ಮಾಡಿಕೊಂಡಿತ್ತು. ಆದರೆ, ಈ ಒಪ್ಪಂದದಲ್ಲಿ ಅಕ್ರಮ-ಭ್ರಷ್ಟಾಚಾರ ನಡೆದಿದೆ ಎಂಬ ಆರೋಪಗಳೂ ಹಲವು ವರ್ಷಗಳಿಂದ ಕೇಳಿ ಬರುತ್ತಲೇ ಇದೆ. ಈ ನಡುವೆ ಈ ಒಪ್ಪಂದಕ್ಕೆ ಸಂಬಂಧಿಸಿದ ಕೆಲವು ದಾಖಲೆ ಪತ್ರಗಳು ದಿಢೀರೆಂದು ರಕ್ಷಣಾ ಇಲಾಖೆ ಕಚೇರಿಯಿಂದಲೇ ಕಾಣೆಯಾದದ್ದು ಹಲವು ಅನುಮಾನಗಳಿಗೂ ಕಾರಣವಾಗಿತ್ತು. ಆದರೆ, ಇದೀಗ ನಡೆದಿರುವ ಹೊಸ ಬೆಳವಣಿಗೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಅನುಮಾನದ ಮೇಲೆ, 2016 ರ ಬಹು-ಶತಕೋಟಿ ಡಾಲರ್ ಮೊತ್ತದ ರಫೇಲ್ ಫೈಟರ್ ಜೆಟ್‌ಗಳನ್ನು ಭಾರತಕ್ಕೆ ಮಾರಾಟ ಮಾಡಿದ ಬಗ್ಗೆ ತನಿಖೆ ನಡೆಸಲು ಫ್ರೆಂಚ್ ಸರ್ಕಾರ ನ್ಯಾಯಾಧೀಶರನ್ನು ನೇಮಿಸಿದೆ ಎಂದು 'ರಾಷ್ಟ್ರೀಯ ಹಣಕಾಸು ಅಭಿಯೋಜಕರ ಕಚೇರಿ’ '(ಪಿಎನ್‌ಎಫ್) ಶುಕ್ರವಾರ ತಿಳಿಸಿದೆ. ‘ಪಿಎನ್‌ಎಫ್‌’ ಫ್ರಾನ್ಸ್‌ನ ನ್ಯಾಯಾಂಗ ಸಂಸ್ಥೆಯಾಗಿದ್ದು ಇದು ಗಂಭೀರ ಆರ್ಥಿಕ ಮತ್ತು ಹಣಕಾಸಿನ ಅಪರಾಧಗಳನ್ನು ಪತ್ತೆಹಚ್ಚುವ ಕಾರ್ಯವನ್ನು ಮಾಡುತ್ತದೆ.

  4. ನಾಳೆಯಿಂದ ರಾಜ್ಯದಲ್ಲಿ ಅನ್​ಲಾಕ್​ 3.0; ಯಾವುದಕ್ಕೆಲ್ಲಾ ಅನುಮತಿ?

  ರಾಜ್ಯದಲ್ಲಿ ನಾಳೆಯಿಂದ ಅಂದರೆ ಜುಲೈ 5ರಿಂದ ಅನ್​ಲಾಕ್​ 3.0 ಜಾರಿಯಾಗಲಿದ್ದು, ಸರ್ಕಾರ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಆ ಪ್ರಕಾರ, ರಾಜ್ಯದಲ್ಲಿ ಈವರೆಗೆ ವಿಧಿಸಲಾಗಿದ್ದ ನೈಟ್​ ಕರ್ಫ್ಯೂವನ್ನು ತೆಗೆದುಹಾಕಲಾಗಿದೆ. ಧಾರ್ಮಿಕ ಸ್ಥಳಗಳಲ್ಲಿ ದೇವರ ದರ್ಶನಕ್ಕೆ ಅನುಮತಿ ನೀಡಲಾಗಿದೆ. ಇನ್ನು, ಮದುವೆ ಸಮಾರಂಭಗಳಲ್ಲಿ 100 ಜನರಿಗೆ ಭಾಗಿಯಾಗಲಿ ಅವಕಾಶ ನೀಡಲಾಗಿದೆ. ಅಂತ್ಯಸಂಸ್ಕಾರಕ್ಕೆ 20 ಮಂದಿ ಪಾಲ್ಗೊಳ್ಳಬಹುದು ಎಂದು ಹೇಳಲಾಗಿದೆ. ಮೂರನೇ ಹಂತದ ಅನ್​ಲಾಕ್ (Unlock 3.0)​ ವೇಳೆ ಚಿತ್ರಮಂದಿರಗಳನ್ನು ತೆರೆಯಲು ಯಾವುದೇ ಅವಕಾಶ ನೀಡಿಲ್ಲ. ಶಾಲಾ -ಕಾಲೇಜು ತೆರೆಯುವ ಕುರಿತು ಇನ್ನು ಯಾವುದೇ ತೀರ್ಮಾನವಾಗಿಲ್ಲ.
  Published by:Latha CG
  First published: