Morning Digest: ಹಲವು ರಾಜ್ಯಗಳಲ್ಲಿ ಇನ್ನೂ 2 ದಿನ ಮಳೆ, ಚಿನ್ನದ ಬೆಲೆಯಲ್ಲಿ ಏರಿಕೆ; ಇಂದಿನ ಪ್ರಮುಖ ಸುದ್ದಿಗಳಿವು

ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು? ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    1.Karnataka Weather Updates: ಕರ್ನಾಟಕದಲ್ಲಿ ತಗ್ಗಿದ ಮಳೆ; ಈ ರಾಜ್ಯಗಳಲ್ಲಿ ಮುಂದಿನ 48 ಗಂಟೆಗಳ ಕಾಲ ವರುಣನ ಆರ್ಭಟ

    Karnataka Rains Today:(ಜು.29): ರಾಜ್ಯದಲ್ಲಿ ಕಳೆದೆರಡು ದಿನಗಳಿಂದ ಮಳೆಯ ಅಬ್ಬರ ಕಡಿಮೆಯಾಗಿದ್ದು, ಪ್ರವಾಹ ಮಟ್ಟವೂ ಇಳಿಕೆಯಾಗುತ್ತಿದೆ. ಹೀಗಾಗಿ ನದಿ ತೀರದ ಜನರು ನಿಟ್ಟುಸಿರು ಬಿಡುವಂತಾಗಿದೆ. ಇಂದು ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಸಾಧರಣ ಮಳೆ, ಮಲೆನಾಡು ಜಿಲ್ಲೆಗಳಲ್ಲಿ ಚದುರಿದಂತೆ ಸಾಧಾರಣ ಮಳೆ ಮತ್ತು ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಅಲ್ಲಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ ಮುನ್ಸೂಚನೆ ನೀಡಿದೆ. ಇಂದು ರಾಜಧಾನಿ ಬೆಂಗಳೂರಿನಲ್ಲಿಯೂ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಇನ್ನು, ಕರ್ನಾಟಕದ ಕರಾವಳಿ ಭಾಗದಲ್ಲಿ ಸಾಧಾರಣ ಮಳೆಯಾದರೆ, ಮಲೆನಾಡು ಭಾಗದ ಜಿಲ್ಲೆಗಳಲ್ಲೂ ಮಳೆ ಸುರಿಯಲಿದೆ. ಜೊತೆಗೆ ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.

    2. Petrol Price Today: ಸತತ 12ನೇ ದಿನವೂ ಸ್ಥಿರತೆ ಕಾಯ್ದುಕೊಂಡ ಪೆಟ್ರೋಲ್-ಡೀಸೆಲ್ ಬೆಲೆ

    Petrol, Diesel Prices on July 29 ಬೆಂಗಳೂರು: ನಿರಂತರವಾಗಿ ಏರಿಕೆ ಕಾಣುತ್ತಾ ಬಂದಿದ್ದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕಳೆದ 12 ದಿನಗಳಿಂದ ತಟಸ್ಥವಾಗಿದೆ. ಜುಲೈ 17ರಿಂದ ಪೆಟ್ರೋಲ್ ಬೆಲೆ ಯಾವುದೇ ಏರಿಕೆ ಕಂಡಿಲ್ಲ. ಆದರೆ, ಮೇ 4ರಿಂದ ಇಲ್ಲಿಯವರೆಗೆ ಹಲವು ಬಾರಿ ಬೆಲೆ ಹೆಚ್ಚಳಗೊಂಡ ಪರಿಣಾಮ ಈ ಅವಧಿಯಲ್ಲಿ ಪೆಟ್ರೋಲ್ 11 ರೂ ದುಬಾರಿಯಾಗಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ 105.25 ರೂ ದರ ಇದೆ. ಡೀಸೆಲ್ ಬೆಲೆ 95.26 ರೂ ನಲ್ಲೇ ಮುಂದುವರಿದಿದೆ. ಮಹಾನಗರಿಗಳ ಪೈಕಿ ಮುಂಬೈನಲ್ಲಿ ಪೆಟ್ರೋಲ್ ಡೀಸೆಲ್ ಅತಿ ದುಬಾರಿ ಇದೆ. ಈ ವಾಣಿಜ್ಯ ನಗರಿಯಲ್ಲಿ ಪೆಟ್ರೋಲ್ ಬೆಲೆ 107.83 ಇದ್ದರೆ, ಡೀಸೆಲ್ ದರ 97.43 ರೂ ಇದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 101.84 ರೂ ಇದೆ. ಇಲ್ಲಿ ಡೀಸೆಲ್ ಬೆಲೆ ಇನ್ನೂ 90 ರೂ ಗಡಿ ಮುಟ್ಟಿಲ್ಲ.

    3.Gold Price Today: ಕೊಂಚ ಏರಿಕೆ ಕಂಡ ಚಿನ್ನದ ಬೆಲೆ; ಬೆಳ್ಳಿ ದರದಲ್ಲಿ ಯಥಾಸ್ಥಿತಿ

    ಕಳೆದ ಕೆಲ ದಿನಗಳಿಂದ ಚಿನ್ನದ ಬೆಲೆ ಏರಿಕೆಯಾಗುತ್ತಲೇ ಇತ್ತು. ಕಳೆದ ಮೂರು ದಿನಗಳಿಂದ ಚಿನ್ನದ ಬೆಲೆ ಸ್ಥಿರತೆ ಕಾಯ್ದುಕೊಂಡಿದ್ದ ಚಿನ್ನದ ಬೆಲೆ, ಇಂದು ಇಳಿಕೆ ಕಂಡಿದೆ. ಹೀಗಾಗಿ ಆಭರಣ ಪ್ರಿಯರಿಗೆ ಇದೇ ಚಿನ್ನ ಖರೀದಿಸಲು ಸೂಕ್ತ ಸಮಯವಾಗಿದೆ. ಕಳೆದ 4 ದಿನಗಳಿಂದ ಚಿನ್ನದ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿರಲಿಲ್ಲ. ಇಂದು ಚಿನ್ನದ ಬೆಲೆಯಲ್ಲಿ ಕೊಂಚ ಏರಿಕೆ ಕಂಡಿದೆ. ಭಾರತದಲ್ಲಿ ನಿನ್ನೆ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 46,840 ರೂ. ಇತ್ತು. ಇಂದು 10 ರೂ ಏರಿಕೆಯಾಗಿದ್ದು, 46,850 ರೂ. ಆಗಿದೆ. ಅದೇ ರೀತಿ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆಯನ್ನೂ ಕೊಂಚ ಏರಿಕೆಯಾಗಿದೆ. ನಿನ್ನೆ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 47,840 ರೂ. ಇತ್ತು. ಇಂದು 47,850 ರೂ.ಆಗಿದೆ. ಭಾರತದಲ್ಲಿ ಇಂದು ಬೆಳ್ಳಿ ಬೆಲೆ ಸ್ಥಿರತೆ ಕಾಯ್ದುಕೊಂಡಿದೆ. ನಿನ್ನೆ 1 ಕೆ.ಜಿ ಬೆಳ್ಳಿಗೆ 400 ರೂಪಾಯಿ ಕಡಿಮೆಯಾಗಿತ್ತು. ಇಂದು ಯಾವುದೇ ಬೆಲೆ ವ್ಯತ್ಯಾಸವಾಗಿಲ್ಲ. ನಿನ್ನೆ 1 ಕೆಜಿ ಬೆಳ್ಳಿಗೆ 66,400 ರೂ. ಇತ್ತು. ಇಂದು 1 ಕೆ.ಜಿ ಬೆಳ್ಳಿಗೆ 66,400 ರೂಪಾಯಿಯೇ ಇದ್ದು, ಯಾವುದೇ ಬೆಲೆ ವ್ಯತ್ಯಾಸವಾಗಿಲ್ಲ.
    Published by:Latha CG
    First published: