Morning Digest: ಬೆಂಗಳೂರಿನಲ್ಲಿ 2 ದಿನ ಮಳೆ, ಪೆಟ್ರೋಲ್​-ಡೀಸೆಲ್ ಮತ್ತು ಚಿನ್ನದ ಬೆಲೆಯಲ್ಲಿ ಸ್ಥಿರತೆ; ಇಂದಿನ ಪ್ರಮುಖ ಸುದ್ದಿಗಳಿವು

ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು? ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  1.BS Yediyurappa Resigns: ಯಡಿಯೂರಪ್ಪನವರ ಕಣ್ಣೀರಿನ ಶಾಪ ಮುಂದೆ ರಾಜ್ಯ ಬಿಜೆಪಿಗೆ ಸಂಕಷ್ಟ ತರಲಿದೆಯಾ?

  ಬೂಕನಕೆರೆ ಸಿದ್ಧಲಿಂಗಪ್ಪ ಯಡಿಯೂರಪ್ಪ ರಾಜ್ಯದ ದೊರೆ, ರಾಜ್ಯದ ಬಿಜೆಪಿ ಪಾಲಿನ ಮಹಾನ್ ಶಕ್ತಿ, ಅಭಿಮಾನಿಗಳ ಪಾಲಿಗೆ ರಾಜಾಹುಲಿ , ಸೈಕಲ್ ಹತ್ತಿ ಸಿಎಂ ಕುರ್ಚಿ ಏರಿದ ಮಹಾನಾಯಕ. ಯಡಿಯೂರಪ್ಪರವರ ಕಣ್ಣೀರು ಬಿಜೆಪಿ ಪಕ್ಷಕ್ಕೆ ಶಾಪವಾಗಬಹುದು. ವಿದಾಯದ ಭಾಷಣದಲ್ಲಿ ಅವರ ಕಣ್ಣಂಚಲಿ ಬಂದಿತ್ತು ಶ್ರಮದ ಕಣ್ಣೀರು. ಮಹಾನಾಯಕನ ನಿರ್ಗಮನ ಹೀಗೆ ಅಂತ್ಯವಾಗಬಾರದಿತ್ತು. ಹೌದು, ಸೋಮವಾರ(ನಿನ್ನೆ) ಯಡಿಯೂರಪ್ಪ ತಮ್ಮ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈಗ ಯಡಿಯೂರಪ್ಪ ಹಂಗಾಮಿ ಸಿಎಂ. ಆದ್ರೆ ಕರ್ನಾಟಕದಲ್ಲಿ ಯಡಿಯೂರಪ್ಪರವರ ಹೆಸ್ರು ಕೇಳಿದ್ರೆ ರಾಜ್ಯ ಬಿಜೆಪಿ ಇತಿಹಾಸ ಕಣ್ಮುಂದೆ ಬರುತ್ತೆ. ನಿನ್ನೆ ಅವರು ಭಾವುಕರಾಗಿದ್ದಾಗ, ರಾಜ್ಯದ ಶಕ್ತಿಸೌಧ ವಿಧಾನಸೌಧದಲ್ಲಿ ರಾಜೀನಾಮೆ ಘೋಷಣೆ ಮಾಡಿದಾಗ, ರಾಜ್ಯದ ಅದೆಷ್ಟೋ ಅಭಿಮಾನಿಗಳಿಗೆ ಬಾಚಿ ತಬ್ಬಿಬಿಡುವಷ್ಟು ಸಂಕಟವಾಗಿತ್ತು. ರಾಜೀನಾಮೆ ನೀಡುವೆ ಎಂದಾಗ, ಅವರ ಮುಖದಲ್ಲಿ ದುಃಖದೊಳಗಿನ ನಗು ಹೊರಚಿಮ್ಮಿತ್ತು.

  2.Karnataka Weather Updates: ರಾಜಧಾನಿ ಬೆಂಗಳೂರಿನಲ್ಲಿ ಇನ್ನೂ 2 ದಿನ ಮಳೆ; ಕರಾವಳಿ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್​

  ಮುಂದಿನ ಎರಡು ದಿನ ರಾಜಧಾನಿ ಬೆಂಗಳೂರಿನಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ ಮುನ್ಸೂಚನೆ ನೀಡಿದೆ. ಇನ್ನು, ಕರ್ನಾಟಕದ ಕರಾವಳಿ ಭಾಗದಲ್ಲಿ ಸಾಧಾರಣ ಮಳೆಯಾದರೆ, ಮಲೆನಾಡು ಭಾಗದ ಜಿಲ್ಲೆಗಳಲ್ಲೂ ಮಳೆ ಸುರಿಯಲಿದೆ. ಜೊತೆಗೆ ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಇಂದು ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ. ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿ ಮಳೆಯಾಗುವ ಸಾಧ್ಯತೆ ಇರುವ ಹಿನ್ನೆಲೆ, ದಾವಣಗೆರೆ, ರಾಮನಗರ, ಚಿಕ್ಕಬಳ್ಳಾಪುರ, ತುಮಕೂರು ಮತ್ತು ಕೋಲಾರ ಜಿಲ್ಲೆಗಳಲ್ಲಿ ಇಂದು ಮೋಡ ಕವಿದ ವಾತಾವರಣವಿದ್ದು, ಹಗುರ ಮಳೆಯಾಗುವ ಸಾಧ್ಯತೆ ಇದೆ.

  3. Petrol Price Today: ಸತತ 10ನೇ ದಿನವೂ ಸ್ಥಿರತೆ ಕಾಯ್ದುಕೊಂಡ ಪೆಟ್ರೋಲ್​-ಡೀಸೆಲ್ ಬೆಲೆ...!

  Petrol, Diesel Prices on July 27 ಬೆಂಗಳೂರು: ನಿರಂತರವಾಗಿ ಏರಿಕೆ ಕಾಣುತ್ತಾ ಬಂದಿದ್ದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕಳೆದ 10 ದಿನಗಳಿಂದ ತಟಸ್ಥವಾಗಿದೆ. ಜುಲೈ 17ರಿಂದ ಪೆಟ್ರೋಲ್ ಬೆಲೆ ಯಾವುದೇ ಏರಿಕೆ ಕಂಡಿಲ್ಲ. ಆದರೆ, ಮೇ 4ರಿಂದ ಇಲ್ಲಿಯವರೆಗೆ ಹಲವು ಬಾರಿ ಬೆಲೆ ಹೆಚ್ಚಳಗೊಂಡ ಪರಿಣಾಮ ಈ ಅವಧಿಯಲ್ಲಿ ಪೆಟ್ರೋಲ್ 11 ರೂ ದುಬಾರಿಯಾಗಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ 105.25 ರೂ ದರ ಇದೆ. ಡೀಸೆಲ್ ಬೆಲೆ 95.26 ರೂ ನಲ್ಲೇ ಮುಂದುವರಿದಿದೆ. ಮಹಾನಗರಿಗಳ ಪೈಕಿ ಮುಂಬೈನಲ್ಲಿ ಪೆಟ್ರೋಲ್ ಡೀಸೆಲ್ ಅತಿ ದುಬಾರಿ ಇದೆ. ಈ ವಾಣಿಜ್ಯ ನಗರಿಯಲ್ಲಿ ಪೆಟ್ರೋಲ್ ಬೆಲೆ 107.83 ಇದ್ದರೆ, ಡೀಸೆಲ್ ದರ 97.43 ರೂ ಇದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 101.84 ರೂ ಇದೆ. ಇಲ್ಲಿ ಡೀಸೆಲ್ ಬೆಲೆ ಇನ್ನೂ 90 ರೂ ಗಡಿ ಮುಟ್ಟಿಲ್ಲ.
  Published by:Latha CG
  First published: