Morning Digest: ಇಂದಿನಿಂದ ಹಾಲಿನ ದರ ಹೆಚ್ಚಳ; ಮಲೆನಾಡು, ಕರಾವಳಿಯಲ್ಲಿ ಭಾರೀ ಮಳೆ; ಇಂದಿನ ಪ್ರಮುಖ ಸುದ್ದಿಗಳಿವು

ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು? ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    1.Karnataka Weather Today: ಮಲೆನಾಡು, ಕರಾವಳಿ ಸೇರಿ ರಾಜ್ಯಾದ್ಯಂತ ಇಂದು ಮಳೆಯ ಆರ್ಭಟ

    ಕಳೆದ ಮೂರ್ನಾಲ್ಕು ದಿನಗಳಿಂದ ಕರ್ನಾಟಕದಲ್ಲಿ ಮತ್ತೆ ಮಳೆ ಶುರುವಾಗಿದ್ದು, ರೈತರು ಕೃಷಿ ಚಟುವಟಿಕೆಗಳನ್ನು ಚುರುಕುಗೊಳಿಸಿದ್ದಾರೆ. ನಿನ್ನೆ ಕೆಲವು ಜಿಲ್ಲೆಗಳಲ್ಲಿ ಕೊಂಚ ಬಿಸಿಲು ಮೂಡಿದ್ದು, ಹಲವೆಡೆ ತುಂತುರು ಮಳೆಯಾಗಿದೆ. ಆದರೆ, ಇಂದು ರಾಜ್ಯಾದ್ಯಂತ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹೀಗಾಗಿ, ಇಂದು ಕೂಡ ಕರಾವಳಿ ಜಿಲ್ಲೆಗಳಲ್ಲಿ ಹಳದಿ ಅಲರ್ಟ್ ಘೋಷಿಸಲಾಗಿದೆ. ಕರ್ನಾಟಕ ಮಾತ್ರವಲ್ಲದೆ, ನೆರೆಯ ರಾಜ್ಯಗಳಲ್ಲೂ ಮಳೆಯಾಗುತ್ತಿದೆ. ಹಲವು ರಾಜ್ಯಗಳಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಇಂದು ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯ ಮುನ್ಸೂಚನೆ ನೀಡಲಾಗಿದೆ. ಕರಾವಳಿ ಜಿಲ್ಲೆಗಳಲ್ಲಿ ನಾಲ್ಕೈದು ದಿನಗಳಿಂದ ಮಳೆಯಾಗುತ್ತಿದ್ದು, ಇಂದು ಕೂಡ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಜೊತೆಗೆ, ಉತ್ತರ ಒಳನಾಡು, ಕಲ್ಯಾಣ ಕರ್ನಾಟಕದಲ್ಲಿ ಇಂದು ಮಳೆಯ ತೀವ್ರತೆ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ದಕ್ಷಿಣ ಒಳನಾಡಿನ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಕೂಡ ಇಂದು ಭಾರೀ ಮಳೆಯಾಗಲಿದೆ.

    2.Narendra Modi| ಕೊರೋನಾ 3ನೇ ಅಲೆಯನ್ನು ತಡೆಯುವಲ್ಲಿ ಮಾದರಿಯಾಗಿ ಕೆಲಸ ಮಾಡಿ; ಕೇಂದ್ರ ಸಚಿವರಿಗೆ ಮೋದಿ ಕಿವಿಮಾತು

    ಕೊರೋನಾ ಮೂರನೇ ಅಲೆಯನ್ನು ದೇಶದಲ್ಲಿ ಪ್ರವೇಶಿಸದಂತೆ ತಡೆಯುವಲ್ಲಿ ಎಲ್ಲಾ ಸಚಿವರುಗಳು ಇತರರಿಗೆ ಮಾದರಿಯಾಗುವಂತೆ ಕೆಲಸ ನಿರ್ವಹಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕೇಂದ್ರ ಸಚಿವರುಗಳಿಗೆ ಕಿವಿಮಾತು ಹೇಳಿದ್ದಾರೆ. ಬುಧವಾರ ರಾತ್ರಿ 8 ಗಂಟೆವರೆಗೂ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೇಂದ್ರ ಸಚಿವರುಗಳು ಹಾಗೂ ರಾಜ್ಯ ಖಾತೆ ಸಚಿವರುಗಳ ಬಳಿ ಮಾತನಾಡಿರುವ ಪ್ರಧಾನಿ ಮೋದಿ, "ಕೊರೋನಾ ಎರಡನೇ ಅಲೆಯಿಂದ ಇಡೀ ದೇಶ ತತ್ತರಿಸಿದೆ. ಹೀಗಾಗಿ ಮೂರನೇ ಅಲೆ ದೇಶವನ್ನು ಪ್ರವೇಶಿಸದಂತೆ ತಡೆಯಬೇಕಿದೆ. ದೇಶದ ಜನರಿಗೆ ಲಸಿಕೆ ನೀಡುವ ಕೆಲಸ ಯುದ್ಧೋಪಾದಿಯಲ್ಲಿ ನಡೆಯಬೇಕಿದೆ, ಕೋವಿಡ್ ಮಾರ್ಗಸೂಚಿಯನ್ನು ತಪ್ಪದೆ ಎಲ್ಲರೂ ಪಾಲಿಸುವಂತೆ ಜನರನ್ನು ಪ್ರೋತ್ಸಾಹಿಸಬೇಕು" ಎಂದು ಮೋದಿ ಕಿವಿಮಾತು ಹೇಳಿದ್ದಾರೆ ಎಂದು ಮೂಲಗಳು ಸಿಎನ್ಎನ್-ನ್ಯೂಸ್ 18 ಗೆ ತಿಳಿಸಿವೆ.

    3. Amul Milk: ದೇಶಾದ್ಯಂತ ಇಂದಿನಿಂದ ಹಾಲಿನ ದರ ಲೀಟರ್​ಗೆ 2 ರೂಪಾಯಿ ಹೆಚ್ಚಳ!

    ಇಂಧನ ಬೆಲೆ ಏರಿಕೆ, ದಿನಬಳಕೆ ವಸ್ತುಗಳ ಬೆಲೆ ಏರಿಕೆ ನಡುವೆ ಇದೀಗ ಅಮೂಲ್ ಹಾಲಿನ ದರವು ಹೆಚ್ಚಳವಾಗಿದೆ. ಇಂದಿನಿಂದ (ಜುಲೈ 1) ದೇಶಾದ್ಯಂತ ಅಮೂಲ್ ಹಾಲಿನ ದರ ಲೀಟರ್​ಗೆ 2 ರೂಪಾಯಿ ಏರಿಕೆಯಾಗಲಿದೆ. ಗುಜರಾತ್ ಕೋ ಆಪರೇಟಿವ್ ಮಿಲ್ಕ್ ಮಾರ್ಕೆಟಿಂಗ್ ಫೆಡರೇಷನ್ (GCMMF) ಈ ವಿಷಯವನ್ನು ಬುಧವಾರ ಪ್ರಕಟಿಸಿದೆ. ತಾಜಾ, ಗೋಲ್ಡ್, ಶಕ್ತಿ, ಟೀ ಸ್ಪೆಷನ್ ಸೇರಿದಂತೆ ಅಮೂಲ್ ಹಾಲಿನ ಎಲ್ಲ ಇತರೆ ಬ್ರಾಡ್​ಗಳ ಬೆಲೆಗಳ ಸಹ ಏರಿಕೆ ಆಗಲಿದೆ. ಅದೇ ರೀತಿ ಹಸು ಮತ್ತು ಎಮ್ಮೆಯ ಹಾಲು ಸಹ ಹೆಚ್ಚಳವಾಗಲಿದೆ. ಒಂದು ವರ್ಷ ಏಳು ತಿಂಗಳುಗಳ ನಂತರ ಅಮೂಲ್ ಹಾಲಿನ ದರವನ್ನು ಹೆಚ್ಚಳ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಉತ್ಪಾದನಾ ವೆಚ್ಚದಲ್ಲಿನ ಹೆಚ್ಚಳವೇ ಬೆಲೆ ಏರಿಕೆಗೆ ಕಾರಣವಾಗಿದೆ ಎಂದು ಕಂಪನಿ ತಿಳಿಸಿದೆ.

    4.ಕೋವಾಕ್ಸಿನ್-ಕೋವಿಶೀಲ್ಡ್​ ಲಸಿಕೆ ಪಡೆದವರಿಗೂ ಯುರೋಪ್​ ಪ್ರಯಾಣಕ್ಕೆ ಅವಕಾಶ ನೀಡಿ; ಭಾರತ ಒತ್ತಾಯ

    ಕೊರೋನಾ ಸೋಂಕಿನ ಕಾರಣದಿಂದಾಗಿ ಯೂರೋಪಿಯನ್​ ದೇಶಗಳು ಕಳೆದ ಹಲವು ತಿಂಗಳುಗಳಿಂದ ವಿಮಾಯನ ಯಾನವನ್ನು ಸ್ಥಗಿತಗೊಳಿಸಿತ್ತು. ಇತ್ತೀಚೆಗೆ ವಿಮಾನಯಾನ ಆರಂಭವಾಗಿದ್ದರೂ ಸಹ ಹತ್ತಾರು ನಿಯಮಗಳನ್ನು ಅನುಸರಿಸು ವುದು ಕಡ್ಡಾಯವಾಗಿದೆ. ಅದರಲ್ಲೂ ಏಷ್ಯಾದಿಂದ ಯಾರೇ ಪ್ರಯಾಣಿಕರು ಯೂರೋಪ್​​ಗೆ ತೆರಳಬೇಕು ಎಂದು ಲಸಿಕೆ ಪಡೆದಿರುವುದನ್ನೂ ಕಡ್ಡಾಯ ಮಾಡಲಾಗಿದೆ. ಆದರೆ, ಭಾರತದ ಕೋವಾಕ್ಸಿನ್​ ಮತ್ತು ಕೋವಿಶೀಲ್ಡ್​ ಲಸಿಕೆಗೆ ವಿಶ್ವ ಆರೋಗ್ಯ ಸಂಸ್ಥೆ ಈವರೆಗೆ ಮಾನ್ಯತೆ ನೀಡಿಲ್ಲ. ಹೀಗಾಗಿ ಭಾರತದ ಪ್ರಯಾಣಿಕರಿಗೆ ವೀಸಾ ನೀಡುವುದನ್ನು ಯೂರೋಪ್ ಒಕ್ಕೂಟ ನಿಷೇಧಿಸಿದೆ. ಈ ಹಿನ್ನೆಲೆಯಲ್ಲಿ ಈ ನಿಷೇಧವನ್ನು ತೆರವುಗೊಳಿಸಬೇಕು ಎಂದು ಭಾರತ ಒತ್ತಾಯಿಸಿದೆ ಎಂದು ತಿಳಿದುಬಂದಿದೆ.
    Published by:Latha CG
    First published: