Morning Digest: ರಾಜ್ಯದಲ್ಲಿಂದು ಭಾರೀ ಮಳೆ, ಚಿನ್ನದ ಬೆಲೆಯಲ್ಲಿ ಏರಿಕೆ, ಬೆಂಗಳೂರಿನ ಹಲವೆಡೆ ಪವರ್ ಕಟ್; ಇಂದಿನ ಪ್ರಮುಖ ಸುದ್ದಿಗಳಿವು

ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು? ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  1.Karnataka Weather Today: ಇಂದು ರಾಜ್ಯದಲ್ಲಿ ಹೆಚ್ಚಾಗಲಿದೆ ಮಳೆಯ ಆರ್ಭಟ; ಕರಾವಳಿ ಜಿಲ್ಲೆಗಳಲ್ಲಿ ರೆಡ್​ ಅಲರ್ಟ್​ ಘೋಷಣೆ

  Karnataka Rains Today July 16 : ಪೂರ್ವ ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತವಾಗಿರುವ ಹಿನ್ನೆಲೆಯಲ್ಲಿ ರಾಜ್ಯಾದಾದ್ಯಂತ ಇಂದು ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇಂದಿನಿಂದ ಜು.18ರವರೆಗೆ ರಾಜ್ಯದ ಉತ್ತರ ಒಳನಾಡು, ದಕ್ಷಿಣ ಒಳನಾಡು, ಮಲೆನಾಡು ಮತ್ತು ಕರಾವಳಿಯಲ್ಲಿ ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ನಿರ್ದೇಶಕ ಸಿಎಸ್​ ಪಾಟೀಲ್​ ತಿಳಿಸಿದ್ದಾರೆ. ಈಗಾಗಲೇ ಉತ್ತರ ಕನ್ನಡ, ದಕ್ಷಿಣ ಕನ್ನಡ, ಮಲೆನಾಡಿನಲ್ಲಿ ಭಾರೀ ಮಳೆಯಾಗುತ್ತಿದ್ದು, ಹಲವೆಡೆ ರೆಡ್, ಯೆಲ್ಲೋ ಹಾಗೂ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಬೆಂಗಳೂರಿನಲ್ಲೂ ಕೂಡ ಇಂದು ಮತ್ತು ನಾಳೆ ಭಾರೀ ಬಿರುಗಾಳಿ ಸಹಿತ ಮಳೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ. ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಗಳಲ್ಲಿ ಭಾರಿ ಮಳೆ ಆಗಲಿದ್ದು, ಜು. 16ರಂದು ರೆಡ್​ ಅಲರ್ಟ್​ ಘೋಷಣೆ ಮಾಡಲಾಗಿದೆ. ಜು.17ರಂದು ಈ ಪ್ರದೇಶಗಳಲ್ಲಿ ಆರೆಂಜ್​ ಅಲರ್ಟ್​ ಘೋಷಿಸಲಾಗಿದೆ. ಕರಾವಳಿ ಪ್ರದೇಶದ ಮೀನುಗಾರರಿಗೂ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.

  2.Power Cut: ಬೆಂಗಳೂರಿನ ಹಲವೆಡೆ ಇಂದು ವಿದ್ಯುತ್​ ಪೂರೈಕೆಯಲ್ಲಿ ವ್ಯತ್ಯಯ..!

  ಬೆಂಗಳೂರು(ಜು.16): ಇಂದು ಸಿಲಿಕಾನ್ ಸಿಟಿ ಬೆಂಗಳೂರಿನ ಹಲವೆಡೆ ವಿದ್ಯುತ್​ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸಬೇಕೆಂದು ಎಂದು ಬೆಸ್ಕಾಂ ಮನವಿ ಮಾಡಿಕೊಂಡಿದೆ. ಭೂಗತ ಕೇಬಲ್ ಅಳವಡಿಕೆ ಕಾರ್ಯ ಕೈಗೊಳ್ಳುತ್ತಿರುವ ಹಿನ್ನೆಲೆ, ನಗರದ ವಿವಿಧ ಏರಿಯಾಗಳಲ್ಲಿ ಪವರ್​ ಕಟ್​ ಆಗಲಿದೆ. ಇಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 6ರವರೆಗೆ ವಿದ್ಯುತ್​ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ. ತಲಕಾವೇರಿ ಬಡಾವಣೆ, ಬಾಹುಬಲಿ ನಗರ, ಸಂತೋಷ ನಗರ, ಕೆ.ಕೆ.ಆಸ್ಪತ್ರೆ ರಸ್ತೆ, ಎನ್​ಇಎಸ್​ ಬಸ್​ ನಿಲ್ದಾಣ ರಸ್ತೆ, ರೈಲ್ವೆ ಪರ್ಯಾಯ ರಸ್ತೆ, ಟೆಲಿಕಾಂ ಬಡಾವಣೆ, ಅಟ್ಟೂರು ಬಡಾವಣೆ, ಮುನೇಶ್ವರ ಬಡಾವಣೆ, ಸಂತೋಷ ನಗರ, ವೀರಸಾಗರ ಮುಖ್ಯರಸ್ತೆ, ಮಹಾತ್ಮ ಗಾಂಧಿ ಬಡಾವಣೆ- ಪ್ರದೇಶಗಳಲ್ಲಿ ಇಂದು ಬೆಳಗ್ಗೆಯಿಂದ ಸಂಜೆವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.

  3.Petrol Price Today: ಅಬ್ಬಾ ! ಸದ್ಯಕ್ಕೆ ನಿಂತಿದೆ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ, ನಿಟ್ಟುಸಿರು ಬಿಟ್ಟ ವಾಹನ ಸವಾರರು

  ಬಹಳ ಅಪರೂಪ ಎನ್ನುವಂತೆ ಪೆಟ್ರೋಲ್ ಮತ್ತು ಡೀಸೆಲ್​ಗಳ ಬೆಲೆಗಳಲ್ಲಿ ಇಂದು ಏರಿಕೆಯಾಗಿಲ್ಲ. ಪ್ರತಿದಿನ ಮನೆಯಿಂದ ಗಾಡಿ ಹೊರಗೆ ತೆಗೆಯಬೇಕಾದ್ರೂ ಒಂದು ಸಲ ಇವತ್ತು ಪೆಟ್ರೋಲ್ ಅಥವಾ ಡೀಸೆಲ್ ಬೆಲೆ ಏನಾಗಿದೆ ಅಂತ ನೋಡ್ಕೊಂಡು, ವಿಚಾರ ಮಾಡಿ ಆಮೇಲೆ ವಾಹನ ಬಳಸುವ ಸಂದರ್ಭ ಬಂದುಬಿಟ್ಟಿದೆ. ಪ್ರತಿದಿನ ಇಷ್ಟಿಷ್ಟೇ ಎನ್ನುವಂತೆ ಇಂಧನ ಬೆಲೆಯೇರಿಕೆ ಆಗುತ್ತಿದ್ದು ವಾಹನ ಸವಾರರಂತೂ ಇರುವ ಖರ್ಚಿನ ಜೊತೆ ಅನಿವಾರ್ಯವಾಗಿ ಪೆಟ್ರೋಲ್​ಗೆ ಹೆಚ್ಚಿನ ಬೆಲೆ ನೀಡಬೇಕಾಗಿದೆ ಎಂದು ಬೇಸರದಲ್ಲೇ ಇದ್ದಾರೆ. ಆದ್ರೆ ಬೇರೆ ದಾರಿ ಕಾಣದೆ ಬೆಲೆಯೇರಿಕೆಗೆ ಹೊಂದಿಕೊಳ್ಳಲೇಬೇಕಾಗಿದೆ. ತೈಲ ಬೆಲೆ ಸತತ ಏರಿಕೆಯ ಪರಿಣಾಮ ಇಂದು ದೆಹಲಿಯಲ್ಲಿ ಪೆಟ್ರೋಲ್ ಬೆಲೆ 101.84 ರೂ, ಡೀಸೆಲ್ ಬೆಲೆ ಲೀಟರ್​ಗೆ 89.88 ರೂ. ಮುಂಬೈನಲ್ಲಿ ಪೆಟ್ರೋಲ್ ಬೆಲೆ 107.85 ಮತ್ತು ಡೀಸೆಲ್ ಲೀಟರ್ಗೆ 97.45 ರೂ. ಮತ್ತು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಪೆಟ್ರೋಲ್ ಲೀಟರ್​ಗೆ 104.94 ರೂ ಮತ್ತು ಡೀಸೆಲ್ 95.42 ರೂಗೆ ಮಾರಾಟ ಮಾಡಲಾಗುತ್ತಿದೆ.

  4. ಪಂಜಾಬ್ ಕಾಂಗ್ರೆಸ್​ನಲ್ಲಿ ಹೈಡ್ರಾಮ; ಮಾಜಿ ಕ್ರಿಕೆಟಿಗನಿಗೆ ರಾಜ್ಯಾಧ್ಯಕ್ಷ ಸ್ಥಾನ? ಸಿಡಿಮಿಡಿಗೊಂಡ ಸಿಎಂ

  ಪಂಜಾಬ್ ಕಾಂಗ್ರೆಸ್​ನಲ್ಲಿ ಸ್ಫೋಟಗೊಂಡಿರುವ ಅಸಮಾಧಾನದ ಹೊಗೆ ವಿಪರೀತ ಹಂತಕ್ಕೆ ಹೋಗುವ ಸಾಧ್ಯತೆ ಇನ್ನೂ ಹೆಚ್ಚು ದಟ್ಟವಾಗುತ್ತಿದೆ. ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ಅವರು ಪಂಜಾಬ್ ಕಾಂಗ್ರೆಸ್​ನ ಅಧ್ಯಕ್ಷರಾಗುತ್ತಾರೆ ಎಂಬ ವದಂತಿ ಹಬ್ಬಿದೆ. ಅದರ ಬೆನ್ನಲ್ಲೇ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧರಿದ್ದಾರೆಂಬ ವದಂತಿಯೂ ಹಬ್ಬುತ್ತಿದೆ. ಈ ದಿಢೀರ್ ಊಹಾಪೋಹದ ಸುದ್ದಿಗೆ ಕಾರಣವಾಗಿದ್ದು ಪಂಜಾಬ್​ನ ಕಾಂಗ್ರೆಸ್ ಮುಖಂಡ ಹರೀಶ್ ರಾವತ್ ಅವರ ಹೇಳಿಕೆ. ಪಂಜಾಬ್ ಕಾಂಗ್ರೆಸ್​ನಲ್ಲಿ ಉಂಟಾಗಿರುವ ಬಿರುಕನ್ನ ಶಮನಗೊಳಿಸಲು ಕಾಂಪ್ರೊಮೈಸ್ ಫಾರ್ಮುಲಾ ಮಾಡಿದ್ದು, ಅದರಂತೆ ಸಿಧು ಅವರು ಪಿಪಿಸಿಸಿ ಅಧ್ಯಕ್ಷರಾಗುತ್ತಾರೆ ಎಂದು ಹರೀಶ್ ರಾವತ್ ನಿನ್ನೆ ಹೇಳಿದ್ದರೆಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಕೆಲ ಟಿವಿ ವಾಹಿನಿಗಳಲ್ಲೂ ರಾವತ್ ಈ ವಿಚಾರವನ್ನ ತಿಳಿಸಿದ್ದರು. ಇದು ಸಿಎಂ ಅಮರೀಂದರ್ ಸಿಂಗ್ ಅವರನ್ನ ಸಿಡಿಮಿಡಿಗೊಳಿಸಿದೆ. ದೆಹಲಿಯಲ್ಲಿರುವ ಪಕ್ಷದ ವರಿಷ್ಠರಿಗೆ ಅವರು ಸಾಕಷ್ಟು ಬಾರಿ ದೂರವಾಣಿ ಕರೆ ಮಾಡಿ ಈ ವಿಚಾರದ ಬಗ್ಗೆ ಸ್ಪಷ್ಟನೆ ಕೇಳಿದರೆನ್ನಲಾಗಿದೆ.
  Published by:Latha CG
  First published: