Morning Digest: ರಾಜ್ಯದಲ್ಲಿ ಜು.18ರವರೆಗೆ ಮಳೆ, ಚೀನಾದೊಂದಿಗೆ ಗಡಿ ವಿಚಾರ ಚರ್ಚಿಸಿದ ಸಚಿವ ಜೈಶಂಕರ್; ಇಂದಿನ ಪ್ರಮುಖ ಸುದ್ದಿಗಳಿವು

ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು? ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  1.India vs China: ತಜಿಕಿಸ್ತಾನದಲ್ಲಿ ಚೀನಾದೊಂದಿಗೆ ಗಡಿ ವಿಚಾರ ಚರ್ಚಿಸಿದ ವಿದೇಶಾಂಗ ಸಚಿವ ಜೈಶಂಕರ್

  ಕಳೆದ ವರ್ಷ ಸೇನಾ ಜಟಾಪಟಿಗೆ ಕಾರಣವಾದ ಲಡಾಖ್​ನ ಗಡಿಭಾಗದಿಂದ ಸಂಪೂರ್ಣ ಸೇನೆಗಳನ್ನ ಹಿಂಪಡೆಯಬೇಕೆಂದು ನಿರ್ಧಾರವಾದರೂ ಚೀನಾ ಮಾತ್ರ ಅದಕ್ಕೆ ಹೆಚ್ಚು ಮಹತ್ವ ಕೊಡುತ್ತಿಲ್ಲ. ಆ ಗಡಿಭಾಗದಲ್ಲಿ ತನ್ನ ಸೇನಾ ಚಟುವಟಿಕೆ ಹೆಚ್ಚಿಸುವ ಕೆಲಸ ಮಾಡುತ್ತಿದೆ. ಹೀಗಾಗಿ, ಪೂರ್ವ ಲಡಾಖ್​ನಲ್ಲಿರುವ ಭಾರತ-ಚೀನಾ ಎಲ್​ಎಸಿ ಗಡಿಭಾಗ ಇನ್ನೂ ಸೂಕ್ಷ್ಮವಾಗಿಯೇ ಇದೆ. ಈ ವಿಚಾರವನ್ನು ಕೇಂದ್ರ ಸಚಿವ ಎಸ್ ಜೈಶಂಕರ್ ಅವರು ಚೀನಾದ ವಿದೇಶಾಂಗ ಸಚಿವರೊಂದಿಗೆ ಪ್ರಸ್ತಾಪಿಸಿ ಚರ್ಚಿಸಿದ್ದಾರೆ. ತಜಿಕಿಸ್ತಾನ ದೇಶದ ರಾಜಧಾನಿ ದುಶಾಂಬೆಯಲ್ಲಿ ನಡೆಯುತ್ತಿರುವ ಶಾಂಘೈ ಕೋ ಆಪರೇಷನ್ ಆರ್ಗನೈಸೇಶನ್ (SCO – Shanghai Cooperation Organization) ಸಭೆಯ ಸಂದರ್ಭದಲ್ಲಿ ನಿನ್ನೆ ಭಾರತ ಮತ್ತು ಚೀನಾದ ವಿದೇಶಾಂಗ ಸಚಿವರು ಭೇಟಿಯಾಗಿ ಮಾತುಕತೆ ನಡೆಸಿರುವುದು ತಿಳಿದುಬಂದಿದೆ.

  2.Karnataka Weather Updates| ರಾಜ್ಯದಲ್ಲಿ ಜುಲೈ 18ರವರೆಗೂ ಮುಂದುವರೆಯಲಿದೆ ಮಳೆ

  ಪೂರ್ವ ಅರಬ್ಬಿ ಸಮುದ್ರ ಹಾಗೂ ಕಚ್ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ರಾಜ್ಯಾದಾದ್ಯಂತ ಇನ್ನೂ ನಾಲ್ಕು ದಿನ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇಂದಿನಿಂದ ಜೂ 18ರವರೆಗೆ ರಾಜ್ಯದ ಉತ್ತರ ಒಳನಾಡು, ದಕ್ಷಿಣ ಒಳನಾಡು ಮತ್ತು ಕರಾವಳಿಯಲ್ಲಿ ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ನಿರ್ದೇಶಕ ಸಿಎಸ್​ ಪಾಟೀಲ್​ ತಿಳಿಸಿದ್ದಾರೆ. ಈಗಾಗಲೇ ಉತ್ತರ ಕನ್ನಡ, ದಕ್ಷಿಣ ಕನ್ನಡ, ಮಲೆನಾಡಿನಲ್ಲಿ ಭಾರೀ ಮಳೆಯಾಗುತ್ತಿದ್ದು, ಹಲವೆಡೆ ರೆಡ್, ಯೆಲ್ಲೋ, ಅರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಬೆಂಗಳೂರಿನಲ್ಲೂ ಕೂಡ ಇನ್ನೆರಡು ದಿನ ಭಾರೀ ಬಿರುಗಾಳಿ ಸಹಿತ ಮಳೆಯಾಗಲಿದೆ.

  3.Karnataka SSLC Exam: ಫೀಸ್ ಕಟ್ಟದಿದ್ರೂ ಹಾಲ್ ಟಿಕೆಟ್ ಕೊಡಲೇಬೇಕು; ಶಿಕ್ಷಣ ಸಚಿವ ಸುರೇಶ್ ಕುಮಾರ್

  ಕೊರೋನಾ ಆತಂಕದ ನಡುವೆಯೇ ಶಿಕ್ಷಣ ಇಲಾಖೆ ಎಸ್​ಎಸ್​ಎಲ್​ಸಿ ಪರೀಕ್ಷೆ ನಡೆಸಲು ಸಜ್ಜಾಗಿದೆ. ಅದರಂತೆ ಜು.19 ಮತ್ತು 22ರಂದು ಪರೀಕ್ಷೆ ನಡೆಯಲಿವೆ. ಶುಲ್ಕ ಪಾವತಿಸದ ಕಾರಣ ಎಸ್​ಎಸ್​ಎಲ್​ಸಿ ಪರೀಕ್ಷೆಗೆ ಹಾಜರಾಗಲು ಯಾವುದೇ ವಿದ್ಯಾರ್ಥಿಗೆ ಪ್ರವೇಶ ಪತ್ರ (ಹಾಲ್​ ಟಿಕೆಟ್)​ ನಿರಾಕರಿಸಬಾರದೆಂದು ಶಿಕ್ಷಣ ಇಲಾಖೆ ಖಚಿತಪಡಿಸುತ್ತದೆ ಎಂದು ಪ್ರಾಥಮಿಕ ಮತ್ತ ಪ್ರೌಢ ಶಿಕ್ಷಣ ಇಲಾಖೆ ಸಚಿವ ಎಸ್​.ಸುರೇಶ್​ ಕುಮಾರ್​ ಬುಧವಾರ ಹೇಳಿದ್ದಾರೆ. ಎಸ್​ಎಸ್​ಎಲ್​ಸಿ ವಿದ್ಯಾರ್ಥಿಗಳು ಯಾವುದೇ ತೊಂದರೆಗಳನ್ನು ಎದುರಿಸದಂತೆ ಬ್ಲಾಕ್​ ಶಿಕ್ಷಣ ಅಧಿಕಾರಿಗಳು(ಬಿಇಒ) ಸೂಕ್ತ ಕ್ರಮ ತೆಗೆದುಕೊಳ್ಳುತ್ತಾರೆ. ಶುಲ್ಕ ಪಾವತಿಗೆ ಸಂಬಂಧಿಸಿದ ಸಮಸ್ಯೆಗಳಿಂದಾಗಿ ಯಾವುದೇ ವಿದ್ಯಾರ್ಥಿಗೆ ಪರೀಕ್ಷೆಗಳಿಗೆ ಹಾಜರಾಗಲು ಅವಕಾಶ ನಿರಾಕರಿಸಲಾಗುವುದಿಲ್ಲ ಎಂದು ಕರ್ನಾಟಕ ಮಾಧ್ಯಮಿಕ ಶಿಕ್ಷಣ ಪರೀಕ್ಷಾ ಮಂಡಳಿಯ (ಕೆಎಸ್​​ಇಇಬಿ) ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಸುತ್ತೋಲೆ ಹೊರಡಿಸಲಾಗಿದೆ ಎಂದು ಸುರೇಶ್​ ಕುಮಾರ್ ತಿಳಿಸಿದರು.

  4.Infosys| 2022 ರ ಆರ್ಥಿಕ ವರ್ಷದಲ್ಲಿ 35,000 ಕಾಲೇಜು ಪದವೀಧರರನ್ನು ನೇಮಿಸಿಕೊಳ್ಳಲಿದೆ ಇನ್ಫೋಸಿಸ್..!

  ದೇಶದ ಎರಡನೇ ಅತಿದೊಡ್ಡ ಮಾಹಿತಿ ತಂತ್ರಜ್ಞಾನ (ಐಟಿ) ಕಂಪನಿಯಾದ ಇನ್ಫೋಸಿಸ್ ಈ ಹಣಕಾಸು ವರ್ಷದಲ್ಲಿ 35,000 ಕಾಲೇಜು ಪದವೀಧರರನ್ನು ನೇಮಕ ಮಾಡಿಕೊಳ್ಳುವುದಾಗಿ ಘೋಷಿಸಿದೆ. ಡಿಜಿಟಲ್ ಪ್ರತಿಭೆಗಳ ಬೇಡಿಕೆ ಹೆಚ್ಚುತ್ತಿದ್ದು, ಉದ್ಯಮದಲ್ಲಿ ಹೆಚ್ಚುತ್ತಿರುವ ಮನೋಭಾವವು ಸವಾಲನ್ನು ಒಡ್ಡುತ್ತದೆ. ಈ ಹಿನ್ನೆಲೆ ಕಾಲೇಜು ಪದವೀಧರರ ನೇಮಕ ಕಾರ್ಯಕ್ರಮವನ್ನು 2022 ರ ಹಣಕಾಸು ವರ್ಷದಲ್ಲಿ ಜಾಗತಿಕವಾಗಿ 35,000 ಕ್ಕೆ ವಿಸ್ತರಿಸುವ ಮೂಲಕ ಈ ಬೇಡಿಕೆಯನ್ನು ಈಡೇರಿಸಲು ನಾವು ಯೋಜಿಸಿದ್ದೇವೆ ಎಂದು ಇನ್ಫೋಸಿಸ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರವೀಣ್ ರಾವ್ ಹೇಳಿದರು. ನೌಕರರ ಯೋಗಕ್ಷೇಮವು ನಮಗೆ ಅತ್ಯಂತ ಮಹತ್ವದ್ದಾಗಿದೆ ಮತ್ತು ಅವರಿಗೆ ಹಾಗೂ ಅವರ ಅವಲಂಬಿತರಿಗೆ ಲಸಿಕೆ ಹಾಕಿಸುವುದು ಸೇರಿದಂತೆ ನಾವು ಈ ವಿಷಯದಲ್ಲಿ ಅನೇಕ ಮಧ್ಯಸ್ಥಿಕೆಗಳನ್ನು ಹೊಂದಿದ್ದೇವೆ. ವೃತ್ತಿ ವೇಗವರ್ಧನೆ ಅವಕಾಶಗಳು, ಪರಿಹಾರ ವಿಮರ್ಶೆಗಳು ಮತ್ತು ಕಲಿಕೆ ಹಾಗೂ ಅಭಿವೃದ್ಧಿ ಮಧ್ಯಸ್ಥಿಕೆಗಳು ಸೇರಿದಂತೆ ಹಲವಾರು ಉದ್ಯೋಗಿಗಳ ಪರವಾದ ಉಪಕ್ರಮಗಳನ್ನು ನಾವು ರೂಪಿಸಿದ್ದೇವೆ ಎಂದು ರಾವ್ ಹೇಳಿದರು.

  5.Petrol Price Today| ಇಂದು ಮತ್ತೆ ಪೆಟ್ರೋಲ್​ಗೆ 35 ಪೈಸೆ, ಡೀಸೆಲ್​ಗೆ 16 ಪೈಸೆ ಏರಿಕೆ

  Petrol Price Today ನವ ದೆಹಲಿ (ಜುಲೈ 15); ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪರವಾಗಿ ಪೆಟ್ರೋಲ್-ಡೀಸೆಲ್ ಬೆಲೆ ಇಂದು ಮತ್ತೆ ಹೆಚ್ಚಾಗಿದೆ. ಇಂದು ಡೀಸೆಲ್ ಬೆಲೆ 15 ರಿಂದ 16 ಪೈಸೆ ಹೆಚ್ಚಿದ್ದರೆ, ಪೆಟ್ರೋಲ್ ಬೆಲೆ 34 ರಿಂದ 35 ಪೈಸೆ ಹೆಚ್ಚಾಗಿದೆ. ಹೀಗಾಗಿ ದೇಶದಲ್ಲಿ ಮತ್ತೆ ತೈಲ ಬೆಲೆ ದಾಖಲೆ ಏರಿಕೆ ಕಂಡಂತಾಗಿದೆ. ಕೊರೋನಾ ಮತ್ತು ಲಾಕ್​ಡೌನ್ ಕಾರಣಕ್ಕೆ ಜನ ಈಗಾಗಲೇ ಉದ್ಯೋಗ ಮತ್ತು ಆದಾಯ ಕಳೆದುಕೊಂಡು ಆತಂಕಕ್ಕೆ ಸಿಲುಕಿದ್ದಾರೆ. ಇಂತಹ ಸಂದರ್ಭದಲ್ಲಿ ತೈಲ ಬೆಲೆ ಏರಿಕೆ ಎಂಬುದು ಜನ ಸಾಮಾನ್ಯರ ಪಾಲಿಗೆ ಯಮಪಾಶವಾಗಿ ಬದಲಾಗಿದೆ. ತೈಲ ಬೆಲೆ ಏರಿಕೆ ಎಂಬುದು ಇತರೆ ದಿನೋಪಯೋಗಿ ವಸ್ತುಗಳ ಬೆಲೆ ಏರಿಕೆಗೂ ಕಾರಣವಾ ಗಿದ್ದು, ಬಡ-ಮಧ್ಯಮ ವರ್ಗದ ಜನರ ಪರಿಸ್ಥಿತಿ ಬೆಂಕಿಯಿಂದ ಬಾಣಲೆಗೆ ಬಿದ್ದಂತಾಗಿದೆ.
  Published by:Latha CG
  First published: