Morning Digest: ಇಂದಿನಿಂದ 2nd PU ಪರೀಕ್ಷೆ, ಆಫ್ಘಾನಿಸ್ತಾನ-ಭಾರತ ಮಧ್ಯೆ ಆಮದು-ರಫ್ತು ಸ್ಥಗಿತ; ಇಂದಿನ ಪ್ರಮುಖ ಸುದ್ದಿಗಳಿವು

ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು? ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  1. Second PUC Exams- ಇಂದಿನಿಂದ ದ್ವಿತೀಯ ಪಿಯು ಪರೀಕ್ಷೆ; 18414 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರು

  ಬೆಂಗಳೂರು, ಆ. 19: ಕೊರೋನಾ ಮಧ್ಯೆ ಇದೀಗ ಶಿಕ್ಷಣ ಇಲಾಖೆ ಮತ್ತೊಂದು ಪರೀಕ್ಷೆ ನಡೆಸುತ್ತಿದೆ. ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನ ಯಶಸ್ವಿಯಾಗಿ ನಡೆಸಿ ಫಲಿತಾಂಶವನ್ನೂ ಪ್ರಕಟಿಸಿದ ಸರ್ಕಾರ ಈಗ ದ್ವಿತೀಯ ಪಿಯುಸಿಗೆ ಪರೀಕ್ಷೆ ನಡೆಸದೆಯೇ ವಿವಿಧ ಮಾನದಂಡಗಳನ್ನಿಟ್ಟು ಎಲ್ಲರನ್ನೂ ಪಾಸ್ ಮಾಡಿತ್ತು. ಆದರೆ, ಕಡಿಮೆ ಅಂಕ ಸೇರಿದಂತೆ ವಿವಿಧ ಕಾರಣಕ್ಕೆ ಫಲಿತಾಂಶದ ಬಗ್ಗೆ ತೃಪ್ತಿ ಹೊಂದದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಹಾಗೂ ಖಾಸಗಿ ವಿದ್ಯಾರ್ಥಿಗಳಿಗಾಗಿ ಇಂದು ಗುರುವಾರದಿಂದ ಪರೀಕ್ಷೆ ಜರುಗಲಿದೆ. ಸೆಪ್ಟೆಂಬರ್ 3ರವರೆಗೆ ಕೊರೊನಾ ಮಾರ್ಗಸೂಚಿಯಂತೆ ಎಕ್ಸಾಂ ನಡೆಸಲು ಶಿಕ್ಷಣ ಇಲಾಖೆ ಸಿದ್ದತೆ ಮಾಡಿಕೊಂಡಿದೆ. ಈ ಬಾರಿ 18,414 ಸೆಕೆಂಡ್ ಪಿಯುಸಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಇದರಲ್ಲಿ 17469 ಖಾಸಗಿ ವಿದ್ಯಾರ್ಥಿಗಳು, 352 ರಿಪೀಟರ್ಸ್, 5093 ಫ್ರೆಶರ್ಸ್ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಇನ್ನು, ರಾಜ್ಯದ 187 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತಿದೆ. ಕೋವಿಡ್ ಸೋಂಕಿತರಿಗೂ ಪರೀಕ್ಷೆ ಬರೆಯಲು ಅವಕಾಶ ಇರುತ್ತೆ. ಸೋಂಕಿನ ಲಕ್ಷಣಗಳಿದ್ರೆ ಕೂಡಲೇ ವಿದ್ಯಾರ್ಥಿಗಳು ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಬೇಕು. ಅವ್ರಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿದೆ ಎಂದು ಪಿಯು ಬೋರ್ಡ್ ನಿರ್ದೇಶಕಿ ಸ್ನೇಹಲ್ ಆರ್ ತಿಳಿಸಿದ್ದಾರೆ.

  2. Afghan Crisis- ಆಫ್ಘಾನಿಸ್ತಾನ-ಭಾರತ ಮಧ್ಯೆ ಆಮದು ರಫ್ತು ಸ್ಥಗಿತ

  ನವದೆಹಲಿ: ಆಫ್ಘಾನಿಸ್ತಾನ ಇದೀಗ ತಾಲಿಬಾನ್ ವಶವಾದ ಬೆನ್ನಲ್ಲೇ ಆ ದೇಶದೊಂದಿಗೆ ಭಾರತಕ್ಕಿದ್ದ ಎಲ್ಲಾ ಆಮದು, ರಫ್ತು ವ್ಯವಹಾರ ಸ್ಥಗಿತಗೊಂಡಿದೆ. ಭಾರತ ಮತ್ತು ಆಫ್ಘಾನಿಸ್ತಾನ ನಡುವೆ ಇದ್ದ ಸರಕು ಸಾಗಣೆಯ ಮಾರ್ಗವನ್ನು ತಾಲಿಬಾನ್ ನಿಲ್ಲಿಸಿದೆ. ಭಾರತೀಯ ರಫ್ತು ಸಂಸ್ಥೆ ಒಕ್ಕೂಟ (FIEO) ಮಹಾನಿರ್ದೇಶಕ ಡಾ. ಅಜಯ್ ಸಹಾಯ್ ಅವರು ಈ ವಿಚಾರವನ್ನು ದೃಢಪಡಿಸಿದ್ದಾರೆ. “ಆಫ್ಘಾನಿಸ್ತಾನದಲ್ಲಿ ಆಗುತ್ತಿರುವ ಬೆಳವಣಿಗೆಯನ್ನ ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಅಲ್ಲಿಂದ ಆಮದು ಮಾಡಿಕೊಳ್ಳುವ ಸರಕುಗಳು ಪಾಕಿಸ್ತಾನದ ಮಾರ್ಗದ ಮೂಲಕ ಭಾರತಕ್ಕೆ ಬರುತ್ತಿದ್ದವು. ಇದೀಗ ಪಾಕಿಸ್ತಾನ ಮತ್ತು ಆಫ್ಘಾನಿಸ್ತಾನ ಮಧ್ಯೆ ಸರಕು ಸಾಗಣೆಯನ್ನು ತಾಲಿಬಾನ್ ನಿಲ್ಲಿಸಿದೆ. ಪರಿಣಾಮವಾಗಿ ಭಾರತಕ್ಕೂ ಆಮದಾಗುವುದು ನಿಂತಿದೆ” ಎಂದು ಅಜಯ್ ಸಹಾಯ್ ತಿಳಿಸಿದ್ದಾರೆ. ಪರಿಣಾಮವಾಗಿ ಭಾರತೀಯ ಮಾರುಕಟ್ಟೆಯಲ್ಲಿ ಕೆಲ ವಸ್ತುಗಳ ಬೆಲೆಯಲ್ಲಿ ಏರುಪೇರಾಗುವ ಸಾಧ್ಯತೆ ಇದೆ. ಭಾರತದ ಹೆಚ್ಚಿನ ಡ್ರೈಫ್ರೂಟ್​​ಗಳು ಆಫ್ಘಾನಿಸ್ತಾನದಿಂದ ಆಮದಾಗಿರುವುದರಿಂದ ಇವುಗಳ ಬೆಲೆ ಭಾರತದಲ್ಲಿ ಏರಿಕೆಯಾಗುವ ನಿರೀಕ್ಷೆ ಇದೆ.

  3.Coronavirus: ಇಸ್ರೇಲ್‌ನಲ್ಲಿ‌ ಉಲ್ಬಣಗೊಂಡ ಕೊರೋನಾ; 3 ವರ್ಷಕ್ಕಿಂತ ಮೇಲ್ಪಟ್ಟವರಿಗೂ ಗ್ರೀನ್‌ ಪಾಸ್‌ ಕಡ್ಡಾಯ..!

  ಇಸ್ರೇಲ್‌ನಲ್ಲಿ ವಯಸ್ಕರಿಗೆ ಬಹುತೇಕ ಎಲ್ಲರಿಗೂ ಲಸಿಕೆ ಹಾಕಲಾಗಿದೆ. ಇದರಿಂದ ಸೋಂಕಿನ ಪ್ರಮಾಣ ತೀವ್ರ ಕಡಿಮೆಯಾಗಿತ್ತು. ಆದರೂ, ಡೆಲ್ಟಾ ರೂಪಾಂತರದಿಂದ ಕ್ರಮೇಣವಾಗಿ ಕೊರೊನಾ ಸೋಂಕಿನ ಪ್ರಮಾಣ ಮತ್ತೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆ ಈಗ 3 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರೂ ಕೋವಿಡ್‌ ವಿರುದ್ಧದ ಲಸಿಕೆ ಅಥವಾ ಕೋವಿಡ್‌ ನೆಗೆಟಿವ್‌ ರಿಪೋರ್ಟ್‌ ವರದಿಯನ್ನು ಇಸ್ರೇಲ್‌ನ ಅನೇಕ ಒಳಾಂಗಣ ಸ್ಥಳಗಳಿಗೆ ಪ್ರವೇಶಿಸುವ ಮೊದಲು ತೋರಿಸಬೇಕು ಎಂಬ ನಿಯಮ ಜಾರಿಗೆ ತರಲಾಗಿದೆ. ರೆಸ್ಟೋರೆಂಟ್‌ಗಳು, ಕೆಫೆಗಳು, ವಸ್ತುಸಂಗ್ರಹಾಲಯಗಳು, ಗ್ರಂಥಾಲಯಗಳು, ಜಿಮ್‌ಗಳು ಮತ್ತು ಪೂಲ್‌ಗಳು "ಗ್ರೀನ್ ಪಾಸ್" ವ್ಯವಸ್ಥೆಯಿಂದ ಆವೃತವಾದ ಸ್ಥಳಗಳಲ್ಲಿ ಸೇರಿವೆ. ಆದರೂ, ಅಂಗಡಿಗಳು ಅಥವಾ ಮಾಲ್‌ಗಳಿಗೆ ಹೋಗಲು ಇಮ್ಯುನಿಟಿಯ ಪುರಾವೆ ತೋರಿಸುವ ಅಗತ್ಯವಿಲ್ಲ ಎಂದು ತಿಳಿದುಬಂದಿದೆ. ವಿಶ್ವದ ಪ್ರಮುಖ ವ್ಯಾಕ್ಸಿನೇಷನ್ ಕಾರ್ಯಕ್ರಮದ ಹೊರತಾಗಿಯೂ ನಾವು ವೈರಸ್‌ನೊಂದಿಗೆ ಯುದ್ಧದಲ್ಲಿದ್ದೇವೆ ಎಂದು ಸರ್ಕಾರ ಹೇಳಿದೆ.  4.Karnataka Weather Today: ರಾಜ್ಯದಲ್ಲಿ ಇನ್ನೂ 2 ದಿನ ಮಳೆ; ಇಂದು ಯಾವ್ಯಾವ ಜಿಲ್ಲೆಗಳಲ್ಲಿ ಮಳೆಯಾಗಲಿದೆ? ಇಲ್ಲಿದೆ ಮಾಹಿತಿ

  Karnataka Rains Today:(ಆ.19): ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವುದರಿಂದ ರಾಜ್ಯದ ಕರಾವಳಿ, ಮಲೆನಾಡು ಸೇರಿದಂತೆ ಬಹುತೇಕ ಭಾಗಗಳಲ್ಲಿ ನಿನ್ನೆಯಿಂದ ಮಳೆಯ ಆರ್ಭಟ ಹೆಚ್ಚಾಗಿದೆ. ಆಗಸ್ಟ್​ 20ರವರೆಗೂ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರ್ನಾಟಕ ಸೇರಿದಂತೆ ಕೇರಳ, ತಮಿಳುನಾಡಿನಲ್ಲೂ ಮಳೆಯಾಗಲಿದೆ ಎಂದು ತಿಳಿದು ಬಂದಿದೆ. ರಾಜ್ಯದ 8 ಜಿಲ್ಲೆಗಳಲ್ಲಿ ಇಂದು, ನಾಳೆ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಶಿವಮೊಗ್ಗ, ರಾಮನಗರ, ಕೊಡಗು, ಮೈಸೂರು, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಹಾಸನ ಮತ್ತು ಉಡುಪಿ ಜಿಲ್ಲೆಗಳಲ್ಲಿ ಇಂದು ಅಧಿಕ ಮಳೆಯಾಗಲಿದೆ. ಜುಲೈ ತಿಂಗಳಲ್ಲಿ ವರುಣನ ಆರ್ಭಟಕ್ಕೆ ಮಲೆನಾಡು, ಕರಾವಳಿ ಮತ್ತು ಉತ್ತರ ಕರ್ನಾಟಕದ ಜನರು ಅಕ್ಷರಶಃ ತತ್ತರಿಸಿ ಹೋಗಿದ್ದರು. ಈಗ ಮತ್ತೆ ಮಳೆರಾಯನ ಆರ್ಭಟ ಶುರುವಾಗಿದ್ದು, ಜನರು ಎಚ್ಚರಿಕೆಯಿಂದ ಇರಬೇಕಿದೆ. ಅದರಲ್ಲೂ ಮಲೆನಾಡು ಮತ್ತು ಕರಾವಳಿ ಭಾಗಗಳಲ್ಲಿ ವರುಣನ ಅಬ್ಬರ ಮುಂದುವರೆಯಲಿದೆ. ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಇಂದು, ನಾಳೆ ಮಳೆಯ ಪ್ರಮಾಣ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
  Published by:Latha CG
  First published: