Morning Digest: ಇಂದು ಭಾರತ್ ಬಂದ್, ಬೆಂಗಳೂರಿನಲ್ಲಿ ಪವರ್ ಕಟ್, ಚಿನ್ನದ ಬೆಲೆ ಸ್ಥಿರ; ಬೆಳಗಿನ ಟಾಪ್ ನ್ಯೂಸ್​​ಗಳು

Top News of the day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು? ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  1.Bharat Bandh: ಭಾರತ್ ಬಂದ್ ಹಿನ್ನೆಲೆ, ಬೆಂಗಳೂರಿನಲ್ಲಿ ಖಾಕಿ ಕಣ್ಗಾವಲು, ರಾಜ್ಯದಲ್ಲಿ ಬಂದ್​​ಗೆ ಬೆಂಬಲ ಇದ್ಯಾ?

  ಬೆಂಗಳೂರು(ಸೆ.27): ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಗಳ(Agri Laws) ವಿರುದ್ಧ ರೈತಪರ ಸಂಘಟನೆಗಳು(Farmers Associations) ಮತ್ತೆ ಸಿಡಿದೆದ್ದಿದ್ದು, ಇಂದು ಭಾರತ್​ ಬಂದ್​ಗೆ(Bharat Bandh) ಕರೆ ನೀಡಿವೆ. ಹೀಗಾಗಿ ಇಂದು ಕೆಲವು ಸೇವೆಗಳಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ. ಇಂದು ಭಾರತ್ ಬಂದ್​​ಗೆ ಕರೆ ನೀಡಿರುವ ಹಿನ್ನೆಲೆ, ಕರ್ನಾಟಕ(Karnataka Bandh)ವೂ ಬಹುತೇಕ ಬಂದ್ ಆಗುವ ನಿರೀಕ್ಷೆ ಇದೆ. ಸಂಯುಕ್ತ ಕಿಸಾನ್ ಮೋರ್ಚಾ(Samyuktha Kisan Morcha) ಭಾರತ್ ಬಂದ್​ಗೆ ಕರೆ ಕೊಟ್ಟಿದ್ದು, ಇನ್ನೂ ಹಲವು ಸಂಘಟನೆಗಳು ಬೆಂಬಲ ನೀಡಿವೆ. ದೇಶಾದ್ಯಂತ 500ಕ್ಕೂ ಹೆಚ್ಚು ಸಂಘಟನೆಗಳು ಭಾರತ್​ ಬಂದ್​ಗೆ ಬೆಂಬಲ ನೀಡಿವೆ. ಹಾಗಾದ್ರೆ ಇಂದು ಕರ್ನಾಟಕದಲ್ಲಿ ಬಂದ್ ಹೇಗಿರಲಿದೆ ಅನ್ನೋದನ್ನ ನೋಡೋದಾದ್ರೆ, ರೈತರ ಪರ ಸಂಘಟನೆಗಳಿಂದ ಪ್ರತಿಭಟನೆ, ಧರಣಿ, ಮೆರವಣಿಗೆ, ಹೆದ್ದಾರಿ ಬಂದ್ ಇರುತ್ತದೆ. ಸೋಮವಾರ ಬೆಳಿಗ್ಗೆ 11 ಗಂಟೆಗೆ ಬೆಂಗಳೂರು ಟೌನ್ ಹಾಲ್ ನಿಂದ ಮೈಸೂರು ಬ್ಯಾಂಕ್ ಸರ್ಕಲ್‌ ವರೆಗೆ ರೈತರಿಂದ ಬೃಹತ್ ಪ್ರತಿಭಟನೆ ರ್ಯಾಲಿ ನಡೆಯಲಿದೆ.

  2.Karnataka Weather Today: ಬೆಂಗಳೂರಿನಲ್ಲಿ ಇಂದು ಭಾರೀ ಮಳೆ ಸಾಧ್ಯತೆ- ಆಂಧ್ರದಲ್ಲಿ ಗುಲಾಬ್ ಚಂಡಮಾರುತ ಆರ್ಭಟ..

  Karnataka Rains Today: ಬೆಂಗಳೂರು(ಸೆ.27):ಕರ್ನಾಟಕದಲ್ಲಿ ಮತ್ತೆ ಮಳೆಯ(Rainfall) ಆರ್ಭಟ ಜೋರಾಗಿದ್ದು, ಇನ್ನು ಕೆಲ ದಿನಗಳ ತನಕ ಮುಂದುವರೆಯುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ(IMD) ತಿಳಿಸಿದೆ. ಬಂಗಾಳ ಕೊಲ್ಲಿಯಲ್ಲಿನ ಚಂಡ ಮಾರುತ ಹಾಗೂ ಮುಂಗಾರು(Monsoon) ಚುರುಕುಗೊಂಡ ಪ್ರಭಾವ ಕರಾವಳಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಮುಂದಿನ ಎರಡು ದಿನ ಭಾರೀ ಮಳೆಯಾಗುವ ನಿರೀಕ್ಷೆ ಇದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ. ಮಾನ್ಸೂನ್ ಜೈಸಲ್ಮೇರ್, ಕೋಟ, ರಾಯ್ಪುರ್, ಪುರಿ ಮತ್ತು ನಂತರ ಪೂರ್ವ-ಆಗ್ನೇಯ ದಿಕ್ಕಿನಲ್ಲಿ ಗುಲಾಬ್ ಚಂಡಮಾರುತದ ಕೇಂದ್ರದ ಕಡೆಗೆ ಹಾದು ಹೋಗುತ್ತಿದೆ. ಮಧ್ಯ ಮಧ್ಯಪ್ರದೇಶದ ಉತ್ತರ ಭಾಗಗಳಲ್ಲಿ ಚಂಡಮಾರುತದ ಪರಿಚಲನೆ ಮುಂದುವರಿದಿದೆ ಎಂದು ತಿಳಿಸಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಬಾಗಲಕೋಟೆ, ಹಾವೇರಿ, ಕೊಪ್ಪಳ, ಕಲಬುರಗಿ, ರಾಯಚೂರು, ಯಾದಗಿರಿ ಮತ್ತು ಧಾರವಾಡ ಜಿಲ್ಲೆಯಲ್ಲಿ ಮಳೆಯಾಗುವ ನಿರೀಕ್ಷೆ ಇದ್ದು, ಕರಾವಳಿ ಭಾಗಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.

  3.Gold Price Today: ಇಂದು ಸ್ಥಿರತೆ ಕಾಯ್ದುಕೊಂಡ ಚಿನ್ನ-ಬೆಳ್ಳಿ; ಬೆಂಗಳೂರಿನಲ್ಲಿ ಇಂದಿನ ರೇಟ್ ನೋಡಿ..!

  Gold Rate on September 27 2021 | ಚಿನ್ನ ಖರೀದಿಸುವ ಯೋಚನೆಯಲ್ಲಿದ್ದೀರಾ? ಮತ್ಯಾಕೆ ತಡ ಇಂದೇ ಹೋಗಿ ಬಂಗಾರ ಖರೀದಿಸಿ. ಯಾಕೆಂದರೆ ಕಳೆದ 2 ದಿನಗಳಿಂದ ಚಿನ್ನದ ಬೆಲೆ (Gold Price) ಯಥಾಸ್ಥಿತಿ ಕಾಯ್ದುಕೊಂಡಿದೆ. ಆಭರಣ ಪ್ರಿಯರು ಚಿನ್ನ ಖರೀದಿಸಲು ಇದೇ ಸಕಾಲವಾಗಿದೆ. ಭಾರತದಲ್ಲಿ ನಿನ್ನೆ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 45,240 ರೂ. ಇತ್ತು. ಇಂದೂ ಸಹ ಅದೇ ಬೆಲೆಯನ್ನು ಕಾಯ್ದುಕೊಂಡಿದೆ. ಅದೇ ರೀತಿ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆಯಲ್ಲೂ ಇಳಿಕೆ ಕಂಡಿದೆ. ನಿನ್ನೆ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 46,240 ರೂ. ಇತ್ತು. ಇಂದೂ ಸಹ ಅದೇ ಬೆಲೆ ಇದೆ.

  4.Suresh Angadi: ಬೆಳಗಾವಿ-ಬೆಂಗಳೂರು ರೈಲಿಗೆ ದಿವಂಗತ ಸುರೇಶ್ ಅಂಗಡಿ ಹೆಸರು; ಕೇಂದ್ರಕ್ಕೆ ಪ್ರಸ್ತಾವನೆ

  ಸುರೇಶ್ ಅಂಗಡಿ ಹಾಗೂ ನಮ್ಮ ನಡುವೆ ಯಾವಾಗಲೂ ಜಗಳ ಆಗುತ್ತಿತ್ತು. ರಾಣಿ ಚನ್ನಮ್ಮ ಎಕ್ಸ್‌ಪ್ರೆಸ್‌ ರೈಲಿನ ಸಮಯ ಬದಲಾವಣೆ ಮಾಡಲು ಅಂಗಡಿ ಯೋಚನೆ ಮಾಡಿದಾಗೆಲ್ಲಾ, ನಮಗೆ ಸಮಸ್ಯೆ ಆಗುತ್ತೆ, ಇರುವ ಸಮಯವೇ ಇರಲಿ ಎಂದು ವಾದ ಮಾಡುತ್ತಿದ್ದೆವು. ಹಾಗಾಗಿ ನಮಗೆ ಬೇಸತ್ತು ಬೆಳಗಾವಿಯಿಂದ ರಾತ್ರಿ 9 ಗಂಟೆ ಸುಮಾರಿಗೆ ನೇರವಾಗಿ ಬೆಳಗಾವಿ ಬೆಂಗಳೂರು ಹೊಸ ರೈಲನ್ನೇ ಬಿಡಿಸುವ ಮೂಲಕ ಇಲ್ಲಿನ ಜನರಿಗೆ ಅನುಕೂಲ ಮಾಡಿದ್ದಾರೆ. ಹಾಗಾಗಿ ಇವತ್ತಿಗೂ ಇಲ್ಲಿನ ಆ ರೈಲನ್ನ ಸುರೇಶ್ ಅಂಗಡಿ ಅವರ ರೈಲು ಎಂದು ಕರೆಯುತ್ತಾರೆ. ಅಂಗಡಿ ಅವರ ನೆನಪಿಗಾಗಿ ಆ ರೈಲಿನ ಹೆಸರನ್ನು ಅಂಗಡಿ ಎಕ್ಸ್‌ಪ್ರೆಸ್‌ ರೈಲು ಎಂದು ನಾಮಕರಣ ಮಾಡಲು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದ್ದಾರೆ.

  5.Bengaluru Power Cut: ಬೆಂಗಳೂರಿನಲ್ಲಿ ಇಂದು ವಿದ್ಯುತ್ ವ್ಯತ್ಯಯ- ಈ ಪ್ರದೇಶಗಳಲ್ಲಿ ಕರೆಂಟ್ ಇರಲ್ಲ..

  ಸಿಲಿಕಾನ್ ಸಿಟಿ ಬೆಂಗಳೂರಿನ(Bengaluru) ಹಲವೆಡೆ ಇಂದು ವಿದ್ಯುತ್​ ವ್ಯತ್ಯಯವಾಗಲಿದ್ದು(Power Cut), ಸಾರ್ವಜನಿಕರು ಸಹಕರಿಸಬೇಕೆಂದು ಎಂದು ಬೆಸ್ಕಾಂ(BESCOM) ಮನವಿ ಮಾಡಿದೆ. ವಿದ್ಯುತ್ ಕೇಂದ್ರಗಳಲ್ಲಿ ತುರ್ತು ಕಾರ್ಯನಿರ್ವಹಣೆ ಕೈಗೆತ್ತಿಕೊಂಡಿರುವುದರಿಂದ ಇದೇ 27ರಂದು ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ನಗರದ ವಿವಿಧ ಸ್ಥಳಗಳಲ್ಲಿ ವಿದ್ಯುತ್ ವ್ಯತ್ಯಯ ಆಗಲಿದೆ ಎಂದು ಬೆಸ್ಕಾಂ ತಿಳಿಸಿದೆ. ಯಾವ್ಯಾವ ಪ್ರದೇಶಗಳಲ್ಲಿ ವಿದ್ಯುತ್ ಸಮಸ್ಯೆ ತಲೆದೋರಲಿದೆ ಎಂಬ ಪಟ್ಟಿ ಇಲ್ಲಿದೆ. ಇಸ್ಕಾನ್‌ ಬಳಿಯ ಮಂತ್ರಿ ವಸತಿ ಸಮುಚ್ಚಯ, ತಲಘಟ್ಟಪುರ, ರಘುವನಹಳ್ಳಿ, ಗುಬ್ಲಾಳ, ಕುವೆಂಪುನಗರ, ವಿವಿ ನಗರ, ವಿವಿ ಬಡಾವಣೆ, ಬಾಲಾಜಿ ಲೇಔಟ್‌, ರಾಯಲ್‌ ಫಾರ್ಮ್‌, ಎಚ್‌ಎಸ್‌ಆರ್‌ ಬಡಾವಣೆಯ 7ನೇ ಸೆಕ್ಟರ್‌ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯ ಆಗಲಿದೆ’ ಎಂದು ಎಂದು ಸೂಚನೆ ನೀಡಲಾಗಿದೆ.
  Published by:Latha CG
  First published: