Morning Digest: ಇಂದು ಮೋದಿ ದ್ವಿಪಕ್ಷೀಯ ಮಾತುಕತೆ, ಚಿನ್ನ & ಪೆಟ್ರೋಲ್ ಬೆಲೆಯಲ್ಲಿ ಇಳಿಕೆ; ಬೆಳಗಿನ ಟಾಪ್ ನ್ಯೂಸ್​​ಗಳು

Top News of the day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು? ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಮೊ1.PM Modi America Tour: ಇಂದು ಅಮೇರಿಕಾ, ಜಪಾನ್ ಪಿಎಂಗಳ ಜೊತೆ ಪ್ರಧಾನಿ ಮೋದಿ‌ ದ್ವಿಪಕ್ಷೀಯ ಮಾತುಕತೆ

  ನವದೆಹಲಿ (ಸೆಪ್ಟೆಂಬರ್ 24): ನಾಲ್ಕು ದಿನಗಳ ಪ್ರವಾಸಕ್ಕಾಗಿ ಅಮೆರಿಕಾ ಪ್ರವಾಸ ಕೈಗೊಂಡಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದು (Prime Minister Narendra Modi) ಇಂದು ಭಾರತ (India), ಅಮೇರಿಕಾ (America), ಆಸ್ಟ್ರೇಲಿಯಾ (Australia), ಇಂಗ್ಲೆಂಡ್ (England) ಮತ್ತು ಜಪಾನ್ (Japan) ದೇಶಗಳ ಒಕ್ಕೂಟವಾಗಿರುವ ಕ್ವಾಡ್ (Quad) ದೇಶಗಳ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇದೇ ವೇಳೆ ಅವರು ಅಮೆರಿಕಾದ ಅಧ್ಯಕ್ಷ ಜೋ ಬಿಡೆನ್ (America President Jo Biden) ಹಾಗೂ ಜಪಾನ್ ಪ್ರಧಾನ ಮಂತ್ರಿ ಯೊಶಿಹಿಡೆ ಸುಗ (Japan Prime Minister Yoshihide Suga) ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.

  2.Petrol Price| ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಇಳಿಕೆಯಾಯ್ತು ಪೆಟ್ರೋಲ್ ಬೆಲೆ; ಹಾವೇರಿಯಲ್ಲಿ ಅತ್ಯಧಿಕ 98 ಪೈಸೆ ಇಳಿಕೆ!

  ಬೆಂಗಳೂರು (ಸೆಪ್ಟೆಂಬರ್​ 24); ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ (Banglore) ಕಳೆದ ಎರಡು ವಾರಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿ (Petrol-Diesel Price) ಯಾವುದೇ ಬದಲಾವಣೆ ಇಲ್ಲ. ಆದರೆ, ತೆರಿಗೆಯಲ್ಲಿನ ವ್ಯತ್ಯಾಸ ಮತ್ತು ಇನ್ನಿತರೆ ಕಾರಣಗಳಿಂದಾಗಿ ರಾಜ್ಯ ವಿವಿಧ ಜಿಲ್ಲೆಗಳಲ್ಲಿನ ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಮಾತ್ರ ಅಲ್ಪ ಬದಲಾವಣೆ ಉಂಟಾಗಿದೆ. ಬೆಂಗಳೂರಿನಲ್ಲಿ ಒಂದು ಲಿಟರ್​ ಪೆಟ್ರೋಲ್ ಅನ್ನು 104.70 ರೂ.ಗೆ ಮಾರಾಟ ಮಾಡಲಾಗುತ್ತಿದ್ದರೆ, ಡೀಸೆಲ್ 94.04 ರೂ.ಗೆ ಮಾರಾಟ ಮಾಡಲಾ ಗುತ್ತಿದೆ. ಆದರೆ, ಚಿಕ್ಕಮಗಳೂರು (Chikmanglore) ಜಿಲ್ಲೆಯಲ್ಲಿ ಅತ್ಯಧಿಕ 106.38ರೂ.ಗೆ ಒಂದು ಲೀಟರ್​ ಪೆಟ್ರೋಲ್ ಮಾರಾಟ ಮಾಡಲಾಗುತ್ತಿದೆ. ಅಲ್ಲದೆ, ಇಂದು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ತೈಲ ಬೆಲೆ ಇಳಿಸಲಾಗಿದೆ. ಹಾವೇರಿಯಲ್ಲಿ (Haveri) ಪೆಟ್ರೋಲ್ ಬೆಲೆ 98 ಪೈಸೆ ಇಳಿಸಲಾಗಿದ್ದು, 104.65 ರೂ.ಗೆ 1 ಲೀಟರ್​ ಪೆಟ್ರೋಲ್ ಮಾರಾಟ ಮಾಡಲಾಗುತ್ತಿದೆ.

  3.Karnataka Weather Today: ರಾಜ್ಯದಲ್ಲಿ ಸೆಪ್ಟೆಂಬರ್ 26 ತನಕ ಭಾರೀ ಮಳೆ ಸಾಧ್ಯತೆ - ಇಂದಿನ ಹವಾಮಾನ ವರದಿ ಹೀಗಿದೆ..

  Karnataka Rains Today: ಬೆಂಗಳೂರು(ಸೆ.24):ಸೆಪ್ಟೆಂಬರ್ ತಿಂಗಳ ಆರಂಭದಿಂದ ರಾಜ್ಯದ ಹಲವು ಭಾಗಗಳಲ್ಲಿ ಭಾರೀ ಮಳೆಯಾಗುತಿತ್ತು, ಆದರೆ ಕಳೆದ ಕೆಲ ದಿನಗಳಿಂದ ಕೊಂಚ ಬಿಡುವು ಪಡೆದಿದ್ದ ಮುಂಗಾರು (Monsoon)ರಾಜ್ಯದಲ್ಲಿ ಮತ್ತೆ ಚುರುಕಾಗಿದ್ದು, ಮುಂದಿನ ಕೆಲ ದಿನ ಮಳೆಯಾಗುವ(Rainfall) ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (IMD)ಮುನ್ಸೂಚನೆ ನೀಡಿದ್ದು, ವಿಶೇಷವಾಗಿ, ಕರಾವಳಿ(Coastal Karnataka) ಮತ್ತು ಉತ್ತರ ಒಳನಾಡಿನ ಕೆಲವು ಕಡೆ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದೆ. ಮುಂಗಾರು ಜೈಸಲ್ಮೇರ್, ಕೋಟ, ಸತ್ನಾ, ದಾಲ್ತೊಂಗಂಜ್, ದಿಘಾ ಮೂಲಕ ಆಗ್ನೇಯ ದಿಕ್ಕಿಗೆ ಪೂರ್ವ ಮಧ್ಯ ಬಂಗಾಳ ಕೊಲ್ಲಿಯವರೆಗೆ ಹಾದುಹೋಗುತ್ತದೆ.

  4.Gold Price Today: ಆಭರಣ ಪ್ರಿಯರಿಗೆ ಗುಡ್​ ನ್ಯೂಸ್; ಕಡಿಮೆಯಾದ ಚಿನ್ನದ ರೇಟ್, ಬೆಂಗಳೂರಿನ ದರ ಹೀಗಿದೆ

  Gold Rate on September 24 2021 | ಕಳೆದ 2 ದಿನಗಳಿಂದ ಏರಿಕೆ ಕಂಡಿದ್ದ ಚಿನ್ನದ ಬೆಲೆ(Gold Price) ಇಂದು ಕಡಿಮೆಯಾಗಿದ್ದು, ಆಭರಣ ಪ್ರಿಯರು ಚಿನ್ನ ಖರೀದಿಸಲು ಇದೇ ಸಕಾಲವಾಗಿದೆ. ಇಂದು 10 ಗ್ರಾಂ ಚಿನ್ನಕ್ಕೆ 60 ರೂಪಾಯಿ ಇಳಿದಿದೆ. ನಿನ್ನೆ 10 ಗ್ರಾಂ ಚಿನ್ನಕ್ಕೆ 30 ರೂಪಾಯಿ ಹೆಚ್ಚಾಗಿತ್ತು. ಭಾರತದಲ್ಲಿ ನಿನ್ನೆ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 45,360 ರೂ. ಇತ್ತು. ಇಂದು 45,300 ರೂ.ಗೆ ಇಳಿದಿದೆ. ಅದೇ ರೀತಿ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆಯಲ್ಲೂ ಏರಿಕೆ ಕಂಡಿದೆ. ನಿನ್ನೆ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 46,360 ರೂ. ಇತ್ತು. ಇಂದು 46,300 ರೂಪಾಯಿಗೆ ಇಳಿದಿದೆ.

  5.PM Cares ಭಾರತ ಸರ್ಕಾರದ ನಿಧಿಯಲ್ಲ, RTI ಅಡಿಯಲ್ಲಿ ತರಲು ಸಾಧ್ಯವೇ ಇಲ್ಲ; ಕೇಂದ್ರ ಸರ್ಕಾರ

  ನವ ದೆಹಲಿ (ಸೆಪ್ಟೆಂಬರ್​ 24); ಕಳೆದ ಹಲವು ವರ್ಷಗಳಿಂದ ಪಿ ಎಂ ಕೇರ್ಸ್​ (PM Cares) ನಿಧಿಯ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಕೊರೋನಾ ಸಂದರ್ಭದಲ್ಲಿ ಜನ ಪಿಎಂ ಕೇರ್ಸ್​ಗೆ ಹಣ ದೇಣಿಗೆ ನೀಡುವಂತೆ ಸ್ವತಃ ಪ್ರಧಾನಿ ನರೇಂದ್ರ ಮೋದಿ (Narendra Modi) ಮನವಿ ಮಾಡಿದ್ದರು. ಅದರಂತೆ ಜನ ಕೋಟ್ಯಾಂತರ ಹಣ ಇಲ್ಲಿಗೆ ಜಮಾ ಮಾಡಿದ್ದರು. ಆದರೆ, ಪಿಎಂ ಕೇರ್ಸ್​ಗೆ ಜಮಾ ಆದ ಹಣ ಎಷ್ಟು? ಸರ್ಕಾರ ಈ ಪೈಕಿ ಖರ್ಚು ಮಾಡಿದ ಹಣ ಎಷ್ಟು? ಎಂಬ ಲೆಕ್ಕವನ್ನು ಮೋದಿ ಸರ್ಕಾರ ಈವರೆಗೆ ಸಾರ್ವಜನಿಕ ಗೊಳಿಸಿಲ್ಲ. ಹಲವರು ಆರ್​ಟಿಐ (RTI) ಅಡಿಯಲ್ಲಿ ಪ್ರಶ್ನೆ ಮಾಡಿದ್ದರೂ ಸಹ ಕೇಂದ್ರ ಸರ್ಕಾರ ಜಗ್ಗುತ್ತಿಲ್ಲ. ಆದರೆ, ಗುರುವಾರ ಈ ಬಗೆಗಿನ ದೆಹಲಿ ಹೈಕೋರ್ಟ್​ (Delhi High Court) ಪ್ರಶ್ನೆಗೆ ಉತ್ತರ ನೀಡಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ, "ಪಿಎಂ ಕೇರ್ಸ್‌ ನಿಧಿಯು ಭಾರತ ಸರ್ಕಾರದ ನಿಧಿಯಲ್ಲ, ಅದನ್ನು ಮಾಹಿತಿ ಹಕ್ಕು ಕಾಯ್ದೆಯ (ಆರ್‌ಟಿಐ) ಅಡಿಯಲ್ಲಿ ತರಲು ಸಾಧ್ಯವಿಲ್ಲ" ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದೆ.
  Published by:Latha CG
  First published: