Morning Digest: ಕರ್ನಾಟಕದಲ್ಲಿ ಇಂದು ಭಾರೀ ಮಳೆ, ಹೊಸ ಚಿತ್ರ ಅನೌನ್ಸ್ ಮಾಡಿದ ಹೊಂಬಾಳೆ ಫಿಲಂಸ್; ಬೆಳಗಿನ ಟಾಪ್ ನ್ಯೂಸ್​​​ಗಳು

Top News of the day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು? ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  1. Karnataka Weather Today: ರಾಜ್ಯದಲ್ಲಿ ಇಂದು ಸಹ ಭಾರೀ ಮಳೆಯ ನಿರೀಕ್ಷೆ- ಇಂದಿನ ಹವಾಮಾನ ವರದಿ ಹೀಗಿದೆ.

  Karnataka Rains Today:ಬೆಂಗಳೂರು(ಸೆ.21)ಕಳೆದ ಕೆಲವು ವಾರಗಳಿಂದ ಮುಂಗಾರು ಹಾಗೂ ಬಂಗಾಳ ಕೊಲ್ಲಿಯ ವಾಯುಭಾರ ಕುಸಿತದ ಪರಿಣಾಮ ರಾಜ್ಯದ ವಿವಿಧ ಭಾಗಗಳಲ್ಲಿ ಭಾರೀ ಮಳೆಯಾಗಿತ್ತು(Heavy Rainfall). ಆದರೆ ಕಳೆದ ಕೆಲವು ದಿನಗಳಿಂದ ಕೊಂಚ ಬಿಡುವು ಮೂಡಿದೆ. ಹವಾಮಾನ ಇಲಾಖೆಯ ಪ್ರಕಾರ 2 ದಿನಗಳಿಂದ ಭಾರೀ ಮಳೆಯ ನಿರೀಕ್ಷೆ ಇತ್ತು. ಆದರೆ ರಾಜ್ಯದ ಕರಾವಳಿ(Coastal) ಮತ್ತು ಮಲೆನಾಡು ಭಾಗಗಳಲ್ಲಿ ಹೆಚ್ಚಿನ ಮಳೆಯಾಗಿಲ್ಲ. ಇನ್ನು ಇಂದು ಸಹ ಭಾರೀ ಮಳೆಯ ನಿರೀಕ್ಷೆ ಇದ್ದು, ಕರಾವಳಿ ಭಾಗಗಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ(IMD) ಮಾಹಿತಿ ನೀಡಿದೆ.

  2.Bengaluru Power Cut: ಕೇಬಲ್ ಅಳವಡಿಕೆ ಹಿನ್ನೆಲೆ ಬೆಂಗಳೂರಿನ ಈ ಏರಿಯಾಗಳಲ್ಲಿ ಇಂದು ಪವರ್ ಕಟ್

  ಸಿಲಿಕಾನ್ ಸಿಟಿ ಬೆಂಗಳೂರಿನ ಹಲವೆಡೆ ಇಂದು ವಿದ್ಯುತ್​ ವ್ಯತ್ಯಯವಾಗಲಿದ್ದು(Power Cut), ಸಾರ್ವಜನಿಕರು ಸಹಕರಿಸಬೇಕೆಂದು ಎಂದು ಬೆಸ್ಕಾಂ(BESCOM) ಮನವಿ ಮಾಡಿದೆ. ನಿರ್ವಹಣಾ ಕಾರ್ಯ ಮತ್ತು ಕೇಬಲ್ ಅಳವಡಿಕೆ ಕೆಲಸ ಕೈಗೆತ್ತಿಕೊಳ್ಳುತ್ತಿರುವುದರಿಂದ ನಗರದ ವಿವಿಧ ಪ್ರದೇಶಗಳಲ್ಲಿ ಇಂದು ಬೆಳಗ್ಗೆ 9 ರಿಂದ 4 ಗಂಟೆಯವರೆಗೆ ವಿದ್ಯುತ್‌ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ. ಯಾವ್ಯಾವ ಪ್ರದೇಶಗಳಲ್ಲಿ ವಿದ್ಯುತ್ ಸಮಸ್ಯೆ ತಲೆದೋರಲಿದೆ ಎಂಬ ಪಟ್ಟಿ ಇಲ್ಲಿದೆ.

  3.Punjab Political Crisis| ರಾಷ್ಟ್ರೀಯವಾದಿ ಕ್ಯಾಪ್ಟನ್ ಅಮರೀಂದರ್​ ಸಿಂಗ್ ಅವರನ್ನು ಬಿಜೆಪಿ ಸ್ವಾಗತಿಸುತ್ತದೆ; ಅಶ್ವನಿ ಶರ್ಮಾ  ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ (Captain Amarinder Singh) ಅವರನ್ನು ಕಾಂಗ್ರೆಸ್​ ಹೈಕಮಾಂಡ್​ ಸಿಎಂ ಸ್ಥಾನದಿಂದ ಕೆಳಗಿಳಿಸಿದೆ. ಅಲ್ಲದೆ, ಆ ಸ್ಥಾನಕ್ಕೆ ಚರಣ್​ಜೀತ್​ ಸಿಂಗ್ ಚೆನ್ನಿ ಅವರನ್ನು ಹೊಸ ಸಿಎಂ ಆಗಿ ನೇಮಕ ಮಾಡಿದೆ. ಈ ಮೂಲಕ ಚರಣ್​ಜೀತ್ ಸಿಂಗ್ ಚೆನ್ನಿ (charanjit singh channi) ಪಂಜಾಬ್​ನ (Punjab) ಮೊದಲ ದಲಿತ ಸಿಎಂ ಎಂದು ಹೆಸರಾಗಿದ್ದಾರೆ. ಆದರೆ, ಕಾಂಗ್ರೆಸ್​ ಹೈಕಮಾಂಡ್​ನ (Congress) ಈ ನಿರ್ಧಾರ ಸಾಮಾನ್ಯವಾಗಿ ಅಮರೀಂದರ್​ ಸಿಂಗ್ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಹೇಳಿಕೆ ನೀಡಿದ್ದ ಅಮರೀಂದರ್ ಸಿಂಗ್, "ಪಂಜಾಬ್​ನಲ್ಲಿ ಅಕಾಲಿದಳವನ್ನು (Akali Dal) ಹೊರತುಪಡಿಸಿ ಎಲ್ಲಾ ರಾಜಕೀಯ ಆಯ್ಕೆಗಳನ್ನು ತನಗೆ ಮುಕ್ತ" ಎಂದು ಹೇಳಿದ್ದರು. ಹೀಗಾಗಿ ಅಮರೀಂದರ್​ ಸಿಂಗ್ ಬಿಜೆಪಿ (BJP) ಪಕ್ಷಕ್ಕೆ ಸೇರುತ್ತಾರೆಯೇ? ಎಂಬ ಸಂಶಯ ಮನೆ ಮಾಡಿದೆ.

  Gold Price Today: ಇಂದು ಮತ್ತೆ ಇಳಿಕೆ ಕಂಡ ಚಿನ್ನ; ಬೆಂಗಳೂರಿನಲ್ಲಿ ಇಂದಿನ ರೇಟ್ ಹೀಗಿದೆ..!

  Gold Rate on September 21 2021: ಕಳೆದ 2 ದಿನಗಳಿಂದ ಚಿನ್ನದ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿರಲಿಲ್ಲ. ಬದಲಿಗೆ ಯಥಾಸ್ಥಿತಿ ಕಾಯ್ದುಕೊಂಡಿತ್ತು. ಇಂದು ಮತ್ತೆ ಚಿನ್ನದ ರೇಟ್ ಕಮ್ಮಿಯಾಗಿದೆ. ಇದು ಆಭರಣ ಪ್ರಿಯರಿಗೆ ಶುಭ ಸುದ್ದಿಯಾಗಿದ್ದು, ಚಿನ್ನ ಖರೀದಿಸಲು ಇದೇ ಸಕಾಲವಾಗಿದೆ. 10 ಗ್ರಾಂ ಚಿನ್ನಕ್ಕೆ 260 ರೂಪಾಯಿ ಇಳಿಕೆ ಕಂಡಿದೆ. ಭಾರತದಲ್ಲಿ ನಿನ್ನೆ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 45,390 ರೂ. ಇತ್ತು. ಇಂದು 10 ಗ್ರಾಂ ಚಿನ್ನದ ಬೆಲೆ 45,130 ರೂಪಾಯಿಗೆ ಇಳಿಕೆಯಾಗಿದೆ. ಅದೇ ರೀತಿ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆಯೂ ಕಡಿಮೆಯಾಗಿದೆ. ನಿನ್ನೆ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 46,390 ರೂ. ಇತ್ತು. ಇಂದು 46,130 ರೂಪಾಯಿ ಆಗಿದೆ.

  Hombale 12: ಹೊಂಬಾಳೆ ಫಿಲಂಸ್​ನ 12ನೇ ಸಿನಿಮಾ: ಕುತೂಹಲ ಮೂಡಿಸಿದ ಪೋಸ್ಟರ್​..!

  ಸಾಲು ಸಾಲು ಸಿನಿಮಾಗಳನ್ನು ಪ್ರಕಟಿಸುವ ಮೂಲಕ ಸುದ್ದಿಯಲ್ಲಿರುವ ಕನ್ನಡದ ಸಿನಿಮಾ ನಿರ್ಮಾಣ ಸಂಸ್ಥೆ ಈಗ 12ನೇ ಚಿತ್ರವನ್ನು ಅನೌನ್ಸ್​ ಮಾಡಿದೆ. ಹೌದು, ನಿರ್ಮಾಪಕ ವಿಜಯ್ ಕಿರಗಂದೂರು (Vijay Kiraganduru) ಅವರು ಸಾರಥ್ಯದಲ್ಲಿ ಹೊಂಬಾಳೆ ಫಿಲಂಸ್​ (Hombale Films) ಮತ್ತೊಂದು ಹೊಸ ಚಿತ್ರ ಸೆಟ್ಟೇರಲಿದೆ. ಕೆಜಿಎಫ್​ ಚಾಪ್ಟರ್ 2 (KGF Chapter 2) ಸಿನಿಮಾ ಕುರಿತಾಗಿ ಏನಾದರೂ ಅಪ್ಡೇಟ್ ಕೊಡುವಂತೆ ಸಿನಿಪ್ರಿಯರು ಸಾಮಾಜಿಕ ಜಾಲತಾಣದಲ್ಲಿ ಒತ್ತಡ ಹೇರುತ್ತಿದ್ದಾರೆ. ಆದರೆ, ಕೊರೋನಾ ಕಾರಣಕ್ಕೆ ಆ ಸಿನಿಮಾದ ಅಪ್ಡೇಟ್​ ಕೊಡದೆ, ಹೊಸ ಸಿನಿಮಾಗಳನ್ನು ಒಂದರ ಹಿಂದೆ ಒಂದರಂತೆ ಪ್ರಕಟಿಸುತ್ತಿದೆ ಹೊಂಬಾಳೆ ಫಿಲಂಸ್​. ಕೊರೋನಾ ಕಾರಣದಿಂದಾಗಿ ಸಾಕಷ್ಟು ಸಿನಿಮಾಗಳ ಕೆಲಸಗಳು ಇನ್ನು ಆರಂಭವಾಗಿಲ್ಲ. ಆದರೆ, ಹೊಂಬಾಳೆ ಫಿಲಂಸ್​ ಮಾತ್ರ ಮೂರು ಹೊಸ ಪ್ರಾಜೆಕ್ಟ್​ಗಳನ್ನು ಪ್ರಕಟಿಸಿದೆ. ಆ ಸಿನಿಮಾಗಳ ಟೈಟಲ್​ ಪೋಸ್ಟರ್ ಸಹ ಲಾಂಚ್​ ಮಾಡಿದೆ.
  Published by:Latha CG
  First published: