Morning Digest: ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆ, ರೈಡರ್ ಸಿನಿಮಾದ ಸಾಂಗ್ ರಿಲೀಸ್, ಕೇರಳದಲ್ಲಿ ಪ್ರವಾಹ; ಬೆಳಗಿನ ಟಾಪ್ ನ್ಯೂಸ್​ಗಳು

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು? ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
1.Karnataka Weather Today: ಕರಾವಳಿ ಭಾಗದಲ್ಲಿ ಧಾರಾಕಾರ ಮಳೆ ನಿರೀಕ್ಷೆ-16 ಜಿಲ್ಲೆಗಳಿಗೆ ಅಲರ್ಟ್​ ಘೋಷಣೆ

Karnataka Rains Today ಬೆಂಗಳೂರು(ಅ.17):ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಮಳೆಯ(Heavy Rainfall) ಆರ್ಭಟ ಹೆಚ್ಚಿದೆ. ರಾಜಧಾನಿ ಬೆಂಗಳೂರು(Bengaluru) ಸೇರಿದಂತೆ ವಿವಿಧೆಡೆ ಎಡಬಿಡದೆ ಮಳೆ ಸುರಿಯುತ್ತಿದೆ. ಅಲ್ಲದೇ ನೈರುತ್ಯ ಮುಂಗಾರು(Southwest Monsoon) ಚುರುಕುಗೊಂಡಿರುವುದರಿಂದ ದಕ್ಷಿಣ ಒಳನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ(Coastal Districts) ಇಂದು ಗುಡುಗು, ಸಿಡಿಲು ಸಹಿತ ಧಾರಾಕಾರ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಾಗಾಗಿ ಮೈಸೂರು, ಮಂಡ್ಯ, ಕೊಡಗು, ಚಿಕ್ಕಮಗಳೂರು ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಅಧಿಕ ಮಳೆಯಾಗುವ ನಿರೀಕ್ಷೆ ಇರುವುದರಿಂದ ಆರೆಂಜ್ ಅಲರ್ಟ್‌ ಘೋಷಣೆ ಮಾಡಲಾಗಿದೆ.

2.Gold Price Today: ಬಹುದಿನಗಳ ಬಳಿಕ ಸ್ಥಿರತೆ ಕಾಯ್ದುಕೊಂಡ ಚಿನ್ನ-ಬೆಳ್ಳಿ ದರ; ಇಂದಿನ ರೇಟ್ ಹೀಗಿದೆ

Gold Rate on October 17 2021: ಕಳೆದ ಒಂದು ವಾರದಿಂದ ಸತತ ಏರಿಕೆ ಕಂಡಿದ್ದ ಬಂಗಾರದ ಬೆಲೆ(Gold Price) ಇಂದು ಸ್ಥಿರತೆ ಕಾಯ್ದುಕೊಂಡಿದೆ. ಭಾರತದಲ್ಲಿ ನಿನ್ನೆ 100 ರೂ. ಏರಿಕೆ ಕಂಡಿದ್ದ ಚಿನ್ನದ ಬೆಲೆ ಇಂದು ಯಥಾಸ್ಥಿತಿ ಕಾಯ್ದುಕೊಂಡಿದೆ. ಭಾರತದಲ್ಲಿ ನಿನ್ನೆ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 47,070 ರೂ. ಇತ್ತು. ಇಂದೂ ಸಹ ಅದೇ ಬೆಲೆಯನ್ನು ಕಾಯ್ದುಕೊಂಡಿದೆ. ಅಂತೆಯೇ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ನಿನ್ನೆ 48,070 ರೂ. ಇತ್ತು. ಇಂದೂ ಸಹ ಅದೇ ಬೆಲೆಯಿದ್ದು, ಯಾವುದೇ ವ್ಯತ್ಯಾಸವಾಗಿಲ್ಲ.

3.Kerala Floods| ಕೇರಳ ಪ್ರವಾಹ: 6 ಜನ ಸಾವು, 12 ಜನ ಕಣ್ಮರೆ, ಶಬರಿಮಲೆ ಯಾತ್ರೆ ಮುಂದೂಡಿಕೆ!

ಕೊಚ್ಚಿ (ಅಕ್ಟೋಬರ್​ 17); ದಕ್ಷಿಣ ಮತ್ತು ಮಧ್ಯ ಕೇರಳದಲ್ಲಿ (Kerala) ಭಾರೀ ಮಳೆಯಿಂದಾಗಿ ಶನಿವಾರ 6 ಜನ ಸಾವನ್ನಪ್ಪಿದ್ದಾರೆ ಮತ್ತು 12ಕ್ಕೂ ಹೆಚ್ಚು ಜನ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. ಮಳೆಯಿಂದಾಗಿ ಹಲವು ಭಾಗಗಳಲ್ಲಿ ಪ್ರವಾಹ (Kerala Flood) ಮತ್ತು ಭೂಕುಸಿತ ಉಂಟಾಗಿದ್ದು, ರಕ್ಷಣಾ ಕಾರ್ಯಾಚರಣೆಗಳು ಮುಂದುವರೆದಿದೆ. ಈ ನಡುವೆ ಅಧಿಕ ಮಳೆಯಿಂದಾಗಿ (Heavy Rain) ಕೇರಳ ದಕ್ಷಿಣ ಭಾಗದ ಎಲ್ಲಾ ಅಣೆಕಟ್ಟುಗಳು (DAM) ತುಂಬಿದ್ದು, ಹೆಚ್ಚುವರಿ ನೀರನ್ನು ಹೊರಗೆ ಬಿಡಲಾಗುತ್ತಿದೆ. ಪರಿಣಾಮ ಗುಡ್ಡಗಾಡು ಪ್ರದೇಶಗಳು, ಹಳ್ಳಿ-ಗ್ರಾಮ ಮತ್ತು ಸಣ್ಣ ಪಟ್ಟಣಗಳು ದ್ವೀಪದಂತಾಗಿವೆ. ಅನೇಕ ಗ್ರಾಮಗಳು ಹೊರಗಿನ ಪ್ರಪಂಚದಿಂದ ಸಂಪೂರ್ಣ ಸಂಪರ್ಕ ಕಡಿತಗೊಂಡಿವೆ. ಈ ನಡುವೆ ಕೇರಳ ಸರ್ಕಾರ ಅಯ್ಯಪ್ಪ ಸ್ವಾಮಿಯ ಶಬರಿಮಲೆ (Sabarimala) ಯಾತ್ರೆಯನ್ನು ಮುನ್ನೆಚ್ಚರಿಕಾ ಕ್ರಮವಾಗಿ ರದ್ದು ಮಾಡಿದೆ.

4.Nikhil Kumaraswamy ನಟನೆಯ Rider ಸಿನಿಮಾದ ಸಾಂಗ್​ ರಿಲೀಸ್​

ಮಾಜಿ ಪ್ರಧಾನ ಮಂತ್ರಿ (Ex- Prime Minister) ಎಚ್​.ಡಿ.ದೇವೇಗೌಡ(H.D. Devegowda)ರ ಮೊಮ್ಮಗ, ಮಾಜಿ ಮುಖ್ಯಮಂತ್ರಿ ಎಚ್ .ಡಿ.ಕುಮಾರಸ್ವಾಮಿ(H.D.Kumaraswamy) ಅವರ ಮಗ ನಿಖಿಲ್​ ಕುಮಾರಸ್ವಾಮಿ(Nikhil Kumaraswamy). ಜಾಗ್ವಾರ್​(Jaguar) ಸಿನಿಮಾ ಮೂಲಕ ಚಿತ್ರರಂಗಕ್ಕೆ ನಿಖಿಲ್​ ಎಂಟ್ರಿಯಾಗಿದ್ದರು. ಬಳಿಕ ಸೀತರಾಮ ಕಲ್ಯಾಣ(Seetharama Kalyana) ಸಿನಿಮಾ ಮೂಲಕ ಫ್ಯಾಮಿಲಿ ಪ್ರೇಕ್ಷಕರ ಗಮನ ಸೆಳೆದು, ಪೌರಾಣಿಕ ಪಾತ್ರಗಳಲ್ಲೂ ನಟಿಸಬಲ್ಲೇ ಎಂದು ಕುರುಕ್ಷೇತ್ರ(Kurukshethra) ಸಿನಿಮಾದ ಮೂಲಕ ಪ್ರೋವ್​ ಮಾಡಿಕೊಂಡ ನಟ ನಿಖಿಲ್​ ಕುಮಾರಸ್ವಾಮಿ. ಇದಾದ ಬಳಿಕ ಯಾವ ಸಿನಿಮಾದಲ್ಲಿ ನಿಖಿಲ್​ ನಟಿಸುತ್ತಾರೆ ಅಂತ ಎಲ್ಲರಿಗೂ ಕ್ಯೂರಿಯಾಸಿಟಿ ಇತ್ತು. ಅದಕ್ಕೆ ವಿಜಯ್​​ ಕುಮಾರ್​ ಕೊಂಡ ಉತ್ತರ ನೀಡಿದ್ದರು. ತಮ್ಮ ನಿರ್ದೇಶನದಲ್ಲಿ ನಿಖಿಲ್​ ಜತೆ ರೈಡರ್(Rider)​ ಸಿನಿಮಾ ಅನೌನ್ಸ್​ ಆಗಿತ್ತು. ಪೋಸ್ಟರ್​​, ಟೀಸರ್​ ಸಖತ್​ ಕಮಾಲ್​ ಮಾಡಿತ್ತು. ಈಗ ಸಿನಿಮಾದ ರೊಮ್ಯಾಂಟಿಕ್​ ಸಾಂಗ್(Song)​ವೊಂದು ರಿಲೀಸ್​ ಆಗಿದೆ. ನಿಖಿಲ್ ಕುಮಾರಸ್ವಾಮಿ ನಟನೆಯ ವಿಜಯ್ ಕುಮಾರ್ ಕೊಂಡ ನಿರ್ದೇಶನದ ಬಹುನಿರೀಕ್ಷೆಯ ‘ರೈಡರ್’(Rider) ಸಿನಿಮಾದ ‘ಡವ್ವ ಡವ್ವ’ ಹಾಡು ರಿಲೀಸ್ ಆಗಿದೆ.

5. Petrol Price| ಸಾರ್ವಕಾಲಿಕ ದಾಖಲೆ ಬರೆದ ತೈಲ ಬೆಲೆ; ಬಡವರ ಪಾಲಿಗೆ ದುಬಾರಿಯಾಯ್ತು ಪೆಟ್ರೋಲ್-ಡೀಸೆಲ್!

ಬೆಂಗಳೂರು (ಅಕ್ಟೋಬರ್​ 17); ಸತತ ಏರಿಕೆಯ ನಂತರ ಶನಿವಾರ ಸ್ಥಿರತೆ ಕಾಯ್ದುಕೊಂಡಿದ್ದ ಪೆಟ್ರೋಲ್ - ಡೀಸೆಲ್ (Petrol-Diesel) ಬೆಲೆ ಭಾನುವಾರ ಮತ್ತೆ ಏರಿಕೆ ಕಂಡಿದೆ. ಈ ಮೂಲಕ ತೈಲ ಬೆಲೆ ಮತ್ತೊಂದು ಹೊಸ ಸಾರ್ವಕಾಲಿಕ ದಾಖಲೆ ಬರೆದಿದೆ. ಅಲ್ಲದೆ, ಬಡವರ ಪಾಲಿಗೆ ದಿನೇ ದಿನೇ ದುಬಾರಿಯಾಗುತ್ತಿದೆ. ಪ್ರಸ್ತುತ ರಾಜಧಾನಿ ಬೆಂಗಳೂರಿನಲ್ಲಿ (Bangalore) ಇಂದು 1 ಲೀಟರ್ ಪೆಟ್ರೋಲ್​ಗೆ 36 ಪೈಸೆ ಏರಿಸಿ 109.16 ರೂ ಗೆ ಮಾರಾಟ ಮಾಡುತ್ತಿದ್ದರೆ, ಡೀಸೆಲ್​ ಬೆಲೆಯಲ್ಲಿ 37 ಪೈಸೆ ಏರಿಸಿ 100 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಈ ಮೂಲಕ ರಾಜ್ಯ ರಾಜಧಾನಿಯಲ್ಲಿ ಡೀಸೆಲ್ 100ರ ಗಡಿ ದಾಟಿದಂತಾಗಿದೆ. ಇದಲ್ಲದೆ, ವಿವಿಧ ಜಿಲ್ಲೆಗಳಲ್ಲಿ ಪೆಟ್ರೋಲ್ 111 ರೂ ಗಡಿ ಮುಟ್ಟಿರುವುದು ಆತಂಕಕ್ಕೆ ಕಾರಣವಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಪೆಟ್ರೋಲ್-ಡೀಸೆಲ್ ಬೆಲೆ ಕುರಿತ ವಿವರ ಇಲ್ಲಿದೆ.
Published by:Latha CG
First published: