Morning Digest: ಇಂದು ರಾಜ್ಯದಲ್ಲಿ ಭಾರೀ ಮಳೆ ನಿರೀಕ್ಷೆ, CSK ಸೇರ್ತಾರಾ ಡೇವಿಡ್ ವಾರ್ನರ್?; ಬೆಳಗಿನ ಟಾಪ್ ನ್ಯೂಸ್​ಗಳು

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು? ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
1.Karnataka Weather Today: ಇಂದು ಗುಡುಗು ಸಹಿತ ಧಾರಾಕಾರ ಮಳೆ ಸಾಧ್ಯತೆ- ಬೆಂಗಳೂರಿನ ಹವಾಮಾನ ಹೀಗಿದೆ

Karnataka Rains Today ಬೆಂಗಳೂರು(ಅ.16):ನೈರುತ್ಯ ಮುಂಗಾರು(Southwest Monsoon) ದಕ್ಷಿಣ ಒಳನಾಡಿನ ಕರ್ನಾಟಕದಲ್ಲಿ ತೀವ್ರವಾಗಿದ್ದು, ರಾಜ್ಯದ ಕರಾವಳಿ(Coastal Karnataka) ಪ್ರದೇಶಗಳಲ್ಲಿ ಸಕ್ರಿಯವಾಗಿದೆ. ಹಾಗಾಗಿ ರಾಜ್ಯದಲ್ಲಿ ಮುಂಗಾರು ಚುರುಕುಗೊಂಡಿದ್ದು, ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳು ಹಾಗೂ ಕರಾವಳಿ(Coastal) ಜಿಲ್ಲೆಗಳಲ್ಲಿ ಇಂದು ಮತ್ತು ನಾಳೆ ಗುಡುಗು, ಸಿಡಿಲು ಸಹಿತ ಧಾರಾಕಾರ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (IMD)ಮುನ್ಸೂಚನೆ ನೀಡಿದೆ.

2.Madikeri Dasara 2021: ವಿಜೃಂಭಣೆಯಿಂದ ಜರುಗಿದ ಮಡಿಕೇರಿ ದಸರಾ; ಅದ್ಭುತ ಜನೋತ್ಸವದ ಒಂದು ಝಲಕ್ ಇಲ್ಲಿದೆ

ಕೊಡಗು(ಅ.16): ಕೋವಿಡ್(COVID-19) ಹಿನ್ನಲೆಯಲ್ಲಿ ಸಾಕಷ್ಟು ನಿರ್ಬಂಧಗಳ ಹಾಕಿ ಸರಳ ರೀತಿಯಾಗಿ ಆಚರಣೆಗೆ ಅವಕಾಶ ನೀಡಿದ್ದ ಮಡಿಕೇರಿ ದಸರಾ(Madikeri Dasara) ಸಾವಿರಾರು ಪ್ರವಾಸಿಗರೊಂದಿಗೆ ಅದ್ಧೂರಿಯಾಗಿಯೇ ನಡೆದಿದೆ. ಶುಕ್ರವಾರ ರಾತ್ರಿಯಿಡೀ ನಡೆದ ಮೈನವಿರೇಳಿಸೋ ದಶಮಂಟಪಗಳ ಶೋಭಾಯಾತ್ರೆ(Shobhayatre) ಜನರ ಮನಸೂರೆಗೊಂಡಿತು. ಡಿಜೆ ಸೌಂಡ್ ಜೊತೆಗೆ ಬಣ್ಣದ ಓಕುಳಿ, ವಿವಿಧ ಪೌರಾಣಿಕ ಕಥೆಗಳು, ರಾಕ್ಷಸರ ನರ್ತನಗಳು ಜನರನ್ನು ಆ ಕ್ಷಣಕ್ಕೆ ದೇವಲೋಕಕ್ಕೆ ಕರೆದೊಯ್ದಿದ್ದವು ಎಂದರೆ ತಪ್ಪಲ್ಲ. ದುಷ್ಟರ ಸಂಹಾರದ ಸಂಕೇತ ನವರಾತ್ರಿಯ ಅಂಗವಾಗಿ ನಡೆದ ದಶಮಂಟಪಗಳ ಶೋಭಾಯಾತ್ರೆ ದೇವಾನುದೇವತೆಗಳ ಪವಾಡಕ್ಕೆ ಸಾಕ್ಷಿಯಾದರೆ, ಸಹಸ್ರಾರು ಭಕ್ತರು ಭಾವಪರವಶತೆಯಲ್ಲಿ ಮಿಂದೆದ್ದರು.

3.Gold Price Today: ದಸರಾ ಕಳೆದರೂ ಕಡಿಮೆಯಾಗದ ಬಂಗಾರದ ಬೆಲೆ, ಇಂದಿನ ಚಿನ್ನ-ಬೆಳ್ಳಿ ರೇಟ್ ಹೀಗಿದೆ..!

Gold Rate on October 16 2021: ಕಳೆದ ಒಂದು ವಾರದಿಂದ ಬಂಗಾರದ ಬೆಲೆ(Gold Price) ನಿರಂತರವಾಗಿ ಏರಿಕೆಯಾಗುತ್ತಿದ್ದು, ಆಭರಣ ಪ್ರಿಯರಿಗೆ ಶಾಕ್ ಕೊಡುತ್ತಿದೆ. ಭಾರತದಲ್ಲಿ ನಿನ್ನೆ 680 ರೂ ಏರಿಕೆ ಕಂಡಿದ್ದ ಚಿನ್ನದ ಬೆಲೆ ಇಂದು 100 ರೂಪಾಯಿ ಏರಿಕೆ ಕಂಡಿದೆ. ಭಾರತದಲ್ಲಿ ನಿನ್ನೆ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 46,970 ರೂ. ಇತ್ತು. ಇಂದು ಅದೇ ಚಿನ್ನಕ್ಕೆ 47,070 ರೂಪಾಯಿ ಆಗಿದೆ. ಅಂತೆಯೇ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ನಿನ್ನೆ 47,970 ರೂ. ಇತ್ತು. ಇಂದು 48,070 ರೂಪಾಯಿಗೆ ಏರಿಕೆಯಾಗಿದೆ.


4.David Warner| ಸಿಎಸ್​ಕೆ ಜರ್ಸಿ ಧರಿಸಿ ಪೋಟೋ ಹಂಚಿಕೊಂಡ ವಾರ್ನರ್​; CSK ಪಾಲಾಗಲಿದ್ದಾರಾ SRH ನಾಯಕ?

ದುಬೈ; ವಿಶ್ವದ ಶ್ರೀಮಂತ ಕ್ರಿಕೆಟ್​ ಟೂರ್ನಿ ಎಂದು ಖ್ಯಾತಿ ಪಡೆದಿರುವ ಐಪಿಎಲ್​-2021 (IPL 2021) ಕೊರೋನಾ (CoronaVirus) ಕಾಟದ ನಡುವೆ ಕೊನೆಗೂ ಮುಕ್ತಾಯವಾಗಿದೆ. ಕೆಕೆಆರ್ ತಂಡವನ್ನು ಮಣಿಸುವ ಮೂಲಕ ಸಿಎಸ್​ಕ್ (CSK) 4ನೇ ಬಾರಿ ಟ್ರೋಫಿಗೆ ಮುತ್ತಿಟ್ಟಿದೆ. ಆದರೆ, ಈ ಪಂದ್ಯ ಆರಂಭಕ್ಕೂ ಮುನ್ನವೇ ಸನ್​ರೈಸರ್ಸ್​ ಹೈದ್ರಾಬಾದ್ (SRH) ತಂಡದ ಮಾಜಿ ನಾಯಕ ಡೇವಿಡ್ ವಾರ್ನರ್​ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದ ಪೋಟೋ ಇದೀಗ ಭಾರೀ ಕುತೂಹಲ ಮೂಡಿಸಿದೆ. ಡೇವಿಡ್​ ವಾರ್ನರ್​ (David Warner) ಮತ್ತು ಆತನ ಮಗಳು ಸಿಎಸ್​ಕೆ ಜರ್ಸಿ ಧರಿಸಿರುವ ಪೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ (Social Media) ಹಂಚಿಕೊಳ್ಳುವ ಮೂಲಕ ತಮ್ಮ ಬೆಂಬಲ ಯಾರಿಗೆ? ಎಂಬುದನ್ನು ವಾರ್ನರ್ ಬಹಿರಂಗವಾಗಿ ಘೋಷಿಸಿದ್ದರು. ಆದರೆ, ಸಿಎಸ್​ಕೆ ಬೆಂಬಲ ಘೋಷಿಸಿರುವ ಆ ಪೋಟೋ ಇದೀಗ ಹಲವಾರು ಚರ್ಚೆಗೆ ಕಾರಣವಾಗಿದೆ.

5.Kotigobba 3 Review: ಸತ್ಯ, ಶಿವ, ಸುಂದರ 'ಘೋಸ್ಟ್' ಈ ಕೋಟಿಗೊಬ್ಬ!

ಕೋಟಿಗೊಬ್ಬ 2 (Kotigobba 3) ಚಿತ್ರದಲ್ಲಿ ಸತ್ಯ ಬದುಕುಳಿದು, ಶಿವ ಸಾಯುತ್ತಾನೆ. ಆದರೆ ಕೋಟಿಗೊಬ್ಬ 3 ಚಿತ್ರದ ಟೀಸರ್ (Teaser), ಟ್ರೇಲರ್ (Trailer) ಹಾಗೂ ಕಿಚ್ಚ ಸುದೀಪ್ (Kiccha Sudeep) ಅವರ ಹೊಸ ಹೊಸ ಲುಕ್‍ಗಳನ್ನ ನೋಡಿ ಇಲ್ಲಿ ಸತ್ಯ, ಶಿವನ ಜತೆ ಸುಂದರನೂ ಇರುತ್ತಾನಾ ಎಂಬ ಪ್ರಶ್ನೆಯೊಂದಿಗೆ ತಲೆಗೆ ಹುಳ ಬಿಟ್ಟುಕೊಂಡೇ ಪ್ರೇಕ್ಷಕರು ಥಿಯೇಟರ್​​ಗೆ ಬಂದಿದ್ದರು. ಇಲ್ಲಿ ಅವರ ಪ್ರಶ್ನೆಗಳಿಗೆ ಉತ್ತರ ನೀಡಿರುವ ಚಿತ್ರತಂಡ, ಕ್ಲೈಮ್ಯಾಕ್ಸ್‍ನಲ್ಲಿ ಮತ್ತಷ್ಟು ತಲೆಗೆ ಹೊಸ ಹುಳಗಳನ್ನು ಬಿಟ್ಟು ಕಳುಹಿಸಿದೆ.

Published by:Latha CG
First published: