Morning Digest: ರಾಜ್ಯದಲ್ಲಿ ಇನ್ನೂ 3 ದಿನ ಮಳೆ, ಚಿನ್ನದ ದರ ಸ್ಥಿರ, ಪೆಟ್ರೋಲ್ ಬೆಲೆಯಲ್ಲಿ ಏರಿಕೆ; ಬೆಳಗಿನ ಟಾಪ್ ನ್ಯೂಸ್​ಗಳು

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು? ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  1.Karnataka Weather Today: ರಾಜ್ಯದಲ್ಲಿ ವರುಣನ ಆರ್ಭಟಕ್ಕೆ ಜನ ತತ್ತರ- ಇನ್ನೂ ಮೂರು ದಿನಗಳ ಕಾಲ ಭಾರೀ ಮಳೆ ಸಾಧ್ಯತೆ

  Karnataka Rains Today ಬೆಂಗಳೂರು(ಅ.07): ರಾಜ್ಯದಲ್ಲಿ ವರುಣನ(Rainfall) ಆರ್ಭಟ ಕಡಿಮೆಯಾಗುವ ಯಾವ ಲಕ್ಷಣಗಳು ಕಾಣಿಸುತ್ತಿಲ್ಲ. ಕಳೆದ ಒಂದು ತಿಂಗಳಿಂದ ರಾಜ್ಯದಲ್ಲಿ ಭರ್ಜರಿ ಮಳೆಯಾಗುತ್ತಿದ್ದು , ಮುಂದಿನ ದಿನಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿತ್ತು. ಆದರೆ ರಾಜ್ಯದಲ್ಲಿ ಮುಂದಿನ ಕೆಲ ದಿನಗಳ ಕಾಲ ಭರ್ಜರಿ ಮಳೆಯಾಗಲಿದೆ(Heavy rainfall) ಎಂದು ಭಾರತೀಯ ಹವಾಮಾನ ಇಲಾಖೆ(IMD) ತಿಳಿಸಿದೆ. ಬಂಗಾಳ ಕೊಲ್ಲಿಯಲ್ಲಿ(Bay Of Bengal) ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮಳೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ನೈರುತ್ಯ ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತದಿಂದ ತಮಿಳುನಾಡು ಮತ್ತು ಕೇರಳದಾದ್ಯಂತ ಆಗ್ನೇಯ ಅರಬ್ಬಿ ಸಮುದ್ರದವರೆಗೆ ಮುಂಗಾರು ವಿಸ್ತರಿಸಿದ್ದು, ಇದು ಭಾರೀ ಮಳೆಗೆ ಕಾರಣವಾಗಿದೆ.

  2.Bengaluru Power Cut:ಮಳೆಯ ಆರ್ಭಟದ ನಡುವೆ ಪವರ ಕಟ್ ಸಮಸ್ಯೆ- ಇಂದು ಯಾವ ಏರಿಯಾದಲ್ಲಿ ವಿದ್ಯುತ್ ವ್ಯತ್ಯಯ ಇಲ್ಲಿದೆ ಸಂಪೂರ್ಣ ಡೀಟೈಲ್ಸ್​

  ರಾಜಧಾನಿ ಬೆಂಗಳೂರಿನಲ್ಲಿ (Bengaluru)ಒಂದೆಡೆ ಧಾರಕಾರ ಮಳೆಯಿಂದ(Rainfall) ಜನಜೀವನ ಅಸ್ತವ್ಯಸ್ತವಾಗಿತ್ತು. ಅಲ್ಲದೇ ನಿನ್ನೆ ಸಹ ಭಾರೀ ಮಳೆಯಾಗಿದ್ದು, ಮುಂದಿನ ಕೆಲ ದಿನಗಳ ಕಾಲ ಮಳೆ ಮುಂದುವರೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ನಿನ್ನೆ ಸುರಿದ ಭಾರೀ ಮಳೆಯಿಂದಾಗಿ ಕೂಡ ನಗರದ ಹಲವು ಮನೆಗಳಲ್ಲಿ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿತ್ತು. ಜನರು ಮಳೆಯಿಂದಾಗಿ ಪರದಾಡುತ್ತಿರುವ ಮಧ್ಯೆ ಬೆಸ್ಕಾಂ(BESCOM) ಪ್ರತಿದಿನ ವಿವಿಧ ಪ್ರದೇಶಗಳಲ್ಲಿ ಪವರ್ ಕಟ್(Power Cut) ಮಾಡುತ್ತಿದ್ದು, ಇದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಪ್ರತಿದಿನ ಒಂದೆಲ್ಲ ಒಂದು ಏರಿಯಾದಲ್ಲಿ ಪವರ್ ಕಟ್ ಸಮಸ್ಯೆಯಾಗುತ್ತಿದೆ. ಇಂದೂ ಕೂಡ ಕೆಲ ಏರಿಯಾಗಳಲ್ಲಿ ವಿದ್ಯುತ್ ಸಮಸ್ಯೆಯಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.

  3.Gold Price Today: ಚಿನ್ನ ಕೊಳ್ಳುವ ಮನಸ್ಸಿದ್ದರೆ ಇಂದೇ ಖರೀದಿಸಿ; ಏರಿಕೆಯಾಗಿಲ್ಲ ಬಂಗಾರದ ಬೆಲೆ..!

  Gold Rate on October 07 2021: ನಿನ್ನೆ ಏರಿಕೆ ಕಂಡಿದ್ದ ಚಿನ್ನದ ಬೆಲೆ(Gold Price) ಇಂದು ಯಥಾಸ್ಥಿತಿ ಕಾಯ್ದುಕೊಂಡಿದೆ. ಕಳೆದ ಕೆಲ ದಿನಗಳಿಂದ ಬಂಗಾರದ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದೆ. ಭಾರತದಲ್ಲಿ ನಿನ್ನೆ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 45,680 ರೂ. ಇತ್ತು. ಇಂದೂ ಸಹ ಅದೇ ಬೆಲೆಯನ್ನು ಕಾಯ್ದುಕೊಂಡಿದೆ. ಅಂತೆಯೇ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ನಿನ್ನೆ 46,680 ರೂ. ಇತ್ತು. ಇಂದೂ ಸಹ ಅದೇ ಬೆಲೆಯಿದ್ದು, ಯಾವುದೇ ವ್ಯತ್ಯಾಸವಾಗಿಲ್ಲ.

  4.Lakhimpur Kheri Violence| ಸ್ವಯಂ ದೂರು ದಾಖಲಿಸಿಕೊಂಡ‌ ಸುಪ್ರೀಂ ಕೋರ್ಟ್: ಇಂದು ವಿಚಾರಣೆ!

  ನವದೆಹಲಿ (ಅಕ್ಟೋಬರ್​ 07): ಪ್ರತಿಭಟನೆ ಮಾಡುತ್ತಿದ್ದ ರೈತರ ಮೇಲೆ ಕಾರು ಹರಿಸಿರುವ ಉತ್ತರ ಪ್ರದೇಶದ ಲಖಿಂಪುರ್ ಖೇರಿ ಹಿಂಸಾಚಾರ (Lakhimpur Kheri Violence ) ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶದ ಸರ್ವೋಚ್ಚ ನ್ಯಾಯಾಲಯವು (Supreme Court) ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದು ಅದರ ವಿಚಾರಣೆ ಇಂದು ನಡೆಯಲಿದೆ. ಲಖೀಂಪುರ್ ಖೇರಿಯಲ್ಲಿ ರೈತರು ಶಾಂತಯುತವಾಗಿ ಪ್ರತಿಭಟನೆ ನಡೆಸುತ್ತಿದ್ದರು. ಆಗ ಕೇಂದ್ರ ಗೃಹ ಇಲಾಖೆಯ ರಾಜ್ಯ ಖಾತೆ ಸಚಿವ ಅಜಯ್ ಮಿಶ್ರಾ (Union Home Minister (MoS) Ajay Mishra) ಮತ್ತು ಅವರ ಪುತ್ರ ಆಶೀಶ್ ಮಿಶ್ರಾ (Ashish Mishra) ಅವರು ರೈತರ ಮೇಲೆ ಕಾರು ಚಲಾಯಿಸಿದ್ದಾರೆ. ಇದರಿಂದ ನಾಲ್ವರು ರೈತರು ಮೃತಪಟ್ಟಿದ್ದಾರೆ. ಬಳಿಕ ರೈತರು ಆಕ್ರೋಶಭರಿತ ರಾಗಿದ್ದಾರೆ. ಆಗ ನಡೆದ ಹಿಂಸಾಚಾರದಲ್ಲಿ ನಾಲ್ವರು ಬಿಜೆಪಿ ಕಾರ್ಯಕರ್ತರು ಸಾವನ್ನಪ್ಪಿದ್ದಾರೆ. ಅಲ್ಲದೆ ಘಟನೆಯನ್ನು ವರದಿ ಮಾಡಲು ಹೋಗಿದ್ದ ಪತ್ರಕರ್ತನೊಬ್ಬ ಬಲಿ ಆಗಿದ್ದಾನೆ ಎನ್ನಲಾಗಿದೆ.

  5.Petrol Price| ನಿಲ್ಲದ ತೈಲ ಬೆಲೆ ಏರಿಕೆ ನಾಗಾಲೋಟ; ದಿನದಿಂದ ದಿನಕ್ಕೆ ಪೆಟ್ರೋಲ್-ಡೀಸೆಲ್ ಮತ್ತಷ್ಟು ದುಬಾರಿ!

  ಬೆಂಗಳೂರು (ಅಕ್ಟೋಬರ್​ 07); ದೇಶದಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ (Petrol - Diesel Price) ಏರಿಕೆ ನಾಗಾಲೋಟ ಸದ್ಯಕ್ಕೆ ನಿಲ್ಲುವ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ. ತೈಲ ಬೆಲೆ ಇಂದು ಮತ್ತೆ ಹೊಸ ಸಾರ್ವಕಾಲಿಕ ದಾಖಲೆ ಬರೆದಿದೆ. ಇಂದು ಬೆಂಗಳೂರಿನಲ್ಲಿ (Bangalore) ಪೆಟ್ರೋಲ್ ಬೆಲೆ 31 ಪೈಸೆ ಏರಿಸಿ 1 ಲೀಟರ್ ಪೆಟ್ರೋಲ್ ಅನ್ನು 106.52 ರೂ.ಗೆ ಮಾರಾಟ ಮಾಡಲಾಗಿದ್ದರೆ, ಚಿತ್ರದುರ್ಗದಲ್ಲಿ (Chitradurga) 1 ಲೀಟರ್​ ಪೆಟ್ರೋಲ್​ಗೆ 42 ಪೈಸೆ ಏರಿಸಲಾಗಿದ್ದು, ಅತ್ಯಧಿಕ 108.85 ರೂಗೆ ಮಾರಾಟ ಮಾಡಲಾಗುತ್ತಿದೆ. ಅಲ್ಲದೆ, ಪೆಟ್ರೋಲ್ ಬೆಲೆ ಶೀಘ್ರದಲ್ಲೆ 110 ರೂ ದಾಟುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ. ಡೀಸೆಲ್​ ಬೆಲೆಯನ್ನೂ ಏರಿಸಲಾಗಿದ್ದು, ಉತ್ತರಕನ್ನಡದಲ್ಲಿ (Uttara Kannada) ಅತ್ಯಧಿಕ ಲೀಟರ್​ಗೆ 98.43 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಪ್ರಸ್ತುತ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಸಹ ಇಂದು ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಗಣನೀಯ ಏರಿಕೆ ಕಂಡು ಬಂದಿದ್ದು, ಆ ಕುರಿತ ವಿವರ ಇಲ್ಲಿದೆ.
  Published by:Latha CG
  First published: