Morning Digest: ರಾಜ್ಯದಲ್ಲಿ ಅ.4ರವರೆಗೆ ಮಳೆ, ಚಿನ್ನದ ಬೆಲೆಯಲ್ಲಿ ಏರಿಕೆ; ಬೆಳಗಿನ ಟಾಪ್ ನ್ಯೂಸ್​​ಗಳು

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು? ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  1. CoronaVirus| ಕೋವಿಡ್ ಬಿಕ್ಕಟ್ಟು; ಭಾರತೀಯರ ಪ್ರಯಾಣವನ್ನು ಸಾಧ್ಯವಾದಷ್ಟು ಸುಲಭಗೊಳಿಸುವ ಭರವಸೆ ನೀಡಿದ ಇಂಗ್ಲೆಂಡ್

  ಲಂಡನ್ (ಅಕ್ಟೋಬರ್ 02); ಸಾಂಕ್ರಾಮಿಕ ಕೊರೋನಾ (CoronaVirus) ಬಿಕ್ಕಟ್ಟಿನ ಕಾರಣಕ್ಕೆ ಇಂಗ್ಲೆಂಡ್​ (United Kingdom) ಭಾರತ ಸೇರಿದಂತೆ ಅನೇಕ ದೇಶಗಳ ವಿಮಾನಗಳಿಗೆ ಮತ್ತು ಪ್ರಯಾಣಿಕರಿಗೆ ನಿರ್ಬಂಧ ಹೇರಿತ್ತು. ಅಲ್ಲದೆ, ಇಂಗ್ಲೆಂಡ್ (London) ಪ್ರವಾಸಕ್ಕೆ ಕಠಿಣ ನಿಯಮಗಳನ್ನು ಜಾರಿ ಮಾಡಿತ್ತು. ಆದರೆ, ಇದೀಗ ಭಾರತದ ವಿದೇಶಾಂಗ ಸಚಿವಾಲಯದ (Internal Affairs Minister of India) ಮನವಿಗೆ ಸ್ಪಂದಿಸಿರುವ ಬ್ರಿಟೀಷ್ ಹೈ ಕಮಿಷನ್ (British High Commission), ಭಾರತೀಯರ ಪ್ರಯಾಣ ಪ್ರಕ್ರಿಯೆಯನ್ನು ಸಾಧ್ಯವಾದಷ್ಟು ಸುಲಭವಾಗಿಸುವುದಾಗಿ ತಿಳಿಸಿದೆ. ಆದರೆ, ಇಂಗ್ಲೆಂಡ್​ಗೆ ಪ್ರಯಾಣ ಬೆಳೆಸುವ ವ್ಯಕ್ತಿ ಕಡ್ಡಾಯವಾಗಿ ಕೋವಿಡ್ 19 (Covid-19) ಎರಡು ಡೋಸ್ ಲಸಿಕೆ (Corona Vaccine) ಪಡೆದಿರಲೇಬೇಕು ಎಂದು ಸೂಚಿಸಲಾಗಿದೆ.

  2.Karnataka Weather Today: ಶಾಹೀನ್ ಚಂಡಮಾರುತ ಪ್ರಭಾವ ರಾಜ್ಯದಲ್ಲಿ ಅಕ್ಟೋಬರ್ 4 ವರೆಗೆ ಅಧಿಕ ಮಳೆ ಸಾಧ್ಯತೆ- ಕರಾವಳಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ..

  Karnataka Rains Today ಬೆಂಗಳೂರು(ಅ.02):ರಾಜ್ಯದಲ್ಲಿ ಮಳೆಯ(Rainfall) ಅಬ್ಬರ ಮುಂದುವರೆಯುತ್ತಲೇ ಇದೆ. ಬಂಗಾಳ ಕೊಲ್ಲಿಯ ವಾಯುಭಾರ ಕುಸಿತ ಹಾಗೂ ಮುಂಗಾರು(Monsoon) ಪ್ರಭಾವದಿಂದ ಸುಮಾರು ಒಂದು ತಿಂಗಳ ಕಾಲ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿತ್ತು. ನಂತರ ಕೊಂಚ ಬಿಡುವು ನೀಡಿದ್ದ ಮಳೆ, ಮತ್ತೆ ಗುಲಾಬ್ ಹಾಗೂ ಶಾಹೀನ್(Cyclone Shaheen) ಚಂಡಮಾರುತಗಳ ಪ್ರಭಾವದಿಂದ ಹೆಚ್ಚಾಗಿದೆ. ರಾಜ್ಯದಲ್ಲಿ ಕಳೆದ 4 ದಿನಗಳಿಂದ ಹಲವು ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಅಕ್ಟೋಬರ್ 4ರವರೆಗೆ ಮುಂದುವರೆಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ(IMD) ತಿಳಿಸಿದೆ. ಕರ್ನಾಟಕದ ಕರಾವಳಿ9Coastal karnataka) ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಮೂರು ದಿನಗಳ ಕಾಲ ಮಳೆಯಾಗುವ ಮುನ್ಸೂಚನೆ ಇದ್ದು, ಕೆಲವು ಜಿಲ್ಲೆಗಳಿಗೆ ಇಲಾಖೆ ಯೆಲ್ಲೊ ಅಲರ್ಟ್(Yellow Alert) ಘೋಷಣೆ ಮಾಡಲಾಗಿದೆ.

  3.Gold Price Today: ಚಿನ್ನ ಕೊಳ್ಳುವವರಿಗೆ ಕಹಿ ಸುದ್ದಿ; ಇಂದು ಏರಿಕೆ ಕಂಡ ಬಂಗಾರದ ಬೆಲೆ

  Gold Rate on October 02 2021: ಬಂಗಾರ ಪ್ರಿಯರಿಗೆ ಹಾಗೂ ಆಭರಣ ಕೊಳ್ಳುವವರಿಗೆ ಇಂದು ಕಹಿಸುದ್ದಿಯೊಂದು ಕಾದಿದೆ. ನಿನ್ನೆ ಭಾರೀ ಪ್ರಮಾಣದಲ್ಲಿ ಇಳಿಕೆ ಕಂಡಿದ್ದ ಚಿನ್ನ ಇಂದು ಏರಿಕೆಯಾಗಿದೆ. ಹೀಗಾಗಿ ಚಿನ್ನ ಖರೀದಿ ಮಾಡುವವರಿಗೆ ಇದು ಕಹಿಸುದ್ದಿಯಾಗಿದೆ. ನಿನ್ನೆ 10 ಗ್ರಾಂ ಚಿನ್ನಕ್ಕೆ 610 ರೂಪಾಯಿ ಇಳಿಕೆಯಾಗಿತ್ತು. ಇಂದು 10 ಗ್ರಾಂ ಚಿನ್ನಕ್ಕೆ 980 ರೂಪಾಯಿ ಏರಿಕೆಯಾಗಿದೆ. ಭಾರತದಲ್ಲಿ ನಿನ್ನೆ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 44,490 ರೂ. ಇತ್ತು. ಇಂದು 10 ಗ್ರಾಂ ಚಿನ್ನದ ಬೆಲೆ 45,470 ರೂಪಾಯಿಗೆ ಏರಿಕೆಯಾಗಿದೆ. ಅದೇ ರೀತಿ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆಯೂ ಹೆಚ್ಚಾಗಿದೆ. ನಿನ್ನೆ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 45,490 ರೂ. ಇತ್ತು. ಇಂದು 46,470 ರೂಪಾಯಿಗೆ ಏರಿಕೆಯಾಗಿದೆ.

  4.Bengaluru Power Cut: ತುರ್ತು ನಿರ್ವಹಣೆ ಕಾರ್ಯ ಹಿನ್ನೆಲೆ ಈ ಏರಿಯಾಗಳಲ್ಲಿ ವಿದ್ಯುತ್ ಸಮಸ್ಯೆ ..

  ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ(Bengaluru) ಕಳೆದ ಹಲವಾರು ದಿನಗಳಿಂದ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ಸಮಸ್ಯೆ ಉಂಟಾಗುತ್ತಿದೆ. ಪ್ರತಿದಿನ ವಿವಿಧ ಪ್ರದೇಶಗಳಲ್ಲಿ ಪವರ್ ಕಟ್(Power Cut) ಮಾಡಲಾಗುತ್ತಿದ್ದು, ಇಂದು ಸಹ ಕೆಲವು ಪ್ರದೇಶಗಳಲ್ಲಿ ಸಮಸ್ಯೆಯಾಗಲಿದ್ದು ಸಾರ್ವಜನಿಕರು ಸಹಕರಿಸಬೇಕಾಗಿ ಬೆಸ್ಕಾಂ(BESCOM) ಮನವಿ ಮಾಡಿದೆ. ಕೆಲ ವಿದ್ಯುತ್ ಕೇಂದ್ರಗಳಲ್ಲಿ ನಿರ್ವಹಣೆ ಕಾರ್ಯ ಇರುವುದರಿಂದ ಇಂದು ಬೆಳಗ್ಗೆ 10 ರಿಂದ 4ರವರೆಗೆ ನಗರದ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ಸಮಸ್ಯೆಯಾಗಲಿದೆ ಎಂದು ಬೆಸ್ಕಾಂ ಎಚ್ಚರಿಕೆ ನೀಡಿದೆ.

  5.Mahatma Gandhi Birth Anniversary 2021| ಮಹಾತ್ಮ ಗಾಂಧಿ ಎಂಬ ವ್ಯಕ್ತಿಯೋರ್ವನೊಳಗಿನ ಹತ್ತಾರು ಮುಖಗಳು!

  ರಾಷ್ಟ್ರಪಿತ ಮಹಾತ್ಮ ಗಾಂಧಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಇದೇ ಮಣ್ಣಲ್ಲಿ ನಿಂತು ಗಾಂಧಿಯ ಕುರಿತು ಯೋಚಿಸಿದಂತೆಲ್ಲಾ ವ್ಯಕ್ತಿಯೋರ್ವನೊಳಗಿನ ಹತ್ತಾರು ಮುಖಗಳು ಕಾಣಿಸಿಕೊಳ್ಳುತ್ತವೆ. ಬದುಕಿನುದ್ದಕ್ಕೂ ಅವರೋರ್ವ ಹೋರಾಟಗಾರ ರಾಗಿದ್ದರು, ಅರ್ಥಶಾಸ್ತಜ್ಞರಾಗಿದ್ದರು, ಓರ್ವ ಸಂತನಾಗಿದ್ದರು, ಸತ್ಯ ಅಹಿಂಸೆಯ ಪರಿಪಾಲಕರಾಗಿದ್ದರು ಕೊನೆಗೆ ಅವರು ಕೊಲ್ಲಲೂ ಅರ್ಹ ವ್ಯಕ್ತಿಯಾಗಿ ಹೋಗಿದ್ದರು. ಭಾಗಶಃ ಭಾರತದಲ್ಲಿ ಹೀಗೆ ಎಲ್ಲವೂ ಆಗಿದ್ದ ವ್ಯಕ್ತಿ ಮತ್ತೊಬ್ಬರಿಲ್ಲ. ಆದರೆ ಗಾಂಧಿಯನ್ನು ಕೊಂದು ನಾವು ಪಡೆದದ್ದಾದರೂ ಏನೂ..? ಎಂಬ ಕುರಿತು ಪ್ರಶ್ನಿಸುತ್ತಾ ಸಾಗಿದಂತೆಲ್ಲಾ ಗಾಢವಾದ ಶೂನ್ಯವೊಂದು ಆವರಿಸುವುದು ದಿಟ.
  Published by:Latha CG
  First published: