Morning Digest: ಜೇಮ್ಸ್ ಗೆ ಅಡ್ಡಿ, ಶೌಚಾಲಯ ಕಳ್ಳತನ, ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧ: ಇವತ್ತಿನ ಬೆಳಗಿನ ಟಾಪ್ ನ್ಯೂಸ್ ಗಳು

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು? ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
1.Puneeth Rajkumarರವರ 'ಜೇಮ್ಸ್'ಗೆ ಅಡ್ಡಿಯಾಗುತ್ತಾ 'The Kashmir files'? ಈ ಬಗ್ಗೆ ನಿರ್ಮಾಪಕರು ಹೇಳಿದ್ದೇನು?

ಪವರ್ ಸ್ಟಾರ್ (Power Star) ಪುನೀತ್ ರಾಜ್‌ಕುಮಾರ್ (Puneeth Rajkumar) ಅಭಿನಯದ ಕೊನೆಯ ಸಿನಿಮಾ (Cinema) ‘ಜೇಮ್ಸ್’ (James) ಅಬ್ಬರ ಮುಂದುವರೆದಿದೆ. ವಿಶ್ವದಾದ್ಯಂತ ‘ಅಪ್ಪು’ ಅಭಿಮಾನಿಗಳು ಜೇಮ್ಸ್ ಸಿನಿಮಾವನ್ನು ಅಪ್ಪಿ, ಬಾಚಿ, ತಬ್ಬಿಕೊಂಡಿದ್ದಾರೆ. ಮತ್ತೊಂದೆಡೆ ಕಾಶ್ಮೀರಿ ಪಂಡಿತರ ಹತ್ಯೆ ಕುರಿತಾದ ಬಾಲಿವುಡ್ (Bollywood) ಸಿನಿಮಾ ‘ದಿ ಕಾಶ್ಮೀರ್‌ ಫೈಲ್ಸ್’ (The Kashmir Files) ಕೂಡ ದೇಶದಾದ್ಯಂತ ಸದ್ದು ಮಾಡುತ್ತಿದೆ. ಬಾಕ್ಸ್ ಆಫೀಸ್‌ನಲ್ಲಿಯೂ (Box Office) ಧೂಳೆಬ್ಬಿಸುತ್ತಿದೆ. ಇದೀಗ 2 ಹಿಟ್ ಚಿತ್ರಗಳು (Hit Cinema) ಮುಖಾಮುಖಿಯಾಗುತ್ತಾ ಎನ್ನುವ ಪ್ರಶ್ನೆ ಮೂಡಿದೆ. ಕೊಪ್ಪಳದಲ್ಲಿ ಈ ಬಗ್ಗೆ ಖುದ್ದು ಜೇಮ್ಸ್ ಸಿನಿಮಾ ನಿರ್ಮಾಪಕರೇ (Producer) ಆತಂಕ ಹೊರಹಾಕಿದ್ದಾರೆ.

2.Durga Parameshwari Temple: ಮುಸ್ಲಿಂ ವ್ಯಾಪಾರಿ ಕಟ್ಟಿಸಿದ ದೇವಸ್ಥಾನಕ್ಕೇ ಮುಸ್ಲಿಮರಿಗೆ ನಿಷೇಧ

ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಪುಣ್ಯ ಪ್ರಸಿದ್ಧ ದೇವಸ್ಥಾನ ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನ (Durga Parameshwari Temple) ಜಾತ್ರೋತ್ಸವ ದಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ (Muslim Traders) ವ್ಯಾಪಾರ ನಿಷೇಧ ಭಾರೀ ವಿವಾದವನ್ನು ಪಡೆದಿದೆ. ಮಾರ್ಚ್ 17 ರಿಂದ ಆರಂಭವಾದ ಜಾತ್ರೋತ್ಸವ ಮಾರ್ಚ್ 25ರವರೆಗೆ ನಡೆಯಲಿದೆ. ಮಾರ್ಚ್ 23 ರಂದು ಹಗಲು ರಥೋತ್ಸವ ನಡೆದರೆ, ಮಾರ್ಚ್ 24ರಂದು ರಾತ್ರಿ ರಥೋತ್ಸವ ನಡೆಯಲಿದೆ. ಮಾರ್ಚ್25 ರಂದು ದುರ್ಗಾಪರಮೇಶ್ವರಿಯ ಶಯನ ಮಹೋತ್ಸವ (Shayana Mahotsava) ನಡೆಯಲಿದೆ. ಈ ಮೂರು ದಿನದಲ್ಲಿ ಬಪ್ಪನಾಡು ಕ್ಷೇತ್ರದಲ್ಲಿ ಕೋಟ್ಯಾಂತರ ರೂಪಾಯಿ ವ್ಯಾಪಾರ ವಹಿವಾಟು ನಡೆಯುತ್ತಿದೆ. ಒಂದು ಕೋಟಿ ರೂಪಾಯಿಗೂ ಅಧಿಕ ಮಲ್ಲಿಗೆ ಹೂವು ಮಾರಾಟವಾಗುತ್ತದೆ. ಈ ಮಲ್ಲಿಗೆ ಹೂವಿನ ಮಾರಾಟವನ್ನು ಮುಸ್ಲಿಮರೇ ಮಾಡುತ್ತಿದ್ದು, ಈ ಬಾರಿ ಮಾತ್ರ ಮುಸ್ಲಿಮರಿಗೆ ಅವಕಾಶ ನಿರಾಕರಿಸಲಾಗಿದೆ.

ಇದನ್ನೂ ಓದಿ:  SSLC Exam: ಈ ಶಾಲೆಯಲ್ಲಿ ರಾತ್ರಿಯೂ ಪಾಠ, ಭಾನುವಾರವೂ ಕ್ಲಾಸ್! ಇದೇ ನೋಡಿ ಮಾದರಿ ಪಾಠಶಾಲೆ

3.Toilet Theft: ಸಾರ್ವಜನಿಕರೇ ಗಮನಿಸಿ, ಯಾವುದು ಸೇಫ್ ಅಲ್ಲ: ಶೌಚಾಲಯವನ್ನೇ ಕದ್ದು ನೀರು ಕುಡಿದ ಕಳ್ಳರು

ಸಫೀಲ್​ಗೂಡ ಚೌರಸ್ತಾ ಸಮೀಪ ಕಬ್ಬಿಣದಿಂದ ಕೂಡಿದ್ದ ಸ್ವಚ್ಛ ಶೌಚಾಲಯವನ್ನು ನಿರ್ಮಿಸಲಾಗಿತ್ತು. ಆದ್ರೆ ಈ ಶೌಚಾಲಯ ಮಾರ್ಚ್ 16 ರಿಂದ ಕಾಣೆಯಾಗಿದೆ. ಇಲ್ಲಿಯ ಪೌರ ಕಾರ್ಮಿಕರು ಶೌಚಾಲಯ ದಿಢೀರ್ ಮಾಯವಾಗಿರುವ ವಿಷಯಯವನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಕೂಡಲೇ ಹಿರಿಯ ಅಧಿಕಾರಿಗಳು ಶೌಚಾಲಯ ಕಳ್ಳತನ ಆಗಿರುವ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡ ಪೊಳೀಸರು, ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳ ಪರಿಶೀಲನೆ ನಡೆಸಿ ಓರ್ವನನ್ನು ಬಂಧಿಸಲು ಯಶಸ್ವಿಯಾಗಿದ್ದಾರೆ. ಎಂ.ಜೋಗಯ್ಯ ಬಂಧಿತ ಆರೋಪಿ. ಪೊಲೀಸ್ ವಿಚಾರಣೆ ವೇಳೆ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ವಿಚಾರಣೆ ವೇಳೆ ತನಗೆ ನೆರವಾದ ಅರುಣ್ ಕುಮಾರ್ ಮತ್ತು ಭಿಕ್ಷಾಪತಿ ಎಂಬ ಇಬ್ಬರ ಹೆಸರನ್ನು ಬಾಯಿ ಬಿಟ್ಟಿದ್ದಾನೆ. ಸದ್ಯ ಇಬ್ಬರು ನಾಪತ್ತೆಯಾಗಿದ್ದು, ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಬಂಧಿತ ಕದ್ದ ಶೌಚಾಲಯವನ್ನು 45 ಸಾವಿರ ರೂ.ಗಳಿಗೆ ಮಾರಾಟ ಮಾಡಿದ್ದಾನೆ.

4.Gold Price: ಇಂದು ಚಿನ್ನ, ಬೆಳ್ಳಿ ಮತ್ತಷ್ಟು ತುಟ್ಟಿ! ನಿಮ್ಮೂರಲ್ಲಿ ಗೋಲ್ಡ್, ಸಿಲ್ವರ್ ರೇಟ್ ಎಷ್ಟು?

ಕಳೆದ ಎರಡ್ಮೂರು ದಿನಗಳಿಂದ ಚಿನ್ನದ ಬೆಲೆಗಳಲ್ಲಿ ವ್ಯತ್ಯಾಸವಾಗುತ್ತಲೇ ಇತ್ತು. ದೇಶದಲ್ಲಿ ಒಂದು ಗ್ರಾಂ ಆಭರಣ ಚಿನ್ನದ ಬೆಲೆ ಇಂದು ರೂ. 4,775 ಆಗಿದೆ. ಇನ್ನು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ (Bengaluru) ಇಂದು 22 ಕ್ಯಾರಟ್ ಆಭರಣ ಚಿನ್ನದ ಬೆಲೆ (ಹತ್ತು ಗ್ರಾಂ) ರೂ. 47,750 ಆಗಿದ್ದರೆ, 22 ಕ್ಯಾರಟ್ ಆಭರಣ ಚಿನ್ನದ ಬೆಲೆ (ಹತ್ತು ಗ್ರಾಂ) ರೂ. 47,750 ಆಗಿದೆ. ರಾಜಧಾನಿ ನಗರ ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಆಭರಣ ಚಿನ್ನದ ಬೆಲೆ (ಹತ್ತು ಗ್ರಾಂ) ರೂ. 47,750 ಆಗಿದ್ದರೆ ಚೆನ್ನೈ, ಮುಂಬೈ ಹಾಗೂ ಕೋಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ.48,280, ರೂ. 47,750, ರೂ. 47,750 ಆಗಿದೆ. ದೆಹಲಿಯಲ್ಲಿ ಚಿನ್ನದ ಬೆಲೆ ಇಂದು ರೂ. 47,750 ಆಗಿದೆ. ಬೆಂಗಳೂರಿನಲ್ಲಿ ಬೆಳ್ಳಿಯ ದರದಲ್ಲಿ ನಿನ್ನೆಗೆ ಹೋಲಿಸಿದರೆ ಸ್ವಲ್ಪ ಏರಿಕೆ ಕಂಡುಬಂದಿದೆ ಹಾಗೂ 10gm, 100gm, 1000gm (1ಕೆಜಿ) ಬೆಳ್ಳಿ ದರ ಕ್ರಮವಾಗಿ ರೂ. 734, ರೂ. 7,340 ಹಾಗೂ ರೂ. 73,400 ಗಳಾಗಿವೆ. ಇನ್ನುಳಿದಂತೆ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ 73,400 ಆಗಿದ್ದರೆ ದೆಹಲಿಯಲ್ಲಿ 68,900 ಮುಂಬೈನಲ್ಲಿ 68,900 ಹಾಗೂ ಕೋಲ್ಕತ್ತದಲ್ಲೂ ರೂ. 68,900 ಗಳಾಗಿದೆ.

ಇದನ್ನೂ ಓದಿ: Murder Case: ಬೆಳಗಾವಿ ರಿಯಲ್ ಎಸ್ಟೇಟ್ ಉದ್ಯಮಿ ಹತ್ಯೆ ಹಿಂದೆ 2ನೇ ಹೆಂಡತಿ! ಸುಪಾರಿ ನೀಡಿ ಕೊಲ್ಲಿಸಿದವಳು ಅರೆಸ್ಟ್

5.Padma Shri: ಪದ್ಮಶ್ರೀ ಸ್ವೀಕಾರಕ್ಕೂ ಮುನ್ನ ಪ್ರಧಾನಿ, ರಾಷ್ಟ್ರಪತಿಗೆ 125 ವರ್ಷದ ಯೋಗ ಗುರು ನಮಿಸಿದ್ದು ಹೀಗೆ

ರಾಷ್ಟ್ರ ರಾಜಧಾನಿ ನವದೆಹಲಿಯ ರಾಷ್ಟ್ರಪತಿ ಭವನದ ಅರಮನೆಯ ದರ್ಬಾರ್ ಹಾಲ್‌ನಲ್ಲಿ 125 ವರ್ಷದ ಕಾಶಿ ಮೂಲದ ಯೋಗ ಗುರು ಸ್ವಾಮಿ ಶಿವಾನಂದ ಅವರಿಗೆ ಪದ್ಮಶ್ರೀ ಪ್ರಶಸ್ತಿ (Padma Shri) ನೀಡಿ ಗೌರವಿಸಲಾಯಿತು. ಈ ವೇಳೆ ಅವರು ಬರಿಗಾಲಲ್ಲಿ ಹೋಗಿ ಪ್ರಶಸ್ತಿ ಸ್ವೀಕರಿಸಿದ್ದು ವಿ‍ಶೇಷವಾಗಿ ಕಂಡಿತು. ಅಲ್ಲದೆ, ಅವರಿಗೆ ಪ್ರಶಸ್ತಿ ನೀಡುವ ವೇಳೆ ಗಣ್ಯರು ಸೇರಿ ದರ್ಬಾರ್‌ ಹಾಲ್‌ನಲ್ಲಿದ್ದವರೆಲ್ಲ ಎದ್ದು ನಿಂತು ಚಪ್ಪಾಳೆ ತಟ್ಟಿದರು. ಇಷ್ಟೇ ಅಲ್ಲ, ಪ್ರಶಸ್ತಿ ಸ್ವೀಕರಿಸುವ ಮೊದಲು, ಯೋಗ ಸಾಧಕರಾದ ಸ್ವಾಮಿ ಶಿವಾನಂದ ಅವರು ಪ್ರಧಾನಿ ನರೇಂದ್ರ ಮೋದಿ (Narendra Modi) ಮತ್ತು ರಾಷ್ಟ್ರಪತಿಗಳಿಗೆ (President) ಸಾಷ್ಟಾಂಗ ನಮಸ್ಕಾರ ಮಾಡಿದರು. ಈ ಸಮಯದಲ್ಲೂ ಯೋಗ ಸಾಧಕರಿಗೆ ಸಮಾರಂಭದಲ್ಲಿದ್ದ ಅತಿಥಿಗಳು ಚಪ್ಪಾಳೆಯ ಸುರಿಮಳೆಯನ್ನೇ ಸುರಿಯಲಾಯಿತು.
Published by:Mahmadrafik K
First published: