Morning Digest: ಮಗುವಿನ ಜಾತಿಗಾಗಿ ಪತ್ನಿಯ ಕೊಲೆ, Mr.India ವಿಜೇತ ಅರೆಸ್ಟ್, ಚಿನ್ನ ಏರಿಕೆ: ಬೆಳಗಿನ ಟಾಪ್ ನ್ಯೂಸ್ ಗಳು

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು? ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
1.Mysuru: ಪ್ರೀತಿಸಿ ಮದುವೆಯಾದ್ರು, ಹುಟ್ಟುವ ಮಗುವಿನ ಜಾತಿಗಾಗಿ ಜಗಳ; ಕೊನೆಗೆ ಗರ್ಭಿಣಿ ಮಡದಿಯನ್ನ ಉಸಿರುಗಟ್ಟಿಸಿ ಕೊಂದ

ಮೈಸೂರು ನಗರದ ಬಿಳಿಕೆರೆ (Bilekere Lake, Mysuru) ಬಳಿ ಅನುಮಾನಾಸ್ಪದವಾಗಿ ಮಹಿಳೆ ಶವ (Woman Dead Body) ಪತ್ತೆಯಾಗಿತ್ತು. ಇದೀಗ ಪೊಲೀಸರು ಪ್ರಕರಣದ ಆರೋಪಿ (Accused) ಮಹಿಳೆಯ ಪತಿ ಪ್ರಮೋದ್ ನನ್ನು ಬಂಧಿಸಿದ್ದಾರೆ. ಬಂಧಿತ ಪ್ರಮೋದ್ ತಾನೇ ಉಸಿರುಗಟ್ಟಿಸಿ ಪತ್ನಿಯನ್ನು ಕೊಲೆ (Wife Murder) ಮಾಡಿ, ಕೆರೆಯ ಬಳಿ ಶವ ಎಸೆದಿರೋದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ವರದಿಯಾಗಿದೆ. ಅಶ್ವಿನಿ ಗರ್ಭಿಣಿಯಾದ ವಿಷಯ ತಿಳಯುತ್ತಲೇ ಪ್ರಮೋದ್ ಹುಟ್ಟು ಮಗುವಿಗೆ ಯಾವ ಜಾತಿ ಇರಿಸಬೇಕೆಂದು ವಾದ ಆರಂಭಿಸಿದ್ದನು. ಈ ಸಂಬಂಧ ದಂಪತಿ ನಡುವೆ ಸಾಕಷ್ಟು ವಾದ-ವಿವಾದ ನಡೆದಿದೆ. ಜಾತಿ ಕಾರಣದಿಂದಾಗಿ ಅಶ್ವಿನಿಗೆ ಗರ್ಭಪಾತ ಮಾಡಿಸಿಕೊಳ್ಳುವಂತೆ ಪ್ರಮೋದ್ ಒತ್ತಡ ಹಾಕಲಾರಂಭಿಸಿದ್ದನು.

2.ಸರಗಳ್ಳತನ ಪ್ರಕರಣದಲ್ಲಿ Mr.India-2019ರ ವಿಜೇತ ಅರೆಸ್ಟ್: ಕಳ್ಳತನಕ್ಕೆ ಮುಂದಾಗಿದ್ದೇಕೆ?

ಸರಗಳ್ಳತನ ಪ್ರಕರಣದಲ್ಲಿ ಮಾಜಿ ಮಿಸ್ಟರ್ ಇಂಡಿಯಾ (Mr India Title Winner), ಬಿ.ಟೆಕ್ ಪದವೀಧರನನ್ನು ತಮಿಳುನಾಡಿನ ಮನ್ನಾಡಿ ಪೊಲೀಸರು (Manndai Police) ಬಂಧಿಸಿದ್ದಾರೆ. 22 ವರ್ಷದ ಮೊಹಮ್ಮದ್ ಫೈಝಲ್ (Mohmmad Faizal) ಬಂಧಿತ ಮಾಜಿ ಮಿಸ್ಟರ್ ಇಂಡಿಯಾ. ಮಾರ್ಚ್ 17ರಂದು 58 ವರ್ಷದ ರತ್ನಾದೇವಿ ಎಂಬವರು ಸರಗಳ್ಳತನದ (Chain Snatching) ಬಗ್ಗೆ ದೂರು ದಾಖಲಿಸಿದ್ದರು. ಈ ದೂರಿನ ಅನ್ವಯ ಸಿಸಿಟಿವಿ ದೃಶ್ಯಗಳನ್ನು (CCTV Footage) ಅಧರಿಸಿ ಪೊಲೀಸರು ಫೈಝಲ್ ನನ್ನು ಬಂಧಿಸಿದ್ದಾರೆ. ಬಂಧಿತ ಫೈಝಲ್ 2019ರ ಮಿಸ್ಟರ್ ಇಂಡಿಯಾ ಸ್ಪರ್ಧೆಯ ವಿಜೇತನಾಗಿದ್ದನು. 2020ರಲ್ಲಿ ಬಿ.ಟೆಕ್ ಪೂರ್ಣಗೊಳಿಸಿದ ಫೈಝಲ್ ತನ್ನದೇ ಆದ ಮೊಬೈಲ್ ಅಂಗಡಿ (Mobile Shop) ಆರಂಭಿಸಿದ್ದನು. ಆದ್ರೆ ಕೊರೊನಾ ಮತ್ತು ಲಾಕ್ ಡೌನ್ (Corona And Lockdown) ನಿಂದಾಗಿ ಸಾಲದ ಸುಳಿಯಲ್ಲಿ ಸಿಲುಕಿದ್ದ ಎನ್ನಲಾಗಿದೆ. ಆರ್ಥಿಕ ಸಂಕಷ್ಟ (Financial Crisis) ಹೆಚ್ಚಾದ ಹಿನ್ನೆಲೆ ಸರಗಳ್ಳತನಕ್ಕೆ ಫೈಝಲ್ ಇಳಿದಿದ್ದನು ಎಂದು ವರದಿಯಾಗಿದೆ.

ಇದನ್ನೂ ಓದಿ:  Road Accident: ರಸ್ತೆ ಅಪಘಾತದಲ್ಲಿ ಸಂತ್ರಸ್ತರಿಗೆ ನೆರವಾದ್ರೆ 5 ಸಾವಿರ ಕ್ಯಾಶ್ ಪ್ರೈಸ್

3.IPL 2022: ಬಯೋ ಬಬಲ್ ಪ್ರವೇಶಿಸಿದ ಕಿಂಗ್ ಕೊಹ್ಲಿ!

IPL 2022 ಸೀಸನ್ ಮಾರ್ಚ್ 26 ರಿಂದ ಪ್ರಾರಂಭವಾಗುತ್ತದೆ. ಅದಕ್ಕೂ ಮೊದಲು RCB ಮಾಜಿ ನಾಯಕ ವಿರಾಟ್ ಕೊಹ್ಲಿ ತಂಡವನ್ನು ಸೇರಿಕೊಂಡಿದ್ದಾರೆ. 2013 ರಲ್ಲಿ ವಿರಾಟ್ ಆರ್‌ಸಿಬಿ ನಾಯಕರಾದರು, ನಂತರ 8 ವರ್ಷಗಳ ನಂತರ ಮೊದಲ ಬಾರಿಗೆ ನಾಯಕನಿಲ್ಲದೆ ವಿರಾಟ್ ಮೈದಾನಕ್ಕಿಳಿಯಲಿದ್ದಾರೆ. ಪ್ರತಿ ತಂಡವೂ ಭರ್ಜರಿ ತಯಾರಿ ನಡೆಸುತ್ತಿದೆ. ಕೆಲವು ಆಟಗಾರರು ಈಗ ತಂಡದ ಬಯೋ ಬಬಲ್ ಅನ್ನು ಪ್ರವೇಶಿಸುತ್ತಿದ್ದಾರೆ. ಆರ್‌ಸಿಬಿ ಮಾಜಿ ನಾಯಕ ವಿರಾಟ್ ಕೊಹ್ಲಿ ಕೂಡ ತಂಡವನ್ನು ಸೇರಿಕೊಂಡಿದ್ದಾರೆ. ವಿರಾಟ್ ಆಗಮನದ ಫೋಟೋಗಳನ್ನು ಆರ್‌ಸಿಬಿ ತನ್ನ ಸಾಮಾಜಿಕ ಮಾಧ್ಯಮ ಖಾತೆಯಿಂದ ಹಂಚಿಕೊಂಡಿದೆ. ಕಿಂಗ್ ಕೊಹ್ಲಿ ಆಗಮನವೇ ಸುದ್ದಿ ಎಂದು ಈ ಫೋಟೋಗಳಿಗೆ ಆರ್‌ಸಿಬಿ ಶೀರ್ಷಿಕೆ ನೀಡಿದೆ.

4.Gold-Silver Price Today: ಎರಡು ದಿನಗಳ ಬಳಿಕ ಕೊಂಚ ಏರಿಕೆ; ಇವತ್ತಿನ ಚಿನ್ನ, ಬೆಳ್ಳಿ ದರ ಹೀಗಿದೆ

ಇಂದು ಭಾರತದ ಮಾರುಕಟ್ಟೆಯಲ್ಲಿ ಬಂಗಾರದ ದರದಲ್ಲಿ ನಿನ್ನೆಗೆ ಹೋಲಿಸಿದರೆ ದೊಡ್ಡ ಬದಲಾವಣೆ ಕಂಡುಬಂದಿಲ್ಲ. ದೇಶದಲ್ಲಿ ಒಂದು ಗ್ರಾಂ ಆಭರಣ ಚಿನ್ನದ ಬೆಲೆ ಇಂದು ರೂ. 4,740 ಆಗಿದೆ. ರಾಜಧಾನಿ ನಗರ ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ. 47,400 ಆಗಿದ್ದರೆ ಚೆನ್ನೈ, ಮುಂಬೈ ಹಾಗೂ ಕೋಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ.47,930, ರೂ. 47,400, ರೂ. 47,400 ಆಗಿದೆ. ದೆಹಲಿಯಲ್ಲಿ ಚಿನ್ನದ ಬೆಲೆ ಇಂದು ರೂ. 47,300 ಆಗಿದೆ. ನಿನ್ನೆಗೆ ಹೋಲಿಸಿದರೆ ಇಂದು ಭಾರತದಲ್ಲಿ ಬೆಳ್ಳಿ ದರದಲ್ಲಿ ಅತ್ಯಲ್ಪ ಏರಿಕೆ ಕಂಡುಬಂದಿದೆ. 10gm, 100gm, 1000gm (1ಕೆಜಿ) ಬೆಳ್ಳಿ ದರ ಕ್ರಮವಾಗಿ ರೂ. 726, ರೂ. 7,260 ಹಾಗೂ ರೂ. 72,600 ಗಳಾಗಿವೆ. ಇನ್ನುಳಿದಂತೆ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ 72,600 ಆಗಿದ್ದರೆ ದೆಹಲಿಯಲ್ಲಿ 68,300 ಮುಂಬೈನಲ್ಲಿ 68,300 ಹಾಗೂ ಕೋಲ್ಕತ್ತದಲ್ಲೂ ರೂ. 68,300 ಗಳಾಗಿದೆ.

ಇದನ್ನೂ ಓದಿ:  Anekal Murder: ಪತ್ನಿಯನ್ನು ಕೊಂದು, ಕುತ್ತಿಗೆ ಕೊಯ್ದುಕೊಂಡ ಗಂಡ; ಅನಾಥವಾದ ಮಕ್ಕಳು

5.Crime: ತನ್ನಿಷ್ಟದ ಪಕ್ಷಕ್ಕೆ ವೋಟ್ ಮಾಡದ ಪತ್ನಿಗೆ ಈತ ಮಾಡಿದ್ದೇನು? ವಿಚಿತ್ರ ಗಂಡನ ಪಾಲಿಟಿಕ್ಸ್ ಲವ್

ರಾಜ್ಯ ಚುನಾವಣೆಯಲ್ಲಿ ತನ್ನ ಆಯ್ಕೆಯ ರಾಜಕೀಯ ಪಕ್ಷಕ್ಕೆ ಮತ ಹಾಕಲಿಲ್ಲ ಎಂಬ ಕಾರಣಕ್ಕೆ ತನ್ನ ಹೆಂಡತಿಯನ್ನು ಥಳಿಸಿ ಮನೆಯಿಂದ ಹೊರಹಾಕಿದ ವ್ಯಕ್ತಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ NCW ಉತ್ತರ ಪ್ರದೇಶ ಪೊಲೀಸರನ್ನು ಕೇಳಿದೆ. ಪುರುಷನ ವಿರುದ್ಧದ ಆರೋಪಗಳು ನಿಜವೆಂದು ಕಂಡುಬಂದಲ್ಲಿ ಎಫ್‌ಐಆರ್ ದಾಖಲಿಸಲು ರಾಷ್ಟ್ರೀಯ ಮಹಿಳಾ ಆಯೋಗವೂ ಕೋರಿದೆ. ಎನ್‌ಸಿಡಬ್ಲ್ಯು ಹೇಳಿಕೆಯೊಂದರಲ್ಲಿ, ಉತ್ತರ ಪ್ರದೇಶದ ಬರೇಲಿಯ ಮುಸ್ಲಿಂ ಮಹಿಳೆಯನ್ನು ತನ್ನ ಆಯ್ಕೆಯ ರಾಜಕೀಯ ಪಕ್ಷಕ್ಕೆ ಮತ ಹಾಕಲಿಲ್ಲ ಎಂಬ ಕಾರಣಕ್ಕೆ ಆಕೆಯ ಪತಿ ಥಳಿಸಿ ಮನೆಯಿಂದ ಹೊರಹಾಕಿದ್ದಾರೆ ಎಂಬ ಹಲವಾರು ಮಾಧ್ಯಮ ವರದಿಗಳು ಬಂದಿವೆ ಎಂದು ಎನ್‌ಸಿಡಬ್ಲ್ಯೂ ಹೇಳಿದೆ
Published by:Mahmadrafik K
First published: