Morning Digest: ಇಳಿಕೆಯಾಯ್ತು ಚಿನ್ನದ ಬೆಲೆ, ಹೈಕೋರ್ಟ್ ನಲ್ಲಿ ಹಿಜಾಬ್ ತೀರ್ಪು, 700 ಶಾಲೆಗೆ ಒಬ್ಬ ಶಿಕ್ಷಕ: ಬೆಳಗಿನ ಟಾಪ್ ನ್ಯೂಸ್ ಗಳು

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು? ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
1.Gold Price Today: ಚಿನ್ನ ಖರೀದಿಸೋ ಪ್ಲಾನ್ ಇದ್ರೆ ಇವತ್ತೇ ಖರೀದಿಸಿ: ಇಳಿಕೆಯಾಗಿದೆ ದರ

ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ (Gold Price) 52,810 ರೂ. ಇತ್ತು. ಇಂದು 340 ರೂ. ಇಳಿಕೆಯಾಗಿ 52,470 ರೂ. ಆಗಿದೆ. ಅದೇ ರೀತಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ನಿನ್ನೆ 48,410 ರೂ. ಇತ್ತು. ಇಂದು 310 ರೂ. ಕಡಿಮೆಯಾಗಿ 48,100 ರೂ. ಆಗಿದೆ. ರಾಜ್ಯದ ಇತರೆ ಪ್ರಮುಖ ನಗರಗಳಾದ ಮೈಸೂರು, ಮಂಗಳೂರಿನಲ್ಲೂ ಇದೇ ಬೆಲೆ ಇದೆ. ದೇಶದಲ್ಲಿ ಆಭರಣ ಪ್ರಿಯರ ಜನಸಂಖ್ಯೆಗೇನೂ ಕೊರತೆ ಇಲ್ಲ. ಈ ಹಿನ್ನೆಲೆ ಚಿನ್ನ, ಬೆಳ್ಳಿ ವಹಿವಾಟಿಗೂ ಸಹ ಕೊರತೆ ಇಲ್ಲ. ಇನ್ನು ಹಲವರು ಆಪತ್ಕಾಲದಲ್ಲಿ ಚಿನ್ನ ಅಡ ಇಡಲು ಅಥವಾ ಮಾರಲು ಬೇಕಾಗುತ್ತದೆಂದು ಸಹ ಅದರ ಮೇಲೆ ಹೂಡಿಕೆ ಮಾಡುತ್ತಾರೆ. ದೇಶದಲ್ಲಿಂದು ಚಿನ್ನದ ಬೆಲೆ ಇಳಿಕೆಯಾದಂತೆ ಬೆಳ್ಳಿ ದರ (Silver Rate) ಸಹ ಇಳಿಕೆಯಾಗಿದೆ.. ನಿನ್ನೆ 1 ಕೆಜಿ ಬೆಳ್ಳಿಗೆ 74,700 ರೂ. ಇತ್ತು. ಇಂದು 4,700 ರೂ. ಕಡಿಮೆಯಾಗಿ 70,000 ರೂ. ಆಗಿದೆ.

2.Hijab Row: ಇಂದು ಹಿಜಾಬ್ ವಿವಾದದ ತೀರ್ಪು: ಬೆಂಗಳೂರು ನಗರದಾದ್ಯಂತ ಖಾಕಿ ಕಟ್ಟೆಚ್ಚರ

ಇಂದು ಬೆಳಗ್ಗೆ ಹಿಜಾಬ್ ವಿವಾದ (Hijab Row) ಪ್ರಕರಣದ ತೀರ್ಪು ಹೊರಬೀಳಲಿದೆ. ಇದೊಂದು ಸೂಕ್ಷ್ಮ ಪ್ರಕರಣವಾಗಿದ್ದರಿಂದ ಬೆಂಗಳೂರು (Bengaluru) ನಗರದಾದ್ಯಂತ ಖಾಕಿ ಕಟ್ಟೆಚ್ಚರ ವಹಿಸಲಾಗಿದೆ. ನಗರದಾದ್ಯಂತ 10 ಸಾವಿರಕ್ಕೂ ಅಧಿಕ ಪೊಲೀಸ್ (Police) ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಸೂಕ್ಷ್ಮ ಹಾಗೂ ಅತಿಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ನಿಗಾ ಇರಿಸಿದ್ದು, ಅಯಾ ವಿಭಾಗಗಳಲ್ಲಿ ಡಿಸಿಪಿಗಳಿಂದ ಬಂದೋಬಸ್ತ್ ಪರಿಶೀಲನೆ ಮಾಡಲಾಗುತ್ತಿದೆ. ಇಬ್ಬರು ಹೆಚ್ಚುವರಿ ಪೊಲೀಸ್ ಆಯುಕ್ತರು, 8 ಡಿಸಿಪಿ, 40 ಎಸಿಪಿ, 120 ಇನ್ಸ್‌ ಪೆಕ್ಟರ್ ಗಳ ಜೊತೆ 40 ಸಿಎಆರ್, 30 ಕೆಎಸ್ಆರ್ ಪಿ ತುಕಡಿ ಬಂದೋಬಸ್ತ್ ಗೆ ನಿಯೋಜಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ನಗರದಾದ್ಯಂತ 144 ಸೆಕ್ಷನ್ (144 Section) ಜಾರಿ ಮಾಡಲಾಗಿದೆ. ನಗರದಲ್ಲಿ ಒಂದು ವಾರ ಪ್ರತಿಭಟನೆಗಳಿಗೆ ನಿರ್ಬಂಧ ಹಾಕಲಾಗಿದೆ.

ಇದನ್ನೂ ಓದಿ:  Viral Video: ವೇದಿಕೆ ಮೇಲೆ ಬರುತ್ತಿದ್ದ ವಧುವನ್ನ ನೋಡಿ ವರ ಕೊಟ್ಟ ರಿಯಾಕ್ಷನ್ ನೋಡಿ ಎಲ್ಲರೂ ಶಾಕ್!

3.Govt Schools: 700 ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಒಬ್ಬನೇ ಶಿಕ್ಷಕ..!

ಗುಜರಾತ್‌ನಲ್ಲಿ ಒಟ್ಟು 700 ಸರ್ಕಾರಿ ಪ್ರಾಥಮಿಕ ಶಾಲೆಗಳನ್ನು ಒಬ್ಬ ಶಿಕ್ಷಕರಿಂದ ನಿರ್ವಹಿಸಲಾಗುತ್ತಿದೆ. ಅವರು 1 ರಿಂದ 8 ನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳಿಗೆ ಕಲಿಸುತ್ತಾರೆ ಎಂದು ರಾಜ್ಯ ಶಾಸಕಾಂಗಕ್ಕೆ ತಿಳಿಸಿದೆ. ಪ್ರಶ್ನೋತ್ತರ ವೇಳೆಯಲ್ಲಿ ವಿವಿಧ ಪ್ರಶ್ನೆಗಳಿಗೆ ಉತ್ತರಿಸಿದ ಸರ್ಕಾರ, ಕಳೆದ ಎರಡು ವರ್ಷಗಳಲ್ಲಿ 86 ಸರ್ಕಾರಿ ಪ್ರಾಥಮಿಕ ಶಾಲೆಗಳನ್ನು ಮುಚ್ಚಲಾಗಿದೆ. 491 ಶಾಲೆಗಳನ್ನು ಪರಸ್ಪರ ವಿಲೀನಗೊಳಿಸಲಾಗಿದೆ ಎಂದು ಹೇಳಿದೆ. ಜುನಾಗಢ್ ಜಿಲ್ಲೆ 25 ಪ್ರಾಥಮಿಕ ಶಾಲೆಗಳನ್ನು ಮುಚ್ಚಿದೆ, ಇದು ರಾಜ್ಯದಲ್ಲಿಯೇ ಅತಿ ಹೆಚ್ಚು ಎಂದು ಸರ್ಕಾರ ಹೇಳಿದೆ.

4. ಕನ್ನಡ ಶಾಲೆ ಉಳಿಸಲು ವಿಭಿನ್ನ ಯತ್ನ: Smart Class ಆಗಿ ಬದಲಾದ ಹಳೆ ಸರ್ಕಾರಿ ಬಸ್

ಗುಜರಿಗೆ ಸೇರಲಿದ್ದ ಸರ್ಕಾರಿ ಬಸ್ಸಿಗೆ ಹೊಸ ರೂಪ ಕೊಟ್ಟು ತಾನು ಕಲಿತ ಶಾಲೆ ಉಳಿಸಲು ಪ್ರಯತ್ನಿಸುತ್ತಿರುವ ಈ ಕಲಾವಿದನ ಹೆಸರು ಪ್ರಶಾಂತ್ ಆಚಾರ್ಯ. ‌ ಕುಂದಾಪುರ ತಾಲೂಕಿನ ಬಗ್ವಾಡಿ‌ ನಿವಾಸಿ. ಇದೇ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಹಳೆ‌ ವಿದ್ಯಾರ್ಥಿ. ‌ಲಾಕ್ ಡೌನ್ ನಲ್ಲಿ ಕೆಎಸ್ ಆರ್ ಟಿಸಿ ಬಸ್ಸಿನ ‌ಮಾದರಿಯನ್ನ ಫೋಮ್ ಶೀಟ್ ನಲ್ಲಿ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದೆ.  ಕೂಡಲೇ ಒಂದು ಬಸ್ ನ್ನು ಶಾಲೆ ಆವರಣಕ್ಕೆ‌ ತಂದು ಒಂದು ಬದಿ ಗುರುಕುಲ ಪದ್ದತಿಯಿಂದ ನಡೆದು ಬಂದ ಶಿಕ್ಷಣ ಹಾಗೂ ಶೈಕ್ಷಣಿಕ ಮಹತ್ವ ಸಾರುವ ಚಿತ್ರ ಹಾಗೂ ಇನ್ನೊಂದು ಬದಿ ಕರಾವಳಿಯ ಕಲೆಯ ಸೊಡಗು ಚಿತ್ರ ನಿರ್ಮಿಸಿ ಒಳಭಾಗದಲ್ಲಿ ಸಾಹಿತಿಗಳು, ಸ್ವಾತಂತ್ರ್ಯ ಹೋರಾಟಗಾರರು,‌ ಸಾಮಾಜಿಕ ಹೋರಾಟಗಾರರು ಹೀಗೆ ದೇಶ ಭಕ್ತರ ಭಾವಚಿತ್ರ ಜೊತೆಗೆ ಪ್ರಾಜೆಕ್ಟರ್ ಮತ್ತು ಬೆಂಚುಗಳು, ಫ್ಯಾನ್ ಹೀಗೆ ಎಲ್ಲವನ್ನ ಅಳವಡಿಸಿ 2 ಲಕ್ಷ ವೆಚ್ಚದಲ್ಲಿ ಸ್ಮಾರ್ಟ್ ಕ್ಲಾಸ್ ಬಸ್ಸಾಗಿ ನಿರ್ಮಾಣ ಮಾಡ್ತಾರೆ ಪ್ರಶಾಂತ್.

ಈ ಮೇಲಿನ ಸುದ್ದಿಯನ್ನು ಪೂರ್ತಿಯಾಗಿ ಓದಲು ಇಲ್ಲಿ ಕ್ಲಿಕ್ ಮಾಡಿ

 5.Empire Hotel ವಿರುದ್ಧ 40 ಪೈಸೆಗಾಗಿ ಕೋರ್ಟ್ ಮೆಟ್ಟಿಲೇರಿದ್ದ ವ್ಯಕ್ತಿಗೆ ಬಿತ್ತು 4 ಸಾವಿರ ರೂ. ದಂಡ

ಈ ಘಟನೆ ನಡೆದಿದ್ದು ಮೇ 21, 2021 ರಂದು ಎಂದು ವರದಿಯಾಗಿದೆ. ಮೂರ್ತಿ ಎಂದು ಗುರುತಿಸಲಾದ ಹಿರಿಯ ನಾಗರಿಕರೊಬ್ಬರು ಸೆಂಟ್ರಲ್ ಸ್ಟ್ರೀಟ್ ನಲ್ಲಿರುವ ಹೋಟೆಲ್ ಎಂಪೈರ್ ಗೆ ಭೇಟಿ ನೀಡಿದರು ಮತ್ತು ಅವರಿಗೆ ಬೇಕಾದ ಊಟದ ಆರ್ಡರ್ ನೀಡಿ ಪಾರ್ಸಲ್ ತೆಗೆದುಕೊಂಡು ಹೋಗುವುದಾಗಿ ಹೇಳಿದರು. ಹೊಟೇಲ್ ಸಿಬ್ಬಂದಿಯವರು ಅವರಿಗೆ 265 ರೂಪಾಯಿಗಳ ಬಿಲ್ ನೀಡಿದರು, ಆದಾಗ್ಯೂ ಅವರ ಆರ್ಡರ್ ಮಾಡಿದ ಊಟದ ಬಿಲ್ ನಲ್ಲಿರುವ ಒಟ್ಟು ಮೊತ್ತ 264 ರೂಪಾಯಿ 60 ಪೈಸೆ ಆಗಿತ್ತು.  ಮಾರ್ಚ್ 4, 2022 ರಂದು, ನ್ಯಾಯಾಲಯವು ದೂರುದಾರನಿಗೆ ಹೊಟೇಲ್ ಮಾಲೀಕರಿಗೆ ಪರಿಹಾರವಾಗಿ 2,000 ರೂಪಾಯಿ ಮತ್ತು ನ್ಯಾಯಾಲಯದ ವೆಚ್ಚವಾಗಿ ಹೆಚ್ಚುವರಿ 2,000 ರೂಪಾಯಿಗಳನ್ನು ಆದೇಶಿಸಿದ 30 ದಿನಗಳಲ್ಲಿ ಪಾವತಿಸುವಂತೆ ಹೇಳಿದೆ.
Published by:Mahmadrafik K
First published: