Morning Digest: ರಾಜ್ಯದ ಕೆಲವೆಡೆ ಇಂದು ಮಳೆ, ಚಿನ್ನದ ಬೆಲೆಯಲ್ಲಿ ಇಳಿಕೆ; ಬೆಳಗಿನ ಟಾಪ್ ನ್ಯೂಸ್​ಗಳು

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು? ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
1.Karnataka Weather Report: ರಾಜ್ಯದ ಈ ಜಿಲ್ಲೆಗಳಲ್ಲಿ ಇವತ್ತು ಮಳೆ ಸಾಧ್ಯತೆ

Karnataka Weather Report: ರಾಜ್ಯದಲ್ಲಿಂದು ಕೆಲವು ಜಿಲ್ಲೆಗಳಲ್ಲಿ ಮಳೆಯಾಗುವ (Rainfall) ಸಾಧ್ಯತೆಗಳಿವೆ . ಕಳೆದ ಎರಡು ದಿನಗಳಿಂದ ಉತ್ತರ ಕರ್ನಾಟಕದ (north Karnataka) ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣದ (Cloudy Weather) ಜೊತೆ ಶೀತ ಗಾಳಿ (Clod Wave) ಆರಂಭಗೊಂಡಿತ್ತು. ಬೀದರ್ (Bidar), ಯಾದಗಿರಿ (Yadagiri) , ರಾಯಚೂರು (Raichur) ಮತ್ತು ಕೋಲಾರ (kolar) ಜಿಲ್ಲೆಯ ಕೆಲವು ಭಾಗಗಳಲ್ಲಿ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಹೇಳಿದೆ. ಇನ್ನುಳಿದ ಭಾಗಗಳಲ್ಲಿ ಚಳಿ (Winter) ಮುಂದುವರಿದ್ರೆ, ಕೆಲವು ಕಡೆ ಶೀತದ ಪರಿಣಾಮ ತಗ್ಗುತ್ತಿದೆ. ಬೆಳಗ್ಗೆ ಸುಮಾರು 8 ಗಂಟೆವರೆಗೂ ದಟ್ಟವಾದ ಮಂಜು ಆವರಿಸಲಿದ್ದು, ವಾಹನ ಸವಾರರು ಪರದಾಡು ಪರಿಸ್ಥಿತಿ ಮಲೆನಾಡು ಭಾಗಗಳಲ್ಲಿ ನಿರ್ಮಾಣವಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಗರಿಷ್ಠ 27 ಮತ್ತು ಕನಿಷ್ಠ 18 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ.

2.Petrol And Diesel Price Today: ರಾಜ್ಯದ ವಿವಿಧ ನಗರಗಳ ಪೆಟ್ರೋಲ್, ಡೀಸೆಲ್ ದರ ಇಲ್ಲಿದೆ

Petrol And Diesel Price Today: ಕೇಂದ್ರ ಹಾಗೂ ರಾಜ್ಯ ಸರ್ಕಾರದ ದೀಪಾವಳಿ ಕೊಡುಗೆಯಾಗಿ ಪೆಟ್ರೋಲ್‌, ಡೀಸೆಲ್‌ ಮೇಲಿನ ಸುಂಕವನ್ನು ಕಡಿತಗೊಳಿಸಿದ್ದವು. ಇದರ ಪರಿಣಾಮವಾಗಿ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ಕೊಂಚ ಇಳಿಕೆಯಾಗಿದೆ. ಎಲ್​ಪಿಜಿ ಬೆಲೆ (LPG) ಏರಿಕೆಯಿಂದ ಕಂಗಾಲಾಗಿದ್ದ ಜನ ದಿನನಿತ್ಯ ಏರುತ್ತಿದ್ದ ಪೆಟ್ರೋಲ್-ಡೀಸೆಲ್ ಬೆಲೆಯಿಂದಾಗಿ ಮತ್ತಷ್ಟು ಸಂಕಷ್ಟಕ್ಕೆ ಒಳಗಾಗಿದ್ದರು. ಈ ಹಿನ್ನೆಲೆ ಜನ ಸಾಮಾನ್ಯರಿಗೆ ತೈಲ ದರದ ಹೊರೆ ಸ್ವಲ್ಪ ಕಡಿಮೆಯಾಗಿದೆ. ಆದರೆ, ಇಂದು ಬೆಂಗಳೂರಿನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಕಂಡಿದೆ. ಉಳಿದ ಹಲವು ಜಿಲ್ಲೆಗಳಲ್ಲಿ ಏರಿಳಿತ ಕಂಡಿದೆ. ಪ್ರಸ್ತುತ ರಾಜಧಾನಿ ಬೆಂಗಳೂರಿನಲ್ಲಿ (Bangalore) ಇಂದು 1 ಲೀಟರ್ ಪೆಟ್ರೋಲ್​ ಅನ್ನು 100.58 ರೂಗೆ ಮಾರಾಟ ಮಾಡುತ್ತಿದ್ದರೆ, ಡೀಸೆಲ್​ ಅನ್ನು 85.01 ರೂ. ಗೆ ಮಾರಾಟ ಮಾಡಲಾಗುತ್ತಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಪೆಟ್ರೋಲ್-ಡೀಸೆಲ್ ಬೆಲೆ ಕುರಿತ ವಿವರ ಇಲ್ಲಿದೆ.

3.PM Security: ಪ್ರಧಾನಿಯ ಭದ್ರತೆ ಉಲ್ಲಂಘನೆ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಮಾಜಿ IPS ಅಧಿಕಾರಿಗಳಿಂದ ರಾಷ್ಟ್ರಪತಿಗಳಿಗೆ ಪತ್ರ

ಪ್ರಧಾನಿ ನರೇಂದ್ರ ಮೋದಿಯವರ (Narendra Modi) ಪಂಜಾಬ್ ಪ್ರವಾಸದ ವೇಳೆ ಭದ್ರತಾ ಲೋಪ ಕಂಡು ಬಂದಿದ್ದು ಈ ಘಟನೆಯ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ (President Ramnath Kovind) ಅವರನ್ನು ಗುರುವಾರ ಮಾಜಿ ಐಪಿಎಸ್ ಅಧಿಕಾರಿಗಳು (Former IPS officers) ಒತ್ತಾಯಿಸಿದರು.ರಾಜ್ಯ ಸರ್ಕಾರವು ಪ್ರತಿಭಟನಾಕಾರರೊಂದಿಗೆ ಸಹಕರಿಸಿ ಉದ್ದೇಶಪೂರ್ವಕವಾಗಿ ಭದ್ರತೆಯನ್ನು ವಿಳಂಬಗೊಳಿಸಿದೆ ಎಂದು ಅವರು ಆರೋಪಿಸಿದ್ದಾರೆ. 27 ಮಾಜಿ ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿಗಳು ಸೇರಿ ಕೋವಿಂದ್ ಅವರಿಗೆ ಬರೆದಿರುವ ಪತ್ರದಲ್ಲಿ ಇದು ಈ ದೇಶದ ಇತಿಹಾಸದಲ್ಲೇ (History) ಅತ್ಯಂತ ಗಂಭೀರವಾದ ಭದ್ರತಾ ಲೋಪವಾಗಿದೆ ಎಂದು ವಿವರಿಸಿದರು.

4.Gold Price Today: ನಿನ್ನೆಗಿಂತ ಹೆಚ್ಚು ಇಳಿಕೆಯಾದ ಚಿನ್ನ: ಆಭರಣ ಪ್ರಿಯರಿಗೆ ಇದು ಸಂತಸದ ಸುದ್ದಿ

Gold Rate on Jan 7, 2022: ದೇಶದಲ್ಲಿಂದು ಚಿನ್ನದ ಬೆಲೆ (Gold Price) ಯಲ್ಲಿ ಇಳಿಕೆಯಾಗಿದೆ. ಬೆಂಗಳೂರಿನಲ್ಲಿ (Bengaluru) ಇಂದು ಬಂಗಾರದ ಬೆಲೆ ಇಳಿಕೆ ಕಂಡಿದೆ. ಭಾರತದಲ್ಲಿ ನಿನ್ನೆ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 46,830 ರೂ. ಇತ್ತು. ಇಂದು 300 ರೂ. ಇಳಿಕೆಯಾಗಿದ್ದು 46,510ರೂ. ಆಗಿದೆ. ಅಂತೆಯೇ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ನಿನ್ನೆ 48,830ರೂ. ಇತ್ತು. ಇಂದು 320 ರೂ. ಕಡಿಮೆಯಾಗಿದ್ದು, 48,510 ರೂ. ಆಗಿದೆ.
Published by:Latha CG
First published: