Morning Digest: ಚಿನ್ನದ ಬೆಲೆಯಲ್ಲಿ ಇಳಿಕೆ, ಪ್ರತಿಯೊಬ್ಬರಿಗೂ ತಗುಲುತ್ತೆ Omicron, ಬೆಂಗಳೂರಿನಲ್ಲಿ ಪವರ್ ಕಟ್, ಬೆಳಗಿನ ಟಾಪ್ ನ್ಯೂಸ್​ಗಳು

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು? ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
1.Karnataka Weather Report: ರಾಜ್ಯದಲ್ಲಿ ಮತ್ತೆ ಹೆಚ್ಚಾದ ಚಳಿ: ನಿಮ್ಮೂರಿನ ಹವಾಮಾನ ವರದಿ ಇಲ್ಲಿದೆ

Karnataka Weather Report: ಉತ್ತರ ಭಾರತದಲ್ಲಿ (North India) ಜೋರು ಮಳೆ(Rain fall)ಯಾಗುತ್ತಿದ್ರೆ, ದಕ್ಷಿಣ ಭಾಗದಲ್ಲಿ ಒಣ ಹವೆ ಮುಂದುವರಿದಿದೆ. ಕಳೆದ ಒಂದು ವಾರದಿಂದ ಇಳಿಕೆಯತ್ತ ಸಾಗಿದ್ದ ಚಳಿ ಪ್ರಮಾಣ (Cold Weather) ಮುಂದಿನ ಎರಡ್ಮೂರು ದಿನ ಕೊಂಚ ಏರಿಕೆಯಾಗುವ ಸಾಧ್ಯತೆಗಳಿವೆ. ಇನ್ನು ಚಳಿಗಾಲದ ನಡುವೆ ಸುರಿಯುತ್ತಿರುವ ಅಕಾಲಿಕ ಮಳೆ (Unseasonal Rains), ಜನ ಜೀವನದ ಮೇಲೆ ವ್ಯತ್ಯರಿಕ್ತ ಪರಿಣಾಮ ಬೀರುತ್ತಿದೆ. ಮಲೆನಾಡು ಮತ್ತು ದಕ್ಷಿಣ ಒಳನಾಡು ಭಾಗಳಲ್ಲಿ ಮಾತ್ರ ಬೆಳಗ್ಗೆ ದಟ್ಟವಾದ ಮಂಜು ಆವರಿಸಿಕೊಂಡ ವಾತಾವರಣ ನಿರ್ಮಾಣವಾಗುತ್ತಿದೆ.ಮಧ್ಯಾಹ್ನ ಆಗುತ್ತಿದ್ದಂತೆ ಬಿಸಿಲು ನೆತ್ತಿ ಸುಡುವಂತಿದೆ.

2.Omicron: ಬೂಸ್ಟರ್ ಡೋಸ್ ತಗೊಂಡ್ರೂ ಬಿಡಲ್ಲ ಈ ಓಮೈಕ್ರಾನ್​, ಎಲ್ಲರನ್ನೂ ಕಾಡುತ್ತೆ ಅಂತಿದ್ದಾರೆ ತಜ್ಞರು

ನವದೆಹಲಿ(ಜ.12): ಕೋವಿಡ್-19ನ ಹೊಸ ರೂಪಾಂತರ ಓಮೈಕ್ರಾನ್(New Variant Omicron) ನಾವಂದುಕೊಂಡ ರೀತಿ ಇಲ್ಲ. ಈ ವೈರಸ್(Virus)​ ಎಲ್ಲರನ್ನೂ ಕಾಡುತ್ತೆ, ಎಲ್ಲರಿಗೂ ಓಮೈಕ್ರಾನ್ ಸೋಂಕು(Omicron virus) ತಗುಲುತ್ತೆ ಎಂಬ ಆತಂಕಕಾರಿ ವಿಷಯವೊಂದು ತಜ್ಞರ(Experts) ಬಾಯಿಂದ ಹೊರ ಬಿದ್ದಿದೆ. ಬೂಸ್ಟರ್ ಡೋಸ್​ ಪಡೆದುಕೊಂಡಿದ್ದರೂಸಹ ಈ ರೂಪಾಂತರಿ ಓಮೈಕ್ರಾನ್​ ನಮ್ಮನ್ನು ಕಾಡದೆ ಬಿಡದು. ಅಂತಿಮವಾಗಿ ಎಲ್ಲರೂ ಸಹ ಈ ಸೋಂಕಿಗೆ ತುತ್ತಾಗುತ್ತಾರೆ ಎಂದು ಉನ್ನತ ಸರ್ಕಾರಿ ತಜ್ಞರೊಬ್ಬರು ಹೇಳಿದ್ದಾರೆ.

3.Gold Price Today: ದೇಶದಲ್ಲಿ ಇಳಿಕೆ ಕಂಡ ಚಿನ್ನದ ಬೆಲೆ: ಇಲ್ಲಿದೆ ಇವತ್ತಿನ ದರ

Gold Rate on Jan 12, 2022: ದೇಶದಲ್ಲಿಂದು ಚಿನ್ನದ ಬೆಲೆ (Gold Price)ಯಲ್ಲಿ ಇಳಿಕೆಯಾಗಿದೆ. ಬೆಂಗಳೂರಿನಲ್ಲಿ (Bengaluru) ಇಂದು ಬಂಗಾರದ ಬೆಲೆ ಏರಿಕೆಯಾಗಿದೆ. ಭಾರತದಲ್ಲಿ ನಿನ್ನೆ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 46,610 ರೂ. ಇತ್ತು. ಇಂದು 20 ರೂ. ಕಡಿಮೆಯಾಗಿ 46,590 ರೂ. ಆಗಿದೆ. ಅಂತೆಯೇ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ನಿನ್ನೆ 48,610 ರೂ. ಇತ್ತು. ಇಂದು 20 ರೂ. ಕಡಿಮೆಯಾಗಿ 48,590 ರೂ. ಆಗಿದೆ.

4.Power Cut: ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ

ಕೊರೋನಾ(Corona) ಮಹಾಮಾರಿಯ ಕಾಟ ಅಧಿಕವಾಗಿದೆ. ಮನೆಯಿಂದ(Home) ಆಚೆ ಬರಲು ಭಯ ಪಡುವ ವಾತಾವಾರಣ ನಿರ್ಮಾಣವಾಗಿದೆ. ಇತ್ತ ಕಚೇರಿಗಳಿಗೆ(Office) ಹೋಗಿ ಕೆಲಸ ಮಾಡುವವರು ಕೊರೋನಾ ಹಾಗೂ ಓಮಿಕ್ರಾನ್(Omicron) ಮಹಾಮಾರಿಯಿಂದ ವರ್ಕ್ ಫ್ರಮ್ ಹೋಮ್(Work From Home) ಕೆಲಸವೇ ಬೆಸ್ಟ್ ಎಂದು ಮನೆಯಲ್ಲಿಯೇ ಕೆಲಸ ನಿರ್ವಹಣೆ ಮಾಡುತ್ತಿದ್ದಾರೆ. ಮಕ್ಕಳು ಸಹ ಶಾಲೆಗೆ ಹೋಗೋದಕ್ಕಿಂತ ಆನ್ ಲೈನ್ ಕ್ಲಾಸ್(Online Class) ಉತ್ತಮ ಎಂದು ಕೊಂಡು ಮನೆಯಲ್ಲಿಯೇ ಆನ್ ಲೈನ್ ಕ್ಲಾಸ್ ಕೇಳಲು ಸಿದ್ದರಾಗಿದ್ದಾರೆ.. ಕೊರೋನಾ ಇರೋದ್ರಿಂದ್ದ ಹೇಗಿದ್ರು ಮನೆಯಿಂದ ಹೊರಗೆ ಹೋಗೋದಕ್ಕೆ ಆಗೋದಿಲ್ಲ ಹೀಗಾಗಿ ಬೆಳಗ್ಗೆ 10 ಗಂಟೆಯೊಳಗೆ ಮನೆ ಕೆಲಸ ಮುಗಿಸಿ ಸೀರಿಯಲ್(Serial) ನೋಡ್ಬೆಕು ಅಂತ ಅಂದುಕೊಂಡು ನಾನಾ ಪ್ಲಾನ್ ಮಾಡಿರೋ ಜನಗಳಿಗೆ ಎಂದಿನಂತೆ ಬೆಸ್ಕಾಂ(Bescom) ಶಾಕ್ ನೀಡಲು ಮುಂದಾಗಿದೆ. ವಿವಿಧ ಪ್ರದೇಶಗಳಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಇರುವುದರಿಂದ ಬೆಂಗಳೂರಿನ(Bengaluru) ನಾಲ್ಕು ಕಡೆಗಳಲ್ಲಿ ಬೆಸ್ಕಾಂ ಇಂದಿನಿಂದ 3 ದಿನಗಳ ಕಾಲ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ(Power Cut) ಮಾಡಲಿದೆ.

5.Petrol And Diesel Price: ಬೆಂಗಳೂರಿನಲ್ಲಿ ಪೆಟ್ರೋಲ್, ಡೀಸೆಲ್ ದರ ಯಥಾಸ್ಥಿತಿ: ನಿಮ್ಮೂರಿನಲ್ಲಿ ಬೆಲೆ ಹೆಚ್ಚಾಗಿದೆಯಾ?

Petrol And Diesel Price Today: ಕೇಂದ್ರ ಹಾಗೂ ರಾಜ್ಯ ಸರ್ಕಾರದ ದೀಪಾವಳಿ ಕೊಡುಗೆಯಾಗಿ ಪೆಟ್ರೋಲ್‌, ಡೀಸೆಲ್‌ ಮೇಲಿನ ಸುಂಕವನ್ನು ಕಡಿತಗೊಳಿಸಿದ್ದವು. ಇದರ ಪರಿಣಾಮವಾಗಿ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ಕೊಂಚ ಇಳಿಕೆಯಾಗಿದೆ. ಎಲ್​ಪಿಜಿ ಬೆಲೆ (LPG) ಏರಿಕೆಯಿಂದ ಕಂಗಾಲಾಗಿದ್ದ ಜನ ದಿನನಿತ್ಯ ಏರುತ್ತಿದ್ದ ಪೆಟ್ರೋಲ್-ಡೀಸೆಲ್ ಬೆಲೆಯಿಂದಾಗಿ ಮತ್ತಷ್ಟು ಸಂಕಷ್ಟಕ್ಕೆ ಒಳಗಾಗಿದ್ದರು. ಈ ಹಿನ್ನೆಲೆ ಜನ ಸಾಮಾನ್ಯರಿಗೆ ತೈಲ ದರದ ಹೊರೆ ಸ್ವಲ್ಪ ಕಡಿಮೆಯಾಗಿದೆ. ಆದರೆ, ಇಂದು ಬೆಂಗಳೂರಿನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಕಂಡಿದೆ. ಉಳಿದ ಹಲವು ಜಿಲ್ಲೆಗಳಲ್ಲಿ ಏರಿಳಿತ ಕಂಡಿದೆ. ಪ್ರಸ್ತುತ ರಾಜಧಾನಿ ಬೆಂಗಳೂರಿನಲ್ಲಿ (Bangalore) ಇಂದು 1 ಲೀಟರ್ ಪೆಟ್ರೋಲ್​ ಅನ್ನು 100.58 ರೂಗೆ ಮಾರಾಟ ಮಾಡುತ್ತಿದ್ದರೆ, ಡೀಸೆಲ್​ ಅನ್ನು 85.01 ರೂ. ಗೆ ಮಾರಾಟ ಮಾಡಲಾಗುತ್ತಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಪೆಟ್ರೋಲ್-ಡೀಸೆಲ್ ಬೆಲೆ ಕುರಿತ ವಿವರ ಇಲ್ಲಿದೆ.
Published by:Latha CG
First published: