Morning Digest: ಹಿರಿಯ ಸಾಹಿತಿ ಚಂಪಾ ನಿಧನ, ಇಂದಿನಿಂದ ಬೂಸ್ಟರ್ ಡೋಸ್ ವಿತರಣೆ; ಬೆಳಗಿನ ಟಾಪ್​ ನ್ಯೂಸ್​​ಗಳು

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು? ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
1.Chandrashekhar Patil: ಕನ್ನಡದ ಹಿರಿಯ ಸಾಹಿತಿ ಚಂಪಾ ಇನ್ನಿಲ್ಲ

Chandrashekhar Patil: ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಡಾ.ಚಂದ್ರಶೇಖರ ಪಾಟೀಲ್ ( ಚಂಪಾ) ಅವರು ಇಂದು ಮುಂಜಾನೆ ವಿಧಿವಶರಾಗಿದ್ದಾರೆ. ಇಂದು ಬೆಳಗ್ಗೆ ಅವರ ನಿವಾಸದಲ್ಲಿ ವಿಧಿವಶರಾಗಿರುವ ಮಾಹಿತಿ ಲಭ್ಯವಾಗಿದೆ. ಚಂಪಾ ಅವರಿಗೆ 83 ವರ್ಷ ವಯಸ್ಸು ಆಗಿತ್ತು. ಚಂದ್ರಶೇಖರ್ ಪಾಟೀಲ್ ಕನ್ನಡ ನಾಡಿನ ಕವಿ, ನಾಟಕಕಾರ, ಸಂಘಟನಕಾರ, ಪತ್ರಿಕಾ ಸಂಪಾದಕ, ಆಡಳಿತಗಾರ, ಕನ್ನಡ ಹೋರಾಟಗಾರ ಹೀಗೆ ಬಹುಮುಖ ವ್ಯಕ್ತಿತ್ವದಿಂದ ಪ್ರಸಿದ್ಧರಾಗಿದ್ದರು.

2.Petrol Price Today: ಈ ಜಿಲ್ಲೆಗಳಲ್ಲಿ ಏರಿಕೆ ಕಂಡ ಪೆಟ್ರೋಲ್​ ಬೆಲೆ, ನಿಮ್ಮ ನಗರದ ಇಂದಿನ ದರ ನೋಡಿ

Petrol and Diesel Price on Jan 8, 2022: ಕೇಂದ್ರ ಹಾಗೂ ರಾಜ್ಯ ಸರ್ಕಾರದ ದೀಪಾವಳಿ ಕೊಡುಗೆಯಾಗಿ ಪೆಟ್ರೋಲ್‌, ಡೀಸೆಲ್(Petrol-Diesel)‌ ಮೇಲಿನ ಸುಂಕವನ್ನು ಕಡಿತಗೊಳಿಸಿದ್ದವು. ಇದರ ಪರಿಣಾಮವಾಗಿ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ಕೊಂಚ ಇಳಿಕೆಯಾಗಿದೆ. ಎಲ್​ಪಿಜಿ ಬೆಲೆ (LPG) ಏರಿಕೆಯಿಂದ ಕಂಗಾಲಾಗಿದ್ದ ಜನ ದಿನನಿತ್ಯ ಏರುತ್ತಿದ್ದ ಪೆಟ್ರೋಲ್-ಡೀಸೆಲ್ ಬೆಲೆಯಿಂದಾಗಿ ಮತ್ತಷ್ಟು ಸಂಕಷ್ಟಕ್ಕೆ ಒಳಗಾಗಿದ್ದರು. ಈ ಹಿನ್ನೆಲೆ ಜನ ಸಾಮಾನ್ಯರಿಗೆ ತೈಲ ದರದ ಹೊರೆ ಸ್ವಲ್ಪ ಕಡಿಮೆಯಾಗಿದೆ. ಆದರೆ, ಇಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಕಂಡಿದೆ. ಉಳಿದ ಹಲವು ಜಿಲ್ಲೆಗಳಲ್ಲಿ ಏರಿಳಿತ ಕಂಡಿದೆ. ಪ್ರಸ್ತುತ ರಾಜಧಾನಿ ಬೆಂಗಳೂರಿನಲ್ಲಿ (Bengaluru) ಇಂದು 1 ಲೀಟರ್ ಪೆಟ್ರೋಲ್​ ಅನ್ನು 100.58 ರೂಗೆ ಮಾರಾಟ ಮಾಡುತ್ತಿದ್ದರೆ, ಡೀಸೆಲ್​ ಅನ್ನು 85.01 ರೂ. ಗೆ ಮಾರಾಟ ಮಾಡಲಾಗುತ್ತಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಪೆಟ್ರೋಲ್-ಡೀಸೆಲ್ ಬೆಲೆ ಕುರಿತ ವಿವರ ಇಲ್ಲಿದೆ.

3.Booster Dose: ಇಂದಿನಿಂದ ದೇಶಾದ್ಯಂತ ಬೂಸ್ಟರ್ ಡೋಸ್​ ವಿತರಣೆ, ಯಾರು ಪಡೆಯಲು ಅರ್ಹರು, ನೋಂದಣಿ ಹೇಗೆ? ಇಲ್ಲಿದೆ ಮಾಹಿತಿ

ನವದೆಹಲಿ(ಜ.10): ದೇಶದಲ್ಲಿ ಕೊರೋನಾ(Corona) ಮತ್ತು ಓಮೈಕ್ರಾನ್(Omicron) ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ, ಇಂದಿನಿಂದ ಮುಂಚೂಣಿ ಮತ್ತು ಆರೋಗ್ಯ ಕಾರ್ಯಕರ್ತರಿಗೆ(Frontline Workers) ಮೂರನೇ ಡೋಸ್(Third Dose) ಲಸಿಕೆ ನೀಡಲಾಗುತ್ತದೆ. ಕೊರೋನಾ ಆತಂಕ ಹೆಚ್ಚಾಗುತ್ತಿರುವ ಹಿನ್ನೆಲೆ, ಪ್ರಧಾನಿ ನರೇಂದ್ರ ಮೋದಿ(PM Narendra Modi) ಶೀಘ್ರದಲ್ಲೇ ಮುನ್ನೆಚ್ಚರಿಕಾ ಮೂರನೇ ಡೋಸ್(Precautionary 3rd Dose) ನೀಡುವುದಾಗಿ ಕಳೆದ ತಿಂಗಳು ಘೋಷಿಸಿದ್ದರು. ಭಾರತದಲ್ಲಿ ಆರೋಗ್ಯ, ಮುಂಚೂಣಿ ಕಾರ್ಯಕರ್ತರು ಮತ್ತು 60 ವರ್ಷ ಹಾಘೂ ಅದಕ್ಕಿಂತ ಮೇಲ್ಪಟ್ಟ ಕೊಮೊರ್ಬಿಡ್ ಜನರಿಗೆ ಕೊರೋನಾ ವೈರಸ್​ ವಿರುದ್ಧ ಮುನ್ನೆಚ್ಚರಿಕಾ ಡೋಸ್​​ನ್ನು ಇಂದಿನಿಂದ ನೀಡಲಾಗುತ್ತದೆ.

4.PM Narendra Modi: ಈ ರಾಜ್ಯಗಳಲ್ಲಿ ವ್ಯಾಕ್ಸಿನ್ ಸರ್ಟಿಫಿಕೇಟ್‌ನಿಂದ ಪ್ರಧಾನಿ ಮೋದಿ ಫೋಟೋ ತೆಗೆಯಲಾಗಿದೆ!

ನವದೆಹಲಿ(ಜ.10): ಕೊರೋನಾ(Corona) ಮತ್ತು ಓಮೈಕ್ರಾನ್(Omicron)​ ಭೀತಿ ನಡುವೆಯೇ ಪಂಚ ರಾಜ್ಯಗಳ ಚುನಾವಣಾ ದಿನಾಂಕ ಘೋಷಣೆಯಾಗಿದೆ. ಫೆಬ್ರವರಿ 10 ರಿಂದ ಮಾರ್ಚ್​ 7ರವರೆಗೆ ಏಳು ಹಂತಗಳಲ್ಲಿ ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್​, ಮಣಿಪುರ ಮತ್ತು ಗೋವಾ ರಾಜ್ಯಗಳಲ್ಲಿ ಚುನಾವಣೆ ನಡೆಯಲಿದೆ ಎಂದು ಭಾರತೀಯ ಚುನಾವಣಾ ಆಯೋಗ(Election Commission) ತಿಳಿಸಿದೆ. ಈ 5 ರಾಜ್ಯಗಳಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಾಗಿರುವುದರಿಂದ ಇಲ್ಲಿ ನೀಡಲಾದ ಕೋವಿಡ್​ ಲಸಿಕೆ ಪ್ರಮಾಣಪತ್ರಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಫೋಟೋ(PM Narendra Modi Photo) ಇರುವುದಿಲ್ಲ ಎಂದು ಅಧಿಕೃತ ಮೂಲಗಳು ತಿಳಿಸಿವೆ.

5.Gold Price Today: ಬೆಲೆ ಇಳಿದಾಗ ವೀಕೆಂಡ್ ಕರ್ಫ್ಯೂ: ಇಂದು ಕೇವಲ 10 ರೂ. ಏರಿಕೆ: ಈ ದರದಲ್ಲಿ ಚಿನ್ನ ತರೋದನ್ನ ಮಿಸ್ ಮಾಡಿಕೊಳ್ಳಬೇಡಿ

Gold Rate on Jan 10, 2022: ದೇಶದಲ್ಲಿಂದು ಚಿನ್ನದ ಬೆಲೆ (Gold Price)ಯಲ್ಲಿ ಅಲ್ಪ ಏರಿಕೆಯಾಗಿದೆ. ಬೆಂಗಳೂರಿನಲ್ಲಿ (Bengaluru) ಸಹ ಇಂದು ಬಂಗಾರದ ಬೆಲೆ ಹೆಚ್ಚಳ ಕಂಡಿದೆ. ಭಾರತದಲ್ಲಿ ನಿನ್ನೆ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 46,600 ರೂ. ಇತ್ತು. ಇಂದು 10 ರೂ. ಏರಿಕೆಯಾಗಿದ್ದು 46,610 ರೂ. ಆಗಿದೆ. ಅಂತೆಯೇ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ನಿನ್ನೆ 48,600 ರೂ. ಇತ್ತು. ಇಂದು 10 ರೂ. ಏರಿಕೆಯಾಗಿದ್ದು, 48,610 ರೂ. ಆಗಿದೆ.

6.Karnataka Weather Report: ಉತ್ತರ ಭಾರತದಲ್ಲಿ ಮಳೆಯ ಅಲರ್ಟ್; ಕರ್ನಾಟಕದಲ್ಲಿ ಮೋಡ ಕವಿದ ವಾತಾವರಣ

Karnataka Weather Report Today: ಮೈಸೂರು ಭಾಗದಲ್ಲಿ ಶುಷ್ಕ ಹಮಾಮಾನದ ಜೊತೆ ಚಳಿ ಸಹ ಇರಲಿದೆ. ಬೆಳಗ್ಗೆ ಬೀಳುವ ಮಂಜು ಬೆಳೆಗಳ ಮೇಲೆ ಪರಿಣಾಮ ಬೀರುತ್ತಿದ್ದು, ಕಡಲೆ, ಜೋಳ ಹಳದಿ ರೋಗಕ್ಕೆ ತುತ್ತಾಗುವ ಆತಂಕ ಎದುರಾಗಿದೆ. ಮತ್ತೊಂದೆಡೆ ಕೊರೋನಾ, ಓಮೈಕ್ರಾನ್ (Corona Virus And Omicron Variant) ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವ ಕಾರಣ ಸಣ್ಣ ನೆಗಡಿಗೂ ಜನರು ಹೆದರುವಂತಾಗಿದೆ. ಕಳೆದ ಎರಡು ದಿನಗಳಿಂದ ಉತ್ತರ ಕರ್ನಾಟಕದ (north Karnataka) ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣದ (Cloudy Weather) ಜೊತೆ ಶೀತ ಗಾಳಿ (Clod Wave) ಆರಂಭಗೊಂಡಿತ್ತು. ರಾಜಧಾನಿ ಬೆಂಗಳೂರಿನಲ್ಲಿ ಗರಿಷ್ಠ 28 ಮತ್ತು ಕನಿಷ್ಠ 17 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ.
Published by:Latha CG
First published: