Morning Digest: ಇಂದು ಹೈಕೋರ್ಟ್​​ನಲ್ಲಿ ಹಿಜಾಬ್​ ಪ್ರಕರಣ ವಿಚಾರಣೆ, ಈ ಮಾರ್ಗದ ರೈಲುಗಳು ರದ್ದು; ಬೆಳಗಿನ ಟಾಪ್​ ನ್ಯೂಸ್

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು? ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
1.Hijab Controversy: ಹೈಕೋರ್ಟ್​ನಲ್ಲಿ ಹಿಜಾಬ್ ಪ್ರಕರಣ ವಿಚಾರಣೆ, ಇಂದೇ ತೀರ್ಪು ಪ್ರಕಟ ಸಾಧ್ಯತೆ

ಬೆಂಗಳೂರು(ಫೆ.09): ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಚರ್ಚೆಯಾಗುತ್ತಿರುವ ಹಿಜಾಬ್​ ವಿವಾದ(Hijab Controversy) ಹೈಕೋರ್ಟ್(High Court)​​ ಮೆಟ್ಟಿಲನ್ನೂ ಸಹ ಏರಿದೆ. ನಿನ್ನೆ ಈ ಸಂಬಂಧ ಹೈಕೋರ್ಟ್​​ನಲ್ಲಿ ವಿಚಾರಣೆ ನಡೆಸಿ, ಇಂದಿಗೆ ಮುಂದೂಡಲಾಗಿತ್ತು. ಇಂದು ನ್ಯಾಯಾಲಯದಲ್ಲಿ ಹಿಜಾಬ್​ ವಿವಾದ ಇತ್ಯರ್ಥವಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಇಂದು ಹಿಜಾಬ್​ ಪ್ರಕರಣ ಸಂಬಂಧ ಹೈಕೋರ್ಟ್​​ನಿಂದ ಮಹತ್ವದ ತೀರ್ಪು ಹೊರಬೀಳುವ ಸಾಧ್ಯತೆ ಇದೆ. ಹಿಜಾಬ್​ ಪ್ರಕರಣದ ವಿಚಾರಣೆಯನ್ನು(Hearing) ಇಂದು ಮಧ್ಯಾಹ್ನ 2.30ಕ್ಕೆ ಮುಂದೂಡಲಾಗಿದೆ.

2.Power cut: ಬೆಂಗಳೂರಿಗೆ ಬೆಸ್ಕಾಂ ಶಾಕ್.. ಈ ಪ್ರದೇಶಗಳಲ್ಲಿ ಇಂದು, ನಾಳೆ ವಿದ್ಯುತ್ ಕಡಿತ

ಬೆಂಗಳೂರಿನಲ್ಲಿ ಇಂದು (ಫೆ.09) ಮತ್ತು ನಾಳೆ (ಫೆ. 10) ರಂದು ಯಾವೆಲ್ಲಾ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂಬುದು ಈ ಕೆಳಗಿನಂತಿದೆ. ಇನ್ನು ಇಂದು ( ಫೆ.09) ರಂದು ಬೆಂಗಳೂರಿನ ಜಯನಗರದ ದಕ್ಷಿಣ ವಲಯ, ಉತ್ತರ ವಲಯ, ಪೂರ್ವ ಮತ್ತು ಪಶ್ಚಿಮ ವಲಯಗಳ ಈ ಕೆಳಗಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

3.South Western Railway: ಪ್ರಯಾಣಿಕರೇ ಗಮನಿಸಿ- ಇಂದಿನಿಂದ ಈ ಮಾರ್ಗದ ರೈಲು ಸಂಚಾರದಲ್ಲಿ ವ್ಯತ್ಯಯ

ನೈಋತ್ಯ ರೈಲ್ವೆಯ ( South Western Railway ) ಕೆಲ ರೈಲುಗಳ(Train) ಸಂಚಾರದಲ್ಲಿ ಮರು ಸಂಚಾರ, ರದ್ದು(Cancel ), ಮಾರ್ಗ ಬದಲಾವಣೆ ಮಾಡಿರೋದಾಗಿ ತಿಳಿಸಿದೆ. ಈ ಮೂಲಕ ಪ್ರಯಾಣಿಕರಿಗೆ (Passengers) ಅನುಕೂಲವಾದಂತ ಬಹುಮುಖ್ಯ ಮಾಹಿತಿಯನ್ನು (Information)ಬಿಡುಗಡೆ ಮಾಡಿದೆ ಹಲವು ಕೆಲಸಕ್ಕೆ ಸಂಬಂಧಿತ (ಥಿಕ್‌ ವೆಬ್‌ ಸ್ವಿಚ್‌ಗಳ) ಕಾಮಗಾರಿ ಸಲುವಾಗಿ ಲೈನ್‌ ಬ್ಲಾಕ್‌(Line black)ಇರುವ ನಿಮಿತ್ತ ರೈಲುಗಳ ಸೇವೆಯಲ್ಲಿ ಬದಲಾವಣೆ ಆಗಲಿದೆ.

4.UP Assembly Elections: ಇಂದು ಉತ್ತರ ಪ್ರದೇಶ ಚುನಾವಣೆಗೆ ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ

ನವದೆಹಲಿ(ಫೆ. 9): ಉತ್ತರ ಪ್ರದೇಶದ ಮೊದಲ ಹಂತದ ಮತದಾನ ಹತ್ತಿರವಾಗುತ್ತಿದ್ದಂತೆ ರಾಜಕೀಯ ಚಟುವಟಿಕೆಗಳು‌ ಚುರುಕುಗೊಂಡಿವೆ. ಕೊರೋನಾ (Corona) ಮತ್ತು ಓಮೈಕ್ರಾನ್ (Omicron) ಹಿನ್ನೆಲೆಯಲ್ಲಿ ಫೆಬ್ರವರಿ 11ರವರೆಗೆ ಬಹಿರಂಗವಾಗಿ ಸಭೆ, ಸಮಾರಂಭ, ಬೈಕ್ ಶೋ ಹಾಗೂ ರ್‍ಯಾಲಿಗಳನ್ನು ನಡೆಸುವಂತಿಲ್ಲ ಎಂದು ಕೇಂದ್ರ ಚುನಾವಣಾ ಆಯೋಗ (Central Election Commission) ನಿರ್ಬಂಧ ವಿಧಿಸಿರುವುದರಿಂದ ರಾಜಕೀಯ ಪಕ್ಷಗಳ ನಾಯಕರು (Political Party Leaders) ಈಗ ಮನೆ ಮನೆಗೆ ತೆರಳಿ ಮತದಾರರ (Voters) ಮನವೊಲಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಇದಲ್ಲದೆ ಈಗ ರಾಜಕೀಯ ಪಕ್ಷಗಳು ಚುನಾವಣಾ ಪ್ರಣಾಳಿಕೆಯನ್ನೂ (Elections Manifesto) ಬಿಡುಗಡೆ ಮಾಡಲು‌ ಸಜ್ಜಾಗಿವೆ. ನಿನ್ನೆ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿತ್ತು. ಇಂದು ಉತ್ತರ ಪ್ರದೇಶ ಕಾಂಗ್ರೆಸ್ ಉಸ್ತುವಾರಿಯೂ ಆದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ‌ (Utter Pradesh Congress In Charge and AICC General Secretary Priyanka Gandhi) ಅವರು ಕಾಂಗ್ರೆಸ್ ಪಕ್ಷದ (Congress Party) ಪ್ರಣಾಳಿಕೆ ಬಿಡುಗಡೆ ಮಾಡಲಿದ್ದಾರೆ.

5.Karnataka Weather Today: ರಾಜ್ಯಾದ್ಯಂತ ಮುಂದುವರೆದ ಬೇಸಿಗೆ, ರಾತ್ರಿಯಲ್ಲಿ ಚಳಿಯಾಗೋ ಸಾಧ್ಯತೆ

Karnataka Weather Today 9th Feb 2022: ರಾಜ್ಯದಲ್ಲಿ ಬೇಸಿಗೆ (Summer) ಆರಂಭವಾಗಿದ್ದು, ಇಂದು ಸಹ ಸೂರ್ಯನ ಪ್ರಖರತೆ ನೆತ್ತಿ ಸುಡಲಿದೆ. ಬೆಂಗಳೂರಿನಲ್ಲಿ (Bengaluru) ಇಂದು ಬಿಸಿಲು (Heat) ಹೆಚ್ಚಾಗಲಿದೆ. ಬಳಿಕ ರಾತ್ರಿಯ ನಂತರ ಚಳಿ (Cold) ಶುರುವಾಗುವ ಸಾಧ್ಯತೆ ಇದೆ ಅಂತ ಹವಾಮಾನ ಇಲಾಖೆ ತಿಳಿಸಿದೆ. ಪಶ್ಚಿಮ ಹಿಮಾಲಯ ಪ್ರದೇಶ (Himayala) ಮತ್ತು ವಾಯುವ್ಯ ಭಾರತದ ಬಯಲು ಪ್ರದೇಶಗಳು ಸೇರಿ ಕೆಲವಡೆ ಮಳೆಯಾಗಲಿದೆ (Rain). ಇನ್ನೆರಡು ದಿನ ಹಿಮಾಚಲ ಪ್ರದೇಶ, ಉತ್ತರಾಖಂಡ, ಪಂಜಾಬ್, ಹರಿಯಾಣ, ಉತ್ತರ ಪ್ರದೇಶ, ರಾಜಸ್ಥಾನ, ಪಶ್ಚಿಮ ಬಂಗಾಳ, ಸಿಕ್ಕಿಂ, ಜಾರ್ಖಂಡ್, ಬಿಹಾರ, ಒಡಿಶಾಗಳಲ್ಲಿ ಮಳೆಯಾಗೋ ಸಾಧ್ಯತೆ ಇದೆ. ಇನ್ನುಳಿದಂತೆ ಕೇಂದ್ರಾಡಳಿತ ಪ್ರದೇಶಗಳಾದ ಜಮ್ಮು ಮತ್ತು ಕಾಶ್ಮೀರ, ಲಡಾಖ್, ದೆಹಲಿ ಮತ್ತು ಚಂಡೀಗಢ ಸೇರಿ 15 ರಾಜ್ಯಗಳಲ್ಲಿ ಮಳೆಯಾಗಲಿದೆ ಅಂತ ಹವಾಮಾನ ಇಲಾಖೆ (IMD) ತಿಳಿಸಿದೆ.
Published by:Latha CG
First published: