• Home
  • »
  • News
  • »
  • state
  • »
  • Morning Digest: ಖ್ಯಾತ ಗಾಯಕ ಬಪ್ಪಿ ಲಹಿರಿ ನಿಧನ, ಇಂದಿನಿಂದ ಕಾಲೇಜುಗಳು ಆರಂಭ, ಅಪಘಾತದಲ್ಲಿ 4 ವಿದ್ಯಾರ್ಥಿಗಳ ಸಾವು; ಬೆಳಗಿನ ಟಾಪ್ ನ್ಯೂಸ್

Morning Digest: ಖ್ಯಾತ ಗಾಯಕ ಬಪ್ಪಿ ಲಹಿರಿ ನಿಧನ, ಇಂದಿನಿಂದ ಕಾಲೇಜುಗಳು ಆರಂಭ, ಅಪಘಾತದಲ್ಲಿ 4 ವಿದ್ಯಾರ್ಥಿಗಳ ಸಾವು; ಬೆಳಗಿನ ಟಾಪ್ ನ್ಯೂಸ್

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು? ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

  • Share this:

1. Bappi Lahiri: ಮಧುರ ಕಂಠದ ಮ್ಯೂಸಿಕ್ ಮಾಂತ್ರಿಕ ಇನ್ನಿಲ್ಲ, ಗಾನ 'ಲಹಿರಿ' ಇನ್ನು ನೆನಪಷ್ಟೇ


69 ವರ್ಷದ ಖ್ಯಾತ ಗಾಯಕ ಬಪ್ಪಿ ಲಹಿರಿ ಇಂದು ಮುಂಬೈನ ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನರಾಗಿದ್ದಾರೆ ಅಂತ ಅವರ ಕುಟುಂಬದ ಮೂಲಗಳು ದೃಢಪಡಿಸಿವೆ. ಹಲವು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಬಪ್ಪಿ ಲಹಿರಿ, ಇಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ. ಬಪ್ಪಿ ಲಾಹಿರಿ ಅವರು ಒಂದು ತಿಂಗಳ ಕಾಲ ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಪಡೆಯುತ್ತಲೇ ಇದ್ದರು. ಆರೋಗ್ಯದಲ್ಲಿ ಕೊಂಚ ಸುಧಾರಿಸಿದ ತಕ್ಷಣ ಮೊನ್ನೆ ಸೋಮವಾರವಷ್ಟೇ ಡಿಸ್ಚಾರ್ಜ್ ಆಗಿದ್ದರು. ಆದರೆ ನಿನ್ನೆ ಮಂಗಳವಾರ ಅವರ ಆರೋಗ್ಯ ಮತ್ತೆ ಹದಗೆಟ್ಟಿತ್ತು. ಹೀಗಾಗಿ ನಿನ್ನೆ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಇಂದು ಚಿಕಿತ್ಸೆ ಫಲಿಸದೇ ಅವರು ನಮ್ಮನ್ನೆಲ್ಲ ಅಗಲಿದ್ದಾರೆ.


2.Accident: ಬೆಳ್ಳಂಬೆಳಗ್ಗೆ ಜವರಾಯನ ಅಟ್ಟಹಾಸ, ಭೀಕರ ಕಾರು ಅಪಘಾತದಲ್ಲಿ ನಾಲ್ವರು ವಿದ್ಯಾರ್ಥಿಗಳ ಸಾವು


ಬೆಳ್ಳಂಬೆಳಗ್ಗೆ ಜವರಾಯ ಅಟ್ಟಹಾಸ ಮೆರೆದಿದ್ದು, ಅತಿವೇಗದಿಂದ (Over speed)ಚಲಿಸುತ್ತಿದ್ದ ಕಾರು(Car) ಡಿವೈಡರ್(Divider) ಡಿಕ್ಕಿಯಾಗಿ ಲಾರಿಗೆ (Lorry) ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸ್ಥಳದಲ್ಲೇ ಮೃತಪಟ್ಟಿರುವ (Spot death)ಭೀಕರ ಘಟನೆ ನಡೆದಿದೆ.. ಬೆಂಗಳೂರು ಗ್ರಾಮಾಂತರ(Bengaluru Rural)ಜಿಲ್ಲೆಯ ಹೊಸಕೋಟೆ(Hosakote)ತಾಲೂಕಿನ ರಾಷ್ಟ್ರೀಯ ಹೆದ್ದಾರಿ 75ರ (National Highway 75)ಕೋಲಾರ ರಸ್ತೆ (Kolar Road)ಹಾಗೂ ಅಟ್ಟೂರು ಗೇಟ್ (Atturu gate)ಬಳಿ ನಡೆದಿದೆ..ಈ ಭೀಕರ ಅಪಘಾತದಲ್ಲಿ (Accident )ಮೂರು ಜನ ಯುವಕರು ಹಾಗೂ ಓರ್ವ ಯುವತಿ ಸ್ಥಳದಲ್ಲೇ ಮೃತಪಟ್ಟಿದ್ದು(Death) ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ(Injury).. ಮೃತಪಟ್ಟವರನ್ನ ವೈಷ್ಣವಿ(Vaishnavi) ಭರತ್(Bharath)ಸೀರಿಲ್ (Siril)ವೆಂಕಟ್ (Venkat)ಎಂದು ಗುರುತಿಸಲಾಗಿದೆ.


3.Cricket: ಭಾರತ-ಶ್ರೀಲಂಕಾ ನಡುವಿನ ಪಂದ್ಯದ ಪರಿಷ್ಕೃತ ವೇಳಾಪಟ್ಟಿ ಪ್ರಕಟ; ಬೆಂಗಳೂರಿನಲ್ಲಿ ಡೇ-ನೈಟ್ ಟೆಸ್ಟ್ ಪಂದ್ಯ


ಭಾರತ ಹಾಗೂ ವೆಸ್ಟ್ ಇಂಡೀಸ್(India Vs West indies) ನಡುವಿನ ಸೀಮಿತ ಓವರ್‌ಗಳ ಸರಣಿ ಅಂತ್ಯವಾದ ಬಳಿಕ ಭಾರತ ಹಾಗೂ ಶ್ರೀಲಂಕಾ ( India Vs Sri Lanka) ಮಧ್ಯೆ ಸರಣಿ ಆರಂಭವಾಗಲಿದೆ.. ಹೀಗಾಗಿ ಮುಂಬರುವ ಭಾರತ ಪ್ರವಾಸದ(India vs Sri Lanka series) ವೇಳಾಪಟ್ಟಿಯಲ್ಲಿ(schedule) ಬದಲಾವಣೆ ಮಾಡಲಾಗಿದ್ದು, ಪರಿಷ್ಕೃತ ವೇಳಾಪಟ್ಟಿಯನ್ನ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(BCCI) ಪ್ರಕಟಿಸಿದೆ. ಅದರಂತೆ ಭಾರತ ಮತ್ತು ಶ್ರೀಲಂಕಾ ನಡುವಿನ ಟಿ20 ಮೊದಲು ನಡೆಯಲಿದೆ. ಆ ಬಳಿಕ ಟೆಸ್ಟ್ ಪಂದ್ಯಗಳನ್ನು ಆಡಲಾಗುತ್ತದೆ. ಈ ಮೊದಲು ಟೆಸ್ಟ್ ಸರಣಿ ಬಳಿಕ ಟಿ20 ಸರಣಿ ನಡೆಸಲು ನಿರ್ಧರಿಸಲಾಗಿತ್ತು. ಇದೀಗ ಫೆಬ್ರವರಿ 24 ರಿಂದ ಟಿ20 ಸರಣಿಯನ್ನು ಆರಂಭಿಸಲು ತೀರ್ಮಾನಿಸಲಾಗಿದೆ. ಇನ್ನು ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಭಾಗವಾಗಿರುವ ಎರಡು ಪಂದ್ಯಗಳ ಟೆಸ್ಟ್ ಸರಣಿ ಆಡಲಿದೆ.. ವಿಶೇಷ ಅಂದ್ರೆ ಭಾರತ ತಂಡ ಒಂದು ವರ್ಷದ ನಂತರ ಮತ್ತೆ ಡೇ-ನೈಟ್ ಟೆಸ್ಟ್ ಪಂದ್ಯವನ್ನು ಆಡಲಿದೆ.


4.Hijab Row: ಇಂದಿನಿಂದ ಪಿಯು-ಡಿಗ್ರಿ ಕಾಲೇಜುಗಳು ಆರಂಭ, ಎಲ್ಲೆಡೆ ಕಟ್ಟೆಚ್ಚರ-144 ಸೆಕ್ಷನ್ ಜಾರಿ


ಒಂದೆಡೆ ಇವತ್ತಿನಿಂದ ಪಿಯು ಡಿಗ್ರಿ ಕಾಲೇಜುಗಳು ಪ್ರಾರಂಭವಾಗಲಿವೆ, ಇನ್ನೊಂದೆಡೆ ಹೈಕೋರ್ಟ್​​ನಲ್ಲಿಂದು ಹಿಜಾಬ್​​ ವಿವಾದದ ವಿಚಾರಣೆ ನಡೆಯಲಿದೆ. ಹಿಜಾಬ್ ವಿಚಾರವಾಗಿ ರಾಜಧಾನಿಯಲ್ಲಿ ಪೊಲೀಸರು ಮುನ್ನೆಚ್ಚರಿಕೆ ವಹಿಸಿದ್ದಾರೆ. ಶಾಲಾ-ಕಾಲೇಜುಗಳ ಸುತ್ತ 200 ಮೀಟರ್ 144 ಸೆಕ್ಷನ್ ಜಾರಿಗೊಳಿಸಿದ್ದಾರೆ. ಸೂಕ್ಷ್ಮ ಪ್ರದೇಶದಲ್ಲಿನ ಕಾಲೇಜುಗಳ ಬಳಿ ಹೆಚ್ಚಿನ ಪೊಲೀಸರು ಗಸ್ತು ತಿರುಗುತ್ತಿದ್ದಾರೆ. ಯಾವುದೇ ಪ್ರತಿಭಟನೆಗಳಿಗೆ ಆಸ್ಪದ ನೀಡದಂತೆ ಎಚ್ಚರಿಕೆ ವಹಿಸಲು ಕಮಿಷನರ್ ಸೂಚನೆ ನೀಡಿದ್ದಾರೆ.


5.Fraud Case: 892 ಕೋಟಿ ರೂ. ಹಗರಣದಲ್ಲಿ ಶ್ರೀ ಗುರುರಾಘವೇಂದ್ರ ಸೊಸೈಟಿ ಅಧ್ಯಕ್ಷ ಅರೆಸ್ಟ್, ಮುಂದೇನು?


ಬೆಂಗಳೂರು: ನಕಲಿ ದಾಖಲೆ (Fake Documents) ಸೃಷ್ಟಿಸಿ, ಗ್ರಾಹಕರಿಗೆ, ಠೇವಣಿದಾರರಿಗೆ (Depositors) ಮೋಸ ಮಾಡಿದ್ದ ಕೋ-ಆಪರೇಟಿವ್ ಸೊಸೈಟಿಗೆ (Co-Operative Society) ಮತ್ತೊಂದು ಆಘಾತ ಎದುರಾಗಿದೆ. ಸಹಕಾರ ಸಂಘದ ಅಧ್ಯಕ್ಷರನ್ನೇ ಇಡಿ (ED) ಅಧಿಕಾರಿಗಳು ಬಂಧಿಸಿದ್ದಾರೆ. ಹೌದು, ಬೆಂಗಳೂರಿನ ಶ್ರೀ ಗುರು ರಾಘವೇಂದ್ರ ಕೋ-ಆಪರೇಟಿವ್ ಸೊಸೈಟಿ (Sri Guru Raghavendra Co-Operative Society) ಅಧ್ಯಕ್ಷನಾಗಿದ್ದ ಕೆ.ರಾಮಕೃಷ್ಣ ಅವರನ್ನು ನಿನ್ನೆ ಜಾರಿ ನಿರ್ದೇಶನನಾಲಯದ ಅಧಿಕಾರಿಗಳು ಬಂಧಿಸಿದ್ದಾರೆ.

Published by:Latha CG
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು