Morning Digest: ಮತ್ತೆ ಏರಿಕೆಯಾದ ಚಿನ್ನದ ಬೆಲೆ, ಬೆಂಗಳೂರಿನ ಈ ಏರಿಯಾಗಳಲ್ಲಿ ಪವರ್ ಕಟ್, ಬೆಳಗಿನ ಟಾಪ್ ನ್ಯೂಸ್​

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು? ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
1.Karnataka Weather Today: ಬೆಳಗ್ಗೆ 10 ಗಂಟೆ ನಂತ್ರ ಬೇಸಿಗೆಯ ಬಿಸಿಲು ಆರಂಭ; ಇಲ್ಲಿದೆ ನಿಮ್ಮೂರಿನ ಹವಾಮಾನ ವರದಿ  

Karnataka Weather Today Feb 11, 2022: ರಾಜ್ಯದಲ್ಲಿಯ ಗರಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುತ್ತಿದೆ. ಮತ್ತೊಂದು ಕಡೆ ಚಳಿ (Winter) ಪ್ರಮಾಣ ಇಳಿಕೆಯಾಗುತ್ತಿದ್ದು, ಬಿಸಿಲು ಹೆಚ್ಚಾಗುತ್ತಿದೆ. ಆದ್ರೂ ಕೋಲಾರ, ಚಿಕ್ಕಬಳ್ಳಾಪುರ, ಕೊಡಗು ಭಾಗದಲ್ಲಿ ಚಳಿ 16 ಡಿಗ್ರಿ ಸೆಲ್ಸಿಯಸ್ ನಷ್ಟು ಇರಲಿದೆ. ಇನ್ನೂ ಕರಾವಳಿ ಮತ್ತು ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಗರಿಷ್ಠ 33 ಡಿಗ್ರಿ ಸೆಲ್ಸಿಯಸ್ ವರೆಗೆ ದಾಖಲಾಗುತ್ತಿದೆ. ಇನ್ನೂ ಮಲೆನಾಡು, ದಕ್ಷಿಣ ಒಳನಾಡು ಭಾಗದಲ್ಲಿ ಸಣ್ಣ ಚಳಿ ಇರಲಿದೆ. ಉತ್ತರ ಕರ್ನಾಟಕ (North Karnataka) ಭಾಗಗಳಲ್ಲಿ ಪೂರ್ಣ ಒಣ ಹವೆ ಇರಲಿದ್ದು, ಬೆಳಗ್ಗೆ 10 ಗಂಟೆಯ ನಂತರ ಬಿಸಿಲಿನ ಪ್ರಮಾಣ ಹೆಚ್ಚಾಗುತ್ತಿದೆ. ರಾತ್ರಿಯ ವೇಳೆ ಸಣ್ಣ ಪ್ರಮಾಣದ ಚಳಿ ಬಿಸಿಲಿನಿಂದ ಬಳಲಿದ ಜನತೆಗೆ ತಂಪಾದ ಹಿತವನ್ನು ನೀಡುತ್ತಿದೆ

2. ಅಬ್ಬಾ ಬೆಂಗಳೂರಲ್ಲಿ ಇವತ್ತೂ Power Cut ಆಗುತ್ತೆ.. ಯಾವ ಯಾವ ಏರಿಯಾಗಳಲ್ಲಿ ಅಂತ ಇಲ್ಲಿದೆ ಡಿಟೈಲ್ಸ್​​

ಫೆಬ್ರವರಿ 11 ಮತ್ತು ಫೆಬ್ರವರಿ 12 ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್ ಕಡಿತ ಆಗಲಿದೆ. ಬೆಂಗಳೂರಿನ ಜಯನಗರದ ದಕ್ಷಿಣ ವಲಯ, ಉತ್ತರ ವಲಯ, ಪೂರ್ವ ಮತ್ತು ಪಶ್ಚಿಮ ವಲಯಗಳ ಈ ಕೆಳಗಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಇಂದು (ಫೆ.11) ವಿದ್ಯುತ್ ವ್ಯತ್ಯಯ ಉಂಟಾಗಲಿರುವ ಪ್ರದೇಶಗಳು: ದಕ್ಷಿಣ ವಲಯ: ಬೆಳಗ್ಗೆ 10 ರಿಂದ ಸಂಜೆ 7 ಗಂಟೆಯವರೆಗೆ ನಂಜಪ್ಪ ರಸ್ತೆ, ಪಾಪಯ್ಯ ಮಾವಲಿ, ಬಿಕಿಸಿಪುರ, ಮಾವು ಗಾರ್ಡನ್, ಪ್ರತಿಮಾ ಇಂಡಸ್ಟ್ರಿಯಲ್ ಲೇಔಟ್, ಕಾಶಿ ನಗರ ಕೆರೆ, ಇಸ್ರೋ ಲೇಔಟ್, ವಸಂತ ವಲ್ಲಬ ನಗರ, ಶಾರದ ನಗರ, ಮಾರುತಿ ಲೇಔಟ್, ಸಿದ್ದಾಪುರ, 2ನೇ ಬ್ಲಾಕ್, 18ನೇ ಕ್ರಾಸ್, 8ನೇ ಕ್ರಾಸ್, 6ನೇ ಕ್ರಾಸ್, 1ನೇ ಬ್ಲಾಕ್ ಮಾ. , 3 ನೇ ಬ್ಲಾಕ್, 18 ನೇ ಕ್ರಾಸ್, 7 ನೇ ಕ್ರಾಸ್, ಸೋಮೇಶ್ವರನಗರ, ಲಕ್ಷ್ಮೀಕಾಂತ ಪಾರ್ಕ್

3.ಕರ್ನಾಟಕ ಮಾತ್ರವಲ್ಲ, ಪುದುಚೇರಿ ಮಧ್ಯಪ್ರದೇಶದಲ್ಲೂ ಬಿರುಗಾಳಿ ಎಬ್ಬಿಸಿದ Hijab Row

ಹಿಜಾಬ್ (Hijab) ಧರಿಸುವುದರ ಕುರಿತು ಶುರುವಾದ ವಿವಾದ ಕರ್ನಾಟಕದ ಗಡಿಯನ್ನು ದಾಟಿ, ಬಿಜೆಪಿ ಆಡಳಿತಾರೂಢ (BJP Ruled State) ರಾಜ್ಯಗಳಾದ ಪುದುಚೇರಿ (Puducherry), ಮಧ್ಯಪ್ರದೇಶಗಳಲ್ಲೂ (Madhya Pradesh) ಬಿರುಗಾಳಿ ಎಬ್ಬಿಸಿದೆ. ಶಾಲೆಗಳಲ್ಲಿನ ಸಮವಸ್ತ್ರ ಕುರಿತು ಮಧ್ಯಪ್ರದೇಶದ ಸಚಿವರೊಬ್ಬರು 'ಶಿಸ್ತು' ಪರವಾಗಿ ಹೇಳಿಕೆ ನೀಡಿದ್ದರೆ, 'ಸಮವಸ್ತ್ರ ಸಂಹಿತೆ' ಪರವಾಗಿ ಪುದುಚೇರಿ ದನಿ ಎತ್ತಿದೆ. ಅರಿಯಂಕುಪ್ಪಂ ಶಾಲೆಯೊಂದರಲ್ಲಿ ವಿದ್ಯಾರ್ಥಿಯೊಬ್ಬರು ಹಿಜಾವ್​​ ಧರಿಸಿರುವುದಕ್ಕೆ ಶಿಕ್ಷಕಿಯೊಬ್ಬರು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂಬ ಆರೋಪದ ಕುರಿತು ತನಿಖೆ ನಡೆಸುವಂತೆ ಸರ್ಕಾರಿ ಶಾಲಾ ಮುಖ್ಯಸ್ಥರಿಗೆ ಪ್ರಾಧಿಕಾರಗಳು ಸೂಚಿಸಿವೆ.

4.HDK ಭಾಗವಹಿಸಿದ್ದ ವೇದಿಕೆ ಮೇಲೆ HD Revanna ಫುಲ್ ಕಾಮಿಡಿ

ಹಾಸನ  ಜಿಲ್ಲೆ ಅರಸೀಕೆರೆ ತಾಲೂಕಿನ ನಾಗರಹಳ್ಳಿ ದೇವಾಲಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಹೆಚ್.ಡಿ.ರೇವಣ್ಣ (Former Minister HD Revanna) ಅವರು ನಗೆ ಚಟಾಕಿ ಹಾರಿಸುವ ಮೂಲಕ ಎಲ್ಲರನ್ನು ನಗೆಗಡಿಲಿನಲ್ಲಿ ತೇಲಿಸಿದರು. ರೇವಣ್ಣ ಅವರು ಅಂದರೆ ಕೈಯಲ್ಲಿ ನಿಂಬೆಹಣ್ಣು (Lemon) ಇರುತ್ತೆ. ಅದು ಅವರ ನಂಬಿಕೆ. ಹೆಚ್.ಡಿ.ರೇವಣ್ಣ ಅವರ ಕೈಯಲ್ಲಿರುವ ನಿಂಬೆ ಹಣ್ಣಿನ ಬಗ್ಗೆ ಹಲವರು ಹಾಸ್ಯ ಮಾಡುತ್ತಿರುತ್ತಾರೆ. ಆದರೂ ರೇವಣ್ಣ ಅವರು ಎಲ್ಲವನ್ನೂ ನಗುತ್ತಲೇ ಸ್ವೀಕರಿಸಿ ತಿರುಗೇಟು ಸಹ ನೀಡುತ್ತಿರುತ್ತಾರೆ. ಗುರುವಾರ ನಡೆದ ಕಾರ್ಯಕ್ರಮದಲ್ಲಿ ರೇವಣ್ಣ ಅವರು ಜನರತ್ತ ಮೂರು ನಿಂಬೆಹಣ್ಣು ಎಸೆದರು.  ಈ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ (Former CM HD Kumaraswamy) ಅವರು ಸಹ ಉಪಸ್ಥಿತರಿದ್ದರು.
Published by:Latha CG
First published: