Morning Digest: ಇಂದಿನಿಂದ ಬೆಂಗಳೂರಿನಲ್ಲಿ ಮಳೆಯ ಆರ್ಭಟ-ಕಡಿಮೆ ಆಯ್ತು ಚಿನ್ನದ ಬೆಲೆ: ಬೆಳಗಿನ ಟಾಪ್ ನ್ಯೂಸ್​ಗಳು

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು? ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:

  1. Karnataka Weather Report: ಇಂದಿನಿಂದ 2 ದಿನ ಬೆಂಗ್ಳೂರು ಸೇರಿ ಕೆಲ ಜಿಲ್ಲೆಗಳಲ್ಲಿ ಮಳೆ ಗುರೂ.. ಸ್ವಲ್ಪ ಹುಷಾರು..!


ಕಳೆದ ಒಂದು ವಾರದಿಂದ ರಾಜ್ಯದಲ್ಲಿ (Karnataka) ಮೋಡ ಕವಿದ ವಾತಾವರಣ ನಿರ್ಮಾಣ(Cloudy Weather)ವಾಗಿದ್ದು, ಇಂದು ಸಹ ಅದೇ ವಾತಾವರಣ ಮುಂದುವರಿಯಲಿದೆ.  ಇತ್ತ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ತುಂತುರು ಮಳೆ(Rainfall)ಯಾಗುವ ಸಾಧ್ಯತೆಗಳಿವೆ. ಉತ್ತರ ಕರ್ನಾಟಕ ಜಿಲ್ಲೆಗಳಾದ ಬೀದರ್, ಕಲಬುರಗಿ, ವಿಜಯಪುರ, ಬಾಗಲಕೋಟೆ ಭಾಗಗಳಲ್ಲಿ ಚಳಿಯ (Cold Weather) ಪ್ರಮಾಣ ಹೆಚ್ಚಾಗುತ್ತಿದೆ. ಮಧ್ಯಾಹ್ನದ ವೇಳೆಗೆ ಎಂದಿನಂತೆ ಪ್ರಖರತೆಯಿಂದ ಬಿಸಿಲು ಇರಲಿದೆ. ಇನ್ನು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ಮೋಡ ಕವಿದ ವಾತವರಣ ಇರಲಿದೆ. ಇಂದು ಗರಿಷ್ಠ  27, ಕನಿಷ್ಠ  18 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ. ಕೆಲ ಭಾಗಗಳಲ್ಲಿ ಸಣ್ಣ ಪ್ರಮಾಣದಲ್ಲಿ ಮಳೆ(Bengaluru Rain)ಯಾಗುವ ಸಾಧ್ಯತೆಗಳಿವೆ. ಇಂದಿನಿಂದ ಎರಡು ದಿನಗಳ ಕಾಲ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ.  ಬೆಂಗಳೂರಿನ ಹಲವೆಡೆ ಮಳೆಯಾಗುವ ಸಾಧ್ಯತೆ ಹೆಚ್ಚಿದೆ.

 2. Power Cut: ಬೆಂಗಳೂರಿಗರಿಗೆ ವೀಕೆಂಡ್ ಶಾಕ್, ಡಿ.4ರಿಂದ ಡಿ. 6ರವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ

ವೀಕೆಂಡ್ ನಲ್ಲಿ(Weekend) ಮನೆಯಲ್ಲಿ(Home) ಕುಳಿತು ನೆಮ್ಮದಿಯಾಗಿ ಟಿವಿ(TV) ನೋಡ್ತಾ ಕಾಲಕಳೆಯಬೇಕು ಅಂತ ಇದ್ದ ಬೆಂಗಳೂರಿನ(Bengaluru) ಜನರಿಗೆ ಬೆಸ್ಕಾಂ (Bescom) ಶಾಕ್(Shock) ನೀಡಿದೆ. ಹೌದು ಹಲವಾರು ಪ್ರದೇಶಗಳಲ್ಲಿ ವಿದ್ಯುತ್ ನಿರ್ವಹಣಾ ಕಾರ್ಯ ಇರುವುದರಿಂದ 3 ದಿನಗಳ ಕಾಲ  ಬೆಂಗಳೂರಿನ ಹಲವು ಏರಿಯಾಗಳಲ್ಲಿ ವಿದ್ಯುತ್ ಸರಬರಾಜು(Power Cut) ಇರುವುದಿಲ್ಲ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ ಅಧಿಕಾರಿಗಳು ತಿಳಿಸಿದ್ದಾರೆ.ಹೀಗಾಗಿ ಬೆಂಗಳೂರಿನ 4 ವಲಯಗಳಲ್ಲಿ ಯಾವ ಯಾವ ಪ್ರದೇಶದಲ್ಲಿ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ  ವಿದ್ಯುತ್ ಸರಬರಾಜು ಇರುವುದಿಲ್ಲ ಎಂಬ ಮಾಹಿತಿ ಇಲ್ಲಿದೆ. 

Gold Price Today: ಮತ್ತೆ ಇಳಿಕೆ ಕಂಡ ಹಳದಿ ಲೋಹ- ಬೆಂಗಳೂರಿನಲ್ಲಿ ಇಂದಿನ ರೇಟ್ ಹೀಗಿದೆ

Gold Rate on Dec 4, 2021: ದೇಶದಲ್ಲಿಂದು ಚಿನ್ನದ ಬೆಲೆ (Gold Price) ಇಳಿಕೆಯಾಗಿದೆ. ಬೆಂಗಳೂರಿನಲ್ಲಿ (Bengaluru) ಇಂದು ಚಿನ್ನದ ಬೆಲೆ ಮತ್ತಷ್ಟು ಇಳಿಕೆಯಾಗಿದೆ. ಭಾರತದಲ್ಲಿ ನಿನ್ನೆ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 46,580 ರೂ. ಇತ್ತು.ಇಂದು 130 ರೂ. ಬೆಲೆ ಕಡಿಮೆಯಾಗಿದ್ದು, 46,450 ರೂ. ಆಗಿದೆ. ಅಂತೆಯೇ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ನಿನ್ನೆ 47,580 ರೂ. ಇತ್ತು. ಇಂದು 130 ರೂ. ಬೆಲೆ ಕಡಿಮೆಯಾಗಿ 47,450 ರೂ.ಆಗಿದೆ. 

3. ಮೈಸೂರಿನ ಗೀತಾ ಗೋಪಿನಾಥ್ IMF ಅಧಿಕಾರ ಸ್ಥಾನ ಅಲಂಕರಿಸಲು ನಡೆದ ದಾರಿಯೇ ರೋಚಕ

ಐಎಂಎಫ್‌ನ ಮುಖ್ಯ ಅರ್ಥಶಾಸ್ತ್ರಜ್ಞರಾಗಿರುವ ಗೀತಾ ಗೋಪಿನಾಥ್ (Gita Gopinath) ಜಾಗತಿಕ ನಿಧಿಯ ಮೊದಲ ಉಪ ವ್ಯವಸ್ಥಾಪಕ ನಿರ್ದೇಶಕಿಯಾಗಿ ತಮ್ಮ ಹೊಸ ಪಾತ್ರ ವಹಿಸಿಕೊಳ್ಳಲು (new role)ಸಿದ್ಧರಾಗಿದ್ದಾರೆ ಎಂದು ಇತ್ತೀಚೆಗೆ IMF ಹೇಳಿದೆ. ಭಾರತದ ನಮ್ಮ ಕರುನಾಡಿನ ಸಾಂಸ್ಕೃತಿ ನಗರಿ ಮೈಸೂರು (Mysuru)ಮೂಲದ (chief economist)ಅರ್ಥಶಾಸ್ತ್ರಜ್ಞೆ, ಮುಂದಿನ ವರ್ಷದ ಆರಂಭದಲ್ಲಿ IMF ತೊರೆಯುವ ಸಾಧ್ಯತೆಯಿರುವ ಜೆಫ್ರಿ ಒಕಾಮೋಟೋ (Geoffrey Okamoto) ಅವರ ನಂತರ ಅಧಿಕಾರ ಸ್ವೀಕರಿಸಲಿದ್ದಾರೆ.

4.  ರೈಲು ಪ್ರಯಾಣದಲ್ಲಿ ಹಿರಿಯ ನಾಗರಿಕರಿಗೆ ವಿನಾಯಿತಿ? ಹೊಸಾ ರೂಲ್ಸ್!

ಕೊರೊನಾ ಎರಡನೇ ಅಲೆಯ (Corona second Wave) ಬಳಿಕ ಒಂದೊಂದೇ ಆರ್ಥಿಕ ಚಟುವಟಿಕೆಗಳು (Financial Activities) ತೆರೆದುಕೊಳ್ಳುತ್ತಿವೆ. ಭಾರತೀಯ ರೈಲ್ವೇ (Indian Railways) ಸಹ ಕ್ಯಾಂಟಿನ್, ಹೊದಿಕೆ (Canteen, Bedroll Kit) ನೀಡುವಂತಹ ಸೇವೆಗಳನ್ನು ಆರಂಭಿಸುತ್ತಿವೆ, ಆದ್ರೆ 2020ರಲ್ಲಿ ಹಿರಿಯ ಪ್ರಯಾಣಿಕರಿಗೆ (Senior Citizens) ನೀಡಲಾಗುತ್ತಿದ್ದ, ಟಿಕೆಟ್ ದರ(Ticket Price)ದಲ್ಲಿನ ವಿನಾಯ್ತಿ ರದ್ದುಗೊಳಿಸಲಾಗಿತ್ತು. ಆದ್ರೆ ಈವರೆಗೂ ಸೇವೆಯನ್ನು ರೈಲ್ವೇ ಇಲಾಖೆ ಆರಂಭಿಸಿಲ್ಲ. ಈ ಸಂಬಂಧ ಸಂಸತ್ತಿನಲ್ಲಿ ಪ್ರಶ್ನೆ ಕೇಳಲಾಗಿತ್ತು. ಪ್ರಶ್ನೆಗೆ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ (Railway Minister Ashwini Vaishnav)  ಉತ್ತರ ನೀಡಿದ್ದಾರೆ.

ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಸಂಸತ್ತಿನಲ್ಲಿ ಪ್ರಸ್ತುತ ಟಿಕೆಟ್ ದರದಲ್ಲಿ ಕೆಲವು ವರ್ಗದ ಜನರಿಗೆ ನೀಡಲಾದ ವಿನಾಯಿತಿ ಅಥವಾ ರಿಯಾಯಿತಿಗಳನ್ನು ಮರು ಆರಂಭಿಸುವ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲ ಎಂದು ಹೇಳಿದ್ದಾರೆ. ಕೋವಿಡ್ ಹಿನ್ನೆಲೆಯಲ್ಲಿ ಎಲ್ಲಾ ವರ್ಗದ ಪ್ರಯಾಣಿಕರಿಗೆ ನೀಡಲಾಗಿದ್ದ ರಿಯಾಯಿತಿಯನ್ನು ಹಿಂಪಡೆಯಲಾಗಿದೆ. ಹಾಗೆ ಈ ವಿಶೇಷ ವಿನಾಯ್ತಿಯನ್ನು ನಾವು ಯಾವುದೇ ಪರಿಗಣನೆಯನ್ನು ನೀಡಲಾಗಿಲ್ಲ ಎಂದು ರೈಲ್ವೆ ಸಚಿವರು ಹೇಳಿದರು
Published by:Sandhya M
First published: