Morning Digest: ಬೆಂಗಳೂರಿನಲ್ಲಿ ಪವರ್ ಕಟ್​, ಕಡಿಮೆಯಾದ ಚಿನ್ನದ ಬೆಲೆ, ಕೋಲಾರದಲ್ಲಿ ಮಳೆ; ಬೆಳಗಿನ ಟಾಪ್​ ನ್ಯೂಸ್​ಗಳು

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು? ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
1. Gold Price Today: ಚಿನ್ನ ಖರೀದಿಸುವ ಪ್ಲ್ಯಾನ್​ ಇದ್ರೆ ಇವತ್ತೇ ಹೋಗಿ..! ಬೆಲೆ ಕಡಿಮೆಯಾಗಿದೆ

Gold Rate on Dec 31, 2021: ದೇಶದಲ್ಲಿಂದು ಚಿನ್ನದ ಬೆಲೆ (Gold Price)ಯಲ್ಲಿ ಇಳಿಕೆಯಾಗಿದೆ. ಬೆಂಗಳೂರಿನಲ್ಲಿ (Bengaluru) ಇಂದು ಬಂಗಾರದ ಬೆಲೆ ಇಳಿಕೆ ಕಂಡಿದೆ. ಭಾರತದಲ್ಲಿ ನಿನ್ನೆ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 47,010 ರೂ. ಇತ್ತು. ಇಂದು 250 ರೂ. ಇಳಿಕೆಯಾಗಿದ್ದು 46,760 ರೂ. ಆಗಿದೆ. ಅಂತೆಯೇ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ನಿನ್ನೆ 49,010 ರೂ. ಇತ್ತು. ಇಂದು 250 ರೂ. ಇಳಿಕೆಯಾಗಿದ್ದು, 48,760 ರೂ. ಆಗಿದೆ.

2.Power Cut: ಇಂದೂ ಸಹ ಬೆಂಗಳೂರಿನ ಹಲವೆಡೆ ಪವರ್ ಕಟ್, ಯಾವ್ಯಾವ ಏರಿಯಾ? ಇಲ್ಲಿದೆ ಲಿಸ್ಟ್​

ಡಿಸೆಂಬರ್(December) 31ರಂದು ಬೆಂಗಳೂರಲ್ಲಿ ತುರ್ತು ವಿದ್ಯುತ್ ನಿರ್ವಹಣೆ ಕಾಮಗಾರಿ ಇರುವುದರಿಂದ ವಿದ್ಯುತ್ ವ್ಯತ್ಯಯ ಆಗಲಿದೆ. ದಕ್ಷಿಣ ವಲಯ: ಬೆಳಗ್ಗೆ 10 ರಿಂದ ಸಂಜೆ 5.30 ರವರೆಗೆ ಆರ್‌ಬಿಐ ಲೇಔಟ್, ಯಾದವ್ ಫಾರ್ಮ್, ಸಿದ್ದನ ಲೇಔಟ್, ಕರೆಸಂದ್ರ ಬನಶಂಕರಿ 2ನೇ ಹಂತ, ಕಿಡ್ನಿ ಫೌಂಡೇಶನ್, ಆರ್‌ಕೆ ಲೇಔಟ್, ಜೆಪಿ ನಗರ 5ನೇ ಹಂತ, ಕೆಆರ್ ಲೇಔಟ್, ವೆಂಕಟಾದ್ರಿ ಲೇಔಟ್, ದೊರೆಸಾನಿಪಾಳ್ಯ, ಚಿಕ್ಕಲಸಂದ್ರ, ಅಶ್ವಿನಿ ಲೇಔಟ್ ಮತ್ತು ಕೆಆರ್‌ಬಿ ಲೇಔಟ್ ನಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

3.Karnataka Weather Report: ತಗ್ಗಿದ ಚಳಿ ಪ್ರಮಾಣ, ಕೋಲಾರ ಜಿಲ್ಲೆಯಲ್ಲಿ ಮಳೆ ಸಾಧ್ಯತೆ

Karnataka Weather Report : ಇಂದು ರಾಜ್ಯದಲ್ಲಿ ಎಂದಿನಂತೆ ಚಳಿ ಜೊತೆ ಅಲ್ಲಲ್ಲಿ ಮೋಡ ಕವಿದ ವಾತಾವರಣ (Cloudy Weather) ಇರಲಿದೆ. ಕೋಲಾರ ಜಿಲ್ಲೆಯಲ್ಲಿ ಮಳೆಯಾಗುವ (Rainfall) ಸಾಧ್ಯತೆಗಳಿವೆ. ಇನ್ನುಳಿದಂತೆ ರಾಜ್ಯದಲ್ಲಿ ಕೊಂಚ ಚಳಿ ಪ್ರಮಾಣ ತಗ್ಗಿದ್ದು, ಕನಿಷ್ಠ 17 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ. ರಾಜಧಾನಿ ಬೆಂಗಳೂರಿನಲ್ಲಿ ಗರಿಷ್ಠ 26 ಮತ್ತು ಕನಿಷ್ಠ 18 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಭಾರತೀಯ ಹವಾಮಾನ ಇಲಾಖೆ (IMD), ಕರಾವಳಿ ಆಂಧ್ರಪ್ರದೇಶ, ರಾಯಲಸೀಮಾ, ಕರ್ನಾಟಕದ ದಕ್ಷಿಣ ಒಳನಾಡು, ಪುದುಚೇರಿ ಮತ್ತು ಕೇರಳದಲ್ಲಿ ಡಿಸೆಂಬರ್‌ನಿಂದ ಫೆಬ್ರುವರಿ ವರೆಗೆ ವಾಡಿಕೆಗಿಂತ ಹೆಚ್ಚಿನ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ.

4.Petrol And Diesel Price Today: ರಾಜ್ಯದ ಜಿಲ್ಲೆಗಳ ಇವತ್ತಿನ ಪೆಟ್ರೋಲ್, ಡೀಸೆಲ್ ದರ ಇಲ್ಲಿದೆ

ಕೇಂದ್ರ ಹಾಗೂ ರಾಜ್ಯ ಸರ್ಕಾರದ ದೀಪಾವಳಿ ಕೊಡುಗೆಯಾಗಿ ಪೆಟ್ರೋಲ್‌, ಡೀಸೆಲ್‌ ಮೇಲಿನ ಸುಂಕವನ್ನು ಕಡಿತಗೊಳಿಸಿದ್ದವು. ಇದರ ಪರಿಣಾಮವಾಗಿ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ಕೊಂಚ ಇಳಿಕೆಯಾಗಿದೆ. ಎಲ್​ಪಿಜಿ ಬೆಲೆ (LPG) ಏರಿಕೆಯಿಂದ ಕಂಗಾಲಾಗಿದ್ದ ಜನ ದಿನನಿತ್ಯ ಏರುತ್ತಿದ್ದ ಪೆಟ್ರೋಲ್-ಡೀಸೆಲ್ ಬೆಲೆಯಿಂದಾಗಿ ಮತ್ತಷ್ಟು ಸಂಕಷ್ಟಕ್ಕೆ ಒಳಗಾಗಿದ್ದರು. ಈ ಹಿನ್ನೆಲೆ ಜನ ಸಾಮಾನ್ಯರಿಗೆ ತೈಲ ದರದ ಹೊರೆ ಸ್ವಲ್ಪ ಕಡಿಮೆಯಾಗಿದೆ. ಆದರೆ, ಇಂದು ಬೆಂಗಳೂರಿನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಕಂಡಿದೆ. ಉಳಿದ ಹಲವು ಜಿಲ್ಲೆಗಳಲ್ಲಿ ಏರಿಳಿತ ಕಂಡಿದೆ. ಪ್ರಸ್ತುತ ರಾಜಧಾನಿ ಬೆಂಗಳೂರಿನಲ್ಲಿ (Bangalore) ಇಂದು 1 ಲೀಟರ್ ಪೆಟ್ರೋಲ್​ ಅನ್ನು 100.58 ರೂಗೆ ಮಾರಾಟ ಮಾಡುತ್ತಿದ್ದರೆ, ಡೀಸೆಲ್​ ಅನ್ನು 85.01 ರೂ. ಗೆ ಮಾರಾಟ ಮಾಡಲಾಗುತ್ತಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಪೆಟ್ರೋಲ್-ಡೀಸೆಲ್ ಬೆಲೆ ಕುರಿತ ವಿವರ ಇಲ್ಲಿದೆ.
Published by:Latha CG
First published: