Morning Digest: ಇಂದು ರಾಜ್ಯದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆ, ಜಲ ವಿದ್ಯುತ್​ ಯೋಜನೆಗಳಿಗೆ ಮೋದಿ ಶಂಕು ಸ್ಥಾಪನೆ; ಬೆಳಗಿನ ಟಾಪ್​ ನ್ಯೂಸ್​ಗಳು

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು? ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
1. Karnataka ULB Elections: 5 ನಗರಸಭೆ, 19 ಪುರಸಭೆ, 34 ಪ.ಪಂ.ನ 1185 ವಾರ್ಡ್​ಗಳಿಗೆ ಇಂದು ಚುನಾವಣೆ

ಬೆಂಗಳೂರು, ಡಿ. 27: ಓಮೈಕ್ರಾನ್ ಕೋವಿಡ್ ಪ್ರಕರಣದ ಭೀತಿಯಲ್ಲೂ ಇಂದು ರಾಜ್ಯದ 58 ನಗರ ಸ್ಥಳೀಯ ಸಂಸ್ಥೆಗಳಿಗೆ (Urban Local Bodies) ಚುನಾವಣೆ ನಡೆಯುತ್ತಿದೆ. 9 ವಾರ್ಡ್​ಗಳಿಗೆ ಉಪಚುನಾವಣೆಯೂ ಆಗುತ್ತಿದೆ. 19 ಜಿಲ್ಲೆಗಳ 58 ಸ್ಥಳೀಯ ನಗರ ಸಂಸ್ಥೆಗಳ 1185 ವಾರ್ಡ್​ಗಳಿಗೆ ಇಂದು ಮತದಾನ ನಡೆಯಲಿದೆ. ಬೆಳಗ್ಗೆ 7ರಿಂದ ಮತದಾನ ಆರಂಭವಾಗಿ ಸಂಜೆ 5ಕ್ಕೆ ಮುಗಿಯಲಿದೆ. ಕರ್ನಾಟಕ ಬಂದ್​ಗೆ ಹಿಂದಿನ ದಿನ, ಅಂದರೆ ಡಿ. 30, ಗುರುವಾರ ಫಲಿತಾಂಶ ಪ್ರಕಟವಾಗಲಿದೆ. ಚುನಾವಣೆ ನಡೆಯುತ್ತಿರುವುದು ಐದು ನಗರಸಭೆ (City Municipality Council), 19 ಪುರಸಭೆ (Town Municipal Council) ಮತ್ತು 34 ಪಟ್ಟಣ ಪಂಚಾಯಿತಿಗಳಿಗೆ (Town Panchayat). ಹಾಗೆಯೇ, ವಿವಿಧ ಕಾರಣಗಳಿಂದ ತೆರವಾಗಿರುವ 5 ನಗರಸಭೆ, 3 ಪುರಸಭೆ ಮತ್ತು 1 ಪಟ್ಟಣ ಪಂಚಾಯಿತಿಯ 9 ವಾರ್ಡ್​ಗಳಿಗೆ ಉಪಚುನಾವಣೆ ಇದೆ. ಬೆಂಗಳೂರು ನಗರದ ಹೆಬ್ಬಗೋಡಿ ನಗರಸಭೆ, ಜಿಗಣಿ ಪುರಸಭೆ ಮತ್ತು ಚಂದಾಪುರ ಪುರಸಭೆಗಳೂ ಚುನಾವಣೆ ಎದುರಿಸುತ್ತಿವೆ.

2.Karnataka Weather Today: ರಾಜ್ಯದಲ್ಲಿ ಸದ್ಯಕ್ಕಿಲ್ಲ ವರುಣನ ಅಬ್ಬರ.. ಮೈ ನಡುಗುವ ಚಳಿಗೆ ಕರುನಾಡು ಗಢ ಗಢ!

Karnataka Weather Report Dec 27, 2021: ಅಕಾಲಿಕ ವರುಣನ ಆರ್ಭಟ(Unseasonal Rain) ನಿಂತ ಬಳಿಕ ರಾಜ್ಯದಲ್ಲಿ ಚಳಿಯ ಪ್ರಮಾಣ ಹೆಚ್ಚಾಗಿದೆ. ಕಳೆದ ಕೆಲ ದಿನಗಳಿಂದ ಗಢ-ಗಢ ಚಳಿ(Winter)ಗೆ ಜನರು ನಡುಗುತ್ತಿದ್ದಾರೆ. ಡಿಸೆಂಬರ್(December) ಮೊದಲ ವಾರದವರೆಗೂ ಸುರಿದ ಮಳೆ ಈಗ ಕೊಂಚ ಬ್ರೇಕ್​​ ಕೊಟ್ಟಿದ್ದು, ಎಲ್ಲೆಡೆ ಶೀತಗಾಳಿ ಬೀಸುತ್ತಿದೆ. ಮಲೆನಾಡು, ಉತ್ತರ ಕರ್ನಾಟಕ ಭಾಗದಲ್ಲಂತೂ ದಟ್ಟ ಚಳಿಗೆ ಜನರು ತತ್ತರಿಸಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲಿ (Bengaluru Weather) ಇಂದು ಗರಿಷ್ಠ 27 ಮತ್ತು ಕನಿಷ್ಠ 15 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ. ಇನ್ನು, ಕರ್ನಾಟಕದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದ್ದರೂ, ಬೇರೆ ರಾಜ್ಯಗಳಲ್ಲಿ ವರುಣ ಇನ್ನೂ ಸಹ ತನ್ನ ಆರ್ಭಟ ನಿಲ್ಲಿಸಿಲ್ಲ. ದೇಶದ ವಿವಿಧ ರಾಜ್ಯಗಳಲ್ಲಿ ಇನ್ನೂ ಕೆಲ ದಿನಗಳ ಕಾಳ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ(IMD) ಮಾಹಿತಿ ನೀಡಿದೆ.

3.Corona: ಇಂದು ಆರೋಗ್ಯ ಸಚಿವಾಲಯದ ಜೊತೆ ಚುನಾವಣಾ ಆಯೋಗ ಸಭೆ, ಪಂಚರಾಜ್ಯಗಳ ಕೋವಿಡ್​-19 ಪರಿಸ್ಥಿತಿ ಕುರಿತು ಚರ್ಚೆ

ನವದೆಹಲಿ(ಡಿ.27): ದೇಶದಲ್ಲಿ ಸದ್ಯ ಕೊರೋನಾ ಪ್ರಕರಣಗಳು(Corona cases) ಹೆಚ್ಚಾಗುತ್ತಿದ್ದು, ಮತ್ತೆ ಆತಂಕ ಮೂಡಿಸುತ್ತಿದೆ. ಓಮೈಕ್ರಾನ್(Omicron)​ ಭೀತಿಯ ನಡುವೆಯೇ 5 ರಾಜ್ಯಗಳಲ್ಲಿ 2022ರಲ್ಲಿ ಚುನಾವಣೆ ನಡೆಯಲಿದೆ. ಉತ್ತರ ಪ್ರದೇಶ, ಮಣಿಪುರ, ಉತ್ತರಾಖಂಡ, ಗೋವಾ ಮತ್ತು ಪಂಜಾಬ್ ಸೇರಿದಂತೆ ಐದು ರಾಜ್ಯಗಳಲ್ಲಿ ಮುಂದಿನ ವರ್ಷ ವಿಧಾನಸಭೆ ಚುನಾವಣೆ (Assembly Election) ನಡೆಯಲಿದೆ. ಹೀಗಾಗಿ ಈ 5 ರಾಜ್ಯಗಳಲ್ಲಿನ ಪ್ರಸ್ತುತ ಕೋವಿಡ್​-19 ಪರಿಸ್ಥಿತಿ ಕುರಿತು ಚರ್ಚಿಸಲು ಭಾರತೀಯ ಚುನಾವಣಾ ಆಯೋಗವು (Election Commission of India), ಇಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್​ ಭೂಷಣ್​ ಸೇರಿದಂತೆ, ಕೇಂದ್ರ ಆರೋಗ್ಯ ಸಚಿವಾಲಯದ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದೆ.

4.Surya Namaskar: ಪಿಯು ಕಾಲೇಜುಗಳಲ್ಲಿ ಜ.1ರಿಂದ ಫೆ. 7ರವರೆಗೆ ಸೂರ್ಯ ನಮಸ್ಕಾರ: ಕೇಂದ್ರ ಶಿಕ್ಷಣ ಇಲಾಖೆ ಸೂಚನೆ!

ಬೆಂಗಳೂರು: ರಾಜ್ಯದ ಎಲ್ಲ ಪದವಿ ಪೂರ್ವ ಕಾಲೇಜು(PU College)ಗಳಲ್ಲಿ ಜ. 1ರಿಂದ ಫೆ. 7ರವರೆಗೆ ‘ಸೂರ್ಯ ನಮಸ್ಕಾರ’(Surya Namaskar) ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ಪದವಿಪೂರ್ವ ಶಿಕ್ಷಣ ಇಲಾಖೆ ಸೂಚಿಸಿದೆ. ಅಲ್ಲದೆ, ಜ 26ರಂದು ‘ಸಂಗೀತ ದೊಂದಿಗೆ ಸೂರ್ಯ ನಮಸ್ಕಾರ’(Surya Namaskar With Music) ಆಯೋಜಿಸಬೇಕು ಎಂದೂ ತಿಳಿಸಿದೆ. 75ನೇ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವದ ಅಂಗವಾಗಿ ಕೇಂದ್ರ ಶಿಕ್ಷಣ ಇಲಾಖೆ (Central Education Department) ಸೂಚನೆ ಹಿನ್ನೆಲೆಯಲ್ಲಿ ಈ ಆದೇಶ ಮಾಡಿದ್ದು, ಜನವರಿ 26ರಂದು ‘ಸಂಗೀತದೊಂದಿಗೆ ಸೂರ್ಯ ನಮಸ್ಕಾರಕ್ಕೂ ಸೂಚನೆ ನೀಡಲಾಗಿದೆ. ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಎಲ್ಲ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರು(Principal), ಉಪನ್ಯಾಸಕರು(Teachers), ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು(Students) ಕಾರ್ಯಕ್ರಮದಲ್ಲಿ ಭಾಗವಹಿಸಬೇಕು. ಬಳಿಕ ಕಾರ್ಯಕ್ರಮದ ಮಾಹಿತಿಯನ್ನು ಇಲಾಖೆಯ ಶೈಕ್ಷಣಿಕ ಶಾಖೆಗೆ ಸಲ್ಲಿಸಬೇಕು ಎಂದು ಎಲ್ಲ ಜಿಲ್ಲಾ ಉಪ ನಿರ್ದೇಶಕರಿಗೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರು ತಿಳಿಸಿದ್ದಾರೆ. ‘ಸೂರ್ಯ ನಮಸ್ಕಾರ‘ ಕಾರ್ಯಕ್ರಮ ಆಯೋಜಿಸುವಂತೆ ಕೇಂದ್ರ ಶಿಕ್ಷಣ ಸಚಿವಾಲಯ ಎಲ್ಲ ರಾಜ್ಯಗಳ ಶಿಕ್ಷಣ ಇಲಾಖೆಗಳ ಮುಖ್ಯಸ್ಥರಿಗೆ ಡಿ.16 ರಂದು ಪತ್ರ ಬರೆದು ಸೂಚಿಸಿತ್ತು.

5.PM Modi: ಇಂದು ಹಿಮಾಚಲ ಪ್ರದೇಶಕ್ಕೆ ಮೋದಿ ಭೇಟಿ; ವಿವಿಧ ಜಲ ವಿದ್ಯುತ್​ ಯೋಜನೆಗಳಿಗೆ ಶಂಕು ಸ್ಥಾಪನೆ

ಪ್ರಧಾನಿ ನರೇಂದ್ರ ಮೋದಿ(PM Narendra Modi) ಸೋಮವಾರ ಹಿಮಾಚಲ ಪ್ರದೇಶದ(Himachal Pradesh) ಮಂಡಿಗೆ ಭೇಟಿ ನೀಡಲಿದ್ದು, ಸುಮಾರು 11,000 ಕೋಟಿಗೂ ಹೆಚ್ಚು ಮೌಲ್ಯದ ಜಲವಿದ್ಯುತ್​ ಯೋಜನೆಗಳ(Hydropower Projects) ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಇಂದು ಮಧ್ಯಾಹ್ನ 12 ಗಂಟೆಗೆ ನಿಗದಿಯಾಗಿರುವ ಕಾರ್ಯಕ್ರಮಕ್ಕೂ ಮುನ್ನ, ಮೋದಿ ಸುಮಾರು 11.30ಕ್ಕೆ ಹಿಮಾಚಲ ಪ್ರದೇಶ ಜಾಗತಿಕ ಹೂಡಿಕೆದಾರರ(Himachal Pradesh Global Investors Meeting) ಸಭೆಯ ಎರಡನೇ ಶಿಲಾನ್ಯಾಸ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.
Published by:Latha CG
First published: