Morning Digest: ದುಬೈಗೆ ಹೊರಟಿದ್ದ ವಂಚಕ ಅರೆಸ್ಟ್, ಶಸ್ತ್ರಾಸ್ತ್ರಗಳ ಆಮದು ನಿಷೇಧ,ಮುಸ್ಲಿಂ ಶಿಲ್ಪಿಯ ಕೈಯಲ್ಲಿ ದೇವರ ವಿಗ್ರಹ: ಬೆಳಗಿನ ಟಾಪ್ ನ್ಯೂಸ್

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
1.Fraud Case: ಕಂಪನಿಗೆ 4.41 ಕೋಟಿ ರೂ. ವಂಚಿಸಿ ದುಬೈಗೆ ಹಾರಲು ಯತ್ನಿಸಿದ ಯುವಕ..! ಕೊನೆಗೂ ಸಿಕ್ಕಿಬಿದ್ದ

ದಿನೇದಿನೇ ತಂತ್ರಜ್ಞಾನ ಬೆಳೆಯುತ್ತಿದ್ದಂತೆ ವಂಚಕರು ಸಹ ಹೈಟೆಕ್ ಆಗುತ್ತಿದ್ದಾರೆ. ಇಲ್ಲೊಬ್ಬ ಆಸಾಮಿ ಕೆಲಸಕ್ಕೆಂದು ಸೇರಿದ್ದ ಕಂಪನಿಗೆ ಕೋಟ್ಯಂತರ ರೂಪಾಯಿ ವಂಚಿಸಿ ಪರಾರಿಯಾಗಿದ್ದ. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ದುಬೈಗೆ ಹಾರಲು ಸಿದ್ಧತೆ ನಡೆಸಿದ್ದ ವಂಚಕನ ಪೊಲೀಸರ ಸೆರೆಯಾಗಿದ್ದಾನೆ. ಹೆಸರು ಭವ್ಯಹರೇನ್(26) ದೇಸಾಯಿ. ಮಹಾರಾಷ್ಟ್ರದ ಮುಂಬೈನ ಮಸ್ಕತಿ ಮಹಲ್ ನಿವಾಸಿ. ಬೆಳಗಾವಿ ತಾಲೂಕಿನ ದೇಸೂರು ಗ್ರಾಮದ ಬಳಿ ಎಂ.ಜಿ.ಆಟೋಮೋಟಿವ್ ಬಸ್ ಆ್ಯಂಡ್ ಕೋಚ್ ಕಂಪನಿಯಲ್ಲಿ ಫೈನಾನ್ಸಿಯಲ್ ಕಂಟ್ರೋಲರ್ ಹಾಗೂ ಸಹಾಯಕ ಪ್ರಧಾನ ವ್ಯವಸ್ಥಾಪಕನಾಗಿ ಕೆಲಸಕ್ಕೆ ಸೇರಿದ್ದ.

2.Rajnath Singh: ಶಸ್ತ್ರಾಸ್ತ್ರಗಳ ಆಮದು ನಿಷೇಧ, 3ನೇ ಪಟ್ಟಿ ಬಿಡುಗಡೆ ಮಾಡಿದ ರಾಜನಾಥ್ ಸಿಂಗ್

ಆತ್ಮನಿರ್ಭರ್ ಭಾರತ್ ಗುರಿಗೆ ಸಹಾಯವಾಗುವಂತೆ 100 ಕ್ಕೂ ಹೆಚ್ಚು ಶಸ್ತ್ರಾಸ್ತ್ರಗಳು, ಕ್ಷಿಪಣಿಗಳನ್ನು (Missile) ಆಮದು (Import) ಮಾಡಿಕೊಳ್ಳಲು ನಿಷೇಧಿಸಲಾಗಿದೆ. ಈ ಸಂಬಂಧ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಅವರು ಇಂದು 101 ಕ್ಕೂ ಹೆಚ್ಚು ಮಿಲಿಟರಿ ವ್ಯವಸ್ಥೆಗಳು (Military System) ಮತ್ತು ಶಸ್ತ್ರಾಸ್ತ್ರಗಳ (Weapons) ಮೂರನೇ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. ಅದು ಮುಂದಿನ ಐದು ವರ್ಷಗಳಲ್ಲಿ ಆಮದು ನಿಷೇಧದ ಅಡಿಯಲ್ಲಿ ಬರಲಿದೆ ಮತ್ತು ಭಾರತೀಯ ಶಸ್ತ್ರಾಸ್ತ್ರ ಉದ್ಯಮಕ್ಕೆ ಹೊಸ ಪ್ರಚೋದನೆಯಾಗಿ ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾಗಿದೆ.

ಈ ಸುದ್ದಿಯನ್ನು ಪೂರ್ತಿಯಾಗಿ ಓದಲು ಇಲ್ಲಿ ಕ್ಲಿಕ್ ಮಾಡಿ

3.Muslim Prayer App ಅನ್ನು ಬ್ಯಾನ್​ ಮಾಡಿದ ಗೂಗಲ್​! ಯಾವ ಕಾರಣಕ್ಕೆ ಗೊತ್ತಾ?

Google Play Store: ಗೂಗಲ್ ತೆಗೆದು ಹಾಕಿದ ಅಪ್ಲಿಕೇಶನ್​ಗಳಲ್ಲಿ ಬಾರ್ಕೋಡ್ ಸ್ಕ್ಯಾನರ್​ಗಳು ಮತ್ತು ಸಮಯ ಹೇಳುವ ಅಪ್ಲಿಕೇಶನ್ಗಳೂ ಸೇರಿವೆ. ಈ ಎಲ್ಲಾ ಆ್ಯಪ್​ಗಳು ಬಳಕೆದಾರರ ಫೋನ್​ಗಳಿಂದ ಡೇಟಾವನ್ನು ಕದಿಯುತ್ತಿತ್ತು ಎಂದು ಗೂಗಲ್ ಹೇಳಿದೆ. ನಿಯಮಗಳನ್ನು ಉಲ್ಲಂಘಿಸಿದ ಆರೋಪದಡಿಯಲ್ಲಿ ಪ್ರಸಿದ್ಧ ಮುಸ್ಲಿಂ ಪ್ರಾರ್ಥನೆ ಅಪ್ಲಿಕೇಶನ್ ಅನ್ನು ನಿಷೇಧಿಸಲಾಗಿದೆ. ಇದರೊಂದಿಗೆ, ಗೂಗಲ್ ತನ್ನ ಪ್ಲೇ ಸ್ಟೋರ್​ನಿಂದ ಸುಮಾರು ಒಂದು ಡಜನ್ ಅಪ್ಲಿಕೇಶನ್​ಗಳನ್ನು ಸಹ ತೆಗೆದುಹಾಕಿದೆ.

4.Kolar: ಈ ಮುಸ್ಲಿಂ ಶಿಲ್ಪಿಯ ಕೈಯಲ್ಲಿ ರೂಪುಗೊಳ್ಳುತ್ತವೆ ಹಿಂದೂ ದೇವರು! ಎಲ್ಲರಿಗೂ ಇವರೇ ಅಚ್ಚುಮೆಚ್ಚು

ರಾಜ್ಯದಲ್ಲಿ ಇತ್ತೀಚಿಗೆ ಹಿಜಾಬ್ (Hijab), ಹಲಾಲ್ (Halal) ಹಾಗೂ ಆಜಾನ್ (Ajaan) ವಿವಾದಗಳು (Controversy) ಸಾಕಷ್ಟು ಸದ್ದು ಮಾಡುತ್ತಿದೆ. ಈ ಮಧ್ಯೆ ಮುಸ್ಲಿಂ ಶಿಲ್ಪಿಗಳು (Sculptor) ಮಾಡಿದ ಹಿಂದೂ ದೇವರ ವಿಗ್ರಹಗಳನ್ನು (Hindu Gods idol) ಖರೀದಿಸದಂತೆ ಅಭಿಯಾನ ನಡೆಯುತ್ತಿದೆ. ಆದ್ರೆ ಇಲ್ಲೊಬ್ಬ ಮುಸ್ಲಿಂ (Muslim) ವ್ಯಕ್ತಿ, ಹಿಂದೂ ದೇವರ ವಿಗ್ರಹಗಳ ಕೆತ್ತನೆ ಮಾಡುವ ಕಾಯಕವನ್ನೆ ನಂಬಿ ಜೀವನ ನಡೆಸುತ್ತಿದ್ದಾರೆ. ಕೋಲಾರ (Kolar) ಜಿಲ್ಲೆಯ ಮಾಲೂರು (Malur) ತಾಲೂಕಿನ ಶಿವಾರಪಟ್ಟಣ ಗ್ರಾಮ, ಶಿಲ್ಪಿ ಗ್ರಾಮ ಎಂತಲೇ ಪ್ರಸಿದ್ದ, ಇಲ್ಲಿನ ಮುಸ್ಲಿಂ ಶಿಲ್ಪಿ ಹಲವು ವರ್ಷಗಳಿಂದ, ಕೆತ್ತನೆ ಕೆಲಸವನ್ನು ಮಾಡುತ್ತಾ ಜೀವನ ನಡೆಸುತ್ತಿದ್ದಾರೆ. 30 ವರ್ಷಗಳಿಂದ ಶಿಲ್ಪಿ ವೃತ್ತಿ ಮಾಡಿಕೊಂಡಿರುವ ಸಯ್ಯದ್ ಮುನಾವರ್, ತಂದೆ ಪೀರುಸಾಬ್ ರಂತೆ ಶಿಲ್ಪಿ ವೃತ್ತಿ ಮಾಡಿಕೊಂಡು ಮುಂದುವರೆದಿದ್ದಾರೆ.

ಇದನ್ಣೂ ಓದಿ:  ಪುಟ್ಟಕ್ಕನ ಮಗಳು ಸ್ನೇಹಾ ಫೋಟೋಶೂಟ್: Modern And Traditional ಲುಕ್ ನಲ್ಲಿ ಕಾಣಿಸಿಕೊಂಡ ನಟಿ

5.Gold Price: ಆಭರಣ ಪ್ರಿಯರ ಪಾಲಿಗೆ ಶುಭವಾಗದ ಶುಕ್ರವಾರ! ಇಂದು ದುಬಾರಿಯಾಯ್ತು ಚಿನ್ನ-ಬೆಳ್ಳಿ

ನಿನ್ನೆಗೆ ಹೋಲಿಸಿದರೆ ಇಂದು ಭಾರತದ ಮಾರುಕಟ್ಟೆಯಲ್ಲಿ (Indian Market) ಆಭರಣ (Jwerllery) ಚಿನ್ನದ ಬೆಲೆಯಲ್ಲಿ (Gold rate) ಸ್ವಲ್ಪ ಹೆಚ್ಚಳ ಕಂಡುಬಂದಿದೆ. ಕಳೆದ ಎರಡು ದಿನಗಳಿಂದ ಸ್ಥಿರವಾದ ಬೆಲೆ ಕಾಯ್ದುಕೊಂಡಿದ್ದ ಚಿನ್ನ, ಇಂದು ಹತ್ತು ಗ್ರಾಂಗಳಿಗೆ 200 ರೂ. ಜಾಸ್ತಿಯಾಗಿದೆ. ಇಂದು ಭಾರತದ ಮಾರುಕಟ್ಟೆಯಲ್ಲಿ ಬಂಗಾರದ (22 ಕ್ಯಾರೆಟ್) ದರದಲ್ಲಿ ನಿನ್ನೆಗೆ ಹೋಲಿಸಿದರೆ ಬದಲಾವಣೆ ಕಂಡುಬಂದಿಲ್ಲ. ದೇಶದಲ್ಲಿ ಇಂದು ಒಂದು ಗ್ರಾಂ ಆಭರಣ ಚಿನ್ನದ ಬೆಲೆ 4,800 ರೂಪಾಯಿ ಆಗಿದೆ. ಗಳೂರಿನಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ. 48,000 ಆಗಿದ್ದರೆ ಚೆನ್ನೈ, ಮುಂಬೈ ಹಾಗೂ ಕೋಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ.48,590, ರೂ. 48,000, ರೂ. 48,000 ಆಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 48,000 ರೂ. ಆಗಿದೆ.
Published by:Mahmadrafik K
First published: