Morning Digest: ಹಿಂದೂ ಅಂತ ನಂಬಿಸಿ ಲವ್ ಜಿಹಾದ್! ಮತ್ತೆ ಜಾಸ್ತಿಯಾಗುತ್ತಾ ಸ್ಕೂಲ್ ಫೀಸ್? ಕೆಜಿಎಫ್‌ ಬಗ್ಗೆ ಉರ್ಫಿ ಹೇಳಿದ್ದೇನು?

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ...

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಹಿಂದೂ ಯುವಕನಂತೆ ಸೋಗು - ಯುವತಿ ಲವ್ ಜಿಹಾದ್ ಖೆಡ್ಡಾಕ್ಕೆ? ಇಬ್ರಾಹಿಂ-ಸ್ನೇಹಾ ಲವ್​ಸ್ಟೋರಿ

ಸದ್ಯ ರಾಜ್ಯದಲ್ಲಿ ಧರ್ಮ ದಂಗಲ್ ನಡೆಯುತ್ತಿರುವ ಹೊತ್ತಿನಲ್ಲಿಯೇ, ಹುಬ್ಬಳ್ಳಿಯಲ್ಲಿ (Hubballi) ಮತ್ತೊಂದು ವಿವಾದ ಭುಗಿಲೆದ್ದಿದೆ. ಕಳೆದ ತಿಂಗಳ ಹಿಂದೆ ಗದಗ ಮೂಲದ ಗೃಹಿಣಿಯ ಲವ್ ಜಿಹಾದ್ (Love Jihad) ಪ್ರಕರಣ ಆರೋಪ ಕೇಳಿ ಬಂದಿತ್ತು. ಇದರ ಬೆನ್ನಲ್ಲೇ ಮತ್ತೊಂದು ಲವ್ ಜಿಹಾದ್ ಪ್ರಕರಣ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ.

ಹೇಗಾದರೂ ಮಾಡಿ ಲವ್ ಜಿಹಾದ್ ಖೆಡ್ಡಾಕ್ಕೆ ಬಿದ್ದ ಮಗಳನ್ನು ಕಾಪಾಡಿ, ಮತ್ತೆ ಮನೆಗೆ ಕರೆತನ್ನಿ ಅಂತ ಯುವತಿ ಪೋಷಕರು ಮತ್ತು ಹಿಂದೂಪರ ಸಂಘಟನೆಗಳು ಪೊಲೀಸ್ ಠಾಣೆಯ (Police Station) ಎದುರು ಧರಣಿ (Protest) ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Al-Qaeda ಹೊಗಳಿಕೆಗೆ ವಿದ್ಯಾರ್ಥಿ ಮುಸ್ಕಾನ್ ತಂದೆ ಪ್ರತಿಕ್ರಿಯೆ, "ಯಾವುದೇ ತನಿಖೆಗೆ ನಾವು ಸಿದ್ಧ" ಎಂದ ಹುಸೇನ್ ಖಾನ್

ಮಂಡ್ಯದಲ್ಲಿ ಮೊಳಗಿದ  "ಜೈ ಶ್ರೀರಾಮ್" ಎಂಬ ಘೋಷಣೆಗೆ ಪ್ರತಿಯಾಗಿ "ಅಲ್ಲಾಹು ಅಕ್ಬರ್" ಎಂದು ಕೂಗಿದ ಮುಸ್ಕಾನ್ ಮುಸ್ಲಿಂ ಸಮುದಾಯಕ್ಕೆ ರಾತ್ರೋ ರಾತ್ರಿ ಹೀರೋ ಆದಳು. ಹಲವು ಮುಸ್ಲಿಂ ಸಂಘಟನೆಗಳು, ಮುಸ್ಲಿಂ ರಾಜಕಾರಣಿಗಳು ಲಕ್ಷ ಲಕ್ಷ ಬಹುಮಾನ ನೀಡಿದ್ದರು. ಅದರ ಮುಂದಿನ ಸರದಿಯಾಗಿ ವಿಶ್ವದ ಮೋಸ್ಟ್ ವಾಂಟೆಡ್ ಉಗ್ರ ಸಂಘಟನೆ ಅಲ್ ಖೈದಾ ಮುಸ್ಕಾನ್ ಳನ್ನು ಹಾಡಿ ಹೊಗಳಿದೆ.

ಇನ್ನು ಉಗ್ರನ ಹೇಳಿಕೆ ಬಗ್ಗೆ ವಿದ್ಯಾರ್ಥಿನಿ ಹುಸೇನ್ ಖಾನ್ ಪ್ರತಿಕ್ರಿಯೆ ನೀಡಿದ್ದಾರೆ. ಅಲ್‌ಖೈದಾ ಏನು ಅಂತ ನಮಗೆ ಗೊತ್ತಿಲ್ಲ, ಮಾಧ್ಯಮದ ಮೂಲಕವೇ ನನಗೂ ಗೊತ್ತಾಗಿದ್ದು. ಈ ರೀತಿ ಮಾಡುತ್ತಿರುವುದು ತಪ್ಪು. ನಮ್ಮ ನಮ್ಮಲ್ಲಿ ತಂದು ಹಾಕುವ ಕೆಲಸ ಮಾಡುತ್ತಿದ್ದಾರೆ ಎಂದು ಮುಸ್ಕಾನ್‌ ತಂದೆ ಹುಸೇನ್‌ ಖಾನ್‌ ಹೇಳಿದ್ದಾರೆ.

ಇದನ್ನೂ ಓದಿ:  Al-Qaeda ಹೊಗಳಿಕೆಗೆ ವಿದ್ಯಾರ್ಥಿ ಮುಸ್ಕಾನ್ ತಂದೆ ಪ್ರತಿಕ್ರಿಯೆ, "ಯಾವುದೇ ತನಿಖೆಗೆ ನಾವು ಸಿದ್ಧ" ಎಂದ ಹುಸೇನ್ ಖಾನ್

ರಾಜ್ಯದಲ್ಲಿ ಮತ್ತೆ ಶುರುವಾಗುತ್ತಾ ಸ್ಕೂಲ್ ಫೀಸ್‌ ಫೈಟ್? ಲಕ್ಷಾಂತರ ಪೋಷಕರ ಜೇಬಿಗೆ ಬೀಳುತ್ತಾ ಕತ್ತರಿ?

ಎಲ್ಲ ವಸ್ತುಗಳ ದರ ಏರಿಕೆಯಾಗ್ತಿದೆ, ನಾವೇನ್ ಕಡಿಮೆ ಅನ್ನೋ ರೇಂಜಿನಲ್ಲಿ ಖಾಸಗಿ ಶಾಲೆಗಳು ಇದೀಗ ಶುಲ್ಕ ಹೆಚ್ಚಳಕ್ಕೆ ಮುಂದಾಗಿದೆ. ಕಳೆದ ಎರಡು ವರ್ಷದಿಂದ ಶುಲ್ಕದ ಸಮರ ತಾರಕ್ಕೇರುತ್ತಿದೆ. ಆದ್ರೀಗ ಮತ್ತೆ ಹೊಸ ತಿರುವನ್ನ ಪಡೆದುಕೊಳ್ಳುವ ಸಾಧ್ಯತೆ ಇದೆ. ಹೌದು.. ಮುಂದಿನ‌ ಶೈಕ್ಷಣಿಕ ವರ್ಷದಿಂದಲೇ ಖಾಸಗಿ ಶಾಲೆಗಳಿಂದ ಫೀಸ್ ಹೈಕ್ ಬಹುತೇಕ ಫಿಕ್ಸ್ ಅಂತ ಹೇಳಲಾಗ್ತಿದೆ. 2022-23ನೇ ಸಾಲಿನ ಶೈಕ್ಷಣಿಕ ವರ್ಷದಿಂದ ಶಾಲಾ ಶುಲ್ಕ ಹೆಚ್ಚಳ ಮಾಡಲು ನಿರ್ಧರಿಸಿವೆ.

ಕೊರೊನಾ ಬಳಿಕ ಲಕ್ಷಾಂತರ ಪೋಷಕರಿಗೆ ಖಾಸಗಿ ಶಾಲೆಗಳು ಶಾಕ್ ಕೊಟ್ಟಿವೆ. ದಿಢೀರನೇ ಶುಲ್ಕ ಹೆಚ್ಚಳ ಮಾಡಲು ಖಾಸಗಿ ಶಾಲೆಗಳ ನಿರ್ಧಾರ ಮಾಡಿವೆ. ಕಳೆದ 2 ವರ್ಷದಿಂದ ಕೋವಿಡ್ ಮಹಾಮಾರಿ ಹಿನ್ನೆಲೆ, ಖಾಸಗಿ ಶಾಲೆಗಳು ಶುಲ್ಕ ಹೆಚ್ಚಳ ಮಾಡಿರಲಿಲ್ಲ. ಇದೀಗ ಕೋವಿಡ್ ಕಡಿಮೆಯಾದ ಹಿನ್ನೆಲೆ ಶುಲ್ಕ ಹೆಚ್ಚಳಕ್ಕೆ ಮುಂದಾಗಿದೆ. ಮಕ್ಕಳ ಶುಲ್ಕದ ಶೇ.15 ರಷ್ಟು ಶುಲ್ಕ ಹೆಚ್ಚಳ ಮಾಡಲು ತೀರ್ಮಾನಿಸಿವೆ.

ಎರಡು ದಿನಗಳಿಂದ ಸ್ಥಿರತೆ ಕಾಯ್ದುಕೊಂಡಿದೆ ಚಿನ್ನದ ಬೆಲೆ! ಮತ್ಯಾಕೆ ತಡ ಈಗಲೇ ಬಂಗಾರ ಖರೀದಿಸಿ

ಕಳೆದ ಹತ್ತು ದಿನಗಳಲ್ಲಿ ಚಿನ್ನ ಹಾಗೂ ಬೆಳ್ಳಿ ದರಗಳು ಒಂದು ರೀತಿಯಲ್ಲಿ ಕಣ್ಣು ಮುಚ್ಚಾಲೆ ಆಟ ಆಡುತ್ತಿದ್ದರೂ ಕಳೆದ ಎರಡು ದಿನಗಳಲ್ಲಿ ಚಿನ್ನದ ಬೆಲೆಯಲ್ಲಿ ಸ್ಥಿರತೆ ಕಂಡು ಬಂದಿದೆ. ನಿನ್ನೆಗೆ ಹೋಲಿಸಿದರೆ ಇಂದು ಭಾರತದ ಮಾರುಕಟ್ಟೆಯಲ್ಲಿ ಆಭರಣ (Jewellery) ಚಿನ್ನದ ಬೆಲೆಯಲ್ಲಿ ಯಾವುದೇ ವ್ಯತ್ಯಾಸ ಕಂಡುಬಂದಿಲ್ಲ. ಇಂದು ಭಾರತದ ಮಾರುಕಟ್ಟೆಯಲ್ಲಿ ಬಂಗಾರದ (22 ಕ್ಯಾರಟ್) ದರದಲ್ಲಿ ನಿನ್ನೆಗೆ ಹೋಲಿಸಿದರೆ ಬದಲಾವಣೆ ಕಂಡುಬಂದಿಲ್ಲ.

ದೇಶದಲ್ಲಿ ಒಂದು ಗ್ರಾಂ ಆಭರಣ ಚಿನ್ನದ ಬೆಲೆ ಇಂದು ರೂ. 4,780 ಆಗಿದೆ. ರಾಜಧಾನಿ ನಗರ ಬೆಂಗಳೂರಿನಲ್ಲಿ ಇಂದು 22 ಕ್ಯಾರೆಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ. 47,800 ಆಗಿದ್ದರೆ ಚೆನ್ನೈ, ಮುಂಬೈ ಹಾಗೂ ಕೋಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ.48,420, ರೂ. 47,800, ರೂ. 47,800 ಆಗಿದೆ.

KGF ಬಗ್ಗೆ ಹಿಂಗೆಲ್ಲಾ ಹೇಳಿದ್ರಾ Urfi Javed? "ನಿಂಗಿದು ಬೇಕಿತ್ತಾ ಉರ್ಫಿ" ಅಂತಿದ್ದಾರೆ ಯಶ್ ಫ್ಯಾನ್ಸ್!

ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಹೊಸ ದಾಖಲೆ ಬರೆದ, ವಿಶ್ವದ ಸಿನಿ ಪ್ರಿಯರೇ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದ ಕೆಜಿಎಫ್ ಸಿನಿಮಾದ ಬಗ್ಗೆ ನಟಿ ಉರ್ಫಿ ಜಾವೇದ್  ಮಾತನಾಡಿದ್ದಾಳೆ. ಮುಂಬೈನಲ್ಲಿ ಕೆಜಿಎಫ್‌ ಚಾಪ್ಟರ್‌ 2 ಸಿನಿಮಾ ಬಗ್ಗೆ ಉರ್ಫಿಗೆ ಪತ್ರಕರ್ತರು ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ಉರ್ಫಿ ಉತ್ತರಿಸಿದ್ದಾಳೆ.

ಇದನ್ನೂ ಓದಿ: KGF ಬಗ್ಗೆ ಹಿಂಗೆಲ್ಲಾ ಹೇಳಿದ್ರಾ Urfi Javed? "ನಿಂಗಿದು ಬೇಕಿತ್ತಾ ಉರ್ಫಿ" ಅಂತಿದ್ದಾರೆ ಯಶ್ ಫ್ಯಾನ್ಸ್!

ದೇಶದೆಲ್ಲೆಡೆ ಕೆಜಿಎಫ್ ಚಾಪ್ಟರ್ 2 ಸಿನಿಮಾದ ಮೇನಿಯಾ ಇದೆ. ನೀವು ಕೆಜಿಎಫ್‌ ಚಾಪ್ಟರ್ 2 ಸಿನಿಮಾ ನೋಡ್ತೀರಾ, ಆ ಸಿನಿಮಾದ ಬಗ್ಗೆ ನೀವು ಎಷ್ಟು ಎಕ್ಸೈಟ್ ಆಗಿದ್ದೀರಿ ಅಂತ ಉರ್ಫಿಗೆ ಪತ್ರಕರ್ತರು ಕೇಳಿದ್ದಾರೆ. ಅದಕ್ಕೆ ಉತ್ತರಿಸಿದ ಉರ್ಫಿ, ಅಯ್ಯೋ ನಾನಿನ್ನೂ ಕೆಜಿಎಫ್‌ ಚಾಪ್ಟರ್ 1 ಸಿನಿಮಾವನ್ನೇ ನೋಡಿಲ್ಲ, ಈ ಬಗ್ಗೆ ನನಗೆ ಬಹಳ ಬೇಸರವಿದೆ. ಆದರೆ ಶೀಘ್ರದಲ್ಲಿಯೇ ನಾನು ಬಿಡುವು ಮಾಡಿಕೊಂಡು ಆ ಸಿನಿಮಾ ನೋಡಿಯೇ ನೋಡುತ್ತೇನೆ'' ಎಂದಿದ್ದಾರೆ.
Published by:Annappa Achari
First published: