Morning Digest: ಮಸೀದಿಯಲ್ಲಿ ದೇಶದ್ರೋಹಿ ಘೋಷಣೆ, ಸೇತುವೆ ಕಳ್ಳತನ, ಪುತ್ತೂರು ಜಾತ್ರೆಯಲ್ಲಿ ನಿಷೇಧ: ಬೆಳಗಿನ ಟಾಪ್ ನ್ಯೂಸ್ ಗಳು

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಮಸೀದಿಯಲ್ಲಿ ಕೇಳಿ ಬಂತು ದೇಶದ್ರೋಹಿ ಘೋಷಣೆ

ಶ್ರೀನಗರದ (Srinagar) ಪ್ರಸಿದ್ಧ ಜಾಮಿಯಾ ಮಸೀದಿಯಲ್ಲಿ (Jamia Masjid) ದೇಶದ್ರೋಹಿ ಘೋಷಣೆಗಳು ಕೇಳಿ ಬಂದಿವೆ. ಶುಕ್ರವಾರದ ಪ್ರಾರ್ಥನೆ (Namaaz) ವೇಳೆ ಆಜಾದಿ (Ajaadi) ಪರ ಘೋಷಣೆಗಳು ಕೇಳಿ ಬಂದಿದ್ದವು. ಈ ಕೇಸ್‌ಗೆ (Case) ಸಂಬಂಧಿಸಿದಂತೆ ಇದೀಗ 13 ಜನರನ್ನು ಜಮ್ಮ ಮತ್ತು ಕಾಶ್ಮೀರ (Jammu and Kashmir) ಪೊಲೀಸರು (Police) ಬಂಧಿಸಿದ್ದಾರೆ. ಬಂಧಿತರ ಪೈಕಿ ದೇಶದ್ರೋಹಿ ಘೋಷಣೆ ಕೂಗಲು ಪ್ರಚೋದಿಸಿದ ಇಬ್ಬರು ಸೇರಿದ್ದಾರೆ ಅಂತ ಪೊಲೀಸ್ ಮೂಲಗಳು ತಿಳಿಸಿವೆ. ಶ್ರೀನಗರದ ಅತ್ಯಂತ ಹಳೆಯ ಮಸೀದಿಗಳಲ್ಲಿ ಒಂದಾದ ಜಾಮಿಯಾ ಮಸೀದಿಯು ಸುಮಾರು ಎರಡು ವರ್ಷಗಳ ಕಾಲ ಮುಚ್ಚಲ್ಪಟ್ಟಿತ್ತು. ಇದೀಗ ಕಳೆದ ಒಂದು ತಿಂಗಳ ಹಿಂದಷ್ಟೇ ಪ್ರಾರ್ಥನೆಗಾಗಿ ತೆರೆಯಲಾಗಿತ್ತು.

60 ಅಡಿ ಉದ್ದ, 12 ಅಡಿ ಎತ್ತರದ ಸೇತುವೆ ಕದ್ದ ಕಳ್ಳರು

ಬಿಹಾರದ ರೋಹ್ತಾಸ್ ಜಿಲ್ಲೆಯ ಬಿಕ್ರಮ್‌ಗಂಜ್ ಉಪವಿಭಾಗದ ಪ್ರದೇಶದಲ್ಲಿರುವ 60 ಅಡಿ ಉದ್ದದ ಕಬ್ಬಿಣದ ಸೇತುವೆ(iron Bridge)ಯನ್ನೇ ಕಳ್ಳರು ಎಗರಿಸಿದ್ದಾರೆ. ಅದು ಸ್ಥಳೀಯ ಇಲಾಖೆಯ ಅಧಿಕಾರಿಗಳ ಸಹಾಯ ಪಡೆದು ಕಳ್ಳತನ ಮಾಡಿರೋದು ಆಶ್ಚರ್ಯಕರ ವಿಷಯ. ಈ ಕಳ್ಳತನ ಶುಕ್ರವಾರ ಬೆಳಕಿಗೆ ಬಂದಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನೆಟ್ಟಿಗರು ಕಳ್ಳರ (Thieves) ಜಾಣತನವನ್ನು ಹೊಗಳುವ ಮೂಲಕ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಚೀಮಾರಿ ಹಾಕಿದ್ದಾರೆ. ಈ ಸೇತುವೆಯ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಲಾಗಿತ್ತು. ಇದನ್ನೇ ಬಂಡವಾಳ ಮಾಡಿಕೊಂಡ ಕಳ್ಳರು ಸೇತುವೆಗಾಗಿ ಬಳಸಿದ್ದ ಕಬ್ಬಿಣದ ವಸ್ತುಗಳನ್ನು ದೋಚಿದ್ದಾರೆ. ಎಲ್ಲರ ಮುಂದೆಯೇ ಒಟ್ಟು 3 ದಿನ ಈ ಕಳ್ಳತನ ನಡೆದಿದೆ.

ಚಲಿಸುವ ಬೈಕ್ ನಿಂದಲೇ 10 ಲಕ್ಷ ದೋಚಿದ ಚಾಲಾಕಿ ಕಳ್ಳ

ಬೈಕ್ ನ ಸೈಡ್ ಪ್ಯಾಕೆಟ್ ನಲ್ಲಿ ಹಣ ಇಡುವ ಮುನ್ನ ಎಚ್ಚರ.. ಚಲಿಸುವ ಬೈಕ್ ನಿಂದಲೇ ಹಣ ದೋಚುವ ಚಾಲಾಕಿಗಳಿದ್ದಾರೆ ಜೋಪಾನ ಹೌದು ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದ ಎಪಿಎಮ್ ಸಿ ಸರ್ಕಲ್ ಬಳಿ ಚಲಿಸುತ್ತಿದ್ದ ಬೈಕ್ (Bike) ನ ಸೈಡ್ ಪ್ಯಾಕೆಟ್ ನಿಂದ ಖದೀಮರು 10 ಲಕ್ಷ ರೂಪಾಯಿಯನ್ನು (10 Lakh Rs) ಖದೀಮರು ದೋಚಿದ್ದಾರೆ. ಪಟ್ಟಣದ ಎಪಿಎಮ್ ಸಿ ಬಳಿ ಇರುವ ಎಸ್ ಬಿಐ ಬ್ಯಾಂಕ್ ನಿಂದ ರಾಮನಗೌಡ ಪಾಟೀಲ ಅನ್ನೋರು ಹಣ ಡ್ರಾ ಮಾಡ್ಕೊಂಡು ಹೊರಟಿದ್ರು.. ಬ್ಯಾಂಕ್ (Bank) ನಿಂದಲೇ ಪಾಟೀಲರನ್ನ ಹಿಂಬಾಲಿಸಿ ಬಂದ ಖದೀಮರು ಸರ್ಕಲ್ ಬಳಿ ಹಣ ದೋಚಿದ್ದಾರೆ.

Puttur: ಜಾತ್ರೆಯಲ್ಲೂ ನಿಷೇಧದ ಕೂಗು

ಹತ್ತೂರ ಒಡೆಯನ ಪುತ್ತೂರು ಜಾತ್ರೆ’ಗೆ ಕ್ಷಣಗಣನೆ (Count Down) ಆರಂಭವಾಗಿದೆ. 800 ವರ್ಷಗಳಷ್ಟು ಇತಿಹಾಸವಿರುವ (History) ಪ್ರಸಿದ್ಧ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ (Puttur Mahalingeshwara Temple) ಜಾತ್ರೋತ್ಸವವು (Jatre) ಇಂದಿನಿಂದ ಅಂದರೆ, ಎಪ್ರಿಲ್ 10 ರಿಂದ ಏಪ್ರಿಲ್ 20 ರ ತನಕ ನಡೆಯಲಿದೆ. ಇಲ್ಲಿ ಈ ಬಾರಿ ಅನ್ಯಧರ್ಮೀಯರಿಗೆ ಜಾತ್ರೋತ್ಸವದಲ್ಲಿ ವ್ಯಾಪಾರ-ವ್ಯವಹಾರಕ್ಕೆ ನಿಷೇಧ (Ban) ಹೇರಲಾಗಿದೆ. ಈ ನಿಷೇಧದ ಮುಂದುವರಿದ ಭಾಗವಾಗಿ ಜಾತ್ರೋತ್ಸವಕ್ಕೆ ಬರುವ ಭಕ್ತಾಧಿಗಳು (Devotees) ಹಿಂದೂ (Hindu) ಆಟೋ ಚಾಲಕರ ಆಟೋದಲ್ಲೇ (Auto) ಬರಬೇಕು ಎಂದು ಹಿಂದೂ ಜಾಗರಣ ವೇದಿಕೆ ಭಕ್ತಾಧಿಗಳಲ್ಲಿ ಮನವಿ ಮಾಡಿದೆ.

ಲವ್ ಜಿಹಾದ್ ಗೆ ಗುರಿಯಾದ ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ

ಹಿಜಾಬ್ ಆಯ್ತು, ಹಲಾಲ್ (Halal), ಜಟ್ಕಾ ಕಟ್ ಆಯ್ತು. ಮಾವಿನ ಹಣ್ಣಿನ ಮಾರಾಟದ ವಿವಾದವೂ ಆಯ್ತು. ಇದೀಗ ಲವ್ ಜಿಹಾದ್ (Love Jihad) ಗುರಿಯಾದವರನ್ನು ಸಾಮಾಜಿಕ ಬಹಿಷ್ಕಾರಕ್ಕೆ (Social Exclusion) ಗುರಿಪಡಿಸಬೇಕೆಂಬ ಬೇಡಿಕೆಯೂ ವ್ಯಕ್ತವಾಗಿದೆ. ಸರ್ಕಾರದ ಅಂಗವಾಗಿರೋ ಪ್ರಾಧಿಕಾರದ ಅಧ್ಯಕ್ಷರೇ ಬಹಿರಂಗವಾಗಿ ಪತ್ರ ಬರೆದಿದ್ದು, ಸಮಾಜ ಉಳಿಯಬೇಕೆಂದ್ರೆ ಇಂಥಹ ಕಟ್ಟುನಿಟ್ಟಿನ ಕ್ರಮ ಅನಿವಾರ್ಯ ಅಂತ ಸಮರ್ಥಿಸಿಕೊಂಡಿದ್ದಾರೆ. ಹುಬ್ಬಳ್ಳಿಯಲ್ಲಿ ಲವ್ ಜಿಹಾದ್ಗೆ ಗುರಿಯಾದ ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರದ ಗುಮ್ಮ ಎದುರಾಗಿದೆ
Published by:Mahmadrafik K
First published: