Morning Digest: ಇನ್ನೆರಡು ದಿನ ಮದ್ಯ ಸಿಗಲ್ವಾ?, ಕೊರೊನಾ 4ನೇ ಅಲೆ ಅಬ್ಬರ, ಚಿನ್ನದ ಬೆಲೆ: ಬೆಳಗಿನ ಟಾಪ್ ನ್ಯೂಸ್ ಗಳು

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
1.Shocking: ಸಾಫ್ಟ್​ವೇರ್ ಅಪ್ಡೇಟ್​ನಿಂದ ಲಿಕ್ಕರ್ ಸಪ್ಲೈ ಸ್ಟಾಪ್, ಇನ್ನೆರಡು ದಿನ ಮದ್ಯ ಸಿಗೋದು ಡೌಟು

ಮದ್ಯ ಪ್ರಿಯರಿಗೆ ಇದು ಶಾಕಿಂಗ್ ನ್ಯೂಸ್ (Shocking). ಸೇಫರ್ ಸೈಡ್ ಲಿಕ್ಕರ್ ಸ್ಟೊರೇಜ್ (Liquor Storage) ಮಾಡೋದಾದ್ರೆ ಮಾಡಿಕೊಂಡುಬಿಡಿ. ಹಾಗಂತ ಲಿಕ್ಕರ್ ರೇಟ್ ಏನು ಜಾಸ್ತಿ ಆಗ್ತಿಲ್ಲ. ಆದರೆ ಶಾಪ್ ಗಳಲ್ಲಿ ಲಿಕ್ಕರ್ ಸಪ್ಲೈ (Liquor Supply) ಆಗ್ತಿಲ್ಲ. ಅಷ್ಟಕ್ಕೂ ಯಾಕೆ ಹೀಗೆ ಅಂತೀರಾ? ಈ ಸ್ಟೋರಿ ಓದಿ.ಎಣ್ಣೆ ಪ್ರಿಯರೇ ನಿಮಗಿದು ಶಾಕಿಂಗ್ ನ್ಯೂಸೇ. ಎಲ್ಲ ದರ ಏರಿಕೆ ಆಯಿತು ಅಂತ ಎಣ್ಣೆ ರೇಟು ಜಾಸ್ತಿ ಆಯಿತು ಎಂದುಕೊಳ್ಳಬೇಡಿ. ಸೇಮ್ ರೇಟ್ ಇರುತ್ತೆ. ಆದರೆ ಖರೀದಿಸಲು ಎಣ್ಣೆ ಸಿಗೋ ಚಾನ್ಸ್ ಕಡಿಮೆಯಾಗುತ್ತೆ. ಯಾಕೆಂದ್ರೆ ಕಳೆದೈದು ದಿನಗಳಿಂದ ಲಿಕ್ಕರ್ ಶಾಪ್ ಗಳಿಗೆ ಎಣ್ಣೆ ಸಪ್ಲೈ ಆಗ್ತಿಲ್ಲ. ಇದರಿಂದ ಶಾಪ್ ಗಳಲ್ಲಿರುವ ಲಿಕ್ಕರ್ ಕಡಿಮೆಯಾಗ್ತಿದೆ.

2.Transfer: ಈ ತಿಂಗಳಾಂತ್ಯಕ್ಕೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಿಬ್ಬಂದಿಗಳ ವರ್ಗಾವಣೆ

ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು (Government first-grade colleges)ಗಳ ಸಿಬ್ಬಂದಿಯ ವರ್ಗಾವಣೆ ಈ ತಿಂಗಳ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ. ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪ್ರಾಧ್ಯಾಪಕರು, ಸಹ ಪ್ರಾಧ್ಯಾಪಕರು, ಸಹಾಯಕ ಪ್ರಾಧ್ಯಾಪಕರು, ಗ್ರಂಥಪಾಲಕರು, ಕ್ರೀಡಾ ಮತ್ತು ದೈಹಿಕ ಶಿಕ್ಷಣ ನಿರ್ದೇಶಕರು ಸೇರಿದಂತೆ ಶೇ.15 ರಷ್ಟು ಬೋಧಕ ಸಿಬ್ಬಂದಿ(Teaching Staff)ಗಳ ವರ್ಗಾವಣೆ ಪ್ರಕ್ರಿಯೆ ಈ ತಿಂಗಳಾಂತ್ಯಕ್ಕೆ ಪೂರ್ಣಗೊಳ್ಳಲಿದೆ ಎಂದು ಇಲಾಖೆ ಆಯುಕ್ತ ಪಿ.ಪ್ರದೀಪ್ ತಿಳಿಸಿದ್ದಾರೆ. ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ (DCTE Department of Collegiate & Technical Education), ಮಂಗಳವಾರ ತಿಳಿಸಿದೆ. ನಿಯಾಮಗಳ ಪ್ರಕಾರ ವಿವಿಧ ಮಾನದಂಡಗಳ ಆಧಾರದ ಮೇಲೆ ವರ್ಗಾವಣೆ ನಡೆಯಲಿದೆ ಎಂದು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಲಾಗಿದೆ.

3.Corona 4th Wave: ಏಷ್ಯಾ, ಯೂರೋಪ್ ರಾಷ್ಟ್ರಗಳಲ್ಲಿ ಕೊರೊನಾ 4ನೇ ಅಲೆಯ ಅಬ್ಬರ, ರೋಗ ಲಕ್ಷಣಗಳ ಬಗ್ಗೆ ತಿಳಿಯಿರಿ

ಕೊರೊನಾ (Corona) ಮಹಾಮಾರಿಯ ಅಬ್ಬರ (Wave) ಮತ್ತೊಮ್ಮೆ ಹೆಚ್ಚಾಗಿದೆ. ಕಳೆದ ಕೆಲವು ವಾರಗಳಿಂದ ಏಷ್ಯಾ ಮತ್ತು ಯುರೋಪ್‌ (Europe)ನ ಅನೇಕ ದೇಶಗಳು ಕೊರೋನಾ ವೈರಸ್‌ನ ನಾಲ್ಕನೇ ಅಲೆಯನ್ನು (Fourth Wave) ಎದುರಿಸುತ್ತಿವೆ. ಹೊಸ ಪ್ರಕರಣಗಳಲ್ಲಿ (New Cases) ಹಠಾತ್ ಹೆಚ್ಚಳಕ್ಕೆ ಕಾರಣ ಕೊರೋನಾದ ಓಮಿಕ್ರಾನ್ ಬಿಎ.2 (Omicron BA.2) ಎಂದು ನಂಬಲಾಗಿದೆ. ಬಿಕ್ಕಟ್ಟಿನ ಈ ಸಮಯದಲ್ಲಿ, ಕೊರೋನಾ ಹೊಸ ರೂಪಾಂತರದ XE ಬಗ್ಗೆ ಸಂಶೋಧಕರು ತಿಳಿದುಕೊಂಡಿದ್ದಾರೆ. ಇದುವರೆಗೆ ವೇಗವಾಗಿ ಹರಡುವ ಓಮಿಕ್ರಾನ್ ರೂಪಾಂತರಕ್ಕಿಂತ ಹತ್ತು ಪಟ್ಟು ವೇಗವಾಗಿ ಹರಡುವ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಸ್ವತಃ ವಿಶ್ವ ಆರೋಗ್ಯ ಸಂಸ್ಥೆ (WHO) ಮಾಹಿತಿ ನೀಡಿದೆ. ಇದು ಒಮಿಕ್ರಾನ್ ಬಿಎ.1 ಮತ್ತು ಬಿಎ.2 ರೂಪಾಂತರಗಳ ಸಂಯೋಜನೆಯಾಗಿದೆ ಎಂದು ಸಂಸ್ಥೆ ಹೇಳಿದೆ.

ಈ ಸುದ್ದಿಯನ್ನು ಪೂರ್ತಿಯಾಗಿ ಓದಲು ಇಲ್ಲಿ ಕ್ಲಿಕ್ ಮಾಡಿ

4.Gold and Silver Price Today : ಸ್ಥಿರತೆ ಕಾಯ್ದುಕೊಂಡ ಚಿನ್ನ, ಕುಸಿದ ಬೆಳ್ಳಿ : ಇಂದಿನ ದರ ಹೀಗಿದೆ

ಇಂದು ಭಾರತದ ಮಾರುಕಟ್ಟೆಯಲ್ಲಿ ಬಂಗಾರದ (22 ಕ್ಯಾರಟ್) ದರದಲ್ಲಿ ನಿನ್ನೆಗೆ ಹೋಲಿಸಿದರೆ ಬದಲಾವಣೆ ಕಂಡುಬಂದಿಲ್ಲ. ದೇಶದಲ್ಲಿ ಒಂದು ಗ್ರಾಂ ಆಭರಣ ಚಿನ್ನದ ಬೆಲೆ ಇಂದು ರೂ. 4,780 ಆಗಿದೆ. ರಾಜಧಾನಿ ನಗರ ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ. 47,800 ಆಗಿದ್ದರೆ ಚೆನ್ನೈ, ಮುಂಬೈ ಹಾಗೂ ಕೋಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ.48,160, ರೂ. 47,800, ರೂ. 47,800 ಆಗಿದೆ. ಇಂದು, ಬೆಂಗಳೂರಿನಲ್ಲಿ 10gm, 100gm, 1000gm (1ಕೆಜಿ) ಬೆಳ್ಳಿ ದರ ಕ್ರಮವಾಗಿ ರೂ. 710, ರೂ. 7,100 ಹಾಗೂ ರೂ. 71,000 ಗಳಾಗಿವೆ. ಇನ್ನುಳಿದಂತೆ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ 71,000 ಆಗಿದ್ದರೆ ದೆಹಲಿಯಲ್ಲಿ 66,300 ಮುಂಬೈನಲ್ಲಿ 66,300 ಹಾಗೂ ಕೋಲ್ಕತ್ತದಲ್ಲೂ ರೂ. 66,300 ಗಳಾಗಿದೆ.

ಇದನ್ನೂ ಓದಿ:  Viral Video: ಈ ಬೆಕ್ಕು ಮಗುವಿನ ಬೆನ್ನ ಮೇಲೆ ಕುಳಿತು ಮಾಡುತ್ತಿರೋದಾದ್ರೂ ಏನು ಅಂತ ನೀವೇ ಒಮ್ಮೆ ನೋಡಿ

5.Viral Video: ಸ್ಟಾರ್ ನಟನ ಚಿತ್ರದ ಹಾಡನ್ನು ಈ ಬಾಲಕಿ ಎಷ್ಟು ಚೆಂದವಾಗಿ ಹಾಡಿದ್ದಾಳೆ ನೋಡಿ

ಛತ್ತೀಸಗಡದ ಎಂಟು ವರ್ಷದ ಶಾಲಾ ಬಾಲಕಿ ಮುರಿ ಮುರಾಮಿ ಅವರ ಮುದ್ದಾದ ಹಾಡಿನ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಅಲ್ಲಿ ಅವರು ಬಾಲಿವುಡ್ ಗಾಯಕಿಯಾದ ಅಲ್ಕಾ ಯಗ್ನಿಕ್ ಮತ್ತು ಗಾಯಕ ಕುಮಾರ್ ಸಾನು ಅವರು ಹಾಡಿದ ‘ಕಹಿ ಪ್ಯಾರ್ ನಾ ಹೋ ಜಾಯೆ’ ಹಿಂದಿ ಹಾಡನ್ನು ತಮ್ಮ ಸುಮಧುರ ಧ್ವನಿಯಲ್ಲಿ ಹಾಡಿದ್ದಾರೆ. ಈ 34 ಸೆಕೆಂಡಿನ ವಿಡಿಯೋದಲ್ಲಿ ಈ ಬಾಲಕಿ ಮುರಿ ಮುರಾಮಿ ತನ್ನ ಶಾಲಾ ಸಮವಸ್ತ್ರದಲ್ಲಿ ಕಪ್ಪು ಹಲಗೆಯ ಮುಂದೆ ನಿಂತುಕೊಂಡು ಬಾಲಿವುಡ್ ನಟ ಸಲ್ಮಾನ್ ಖಾನ್ ಮತ್ತು ನಟಿ ರಾಣಿ ಮುಖರ್ಜಿ ಅವರಿಬ್ಬರು ನಟಿಸಿದ ಬಾಲಿವುಡ್ ಚಿತ್ರವಾದ ‘ಕಹಿ ಪ್ಯಾರ್ ನಾ ಹೋ ಜಾಯೆ’ ಟೈಟಲ್ ಟ್ರ್ಯಾಕ್ ಅನ್ನು ಹಾಡುತ್ತಿರುವುದನ್ನು ನಾವು ನೋಡಬಹುದಾಗಿದೆ.
Published by:Mahmadrafik K
First published: