Morning Digest: ಇಳಿಕೆಯಾದ ಚಿನ್ನ, BESCOM ಶಾಕ್, BA, Bcomಗೆ ಪ್ರವೇಶ ಪರೀಕ್ಷೆ: ಬೆಳಗಿನ ಟಾಪ್ ನ್ಯೂಸ್ ಗಳು

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
1.Gold Price: ಇಂದು ಇಳಿಕೆಯಾಗಿದೆ ಚಿನ್ನ-ಬೆಳ್ಳಿ ದರ! ಅಬ್ಬಬ್ಬಾ, ಇದು ನಿಜಕ್ಕೂ 'Gold' News!

ಕಳೆದ ಹತ್ತು ದಿನಗಳಲ್ಲಿ ಚಿನ್ನ ಹಾಗೂ ಬೆಳ್ಳಿ ದರಗಳು ಒಂದು ರೀತಿಯಲ್ಲಿ ಕಣ್ಣು ಮುಚ್ಚಾಲೆ ಆಟ ಆಡುತ್ತಿವೆ. ಆದಾಗ್ಯೂ, ಬೆಲೆಯಲ್ಲಿ ಅಷ್ಟೊಂದು ದೊಡ್ಡ ಬದಲಾಣೆಗಳು ಕಂಡುಬರುತ್ತಿಲ್ಲ. ನಿನ್ನೆಗೆ ಹೋಲಿಸಿದರೆ ಇಂದು ಹತ್ತು ಗ್ರಾಂ ಆಭರಣ ಚಿನ್ನದ ಬೆಲೆಯಲ್ಲಿ 150 ರೂಪಾಯಿಗಳ ಕುಸಿತವಾಗಿದೆ. ಇಂದು ಭಾರತದ ಮಾರುಕಟ್ಟೆಯಲ್ಲಿ ಬಂಗಾರದ (22 ಕ್ಯಾರಟ್) ದರದಲ್ಲಿ ನಿನ್ನೆಗೆ ಹೋಲಿಸಿದರೆ ಬದಲಾವಣೆ ಕಂಡುಬಂದಿಲ್ಲ. ದೇಶದಲ್ಲಿ ಒಂದು ಗ್ರಾಂ ಆಭರಣ ಚಿನ್ನದ ಬೆಲೆ ಇಂದು ರೂ. 4,780 ಆಗಿದೆ. ರಾಜಧಾನಿ ನಗರ ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ. 47,800 ಆಗಿದ್ದರೆ ಚೆನ್ನೈ, ಮುಂಬೈ ಹಾಗೂ ಕೋಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ.48,030, ರೂ. 47,800, ರೂ. 47,800 ಆಗಿದೆ. ಬೆಂಗಳೂರಿನಲ್ಲಿ 10gm, 100gm, 1000gm (1ಕೆಜಿ) ಬೆಳ್ಳಿ ದರ ಕ್ರಮವಾಗಿ ರೂ. 714, ರೂ. 7,140 ಹಾಗೂ ರೂ. 71,400 ಗಳಾಗಿವೆ.

2.Power Cut: ದರ ಏರಿಕೆ ಬೆನ್ನಲ್ಲೇ BESCOMನಿಂದ ಮತ್ತೊಂದು ಶಾಕ್! ಇಂದು ರಾಜಧಾನಿಯಲ್ಲಿ ವಿದ್ಯುತ್ ವ್ಯತ್ಯಯ

ನಿನ್ನೆ ವಿದ್ಯುತ್ ದರ (Power Bill Hike) ಏರಿಕೆ ಆದೇಶ ಹೊರಡಿಸಿ ಶಾಕ್ (Shock) ಕೊಟ್ಟಿದ್ದ ಬೆಸ್ಕಾಂ (BESCOM), ಇದೀಗ ಮತ್ತೊಂದು ಶಾಕ್ ಕೊಟ್ಟಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ಸಾಕಷ್ಟು ಕಡೆಗಳಲ್ಲಿ ವಿದ್ಯುತ್ ಕಡಿತ (Power Cut) ಮಾಡಲಾಗುತ್ತಿದೆ. ಬೇಸಿಗೆಯಲ್ಲಿ (Summer) ವಿದ್ಯುತ್ ಕಡಿತ ಜನರನ್ನು ಮತ್ತಷ್ಟು ಹೈರಾಣಾಗಿಸಿದೆ. ಬೇಸಿಗೆಯ ಸೆಖೆ ಒಂದು ಕಡೆಯಾದರೆ, ವಿದ್ಯುತ್ ಇಲ್ಲದೇ ಜನರು ಫ್ಯಾನ್, ಎಸಿ ಇಲ್ಲದೆ ಪರದಾಡುವ ಸ್ಥಿತಿ ಇದೆ. ನಗರದ (City) ಹಲವೆಡೆ ಕಾಮಗಾರಿಗಳು (Works) ನಡೆಯುತ್ತಿವೆ. ಹಾಗಾಗಿ ಬೆಂಗಳೂರು ನಗರದ ವಿದ್ಯುತ್ ವ್ಯತ್ಯಯ ಜನರನ್ನು ಒದ್ದಾಡುವಂತೆ ಮಾಡಿದೆ. ಇನ್ನು ವಿದ್ಯುತ್ ವ್ಯತ್ಯಯ ಒಂದು ಎರಡು ದಿನದ್ದಲ್ಲ. ದಿನವೂ ಸಮಸ್ಯೆ (Problem) ಇದ್ದೇ ಇರುತ್ತದೆ. ವಿದ್ಯುತ್ ವ್ಯತ್ಯಯ ಸಮಸ್ಯೆ ಅಂಗಡಿಗಳಲ್ಲಿ ಬೇಸಿಗೆ ವ್ಯಾಪಾರ ಮಾಡಿಕೊಳ್ಳಬೇಕೆಂದು ಬಯಸುವ ವ್ಯಾಪಾರಿಗಳಿಗೆ ಶಾಕ್ ಕೊಟ್ಟಿದೆ. ವಿದ್ಯುತ್ ಇಲ್ಲದೆ, ಗಿರಾಕಿಗಳಿಗೆ ಜ್ಯೂಸ್, ಲಸ್ಸಿ ಸೇರಿದಂತೆ ತಂಪು ಪಾನೀಯ ನೀಡಲು ಸಾಧ್ಯವಾಗುತ್ತಿಲ್ಲ. ಬೆಸ್ಕಾಂ (BESCOM) ನಗರದ ಹಲವೆಡೆ ವಿದ್ಯುತ್ ಕಡಿತ ಮಾಡುವ ಮೂಲಕ ಶಾಕ್ ನೀಡುತ್ತಿದೆ.

ಈ ಸುದ್ದಿಯನ್ನು ಪೂರ್ತಿಯಾಗಿ ಓದಲು ಇಲ್ಲಿ ಕ್ಲಿಕ್ ಮಾಡಿ

3.ಇನ್ಮುಂದೆ BA, Bcomಗೂ ಪ್ರವೇಶ ಪರೀಕ್ಷೆ: PUC ಅಂಕಗಳು ಲೆಕ್ಕಕ್ಕೆ ಇಲ್ಲವಾ?

ಶಿಕ್ಷಣ ಅಂಗಳದಲ್ಲಿ ಕಳೆದ ಕೆಲವು ವರ್ಷಗಳಿಂದ ಮಹತ್ತರ ಬದಲಾವಣೆಗಳು ಆಗುತ್ತಿದೆ. ಈ ಬದಲಾವಣೆಗಳ ಬಗ್ಗೆ ಇಂದಿಗೂ ಪರ –ವಿರೋಧದ ಚರ್ಚೆಗಳು ನಡೆಯುತ್ತಿವೆ. ವೈದ್ಯಕೀಯ ಶಿಕ್ಷಣ(Medical Education)ಕ್ಕಾಗಿ ಉಕ್ರೇನ್ (Ukraine) ಗೆ ತೆರಳಿ ಅಲ್ಲಿ ಸಿಲುಕಿದ್ದ ವಿದ್ಯಾರ್ಥಿ(Students)ಗಳು ಭಾರತ(India)ಕ್ಕೆ ಹಿಂದಿರುಗಿದ ಮೇಲೆ ನೀಟ್ (NEET) ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಈಗ ಉನ್ನತ ಶಿಕ್ಷಣ (Higher Education) ಮತ್ತು ವೃತ್ತಿಪರ ಕೋರ್ಸ್ (Professional course) ಗಳ ಅಡಿಪಾಯ ಆಗಿರುವ ಪಿಯುಸಿ (PUC) ತನ್ನ ಪ್ರಾಮುಖ್ಯತೆಯನ್ನು ಕಳೆದುಕೊಳ್ಳುತ್ತಿದೆಯಾ ಎಂಬ ಪ್ರಶ್ನೆಯೊಂದು ಶಿಕ್ಷಣ ಅಂಗಳದಲ್ಲಿ ಕೇಳಿ ಬರುತ್ತಿದೆ. ಇನ್ಮುಂದೆ ಪದವಿ ಪ್ರವೇಶಾತಿಗೆ ಪರೀಕ್ಷೆ ಆಂದ್ರೆ ರಾಷ್ಟ್ರೀಯ ಪ್ರವೇಶ ಪರೀಕ್ಷೆಯ ವ್ಯವಸ್ಥೆ ಜಾರಿಯಾಗುತ್ತಿದೆ ಎಂದು ವಿಜಯವಾಣಿ ವರದಿಯಾಗಿದೆ. ರಾಷ್ಟ್ರೀಯ ಪ್ರವೇಶ ಪರೀಕ್ಷೆಗಳ ಅಬ್ಬರದಲ್ಲಿ ಪಿಯುಸಿ ಕೇವಲ ವಿದ್ಯಾರ್ಹತೆಯಾಗಿ ಬದಲಾಗುವ ಸುಳಿವುಗಳು ಸಿಗ್ತಿವೆ.

4.Economic Crisis: ಶ್ರೀಲಂಕಾದಲ್ಲಿ ಆರ್ಥಿಕ ಅಧಃಪತನ, ಒಂದಾಗುತ್ತಾ ಆಡಳಿತ-ವಿರೋಧ ಪಕ್ಷ?

ಶ್ರೀಲಂಕಾ (Sri Lanka) ಅಧ್ಯಕ್ಷ ಗೊಟಾಬಯ ರಾಜಪಕ್ಸೆ ಅವರು ಸೋಮವಾರ ಸಂಸತ್ತಿನಲ್ಲಿ ಎಲ್ಲಾ ಪಕ್ಷಗಳಿಗೆ ತಮ್ಮ ರಾಜೀನಾಮೆಗೆ (resignation) ಕರೆ ನೀಡುವ ನಾಗರಿಕರ ಪ್ರತಿಭಟನೆಗಳು (Civil Protest) ದೇಶಾದ್ಯಂತ ಉಲ್ಬಣಗೊಂಡಿದ್ದರೂ ಸಹ, ದೇಶದ ಸುರುಳಿಯ ಬಿಕ್ಕಟ್ಟನ್ನು ಜಂಟಿಯಾಗಿ ಪರಿಹರಿಸಲು ತಮ್ಮೊಂದಿಗೆ ಕೆಲಸ ಮಾಡಲು ಆಹ್ವಾನಿಸಿದ್ದಾರೆ. ಆದರೆ ಎಲ್ಲಾ ಪ್ರಮುಖ ವಿರೋಧ ಪಕ್ಷಗಳು ಈ ಪ್ರಸ್ತಾಪವನ್ನು ತಿರಸ್ಕರಿಸಿದವು. ಅವರು ಮತ್ತು ಅವರ ಕುಟುಂಬ ಸದಸ್ಯರು ಸರ್ಕಾರವನ್ನು ತಕ್ಷಣವೇ ತ್ಯಜಿಸಬೇಕು ಎಂಬ ಜನರ ಮುಖ್ಯ ಬೇಡಿಕೆಯನ್ನು (request) ಅಧ್ಯಕ್ಷರಿಗೆ ಮತ್ತೊಮ್ಮೆ ನೆನಪಿಸಿಕೊಟ್ಟು ತಾವು ಬೆಂಬಲ ನೀಡುವುದಿಲ್ಲ ಎಂದಿದ್ದಾರೆ.

ಇದನ್ನೂ ಓದಿ:  Loud Speaker: ಧ್ವನಿವರ್ಧಕ ಅಭಿಯಾನಕ್ಕೆ ಚಾಲನೆ ನೀಡಿದ ಋಷಿಕುಮಾರ ಸ್ವಾಮೀಜಿ: ರಾಮತಾರಕ ಮಂತ್ರ ಪಠಣೆ

5.Viral Photo: ಪುಟ್ಟ ತಂಗಿಯನ್ನು ಮಡಿಲಿನಲ್ಲಿ ಇರಿಸಿಕೊಂಡು ಪಾಠ ಕೇಳುವ 10 ವರ್ಷದ ಬಾಲಕಿ: ಹೃದಯ ಸ್ಪರ್ಶಿ ಫೋಟೋ ವೈರಲ್

10 ವರ್ಷದ (10 Year Old Girl )ಮಣಿಪುರಿ ಬಾಲಕಿ ತನ್ನ ತಂಗಿ(Sister)ಯನ್ನು ತನ್ನ ಮಡಿಲಲ್ಲಿಟ್ಟುಕೊಂಡು ಶಾಲೆಗೆ (School) ಹೋಗುತ್ತಿರುವ ಫೋಟೋ ನೆಟಿಜನ್‌ಗಳ ಗಮನ ಸೆಳೆದಿದೆ. ತಂಗಿಯನ್ನು ಮಡಿಲಿನಲ್ಲಿಯೇ ಇಟ್ಟುಕೊಂಡು ಪಾಠ ಸಹ ಕೇಳಿದ್ದಾಳೆ. ಈ ಫೋಟೋವನ್ನು ಮಣಿಪುರದ ವಿದ್ಯುತ್, ಅರಣ್ಯ ಮತ್ತು ಪರಿಸರ ಸಚಿವ ಟಿ. ಬಿಸ್ವಜಿತ್ ಸಿಂಗ್ (Manipur Power, Forest, and Environment Minister Th. Biswajit Singh) ತಮ್ಮ ಟ್ವಿಟರ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
Published by:Mahmadrafik K
First published: