Morning Digest: ಇಂದು ಭಾಸ್ಕರ್ ರಾವ್ AAP ಸೇರ್ಪಡೆ, ಬೆಳಗಾವಿಯಲ್ಲಿ ಕೊಲೆ, ಇವತ್ತಿನ ಚಿನ್ನದ ದರ: ಬೆಳಗಿನ ಟಾಪ್ ನ್ಯೂಸ್ ಗಳು

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
1.Bhaskar Rao: ಇಂದು ಅರವಿಂದ್ ಕೇಜ್ರಿವಾಲ್ ಸಮ್ಮುಖದಲ್ಲಿ ಭಾಸ್ಕರ್ ರಾವ್‌ AAP ಸೇರ್ಪಡೆ

ಇತ್ತೀಚೆಗೆ ಗಡಿ ರಾಜ್ಯ ಪಂಜಾಬ್‌ ನಲ್ಲಿ (Border State Punjab) ಅಧಿಕಾರ ಗಳಿಸಿದ ಬಳಿಕ ಭಾರೀ ಹುಮ್ಮಸ್ಸಿನಲ್ಲಿರುವ ಆಮ್ ಆದ್ಮಿ ಪಕ್ಷ (Aam Admi Party) ಈಗ ಕರ್ನಾಟಕದಲ್ಲೂ (Karnataka) ನೆಲೆಯೂರಲು ಪ್ರಯತ್ನಿಸುತ್ತಿದೆ. ಈಗಾಗಲೇ ಹಲವಾರು ನಾಯಕರ ಸಂಪರ್ಕ ಮಾಡಿದೆ. ಇಂದು ದೆಹಲಿ ಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ (Chief Minister Of Delhi And Aam Admi Party National Convener Aravind Kejriwal) ನೇತೃತ್ವದಲ್ಲಿ ಕರ್ನಾಟಕದ ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ (Bhaskar Rao) ಪಕ್ಷ ಸೇರುತ್ತಿದ್ದಾರೆ. ಮಧ್ಯಾಹ್ನ 1 ಗಂಟೆಗೆ ದೆಹಲಿಯ ಆಮ್ ಆದ್ಮಿ ಪಕ್ಷದ ಕಚೇರಿಯಲ್ಲಿ ಅರವಿಂದ ಕೇಜ್ರಿವಾಲ್, ದೆಹಲಿ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ, ಆಮ್ ಆದ್ಮಿ ಪಕ್ಷದ ಕರ್ನಾಟಕದ ಸಂಚಾಲಕ ಪೃಥ್ವಿ ರೆಡ್ಡಿ ಸಮ್ಮುಖದಲ್ಲಿ ಭಾಸ್ಕರ್ ರಾವ್ ಆಮ್ ಆದ್ಮಿ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆ ಆಗಲಿದ್ದಾರೆ.

2.Murder: ಮನೆಗೇ ಹೊಕ್ಕಿ ಯುವಕನನ್ನು ಹೊತ್ತೊಯ್ದರು, ಕೊಲೆ ಮಾಡಿ ಮನೆ ಬಳಿಯೇ ಎಸೆದರು!

ಕುಂದಾನಗರಿ ಬೆಳಗಾವಿ ಮತ್ತೆ ಬೆಚ್ಚಿ ಬಿದ್ದಿದೆ. ಬೆಳಗಾವಿ (Belagavi) ತಾಲೂಕಿನ ರಣಕುಂಡೆ (Ranakunde) ಗ್ರಾಮದಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಬರ್ಬರ ಹತ್ಯೆ (Murder) ಮಾಡಲಾಗಿದೆ. ನೋಡಲು ಚಿಕ್ಕ ಗ್ರಾಮವಾಗಿದ್ದರೂ ಇಲ್ಲಿ ಪುಡಿ ರೌಡಿಗಳ (Rowdy) ಅಟ್ಟಹಾಸ ಜೋರಾಗಿದ್ದು ರಾತ್ರೋರಾತ್ರಿ ಮನೆಗೆ ನುಗ್ಗಿ ಹಲ್ಲೆ ಮಾಡಿ ಯುವಕನನ್ನ ಹೊತ್ತೊಯ್ದು ಕೊಲೆ ಮಾಡಿದ್ದಾರೆ. 30 ವರ್ಷದ ನಾಗೇಶ್ ಪಾಟೀಲ್ ಕೊಲೆಯಾದ ಯುವಕನಾಗಿದ್ದಾ‌ನೆ. ಹಳೆ ವೈಷಮ್ಯ ಹಿನ್ನೆಲೆಯಲ್ಲಿ ಯುವಕನ ಮನೆಗೆ ಬಂದು ಹಂತಕರು ದಾಂಧಲೆ ಮಾಡಿದ್ದಾರೆ. ಅಷ್ಟೇ ಅಲ್ಲದೇ ದುಷ್ಕರ್ಮಿಗಳ ತಂಡ ಯುವಕನ ಎಳೆದೊಯ್ದು ಹತ್ಯೆ ಮಾಡಿ ಮನೆ ಬಳಿ ಶವ (Dead Body) ಬಿಸಾಕಿ ಪರಾರಿಯಾಗಿದ್ದಾರೆ.

ಇದನ್ನೂ ಓದಿ:  Video: ನಿವೇದಿತಾ ಗೌಡ ಹಲ್ಲು ಮುರಿದುಕೊಂಡ್ರಂತೆ! 'ಚಂದನ'ದ 'ಗೊಂಬೆ'ಗೆ ಅದೇನಾಯ್ತು ಅಂತ ನೋಡ್ರಪ್ಪ...

3.ಗಂಡು ಮಗುವಿನ ತಾಯಿಯಾದ ಭಾರತಿ ಸಿಂಗ್

ಹಾಸ್ಯ ಕಲಾವಿದೆ, ಕಾಮಿಡಿ ಕ್ವೀನ್ ಭಾರತಿ ಸಿಂಗ್  (Comedy Queen Bharti Singh)ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಭಾರತಿ ಪತಿ ಹರ್ಷ ಲಿಂಬಾಚಿಯಾ (Harash Limbaciya) ತಮ್ಮ ಇನ್ ಸ್ಟಾಗ್ರಾಂ ಖಾತೆಯ ಮೂಲಕ ಈ ಸಿಹಿ ಸುದ್ದಿಯನ್ನು ತಿಳಿಸಿದ್ದಾರೆ. ಇನ್ ಸ್ಟಾಗ್ರಾಂ ಪೋಸ್ಟ್ ಮಾಡಿರುವ ಹರ್ಷ್, ತಾಯಿಯಾಗಿರುವ ಪತ್ನಿಗೆ ಶುಭಾಶಯಗಳನ್ನು ತಿಳಿಸುವ ಮೂಲಕ ತಮ್ಮ ಸಂಭ್ರಮವನ್ನು ವ್ಯಕ್ತಪಡಿಸಿದ್ದಾರೆ. ಇದೀಗ ಹರ್ಷ್ ಮಾಡಿರುವ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇನ್ನೂ ಈ ವಿಷಯ ತಿಳಿಯುತ್ತಿ ದ್ದಂತೆ ಕಿರುತೆರೆ ಮತ್ತು ಹಿರಿತೆರೆಯ ಕಲಾವಿದರೆಲ್ಲರೂ ಭಾರತಿ ಮತ್ತು ಹರ್ಷ್ ಗೆ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ. ಅಭಿಮಾನಿಗಳು ಸಹ ಕಮೆಂಟ್ ಮೂಲಕ ಭಾರತಿ ಮತ್ತು ಹರ್ಷ್ ಗೆ ಶುಭಾಶಯ ತಿಳಿಸುತ್ತಿದ್ದಾರೆ.

4.Gold and Silver Price: ಚಿನ್ನ-ಬೆಳ್ಳಿ ದರದಲ್ಲಿ ಸ್ಥಿರತೆ, ಇಂದು ನಿಮ್ಮ ನಗರದಲ್ಲಿ ಎಷ್ಟಿದೆ ಗೋಲ್ಡ್ ರೇಟ್?

ಇಂದು ಭಾರತದ ಮಾರುಕಟ್ಟೆಯಲ್ಲಿ ಬಂಗಾರದ (22 ಕ್ಯಾರೆಟ್‌) ದರದಲ್ಲಿ ನಿನ್ನೆಗೆ ಹೋಲಿಸಿದರೆ ಬದಲಾವಣೆ ಕಂಡುಬಂದಿಲ್ಲ. ದೇಶದಲ್ಲಿ ಒಂದು ಗ್ರಾಂ ಆಭರಣ ಚಿನ್ನದ ಬೆಲೆ ಇಂದು ರೂ. 4,795 ಆಗಿದೆ. ರಾಜಧಾನಿ ನಗರ ಬೆಂಗಳೂರಿನಲ್ಲಿ ಇಂದು 22 ಕ್ಯಾರೆಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ. 47,950 ಆಗಿದ್ದರೆ ಚೆನ್ನೈ, ಮುಂಬೈ ಹಾಗೂ ಕೋಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ.48,250, ರೂ. 47,950, ರೂ. 47,950 ಆಗಿದೆ. ಇಂದು, ಬೆಂಗಳೂರಿನಲ್ಲಿ ಬೆಳ್ಳಿಯ ದರದಲ್ಲಿ ನಿನ್ನೆಗೆ ಹೋಲಿಸಿದರೆ ಯಾವುದೇ ವ್ಯತ್ಯಾಸ ಕಂಡುಬಂದಿಲ್ಲ ಹಾಗೂ 10gm, 100gm, 1000gm (1ಕೆಜಿ) ಬೆಳ್ಳಿ ದರ ಕ್ರಮವಾಗಿ ರೂ. 713, ರೂ. 7,130 ಹಾಗೂ ರೂ. 71,300 ಗಳಾಗಿವೆ.

ಇದನ್ನೂ ಓದಿ:  ಮೊಗೇರ ಸಮುದಾಯದ ಯುವಕರಿಂದ ಪಕೋಡ ಮಾರಿ Protest! ಅದ್ಯಾಕೆ ಅಂತ ನೀವೇ ನೋಡಿ

5.Viral News: ಮದುವೆಯಲ್ಲಿ ವೇದಿಕೆ ಮೇಲೆಯೇ ವರ-ವಧುವಿಗೆ ಮದ್ಯ ಕುಡಿಸಿದ ಗೆಳೆಯರು: ಹೇಗೆ ಗೊತ್ತಾ?

ಕೆಲವೊಮ್ಮೆ ವಿಚಿತ್ರ ಗಿಫ್ಟ್ ಗಳನ್ನು ನೀಡುವ ಮೂಲಕ ನವಜೋಡಿಯನ್ನು ಇಕ್ಕಟ್ಟಿಗೆ ಸಿಲುಕಿಸುತ್ತಾರೆ. ವೇದಿಕೆ ಮೇಲೆ ನಡೆಯುವ ಸಣ್ಣ ತರಲೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ವರನಿಗೆ ಆತನ ಗೆಳೆಯರು ಮದ್ಯ ಕುಡಿಸಿದ್ದಾರೆ. ತಾನು ಕುಡಿಯುತ್ತಿರುವ ಜ್ಯೂಸ್ ನಲ್ಲಿ ಮದ್ಯ ಬೆರೆಕೆ ಆಗಿರುವ ವಿಷಯ ತಿಳಿಯುತ್ತಿದ್ದಂತೆ ವರ ಒಂದು ಕ್ಷಣ ಶಾಕ್ ಆಗಿದ್ದಾನೆ. ಸದ್ಯ ಈ ವಿಡಿಯೋ ನೋಡಿದ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಇಲ್ಲಿ ಮದ್ಯ ಮಿಶ್ರಿತ ಜ್ಯೂಸ್ ನ್ನು ವಧುವಿಗೂ ಸಹ ನೀಡಲಾಗಿದೆ.
Published by:Mahmadrafik K
First published: