Morning Digest: ಮಟನ್ ಖರೀದಿಗಾಗಿ ಕ್ಯೂ, ನವವಿವಾಹಿತೆಯ ಅನುಮಾನಾಸ್ಪದ ಸಾವು, ಚಿನ್ನದ ದರ ಇಳಿಕೆ: ಬೆಳಗಿನ ಟಾಪ್ ನ್ಯೂಸ್ ಗಳು

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
1.Halal And Jhatka ಕಟ್ ಗೆ ತಲೆ ಕೆಡಿಸಿಕೊಳ್ಳದ ಜನರು

ಹೊಸ ತೊಡಕು ಹಿನ್ನೆಲೆ ಇಂದು ಬೆಳಗಿನ ಜಾವ ಎರಡು ಗಂಟೆಯಿಂದಲೇ ಜನರು ಮಾಂಸ ಖರೀದಿ ಮಾಡಲು ಅಂಗಡಿಗಳ ಮುಂದೆ ಕ್ಯೂ ನಿಂತಿದ್ದಾರೆ. ಕಳೆದ ಎರಡ್ಮೂರು ವಾರಗಳಿಂದ ರಾಜ್ಯದಲ್ಲಿ ಹಲಾಲ್ ಕಟ್ ಮತ್ತು ಜಟ್ಕಾ ಕಟ್ ವಿವಾದ ಉಂಟಾಗಿತ್ತು. ಆದ್ರೆ ಇದನ್ನಾವುದೇ ತಲೆ ಕೆಡಿಸಿಕೊಳ್ಳದ ಜನರು ಎಂದಿನಂತೆ ತಮ್ಮ ರೆಗ್ಯೂಲರ್ ಅಂಗಡಿಗಳಲ್ಲಿ ಮಾಂಸ ಖರೀದಿ ಮಾಡುತ್ತಿದ್ದಾರೆ. ಮೈಸೂರು ರಸ್ತೆಯಲ್ಲಿರುವ ಪಾಪಣ್ಣ ಮಟನ್ ಸ್ಟಾಲ್ ನಲ್ಲಿ ರಾತ್ರಿ 2 ಗಂಟೆಯಿಂದಲ್ಲೇ ಮಟನ್ ಖರೀದಿ ಶುರು ಮಾಡಲಾಗಿದೆ. ಮಟನ್, ಚಿಕನ್ ಖರೀದಿಗೆ ಬರುವ ಜನರು ಹಲಾಲ್, ಜಟ್ಕಾ ಎಂದು ಕೇಳುತ್ತಿಲ್ಲ. ಬದಲಾಗಿ ಒಳ್ಳೆಯ ಮಾಂಸ ನೀಡಿ ಎಂದು ಕೇಳುತ್ತಿದ್ದಾರೆ. ಪಾಪಣ್ಣ ಮಟನ್ ಸ್ಟಾಲ್ ಬಳಿ ಜನರು ಬೆಳಗಿನ ಜಾವದಿಂದಲೇ ಸಾಲಿನಲ್ಲಿ ನಿಂತು ಮಟನ್ ಖರೀದಿ ಮಾಡುತ್ತಿದ್ದಾರೆ. ಹಬ್ಬದ ಹಿನ್ನೆಲೆ ಮಟನ್ ಬೆಲೆ ಕೆಜಿಗೆ 800 ರೂ. ತಲುಪಿದೆ. ಇನ್ನು ಚಿಕನ್ ಬೆಲೆ 300 ರಿಂದ 400 ರೂ. ವರೆಗೆ ಇದೆ.

2.Covid19: ಮಾಸ್ಕ್ ಬಗ್ಗೆ ಕೇಳಿದ್ದಕ್ಕೆ ನಾವು ಧರಿಸೋ ತನಕ ನೀವೂ ಧರಿಸಿ ಎಂದ ಮಹಾ ಸಿಎಂ

ಕೊರೋನಾ ಹೊಸ ವೇರಿಯೆಂಟ್​ಗಳು ಪತ್ತೆಯಾಗಿದ್ದರೂ ಒಟ್ಟಾರೆಯಾಗಿ ಕೊರೋನಾ ಪ್ರಕರಣಗಳು ಇಳಿಕೆಯಾಗಿವೆ ಎಂಬ ಪಾಸಿಟಿವ್ (Positive) ಸುದ್ದಿ ಕೇಳಿಬರುತ್ತಿವೆ. ಇದರ ನಡುವೆ ಜಾಗತಿಕವಾಗಿ ಕೊರೋನಾ ಪ್ರಕರಣಗಳ ಸಂಖ್ಯೆ ಕಡಿಮೆ ಇದ್ದರೂ ಕೊರೋನಾದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಿದೆ ಎಂದಿರುವುದು ಇನ್ನಷ್ಟು ಭೀತಿ ಮೂಡಿಸಿದೆ. ಪರಿಸ್ಥಿತಿ ಹೀಗಿದ್ದರೂ ದೇಶದ ಹಲವೆಡೆ ಈಗ ಮಾಸ್ಕ್ ಕಡ್ಡಾಯವಲ್ಲ (Not Mandatory) ಎಂದು ತಿಳಿಸಲಾಗಿದೆ. ಮಾಸ್ಕ್ ಧರಿಸುವ ವಿಚಾರದಲ್ಲಿ ಕಡ್ಡಾಯ ಕೊನೆಗೊಂಡಿದ್ದರೂ, ತಾವು ಹಾಗೂ ಮತ್ತು ತಮ್ಮ ಡಿಸಿಎಂ (DCM) ಅಜಿತ್ ಪವಾರ್ ಮಾಸ್ಕ್ ಧರಿಸುವುದನ್ನು ಮುಂದುವರಿಸುವವರೆಗೆ ಜನರು ಸಾರ್ವಜನಿಕವಾಗಿ ಮಾಸ್ಕ್ ಧರಿಸಬೇಕು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಶನಿವಾರ ಹೇಳಿದ್ದಾರೆ. COVID-19 ಸಾಂಕ್ರಾಮಿಕ ರೋಗವನ್ನು ನಿಗ್ರಹಿಸಲು ಉದ್ದೇಶಿಸಿರುವ ಮಾಸ್ಕ್ ಮ್ಯಾಂಡೇಟ್ ಸೇರಿದಂತೆ ಎಲ್ಲಾ ನಿರ್ಬಂಧಗಳು ಏಪ್ರಿಲ್ 2 ರಿಂದ ಕೊನೆಗೊಳ್ಳಲಿವೆ ಎಂದು ರಾಜ್ಯ ಸರ್ಕಾರ ಎರಡು ದಿನಗಳ ಹಿಂದೆ ಘೋಷಿಸಿತ್ತು.

ಇದನ್ನೂ ಓದಿ:  Crime News: ಸಾಲ ಮಾಡುವ ಮುನ್ನ ಹುಷಾರ್, ಹೆಚ್ಚಿನ ಬಡ್ಡಿ ಕೊಡದಿದ್ದರೆ ಬೆತ್ತಲೆ ಫೋಟೋ ವೈರಲ್ ಮಾಡ್ತಾರಂತೆ!

3..Chikkamagaluru: ಹಬ್ಬದ ದಿನದಂದೇ ವರದಕ್ಷಿಣೆ ಕಿರುಕುಳಕ್ಕೆ ನವವಿವಾಹಿತೆ ಬಲಿ: ಇಲಿ ಪಾಷಾಣ ನೀಡಿ ಕೊಲೆಯ ಶಂಕೆ!

ಚಿಕ್ಕಮಗಳೂರು : ಯುಗಾದಿ ದಿನದಂದೇ ವರದಕ್ಷಿಣೆ ಕಿರುಕುಳಕ್ಕೆ ನವವಿವಾಹಿತೆ ಬಲಿಯಾಗಿರೋ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕಾರಬೈಲ್ ಗ್ರಾಮದಲ್ಲಿ ನಡೆದಿದೆ. ಸಂತೋಷ-ನೆಮ್ಮದಿ ತರಬೇಕಿದ್ದ ಯುಗಾದಿ ನವವಿವಾಹಿತೆ ಪೋಷಕರ ಬಾಳಲ್ಲಿ ಸೂತಕ ತಂದೊಡ್ಡಿದೆ. ವರದಕ್ಷಿಣೆ ಕಿರುಕುಳಕ್ಕೆ ಬಲಿಯಾಗಿರೋ ನವವಿವಾಹಿತೆ ಹೆಸರು ಗಾನವಿ. ಚಿಕ್ಕಮಗಳೂರು ಜಿಲ್ಲೆ ಎನ್.ಆರ್ ಪುರ ತಾಲೂಕಿನ ಬನ್ನೂರು ಗ್ರಾಮದ ಗಾನವಿಯನ್ನ ಒಂದು ವರ್ಷದ ಹಿಂದೆಯಷ್ಟೇ ಮೂಡಿಗೆರೆ ತಾಲೂಕಿನ ಕಾರಬೈಲ್ ಗ್ರಾಮದ ನಂದಿಪ್ ಎಂಬಾತನಿಗೆ ಮದುವೆ ಮಾಡಿ ಕೊಡಲಾಗಿತ್ತು. ಎಂಎ ಓದಿಕೊಂಡಿದ್ದ ಗಾನವಿ, ಬೆಂಗಳೂರಿನಲ್ಲಿ ಕೆಲಸ ಕೂಡ ಮಾಡ್ತಿದ್ದಳು. ಆದರೆ ಮದುವೆ ನಿಶ್ಚಯ ಆದಮೇಲೆ ಕೆಲಸಕ್ಕೆ ಗುಡ್ ಬೈ ಹೇಳಿ, ಮುಂದೆ ಒಳ್ಳೆಯ ಜೀವನ ಸಿಗುತ್ತದೆ ಅನ್ನೋ ಕನಸನ್ನ ಕಟ್ಟಿಕೊಂಡಿದ್ದಳು. ಒಳ್ಳೆ ಹುಡುಗ ಅಂತಾ ಗಾನವಿ ಪೋಷಕರು ಅದ್ದೂರಿಯಾಗಿಯೇ ಮದುವೆ ಮಾಡಿಕೊಟ್ಟರು. ಆದರೆ ಬರೀ ಮೂರೇ ತಿಂಗಳಲ್ಲಿ ನಂದೀಪನ ಅಸಲಿ ಮುಖ ಬಯಲಾಗತೊಡಗಿತ್ತು.

4.Gold Price: ವೀಕೆಂಡ್‌ನಲ್ಲಿ ಆಭರಣ ಪ್ರಿಯರಿಗೆ ಗುಡ್ ನ್ಯೂಸ್; ಚಿನ್ನ-ಬೆಳ್ಳಿ ಬೆಲೆಯಲ್ಲಿ ಇಳಿಕೆ!

ಇಂದು ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ಕೊಂಚ ಇಳಿಕೆಯಾಗಿದೆ. ನಿನ್ನೆ ಭಾರತದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 48,100 ರೂ. ಇತ್ತು. ಆದರೆ ಇಂದು 47,950 ರೂ. ಆಗಿದೆ. ಆದರೆ 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಕೊಂಚ ಏರಿಕೆಯಾಗಿದೆ. ನಿನ್ನೆ 52,470 ರೂ. ಇದ್ದ ಬೆಲೆ ಇಂದು 52,480 ರೂ. ಆಗಿದೆ. ನಿನ್ನೆ ಭಾರೀ ಹೆಚ್ಚಳವಾಗಿದ್ದ ಬೆಳ್ಳಿಯ ಬೆಲೆ (Silver Price) ಇಂದು ಒಂದೇ ದಿನದಲ್ಲಿ 800 ರೂ. ಇಳಿಕೆ ಕಂಡಿದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್‌ ಬಂಗಾರದ ಬೆಲೆಯಲ್ಲಿ ಇಳಿಕೆಯಾಗಿದೆ. 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ ಇಂದು 47,950 ರೂಪಾಯಿ ಬೆಲೆ ಇದೆ. ಇನ್ನು ಮಂಗಳೂರು ಹಾಗೂ ಮೈಸೂರಿನಲ್ಲೂ ಕೂಡ ಇಷ್ಟೇ ಬೆಲೆ ನಿಗದಿಯಾಗಿದೆ.

ಇದನ್ನೂ ಓದಿ:  Non-Veg Recipe: ಯುಗಾದಿ ಹೊಸತೊಡಕಿಗೆ ಸುಲಭವಾಗಿ ಮಾಡಿ ಮಟನ್ ಮಸಾಲ

5. Russian Diamond: ರಷ್ಯಾದ ಲಕಲಕ ಹೊಳೆಯುವ ವಜ್ರ ಖರೀದಿ ಮಾಡೋದು ಇನ್ಮೇಲೆ ಕಷ್ಟ!

ಪ್ರಮುಖ ಆಭರಣ ವ್ಯಾಪಾರಿಗಳು ರಷ್ಯಾದ ವಜ್ರಗಳನ್ನು (Russian Diamond) ಖರೀದಿಸುವುದನ್ನು ನಿಲ್ಲಿಸುತ್ತಿದ್ದಾರೆಂದು ವರದಿಯಾಗಿದೆ. ಈಕುರಿತಂತೆ ಅಮೇರಿಕನ್ ಬ್ರಾಂಡ್ ಟಿಫಾನಿ & ಕೋ, ಸ್ವಿಸ್ ವಾಚ್ ಮತ್ತು ಆಭರಣ ತಯಾರಕ ಚೋಪಾರ್ಡ್, ವಜ್ರದ ಆಭರಣಗಳ ಅತಿದೊಡ್ಡ ಚಿಲ್ಲರೆ ವ್ಯಾಪಾರಿ ಸಿಗ್ನೆಟ್ ಮತ್ತು ವಿಶ್ವದ ಅತಿದೊಡ್ಡ ಆಭರಣ ವ್ಯಾಪಾರಿ ಪಂಡೋರಾ ಸೇರಿದಂತೆ ಜಾಗತಿಕ ಮಟ್ಟದ ಆಭರಣಕಾರರು (Major Jewellers) ವಜ್ರಗಳನ್ನು ಖರೀದಿಸುವುದನ್ನು ನಿಲ್ಲಿಸುವುದಾಗಿ ಹೇಳಿಕೆಗಳನ್ನು ಬಿಡುಗಡೆ ಮಾಡಿದ್ದಾರೆ. ರಷ್ಯಾ ನಿಯಂತ್ರಿತ ವಜ್ರ ಉದ್ಯಮದ (Diamond Business) ಏಕಸ್ವಾಮ್ಯವು ಉಕ್ರೇನ್‌ನ ಮೇಲೆ ಪುಟಿನ್‌ (Vladimir Putin) ನಡೆಸುತ್ತಿರುವ ದಾಳಿಗೆ ಹೇಗೆ ಧನಸಹಾಯ ನೀಡಬಹುದು ಎಂಬುದರ ಕುರಿತು ಹೆಚ್ಚಿನ ಪರಿಶೀಲನೆಯನ್ನು ಮಾಡಿತ್ತು. ಈ ನಂತರ ಹಲವು ವಜ್ರ ವ್ಯಾಪಾರಿಗಳು ಈ ಕ್ರಮ ಕೈಗೊಳ್ಳಲು ನಿರ್ಧರಿಸಿದ್ದಾರೆ.
Published by:Mahmadrafik K
First published: