Morning Digest: ಚಿನ್ನದ ಬೆಲೆ ಇಳಿಕೆ, ಅತ್ತ ಗರ್ಭಿಣಿ ಆಡಿನ ಮೇಲೂ ರೇಪ್! IPLನಲ್ಲಿಂದು LSG-CSK ಫೈಟ್

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ...

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್‌ನಿಂದ ಇಂದು ಎಚ್ಚರಿಕೆಯ 'ಗಂಟೆ'

ಕಳೆದ ಹತ್ತು ದಿನಗಳಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಒಂಬತ್ತು ಬಾರಿ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಯನ್ನು ಏರಿಕೆ ಮಾಡಿದೆ. ಇಂದು ಪ್ರತಿ ಲೀಡರ್ ಪೆಟ್ರೋಲ್ ಮೇಲೆ 84 ಪೈಸೆ ಹಾಗೂ ಪ್ರತಿ ಲೀಟರ್ ಡೀಸೆಲ್ ಮೇಲೆ 78 ಪೈಸೆ ಏರಿಕೆ ಮಾಡಿದೆ. ನಡುವೆ ಅಡುಗೆ ಅನಿಲದ ಸಿಲಿಂಡರ್ ಬೆಲೆಯನ್ನೂ ಏರಿಸಲಾಗಿದೆ. ಹೀಗೆ ನಿರಂತರವಾಗಿ ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲ ಸಿಲಿಂಡರ್ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ಪಕ್ಷವು ಇಂದು ಬೆಳಿಗ್ಗೆ 11 ಗಂಟೆಗೆ ದೇಶಾದ್ಯಂತ ಗಂಟೆ ಭಾರಿಸುವ ಪ್ರತಿಭಟನೆ ನಡೆಸುವುದಾಗಿ ಘೋಷಿಸಿದೆ.

ಜನರ ಕಷ್ಟಗಳಿಗೆ ಕಿವಿಗೊಡದ ಬಿಜೆಪಿಯ ಕಿವುಡು ಸರ್ಕಾರದ ಗಮನ ಸೆಳೆಯಲು ಜನರು ತಮ್ಮ ಮನೆ ಮತ್ತು ಸಾರ್ವಜನಿಕ ಸ್ಥಳಗಳ ಹೊರಗೆ ಗ್ಯಾಸ್ ಸಿಲಿಂಡರ್ ಮತ್ತು ಡ್ರಮ್-ಬೆಲ್ಸ್, ಇತರೆ ವಾದ್ಯಗಳೊಂದಿಗೆ ಪ್ರತಿಭಟನೆ ನಡೆಸಲಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲಾ ತಿಳಿಸಿದ್ದಾರೆ.

ಯುಗಾದಿ ಹೊಸ್ತಿಲಲ್ಲೇ ಮನೆಗೆ ಬರಲಿ ಚಿನ್ನ! ಬೆಲೆ ಇಳಿದಿದೆ ಇಂದೇ ಬೆಳ್ಳಿ-ಬಂಗಾರ ಖರೀದಿಸೋಣ

ಯುಗಾದಿ ಹಬ್ಬ ಬಂದೇ ಬಿಡ್ತು. ಈ ಹೊತ್ತಿನಲ್ಲಾದ್ರೂ ಚಿನ್ನ ಖರೀದಿಸಬೇಕು ಅಂತ ಯೋಚನೆ ಮಾಡಿದ್ದೀರಾ? ಹಾಗಿದ್ರೆ ಮತ್ಯಾಕೆ ತಡ ಮಾಡ್ತೀರಿ? ಇಂದೇ ಹೋಗಿ ಚಿನ್ನ, ಬೆಳ್ಳಿ ಖರೀದಿಸಿ! ಯಾಕೆಂದರೆ ಮಾರ್ಚ್‌ ತಿಂಗಳಲ್ಲಿ ಹಲವು ದಿನಗಳ ಕಾಲ ಗಗನಮುಖಿಯಾಗಿದ್ದ ಚಿನ್ನದ ದರ ತಿಂಗಳಾಂತ್ಯಕ್ಕೆ ಬಂದಂತೆ ಕುಸಿತ ಕಾಣುತ್ತಿದೆ. ಕಳೆದ 3 ದಿನಗಳಿಂದ ಬಂಗಾರದ ದರ ಇಳಿಕೆಯಾಗುತ್ತಿದೆ.

ಬೆಂಗಳೂರಿನಲ್ಲಿ ಸಹ ಚಿನ್ನದ ಬೆಲೆ ಕಡಿಮೆಯಾಗಿದೆ. ಭಾರತದಲ್ಲಿ ನಿನ್ನೆ 10 ಗ್ರಾಂ ತೂಕದ 22 ಕ್ಯಾರೆಟ್ ಚಿನ್ನದ ಬೆಲೆ 47,750 ರೂ. ಇತ್ತು. ಇಂದು 100 ರೂ. ಇಳಿಕೆಯಾಗಿ 47,650 ರೂ. ಆಗಿದೆ. ಅಂತೆಯೇ 10 ಗ್ರಾಂ ತೂಕದ 24 ಕ್ಯಾರೆಟ್ ಚಿನ್ನದ ಬೆಲೆ ನಿನ್ನೆ 52,100 ರೂ. ಇತ್ತು. ಇಂದು 120 ರೂ. ಇಳಿಕೆಯಾಗಿ 51,980 ರೂ. ಆಗಿದೆ.

ಇದನ್ನೂ ಓದಿ: Gold Price: ಯುಗಾದಿ ಹೊಸ್ತಿಲಲ್ಲೇ ಮನೆಗೆ ಬರಲಿ ಚಿನ್ನ! ಬೆಲೆ ಇಳಿದಿದೆ ಇಂದೇ ಬೆಳ್ಳಿ-ಬಂಗಾರ ಖರೀದಿಸೋಣ

ತುಂಬು ಗರ್ಭಿಣಿ ಆಡಿನ ಮೇಲೆ ಮೂವರಿಂದ ಅತ್ಯಾಚಾರ, ಭೀಕರವಾಗಿ ಕೊಂದ ದುರುಳರು

ಕೇರಳದ ಕಾಞಂಗಾಡು ಪೇಟೆಯಲ್ಲಿ ಮೂವರು ಪುರುಷರು ತುಂಬು ಗರ್ಭಿಣಿ ಮೇಕೆಯನ್ನು ಲೈಂಗಿಕ ದೌರ್ಜನ್ಯ ನಡೆಸಿ ಕೊಂದು ಹಾಕಿದ್ದಾರೆ ಎಂದು ಹೊಸದುರ್ಗ ಪೊಲೀಸರು ತಿಳಿಸಿದ್ದಾರೆ. ಕೊಟ್ಟಚೇರಿಯ ಎಲೈಟ್ ಹೋಟೆಲ್ ಗೆ ಸೇರಿದ ಮೇಕೆ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದು, ಇನ್ನೊಂದು ತಿಂಗಳಲ್ಲಿ ಜನ್ಮ ನೀಡಲಿತ್ತು.ಈ ಸಂಬಂಧ ಹೊಟೇಲ್‌ನ ಉದ್ಯೋಗಿ ಸೆಂಥಿಲ್‌ ಎಂಬಾತನನ್ನು ಹೊಸದುರ್ಗ ಪೊಲೀಸರು ಬಂಧಿಸಿದ್ದಾರೆ. ಇತರ ಇಬ್ಬರು ವ್ಯಕ್ತಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇಮ್ರಾನ್ ಖಾನ್ ನಂತರ ಇವರಾಗ್ತಾರಾ ಪಾಕ್ ಪ್ರಧಾನಿ? ಯಾರು ಈ ಶಹಬಾಜ್ ಷರೀಫ್?

ಪಾಕಿಸ್ತಾನ ಪೀಪಲ್ಸ್ ಪಾರ್ಟಿ ಅಧ್ಯಕ್ಷ ಬಿಲಾವಲ್ ಭುಟ್ಟೋ ಜರ್ದಾರಿ ಅವರು ಬುಧವಾರ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಇಮ್ರಾನ್ ಖಾನ್ "ಈಗ ಬಹುಮತವನ್ನು ಕಳೆದುಕೊಂಡಿದ್ದಾರೆ". ಆದ್ದರಿಂದ ವಿರೋಧ ಪಕ್ಷದ ನಾಯಕ ಶೆಹಬಾಜ್ ಷರೀಫ್ ಶೀಘ್ರದಲ್ಲೇ ದೇಶದ ಪ್ರಧಾನಿಯಾಗಲಿದ್ದಾರೆ ಎಂದು ಹೇಳಿದ್ದಾರೆ.

ಮುಂದಿನ ಕೆಲವು ದಿನಗಳಲ್ಲಿ ನಡೆಯಲಿರುವ ವಿಶ್ವಾಸ ಮತದ ಮುನ್ನ ಸುದ್ದಿ ಮಾಧ್ಯಮಗಳೊಂದಿಗೆ ಮಾತನಾಡಿದ ಭುಟ್ಟೋ, ಮುತ್ತಹಿದಾ ಕ್ವಾಮಿ ಮೂವ್‌ಮೆಂಟ್-ಪಾಕಿಸ್ತಾನ ವಿರೋಧ ಪಕ್ಷಗಳೊಂದಿಗೆ ಕೈಜೋಡಿಸಿದ್ದಕ್ಕೆ ಮತ್ತು ಅವರನ್ನು ಪ್ರಧಾನಿ ಹುದ್ದೆಯಿಂದ ಕೆಳಗಿಳಿಸಲು ಅವರನ್ನು ಬೆಂಬಲಿಸಲು ನಿರ್ಧರಿಸಿದ್ದಕ್ಕಾಗಿ ಧನ್ಯವಾದಗಳನ್ನು ಅರ್ಪಿಸಿದರು. ಅಲ್ಲದೇ ಗುರುವಾರವೇ ಮತದಾನ ನಡೆಯಬೇಕು ಎಂದರು.

IPL 2022- LSG Vs CSK: ಯಾರು ತೆರೆಯಲ್ಲಿದ್ದಾರೆ ಗೆಲುವಿನ ಖಾತೆ?

ಐಪಿಎಲ್ 2022ರ (IPL 2022)  15ನೇ ಸೀಸನ್ ನ  7ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ (LSG Vs CSK) ಸೆಣಸಾಡಲಿವೆ. ಮುಂಬೈನ ಬ್ರಬೋರ್ನ್ ಮೈದಾನದಲ್ಲಿ (Brabourne Stadium)  ನಡೆಯಲಿದ್ದು, ಉಭಯ ತಂಡಗಳಲ್ಲಿ ಯಾರು ಗೆಲುವಿನ ಖಾತೆ ತೆರೆಯಲಿದ್ದಾರ ಎಂಬುದನ್ನು ಕಾದುನೋಡಬೇಕಿದೆ.

ಇದನ್ನೂ ಓದಿ: IPL 2022- LSG Vs CSK: ಯಾರು ತೆರೆಯಲ್ಲಿದ್ದಾರೆ ಗೆಲುವಿನ ಖಾತೆ? ಹೀಗಿದೆ ಉಭಯ ತಂಡಗಳ ಪ್ಲೇಯಿಂಗ್ 11

ಕೊಲ್ಕತ್ತಾ ಎದುರು ಮೊದಲ ಪಂದ್ಯದಲ್ಲಿ ಚೆನ್ನೈ ಸೋತರೆ ಗುಜರಾತ್ ವಿರುದ್ಧದ ಪಂದ್ಯದಲ್ಲಿ ಲಕ್ನೋ ಸೋಲನ್ನಪ್ಪಿತ್ತು. ಹೀಗಾಗಿ ಎರಡೂ ತಂಡಗಳಿಗೂ ಇದು ಮಹತ್ವದ ಪಂದ್ಯವಾಗಿದ್ದು, ಗೆಲುವಿನ ಆರಂಭ ಮಾಡಬೇಕಿದೆ. ಇನ್ನು, ಈ ಕಳೆದ ಪಂದ್ಯದಲ್ಲಿ ಆಡದ ಮೊಯೀನ್ ಅಲಿ ವಾಪಸಾಗುವುದು ಖಚಿತವಾಗಿದ್ದು, ಚೆನ್ನೈ ಸೂಪರ್ ಕಿಂಗ್ಸ್ ಯಾರ ಬದಲಿಗೆ ಮೋಯಿನ್ ಅಲಿ (Moeen Ali) ಅವರನ್ನು ಕಣಕ್ಕಿಳಿಸಲಿದೆ ಎಂಬುದನ್ನು ನೋಡಬೇಕಿದೆ. ಆದರೆ ಅಲಿ ಬಂದಿರುವುದು ಚೆನ್ನೈ ತಂಡಕ್ಕೆ ವರದಾನವಾದಂತಾಗಿದೆ. ಲಕ್ನೋ ತಂಡಕ್ಕೆ ಮದ್ಯಮ ಕ್ರಮಾಂಕ ಇನ್ನಷ್ಟು ಬಲಪಡಿಸಬೇಕಿದೆ.
Published by:Annappa Achari
First published: