Morning Digest: ಇಂದು RCB Vs KKR, ಪತ್ರ ಬರೆದ ಬೋಪಯ್ಯ, ಚಿನ್ನದ ಬೆಲೆ ಇಳಿಕೆ: ಬೆಳಗಿನ ಟಾಪ್ ನ್ಯೂಸ್ ಗಳು

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು? ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
1.Tumakuru: ಆತ್ಮಹತ್ಯೆಗೆ ಶರಣಾದ ಶಂಕರಣ್ಣನ ಪತ್ನಿ ಮೇಘನಾ ಗರ್ಭಿಣಿ

ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಅಕ್ಕಿಮರಿಪಾಳ್ಯದ ನಿವಾಸಿ ಶಂಕರಣ್ಣ ಅಲಿಯಾಸ್ ಶಂಕರಪ್ಪ (Shankaranna) ಮಂಗಳವಾರ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ (Suicide) ಶರಣಾಗಿದ್ದರು. ಆರು ತಿಂಗಳ ಹಿಂದೆ ಅಂದ್ರೆ 2021 ಅಕ್ಟೋಬರ್ 21ರಂದು 45 ವರ್ಷದ ಶಂಕರಣ್ಣ 25 ವರ್ಷದ ಯುವತಿ ಮೇಘನಾಳನ್ನು ಮದುವೆ(Marriage)ಯಾಗಿದ್ದರು. ವಯಸ್ಸಿನ ಅಂತರ ಹೆಚ್ಚಿರುವ ಹಿನ್ನೆಲೆ ಇಬ್ಬರ ಮದುವೆ ಫೋಟೋಗಳು (Marriage Photos) ಸೋಶಿಯಲ್ ಮೀಡಿಯಾದಲ್ಲಿ (Social Media) ವೈರಲ್ ಆಗಿದ್ದವು. ಆದರೆ ಕೌಟುಂಬಿಕ ಕಲಹ ಹಿನ್ನೆಲೆ ಶಂಕರಣ್ಣ ತೋಟದಲ್ಲಿಯ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ಶಂಕರಣ್ಣನ ಪತ್ನಿ ಮೇಘನಾ ನಾಲ್ಕು ತಿಂಗಳ ಗರ್ಭಿಣಿ (Pregnant) ಎಂದು ಪಬ್ಲಿಕ್ ಟಿವಿ ಡಿಜಿಟಲ್ ವರದಿ ಮಾಡಿದೆ.

2.ಹಲಾಲ್, ಮುಸ್ಲಿಂ ವರ್ತಕರಿಗೆ ನಿರ್ಬಂಧ: ಸಿಎಂ ಬೊಮ್ಮಾಯಿ, ಸಚಿವೆ ಜೊಲ್ಲೆಗೆ ಪತ್ರ ಬರೆದ MLA K.G.Bopaiah

ಹಲಾಲ್ ಸಹಿತ ಅನ್ಯ ಧರ್ಮಗಳಲ್ಲಿ ಹಲವು ಪದ್ಧತಿಗಳು ಜಾತಿಯಲ್ಲಿವೆ. ಧರ್ಮದ ಆಚರಣೆ, ನಂಬಿಕೆ ಹಾಗೂ ಪಾವಿತ್ರ್ಯತೆಯನ್ನು ನಾವು ಗೌರವಿಸುತ್ತೇವೆ. ಅನ್ಯ ಧರ್ಮಗಳಲ್ಲಿನ ಆಹಾರ ಪದ್ದತಿಯಲ್ಲಿ ಗೋ ಮಾಂಸ ಸೇವಿಸುತ್ತಾರೆ. ಹಿಂದೂಗಳಾದ ನಾವು ಗೋವನ್ನು ತಾಯಿ ಎಂದು ಪೂಜಿಸುತ್ತೇವೆ. ಜಾತ್ರೆಯ ಸಮಯದಲ್ಲಿ ಅಲ್ಲಿ ಅಂಗಡಿ ಹಾಕುವ ಅನ್ಯಧರ್ಮೀಯರು ಗೋ ಮಾಂಸ ಸೇವಿಸಿ ಬರುವ ಸಾಧ್ಯತೆ ಇರುತ್ತದೆ. ಇದರಿಂದ ಆ ಕ್ಷೇತ್ರದ ಪಾವಿತ್ರ್ಯತೆಗೆ ಭಂಗ ಬರುತ್ತದೆ. ಈ ಹಿನ್ನೆಲೆಯಲ್ಲಿ ಹಿಂದೂ ಧಾರ್ಮಿಕ ಕ್ಷೇತ್ರಗಳ ಪಾವಿತ್ರ್ಯತೆ ಕಾಪಾಡಲು 2002ರ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ನಿಯಮದಲ್ಲಿ ಉಲ್ಲೇಖಿಸಿರುವ ಸಂಸ್ಥೆಯ ಸಮೀಪದ ಜಮೀನು ಕಟ್ಟಡ ಅಥವಾ ನಿವೇಶನಗಳೂ ಸೇರಿದಂತೆ ಯಾವುದೇ ಸ್ವತ್ತನ್ನು ಹಿಂದೂಗಳಲ್ಲದವರಿಗೆ ಗುತ್ತಿಗೆ ನೀಡತಕ್ಕದ್ದಲ್ಲ ಎಂಬುದನ್ನು ಯಥಾವತ್ತಾಗಿ ಜಾರಿಗೆ ತರಬೇಕು. ಈ ಸಂಬಂಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಪತ್ರದಲ್ಲಿ ಸಿಎಂ ಮತ್ತು ಮುಜರಾಯಿ ಸಚಿವರಿಗೆ ಶಾಸಕ ಬೋಪಯ್ಯ ಒತ್ತಾಯಿಸಿದ್ದಾರೆ.

ಇದನ್ನೂ ಓದಿ:  Business: ಆಡುವ ವಯಸ್ಸಲ್ಲಿ ಬ್ಯುಸಿನೆಸ್ ಮಾಡಿ ತಿಂಗಳಿಗೆ ಲಕ್ಷಗಟ್ಟಲೆ ದುಡಿಯುತ್ತಿರುವ 13ರ ಪೋರಿ

3.RCB vs KKR: ಎರಡೂ ತಂಡಕ್ಕೆ ಇಂದು ಸೆಕೆಂಡ್​ ಮ್ಯಾಚ್​! ಅಕೌಂಟ್ ಓಪನ್​ ಮಾಡ್ತಾರಾ ಬೆಂಗಳೂರು ಬಾಯ್ಸ್​?

ಬೆಂಗಳೂರಿಗರಿಗೆ (Bengaluru) ಇರುವ ನಿಯತ್ತು ಯಾರಿಗೂ ಇಲ್ಲ ಎಂದು ಹೇಳಬಹುದು. ಕಳೆದ 14 ವರ್ಷದಿಂದ ಆರ್​ಸಿಬಿ(RCB) ತಂಡ ಕಪ್(Cup)​ ಗೆಲ್ಲದಿದ್ದರು, ನಾವು ಅವರ ಕೈ ಮಾತ್ರ ಬಿಟ್ಟಿಲ್ಲ. ಕಪ್​ ಒಂದನ್ನು ಬಿಟ್ಟು ಆರ್​ಸಿಬಿ ಬೆಂಗಳೂರಿಗರ ಕಿಡ್ನಿ(Kidney), ಹೃದಯ(Heart), ಮನಸ್ಸು ಗೆದ್ದಿದೆ. ಮೊದಲ ಪಂದ್ಯವನ್ನು ಆರ್​ಸಿಬಿ ಪ್ರತಿ ಬಾರಿಯಂತೆ ದೇವರಿಗೆ ಅರ್ಪಿಸಿದೆ. ಘಟಾನುಘಟಿ ಆಟಗಾರರು ಈಗ ಆರ್​ಸಿಬಿ ಪರ ಆಡುತ್ತಿಲ್ಲ. ಅವರನ್ನು ಹೊರತುಪಡಿಸಿ ಅಖಾಡಕ್ಕೆ ಇಳಿದಿದ್ದ ಫಾಫ್​ ಡು ಪ್ಲೆಸಿಸ್ ಪಡೆ ಒಳ್ಳೆಯ ಸ್ಕೋರ್​ ಕಲೆಹಾಕಿದ್ದರೂ, ಮೊದಲನೇ ಪಂದ್ಯದಲ್ಲಿ ಮುಗ್ಗರಿಸಿದೆ. ಐಪಿಎಲ್ 15ನೇ ಆವೃತ್ತಿಯಲ್ಲಿ ಬುಧವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗಲಿದೆ. ಎರಡೂ ತಂಡಗಳಿಗೂ ಈ ಪಂದ್ಯ ಎರಡನೇ ಮುಖಾಮುಖಿಯಾಗಿದೆ.

4.Gold Price: ಶ್, ಯಾರಿಗೂ ಹೇಳ್ಬೇಡಿ.. ಚಿನ್ನ, ಬೆಳ್ಳಿ ರೇಟ್ ಕಡಿಮೆ ಆಗಿದ್ಯಂತೆ ಕಣ್ರೀ! ಈಗ್ಲೇ ನಿಮ್ಮ ಮನೆಯವರೊಂದಿಗೆ ಹೋಗಿ ಬಂಗಾರ ಖರೀದಿಸಿ

ಭಾರತದಲ್ಲಿ (India) ನಿನ್ನೆ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 47,950 ರೂ. ಇತ್ತು. ಇಂದು 200 ರೂ. ಇಳಿಕೆಯಾಗಿ 47,750 ರೂ. ಆಗಿದೆ. ಅಂತೆಯೇ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ನಿನ್ನೆ 52,310 ರೂ. ಇತ್ತು. ಇಂದು 210 ರೂ. ಇಳಿಕೆಯಾಗಿ 52,100 ರೂ. ಆಗಿದೆ. ಬೆಂಗಳೂರಿನಲ್ಲಿ ನಿನ್ನೆ ಚಿನ್ನದ ಬೆಲೆ 52,310 ರೂ. ಇತ್ತು. ಇಂದು 210 ರೂ. ಇಳಿಕೆಯಾಗಿ 52,100 ರೂ. ಇತ್ತು. ಅದೇ ರೀತಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ನಿನ್ನೆ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 47,950 ರೂ. ಇತ್ತು. ಇಂದು 200 ರೂ. ಇಳಿಕೆಯಾಗಿ 47,750 ರೂ. ಆಗಿದೆ. ರಾಜ್ಯದ ಇತರೆ ಪ್ರಮುಖ ನಗರಗಳಾದ ಮೈಸೂರು, ಮಂಗಳೂರಿನಲ್ಲೂ ಇದೇ ಬೆಲೆ ಇದೆ. ದೇಶದಲ್ಲಿಂದು ಚಿನ್ನದ ಬೆಲೆ ಕಡಿಮೆಯಾದಂತೆ ಬೆಳ್ಳಿ ದರ (Silver Rate) ದಲ್ಲೂ ಇಳಿಕೆಯಾಗಿದೆ. ನಿನ್ನೆ 1 ಕೆಜಿ ಬೆಳ್ಳಿಗೆ 68,400 ರೂ. ಇತ್ತು. ಇಂದು 400 ರೂ. ಇಳಿಕೆಯಾಗಿ 68,000 ರೂ. ಆಗಿದೆ.

ಇದನ್ನೂ ಓದಿ:  Viral News; ಕೆಲವೇ ನಿಮಿಷಗಳಲ್ಲಿ 5 ಕೋಟಿ ಗಳಿಸಿದ ವ್ಯಕ್ತಿ: ಹೇಗೆ ಗೊತ್ತಾ?

5.Vinaya Samarasya Yojana: ಅಸ್ಪೃಶ್ಯತೆ ನಿರ್ಮೂಲನೆ ಯೋಜನೆಗೆ ದೇಗುಲ ಪ್ರವೇಶಿಸಿದ್ದ ದಲಿತ ಮಗುವಿನ ಹೆಸರು

ಗ್ರಾಮೀಣ ಭಾಗದಲ್ಲಿರುವ (Karnataka Rural Area) ಅಸೃಶ್ಯತೆಯನ್ನು (Untouchability) ಸಂಪೂರ್ಣವಾಗಿ ನಿಮೂರ್ಲನೆ ಮಾಡಲು ಉದ್ದೇಶಿಸಿರುವ ಜಾಗೃತಿ ಕಾರ್ಯಕ್ರಮಕ್ಕೆ ರಾಜ್ಯ ಸರ್ಕಾರ (Karnataka Government) ವಿನಯ ಸಾಮರಸ್ಯ (Vinaya Samarasya Yojana) ಎಂದು ಹೆಸರು ಇರಿಸಿದೆ ಕಳೆದ ವರ್ಷ ಅಂದ್ರೆ 2021 ಸೆಪ್ಟೆಂಬರ್ ನಲ್ಲಿ ಕೊಪ್ಪಳ ಜಿಲ್ಲೆಯ ವಿಯಾಪುರ (Miapur, Koppal) ಗ್ರಾಮದಲ್ಲಿ ಮೂರು ವರ್ಷದ ದಲಿತ ಮಗುವೊಂದು (Dalit Boy) ಆಕಸ್ಮಿಕವಾಗಿ ದೇವಾಲಯ (Temple) ಪ್ರವೇಶ ಮಾಡಿದ್ದಕ್ಕೆ, ಗ್ರಾಮದ ಜನರು ಆ ಮಗುವಿನ ಕುಟುಂಬಕ್ಕೆ ದಂಡ ವಿಧಿಸಿದ್ದರು. ಈ ವಿಷಯ ಪತ್ರಿಕೆಗಳಲ್ಲಿ ವರದಿ ಆಗುತ್ತಿದ್ದಂತೆ ಪ್ರಕರಣ ದಾಖಲಾಗಿತ್ತು. ದಲಿತ ಕುಟುಂಬಕ್ಕೆ ಗ್ರಾಮದ ಮೇಲ್ಜಾತಿಯವರು 25 ಸಾವಿರ ರೂಪಾಯಿ ದಂಡ ಹಾಕಿದ್ದರು. ಅಂದು ದೇವಾಲಯ ಪ್ರವೇಶಿಸಿದ ಮಗುವಿನ ಹೆಸರು ವಿನಯ್. ಹಾಗಾಗಿ ರಾಜ್ಯ ಸರ್ಕಾರ ಅಸ್ಪೃಶ್ಯತೆ ತೊಡೆದು ಹಾಕಲು ಉದ್ದೇಶಿಸಿರುವ ಜಾಗೃತಿಗೆ ಆ ಮಗುವಿನ ಹೆಸರನ್ನು ಇರಿಸಲಾಗಿದೆ
Published by:Mahmadrafik K
First published: