Morning Digest: ಭಾಸ್ಕರ್ ರಾವ್ ರಾಜೀನಾಮೆ, ಪ್ರೇಮಿಗಳ ಹೊಡೆದಾಟ, ಕಹಿಯಾದ ಚಿನ್ನ: ಬೆಳಗಿನ ಟಾಪ್ ನ್ಯೂಸ್ ಗಳು

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
1.Bhaskar Rao: IPS ಸೇವೆಗೆ ಗುಡ್ ಬೈ ಹೇಳಿದ ಭಾಸ್ಕರ್ ರಾವ್: ಮುಂದೆ ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ?

ರೈಲ್ವೆ ಪೊಲೀಸ್ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ(ಎಡಿಜಿಪಿ) ಕಾರ್ಯನಿರ್ವಹಿಸುತ್ತಿದ್ದ ಭಾಸ್ಕರ್ ರಾವ್ (Bhaskar Rao)ಐಪಿಎಸ್ ಸೇವೆಗೆ ಗುಡ್ ಬೈ ಹೇಳಿದ್ದಾರೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ ತಮ್ಮ ಅಧಿಕಾರವನ್ನು ಹಸ್ತಾಂತರ ಮಾಡಿದ್ದಾರೆ. ಭಾಸ್ಕರ್ ರಾವ್ ಅವರು  16 ಸೆಪ್ಟಂಬರ್ 2021ರಂದು ಸ್ವಯಂ ನಿವೃತ್ತಿ ಕೋರಿ ಅರ್ಜಿ ಸಲ್ಲಿಸಿದ್ದರು. ನಿಯಮಗಳ ಪ್ರಕಾರ ನಿರ್ಧಾರ ಪುನರ್ ಪರಿಶೀಲನೆಗೆ ಕೇಂದ್ರ ಗೃಹ ಸಚಿವಾಲಯ ಮೂರು ತಿಂಗಳ ಅವಕಾಶ ನೀಡಿತ್ತು. ಸ್ವಯಂ ನಿವೃತ್ತಿ ಸಲ್ಲಿಸಿದ ಬಳಿಕ ಕೇಂದ್ರ ಗೃಹ ಸಚಿವಾಲಯದ ಸಿಬ್ಬಂದಿ ಸಂಬಂಧಿಸಿದ ಅಧಿಕಾರಿಯನ್ನು ಸಂಪರ್ಕಿಸಬೇಕು. ಆದ್ರೆ ಆರು ತಿಂಗಳು ಕಳೆದ್ರೂ ಗೃಹ ಸಚಿವಾಲಯದಿಂದ ಉತ್ತರ ಬಂದಿರಲಿಲ್ಲ.‘ ಗೃಹ ಸಚಿವಾಲಯದಿಂದ ಉತ್ತರ ಬಾರದ ಹಿನ್ನೆಲೆ ಆಲ್ ಇಂಡಿಯಾ ಸರ್ವಿಸ್ ಆಕ್ಟ್ 16(2)ನಡಿ ಸೇವೆಗೆ ಭಾಸ್ಕರ್ ರಾವ್ ಗುಡ್ ಬೈ ಹೇಳಿದ್ದಾರೆ.

2.Ration Cards: 324 ಸರ್ಕಾರಿ ನೌಕರರಿಂದ BPL ಕಾರ್ಡ್ ಬಳಕೆ, ಒಂದೇ ಸಲಕ್ಕೆ ಬಿತ್ತು ಲಕ್ಷ ಲಕ್ಷ ದಂಡ

ಬಿಪಿಎಲ್ ಕಾರ್ಡ್ (BPL Card) ದೇಶದಲ್ಲಿ ಅತಿ ಹೆಚ್ಚು ಸದ್ದು ಮಾಡಿದ ಕಾರ್ಡಿದು. ಏಕೆಂದರೆ ಈ ಕಾರ್ಡ್ ಹೊಂದಿದವರಿಗೆ ಅನೇಕ ಯೋಜನೆಗಳು ಉಚಿತವಾಗಿ (Free) ಸಿಗುತ್ತವೆ. ಅಲ್ಲದೇ ಪುಕ್ಕಟೆ ಸೌಲಭ್ಯಗಳೂ (Facility) ಸಹ ಸಿಗುತ್ತವೆ. ಹೀಗಾಗಿ ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡ್ ಮಾಡಿಸಿಕೊಳ್ಳಲು ಜನರು ಹಗಲು-ರಾತ್ರಿ ಅನ್ನದೇ ಆಧಾರ್, ಬಿಪಿಎಲ್ ಕಾರ್ಡುಗಳ ಕೇಂದ್ರದ ಹೊರಗೆ ದಿನಗಟ್ಟಲೇ ಕಾಯುತ್ತಾರೆ. ಆದರೆ ಸರಕಾರದ ವಿವಿಧ ಯೋಜನೆಗಳ ಲಾಭ ಪಡೆದದ್ದು ಸರ್ಕಾರಿ ಇಲಾಖೆಯ ಸಿಬ್ಬಂದಿಗಳು ಸಹ ಇದ್ದಾರೆ. ಸರ್ಕಾರಿ ಕೆಲಸ ಹೊಂದಿದರು ಕೂಡ ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡ್ ಮಾಡಿಸಿಕೊಂಡು ಸರಕಾರದ ಸೌಲಭ್ಯಗಳನ್ನು ದುರುಪಯೋಗಪಡಿಸಿದ್ದಾರೆ. ಜಿಲ್ಲೆಯಲ್ಲಿ ಅನಧಿಕೃತವಾಗಿ ಪಡಿತರ ಚೀಟಿ ಹೊಂದಿರುವುದು 324 ಜನ ಸರಕಾರಿ ನೌಕರರು ಪತ್ತೆಯಾಗಿದ್ದಾರೆ.

3. Viral Video: ಪಾರ್ಕ್‌ನಲ್ಲಿ ಪ್ರೇಮಿಗಳ ಹೊಡೆದಾಟ!

ಒಡಿಶಾ ರಾಜಧಾನಿ ಭುವನೇಶ್ವರದ ಪಾರ್ಕ್ ಒಂದರಲ್ಲಿ ಈ ಘಟನೆ ನಡೆದಿದೆ. ಇಂದಿರಾ ಪಾರ್ಕ್‌ಗೆ ಆಗಮಿಸಿದ್ದ ಪ್ರೇಮಿಗಳು, ಮಾತನಾಡುತ್ತಾ ಇರುತ್ತಾರೆ. ಅದೆನಾಯಿತೋ ಏನೋ ಕೆಲವೇ ಕ್ಷಣಗಳಲ್ಲಿ ಈ ಜೋಡಿ ಜಗಳಕ್ಕೆ ನಿಂತಿದ್ದಾರೆ. ಈ ವೇಳೆ ಯುವತಿ ಜಾಸ್ತಿ ಕೋಪಗೊಂಡಿದ್ದಾಳೆ. ಆಗ ಯುವತಿ ಯುವಕನ ಮೇಲೆ ಕಲ್ಲು ಎಸೆಯುತ್ತಾಳೆ. ಸಾಲದ್ದಕ್ಕೆ ಆತನಿಗೆ ಹಿಗ್ಗಾಮುಗ್ಗ ಥಳಿಸುತ್ತಾಳೆ. ಭುವನೇಶ್ವರದ ಇವರಿಬ್ಬರ ಡಿಶುಂ ಡಿಶುಂ ಕಂಡು ಜನ ದೌಡಾಯಿಸುತ್ತಾರೆ. ಎಲ್ಲಾ ಮೊಬೈಲ್ ಕ್ಯಾಮರಾಗಳೂ ಈ ಜಗಳ ರೆಕಾರ್ಡ್ ಮಾಡಿಕೊಳ್ಳಲು ಮುಂದಾಗುತ್ತವೆ. ಇದರಿಂದ ಯುವತಿ ಮತ್ತಷ್ಟು ಕೆರಳಿ ಅವರಿಂದ ಫೋನ್ ಕಸಿದುಕೊಳ್ಳಲು ಪ್ರಯತ್ನಿಸುತ್ತಾಳೆ. ಅಷ್ಟರಲ್ಲಿ ಫುಡ್ ಡೆಲಿವರಿ ಬಾಯ್ (Food Delivery Boy) ಒಬ್ಬ ಆ ಪಾರ್ಕ್‌ಗೆ ಎಂಟ್ರಿ ಕೊಟ್ಟಿದ್ದಾನೆ. ಕೆಲ್ಸ ಮಾಡಿ (Work) ಸುಸ್ತಾಗಿದ್ದ ಆತ, ಕೊಂಚ ಹೊತ್ತು ಕುಳಿತು ರಿಲ್ಯಾಕ್ಸ್ (Relax) ಆಗೋಣ ಅಂತ ಅಲ್ಲಿ ಬಂದಿದ್ದ. ಪ್ರೇಮಿಗಳ ಜಗಳ ನೋಡಿ ಏನನ್ನಿಸಿತೋ ಏನೋ, ಏನ್ರಪ್ಪಾ ನಿಮ್ಮ ಸಮಸ್ಯೆ ಅಂತ ಕೇಳಿದ್ದಾನೆ. ಆಗ ಮೂವರ ಮಧ್ಯೆಯೂ ಜಗಳ ನಡೆದಿದೆ.

ಈ ಸುದ್ದಿಯನ್ನು ಪೂರ್ಣವಾಗಿ ಓದಲು ಇಲ್ಲಿ ಕ್ಲಿಕ್ ಮಾಡಿ

4. ಇಂಟರ್​​ಲಾಕ್, ಅಟೋಮೆಟಿಕ್ ಸೋಲಾರ್ ಲೈಟ್ಸ್, ದಕ್ಷಿಣಕನ್ನಡದಲ್ಲಿ ಒಂದು‌ ಮಾದರಿ ರಸ್ತೆ

ಜನಪ್ರತಿನಿಧಿಗಳ ಇಚ್ಛಾಶಕ್ತಿ ಹಾಗೂ ಗ್ರಾಮಸ್ಥರ ಸಂಪೂರ್ಣ ಸಹಕಾರದಿಂದ ಮಾದರಿ ರಸ್ತೆಯೊಂದನ್ನು ನಿರ್ಮಾಣವಾಗಿದೆ. ಹೌದು ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸಜಿಪಮೂಡ ಗ್ರಾಮದಲ್ಲಿ ಈ ಮಾದರಿ ರಸ್ತೆಯ ನಿರ್ಮಾಣವಾಗಿದ್ದು, ಎಪ್ರಿಲ್ 3 ರಂದು ಇಲ್ಲಿನ ಜನ ಗ್ರಾಮದ ಸಂಭ್ರಮಾಚರಣೆಯ ರೂಪದಲ್ಲಿ ಈ ರಸ್ತೆಯ ಉದ್ಘಾಟನೆಯನ್ನು ಆಯೋಜಿಸಿದ್ದಾರೆ. ರಾಜ್ಯ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಈ ರಸ್ತೆಯನ್ನು ಉದ್ಘಾಟಿಸಲಿದ್ದಾರೆ. ಸಜಿಪಮೂಡದಿಂದ ಮಿತ್ತಮಜಲು ದೇವಸ್ಥಾನದವರೆಗೆ ನಿರ್ಮಿಸಲಾಗಿರುವ 1.5 ಕಿಲೋಮೀಟರ್ ದೂರದ ಈ ರಸ್ತೆಗೆ 2.5 ಕೋಟಿ ರೂಪಾಯಿಗಳನ್ನು ವ್ಯಯಿಸಲಾಗಿದೆ. ದೇಶ ಅಥವಾ ರಾಜ್ಯಗಳ ರಾಜಧಾನಿ ಹಾಗೂ ಮೆಟ್ರೋ ನಗರಗಳಲ್ಲಿ ಮಾತ್ರ ಕಾಣಸಿಗುವಂತಹ ಮಾದರಿ ರಸ್ತೆಯಂತೆ ಈ ರಸ್ತೆಯನ್ನು ನಿರ್ಮಿಸಲಾಗಿರುವುದು ಇದರ ವಿಶೇಷತೆಯಾಗಿದೆ.

ಇದನ್ನೂ ಓದಿ:  IPL 2022 MI vs RR: ಗೆಲುವಿನ ಖಾತೆ ತೆರೆಯಲಿದ್ಯಾ ಮುಂಬೈ? ಉಭಯ ತಂಡಗಳ ಬಲಾಬಲ ಹೀಗಿದೆ

5. Gold Price: ಯುಗಾದಿ ದಿನವೇ ಆಭರಣ ಪ್ರಿಯರ ಪಾಲಿಗೆ 'ಕಹಿ' ಸುದ್ದಿ! ಹಬ್ಬದಂದೇ ಬಂಗಾರ ಬಲು ಭಾರ!

ಇಂದು ಯುಗಾದಿ ಹಬ್ಬದ ದಿನವೇ ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದೆ. ಭಾರತದಲ್ಲಿ ನಿನ್ನೆ 22 ಕ್ಯಾರೆಟ್ ಚಿನ್ನದ ಬೆಲೆ 47,650 ರೂ. ಇದ್ದುದು, ಇಂದು 48,100 ರೂ. ಆಗಿದೆ. ಹಾಗೇ, 24 ಕ್ಯಾರೆಟ್ ಚಿನ್ನದ ಬೆಲೆ ನಿನ್ನೆ 51,980 ರೂ ಇದ್ದದ್ದು, ಇಂದು 52,470 ರೂ. ಆಗಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿಂದು 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 48,100 ರೂಪಾಯಿ ಆಗಿದೆ. ಹಾಗೆಯೇ ಮಂಗಳೂರು ಹಾಗೂ ಮೈಸೂರಿನಲ್ಲೂ ಇದೇ ಬೆಲೆ ಇದೆ. ಇನ್ನು ಬೆಂಗಳೂರಿನಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ಬೆಂಗಳೂರು- 52,470 ರೂ ಆಗಿದ್ದರೆ, ಮಂಗಳೂರಿನಲ್ಲೂ 52,470 ರೂಪಾಯಿ ಹಾಗೂ ಮೈಸೂರಿನಲ್ಲೂ 52,470 ರೂಪಾಯಿ ಬೆಲೆ ಇದೆ.
Published by:Mahmadrafik K
First published: