Morning Digest: ತುಮಕೂರಿನ ಶಂಕರಪ್ಪ ಸೂಸೈಡ್, ಚಿನ್ನದ ದರ ಇಳಿಕೆ, ಮುಸ್ಲಿಂ ಯುವಕನ ಹತ್ಯೆ: ಬೆಳಗಿನ ಟಾಪ್ ನ್ಯೂಸ್ ಗಳು

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು? ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
1.Tumakuru: 25 ವರ್ಷದ ಯುವತಿಯನ್ನು ಮದುವೆಯಾಗಿದ್ದ 50 ವರ್ಷದ ಶಂಕರಪ್ಪ ಆತ್ಮಹತ್ಯೆ

ಕಳೆದ ವರ್ಷ ಸೋಶಿಯಲ್ ಮೀಡಿಯಾ(Social media)ದಲ್ಲಿ ಈ ಜೋಡಿಯ ಮದುವೆ ಫೋಟೋಗಳು ಸಖತ್​ ಆಗಿ ವೈರಲ್ (Viral) ಆಗಿದ್ದವು. 50 ವರ್ಷದ ವ್ಯಕ್ತಿ ಶಂಕರಪ್ಪ, ತನಗಿಂತ ಅರ್ಧ ವಯಸ್ಸು ಕಡಿಮೆ ಇರೋ 25 ವರ್ಷದ ಯುವತಿಯನ್ನು ಮದುವೆ ಆಗಿದ್ದರು. ಇದೀಗ ಶಂಕರಪ್ಪ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ. ತುಮಕೂರಿನ ಕುಣಿಗಲ್ ತಾಲೂಕಿನ ಅಕ್ಕಿಮರಿಪಾಳ್ಯದಲ್ಲಿ ಘಟನೆ ನಡೆದಿದೆ. ಶಂಕರಪ್ಪ ತೋಟದ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.  ಒಂದು ವರ್ಷದ ಹಿಂದೆ ಮೇಘನಾ ಜೊತೆ ಶಂಕರಪ್ಪ ಮದುವೆ ಆಗಿದ್ದರು. ಕಳೆದ ಮೂರು ದಿನದಿಂದ ಗಂಡ ಹೆಂಡತಿ ಜೊತೆ ಜಗಳ ನಡೆಯುತಿತ್ತು.  ಕೌಟುಂಬಿಕ ಕಲಹ ಹಿನ್ನೆಲೆ ಶಂಕರಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಪತ್ನಿ ಮೇಘನಾ ಜೊತೆ ಜಗಳ ಮಾಡಿಕೊಂಡು ನಿನ್ನೆಯೇ ಶಂಕರಪ್ಪ ಮನೆ ತೊರೆದಿದ್ದರು.

2.Gold And Silver Price: ಬೆಲೆ ಏರಿಕೆ ನಡುವೆ ಸಂತಸದ ಸುದ್ದಿ; ಇಳಿಕೆಯಾದ ಚಿನ್ನ, ಬೆಳ್ಳಿ ದರ; ಇವತ್ತಿನ ಬೆಲೆ ಎಷ್ಟಿದೆ ನೋಡಿ!

ದೇಶದಲ್ಲಿಂದು ಚಿನ್ನದ ಬೆಲೆಯಲ್ಲಿ (Gold Price) ಇಳಿಕೆಯಾಗಿದೆ. ಬೆಂಗಳೂರಿನಲ್ಲಿ (Bengaluru) ಸಹ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ. ಭಾರತ(India)ದಲ್ಲಿ ನಿನ್ನೆ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 48,200 ರೂ. ಇತ್ತು. ಇಂದು 250 ರೂ. ಇಳಿಕೆಯಾಗಿ 47,950 ರೂ. ಆಗಿದೆ. ಅಂತೆಯೇ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ನಿನ್ನೆ 52,590 ರೂ. ಇತ್ತು. ಇಂದು 280 ರೂ. ಇಳಿಕೆಯಾಗಿ 52,310 ರೂ. ಆಗಿದೆ. ಬೆಂಗಳೂರಿನಲ್ಲಿ ನಿನ್ನೆ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ (Gold Price) 52,590 ರೂ. ಇತ್ತು. ಇಂದು 280 ರೂ. ಇಳಿಕೆಯಾಗಿ 52,310 ರೂ. ಆಗಿದೆ. ಅದೇ ರೀತಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ನಿನ್ನೆ 48,200 ರೂ. ಇತ್ತು. ಇಂದು 250 ರೂ. ಇಳಿಕೆಯಾಗಿ 47,950 ರೂ. ಆಗಿದೆ. ರಾಜ್ಯದ ಇತರೆ ಪ್ರಮುಖ ನಗರಗಳಾದ ಮೈಸೂರು, ಮಂಗಳೂರಿನಲ್ಲೂ ಇದೇ ಬೆಲೆ ಇದೆ. ದೇಶದಲ್ಲಿಂದು ಚಿನ್ನದ ಬೆಲೆ ಕಡಿಮೆಯಾದಂತೆ ಬೆಳ್ಳಿ ದರ (Silver Rate) ದಲ್ಲೂ ಇಳಿಕೆಯಾಗಿದೆ. ನಿನ್ನೆ 1 ಕೆಜಿ ಬೆಳ್ಳಿಗೆ 68,900 ರೂ. ಇತ್ತು. ಇಂದು 500 ರೂ. ಇಳಿಕೆಯಾಗಿ 68,400 ರೂ. ಆಗಿದೆ.

ಇದನ್ನೂ ಓದಿ:  Mysuru; ನನಗೆ ಗಾಯಿತ್ರಿ ನೆನಪು ಕಾಡ್ತಿದೆ, ನಾನು ಅವಳ ಬಳಿ ಹೋಗ್ತೀನಿ: ಸಾವಿನಲ್ಲಿ ಪತ್ನಿಯನ್ನ ಹಿಂಬಾಲಿಸಿದ ಪತಿ

3.BJP ಗೆಲುವು ಸಂಭ್ರಮಿಸಿದ ಮುಸ್ಲಿಂ ಯುವಕನ ಹತ್ಯೆ..! ತನಿಖೆಗೆ ಆದೇಶಿಸಿದ ಸಿಎಂ ಯೋಗಿ

ಇತ್ತೀಚೆಗಷ್ಟೇ ನಡೆದ ಕುಶಿನಗರ ವಿಧಾನಸಭಾ ಚುನಾವಣೆಯಲ್ಲಿ (Assembly Election) ಭಾರತೀಯ ಜನತಾ ಪಕ್ಷದ (BJP) ಗೆಲುವಿನ ಸಂಭ್ರಮಾಚರಣೆಗಾಗಿ ಹತ್ಯೆಗೀಡಾದ ಮುಸ್ಲಿಂ ಯುವಕನ ಕುಟುಂಬಕ್ಕೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath)ಮವಾರ 2 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಈ ಬಗ್ಗೆ ನ್ಯಾಯಯುತವಾಗಿ ತನಿಖೆ ನಡೆಸುವಂತೆ ಮುಖ್ಯಮಂತ್ರಿಗಳು (CM) ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಕುಶಿನಗರ ಘಟನೆಯ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಸಂಪುಟ ಸಚಿವ ದಯಾಶಂಕರ್ ಸಿಂಗ್ ಅವರು ಇಂದು ಮುಂಜಾನೆ ಹೇಳಿದ್ದಾರೆ. "ಯೋಗಿ ಸರ್ಕಾರ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಸ್ಥಾಪಿಸಿದೆ, ಇದು ತನಿಖೆಯ ವಿಷಯವಾಗಿದೆ ಮತ್ತು ಪೊಲೀಸರು ಆರೋಪಿಗಳನ್ನು ಶೀಘ್ರದಲ್ಲಿ ಪತ್ತೆ ಮಾಡುತ್ತಾರೆ" ಎಂದು ಅವರು ಹೇಳಿದರು.

4.Love Affair: ಮದ್ವೆ ಆಗೋಣ ಅಂತ ಹೇಳಿದ್ದಕ್ಕೆ ಓವರ್ ಡೋಸ್ ಇಂಜೆಕ್ಷನ್ ನೀಡಿ ಕೊಂದೇ ಬಿಟ್ಟ!

ಪ್ರೀತಿ ಮಾಯೆ ಹುಷಾರ್ ಅಂತ ಕೆಲವರು ಹೇಳುತ್ತಿರುತ್ತಾರೆ. ಎಲ್ಲವೂ ಚೆನ್ನಾಗಿದ್ರೆ ಜೋಡಿ ಮದುವೆಯಾಗಿ ಹೊಸ ಜೀವನ ಕಟ್ಟಿಕೊಳ್ಳುತ್ತಾರೆ. ಆದ್ರೆ ಕೆಲವೊಮ್ಮೆ ಈ ಪ್ರೀತಿ ದುರಂತ ಅಂತ್ಯ ಕಾಣುತ್ತದೆ. ದುರಂತ ಅಂತ್ಯ ಕಂಡ ಪ್ರೇಮ ಕಥನವೊಂದು ಬೆಳಕಿಗೆ ಬಂದಿದ್ದು, ಪ್ರಿಯಕರನೇ ಗೆಳತಿಯನ್ನು ಕೊಲೆ ಮಾಡಿದ್ದಾನೆ.ಉತ್ತರ ಪ್ರದೇಶದ ಅಲಿಗಢನಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ. ಕ್ವಾರ್ಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೊಲೆ ನಡೆದಿದೆ. ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ರಿಜ್ವಾನ್ ಬಂಧಿತ ಆರೋಪಿ. ರಿಜ್ವಾನ್ ಮತ್ತು ಮೃತ ಯುವತಿ ಒಂದೇ ಖಾಸಗಿ ನರ್ಸಿಂಗ್ ಹೋಮ್ ನಲ್ಲಿ ಕೆಲಸ ಮಾಡಿಕೊಂಡಿದ್ದರು. ಇಬ್ಬರ ನಡುವಿನ ಸ್ನೇಹ ಪ್ರೇಮವಾಗಿ ಬದಲಾಗಿತ್ತು.

ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

5.Viral News: ಯುವತಿಯ ಕೂದಲಲ್ಲೇ ಗೂಡು ಕಟ್ಟಿ ವಾಸ ಮಾಡಿದ ಹಕ್ಕಿ..!

ವಿಚಿತ್ರಗಳು ನಡೆಯುತ್ತಲೇ ಇರುತ್ತವೆ. ಪ್ರಾಣಿ ಪಕ್ಷಿಗಳ ಕಡೆಗೆ ಜನರಿಗೆ ವಿಪರೀತ ಕಾಳಜಿ ಇರುವಂತಹ ಘಟನೆಗಳನ್ನು ನಾವು ನೋಡುತ್ತೇವೆ. ಗಾಯಗೊಂಡ ಹಕ್ಕಿಯೋ, ರಸ್ತೆಯಲ್ಲಿದ್ದ ನಾಯಿ ಮರಿಯ ಬಗ್ಗೆ ಮರುಗಿ ಅದನ್ನು ಆರೈಕೆ ಮಾಡುವವರಿದ್ದಾರೆ. ಇಲ್ಲೊಬ್ಬ ಯುವತಿ ಹಕ್ಕಿಗೆ (Bird) ತನ್ನ ಕೂದಲಲ್ಲಿ ಗೂಡು (Nest) ಕಟ್ಟೋದಕ್ಕೆ ಬಿಟ್ಟಿದ್ದಾರೆ. ಪುಟ್ಟ ಹಕ್ಕಿಗೆ ರೆಕ್ಕೆ ಬಲಿತು ಹಾರಲು ತಿಳಿಯುವ ತನಕವೂ ಆಕೆ ಅವುಗಳನ್ನು ತನ್ನ ಕೂದಲ ಗೂಡಲ್ಲಿ (Nest in Hair) ಭದ್ರವಾಗಿಟ್ಟುಕೊಂಡಿದ್ದಾರೆ. ಅದೇಗೆ ತಲೆಯ ಕೂದಲಲ್ಲಿ ಗೂಡು ಕಟ್ಟಲು ಬಿಟ್ಟರು, ತಲೆ ಸ್ನಾನ ಮಾಡಲಿಲ್ವಾ? ಬರೋಬ್ಬರಿ 84 ದಿನ ಹಕ್ಕಿ ಇವರ ಕೂದಲ ಗೂಡಲ್ಲಿ ಬೆಚ್ಚಗಿತ್ತು.

ಹಕ್ಕಿಯೊಂದು ತನ್ನ ಹಿಂಡುಗಳಿಂದ ತ್ಯಜಿಸಲ್ಪಟ್ಟ ನಂತರ ಸುಮಾರು ಮೂರು ತಿಂಗಳ ಕಾಲ ತನ್ನ ಕೂದಲಿನಲ್ಲಿ ಹೇಗೆ ಗೂಡುಕಟ್ಟಿತು ಎಂಬುದನ್ನು ಮಹಿಳೆಯೊಬ್ಬರು (Woman) ಬಹಿರಂಗಪಡಿಸಿದ ನಂತರ ಭಾರೀ ವೈರಲ್ ಆಗಿದ್ದಾರೆ.
Published by:Mahmadrafik K
First published: