Morning Digest: SSLC ಪರೀಕ್ಷೆ, ಚಿನ್ನ, ಬೆಳ್ಳಿ ದರ, ಬಂಧಿಯಾಗ್ತಾರಾ ದಿಗ್ವಿಜಯ್ ಸಿಂಗ್: ಬೆಳಗಿನ ಟಾಪ್ ನ್ಯೂಸ್ ಗಳು

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು? ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
1. ರಾಜ್ಯದಲ್ಲಿ ಇಂದಿನಿಂದ SSLC ಪರೀಕ್ಷೆ ಆರಂಭ: Hijab ಧರಿಸಿ ಬಂದ್ರೆ ನೋ ಎಂಟ್ರಿ

ಹಿಜಾಬ್ ಬೇಕು, ಬೇಡ ವಾದಗಳ ನಡುವೆಯೇ ಇಂದಿನಿಂದ ರಾಜ್ಯದಲ್ಲಿ SSLC ಪರೀಕ್ಷೆಗಳು ಆರಂಭವಾಗಲಿವೆ. ಹಿಜಾಬ್ ಧರಿಸುವ ಬರುವ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೊಠಡಿಗೆ ಅನುಮತಿ ನೀಡಲಾಗಲ್ಲ ಎಂದು ಸರ್ಕಾರ ಹೇಳಿದೆ. ಈ ಬಾರಿ 8,73,846 ವಿದ್ಯಾರ್ಥಿಗಳಿಂದ ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದಾರೆ. ಇಂದಿನಿಂದ ಏಪ್ರಿಲ್ 11ರ ವರೆಗೆ ನಡೆಯಲಿರುವ SSLC ಪರೀಕ್ಷೆಗಳು ನಡೆಯಲಿವೆ. ಈ ಬಾರಿ 8,20,888 ಫೆಶ್ಶರ್ ವಿದ್ಯಾರ್ಥಿಗಳು, 46,200 ರಿಪೀಟ್ ವಿದ್ಯಾರ್ಥಿಗಳಿದ್ದಾರೆ. ಇದರಲ್ಲಿ 4,52,732 ಗಂಡು ಮಕ್ಕಳು, 4,21,110 ಹೆಣ್ಣು ಮಕ್ಕಳಿದ್ದಾರೆ. 04 ತೃತಿಯ ಲಿಂಗಿಗಳು ಹಾಗೂ ವಿಭಿನ್ನ ಸಾಮಾರ್ಥ್ಯವುಳ್ಳ ವಿದ್ಯಾರ್ಥಿಗಳು 5,307 ಸೇರಿದಂತೆ ಒಟ್ಟು 8,73,846 ಮಕ್ಕಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದಾರೆ. 1357 ಸರ್ಕಾರಿ ಶಾಲಾ ಕೇಂದ್ರಗಳು, 1009 ಅನುದಾನಿತ,  978 ಅನುದಾನಿತ ರಹಿತ, 3,275 ಸಾಮಾನ್ಯ ಕೇಂದ್ರಗಳು ಹಾಗೂ 169 ಖಾಸಗಿ ಕೇಂದ್ರಗಳು ಒಟ್ಟಾದಂತೆ 3,444 ಕಡೆಗಳಲ್ಲಿ ಪರೀಕ್ಷೆ ನಡೆಯಲಿವೆ.

2.Congress ಹಿರಿಯ ನಾಯಕನಿಗೆ 1 ವರ್ಷ ಜೈಲು ಶಿಕ್ಷೆ! ಇಳಿ ವಯಸ್ಸಲ್ಲಿ ಬಂಧಿಯಾಗ್ತಾರಾ ದಿಗ್ವಿಜಯ್ ಸಿಂಗ್?

ಮಧ್ಯಪ್ರದೇಶ: ಪಂಚ ರಾಜ್ಯಗಳ (5 States) ವಿಧಾನಸಭಾ ಚುನಾವಣೆಯಲ್ಲಿ (Assembly Election) ಹೀನಾಯ ಸೋಲು, ರಾಹುಲ್ ಗಾಂಧಿ (Rahul Gandhi) ನಾಯಕತ್ವದ (Leadership) ವಿರುದ್ಧ ಹಿರಿಯ ನಾಯಕರಿಂದಲೇ (Senior Leader) ಅಪಸ್ವರ ಇತ್ಯಾದಿ ಮುಜುಗರಗಳನ್ನು ಎದುರಿಸುತ್ತಿರುವು ಕಾಂಗ್ರೆಸ್ ಪಕ್ಷಕ್ಕೆ (Congress Party) ಈಗ ಭಾರೀ ಮುಜುಗರದ ಪ್ರಸಂಗ ಎದುರಾಗಿದೆ. ದೇಶದ ಪ್ರಭಾವಿ ನಾಯಕ, ಕಾಂಗ್ರೆಸ್ ಹಿರಿಯ ನಾಯಕರೊಬ್ಬರೇ ಈಗ ಜೈಲು (Jail) ಶಿಕ್ಷೆಗೆ (Punishment) ಗುರಿಯಾಗಿದ್ದಾರೆ. ಹೌದು, ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ (Digvijaya Singh) 1 ವರ್ಷಗಳ ಕಾಲ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ. ಮಧ್ಯ ಪ್ರದೇಶದ (Madhya Pradesh) ಇಂದೋರ್ ನ್ಯಾಯಾಲಯ (Indore Court) ದಿಗ್ವಿಜಯ್ ಸಿಂಗ್ ಅವರಿಗೆ 1 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿ ಆದೇಶ ನೀಡಿದೆ.

ಇದನ್ನೂ ಓದಿ:  Pickle Recipe: ಈ ಯುಗಾದಿಗೆ ಮಾಡಿ ಸ್ಪೆಷಲ್ ಮೆಣಸಿನಕಾಯಿ ಉಪ್ಪಿನಕಾಯಿ ಮತ್ತು ಕ್ಯಾರೆಟ್ ಕ್ಯಾಪ್ಸಿಕಂ ಪಿಕಲ್! ರೆಸಿಪಿ ಇಲ್ಲಿದೆ ಓದಿ

3.Gold and Silver Price: ಯಥಾಸ್ಥಿತಿ ಕಾಯ್ದುಕೊಂಡ ಚಿನ್ನ, ಬೆಳ್ಳಿ ದರ; ನಿಮ್ಮ ನಗರಗಳಲ್ಲಿ ಇಂದು ಬೆಲೆ ಎಷ್ಟಿದೆ ನೋಡಿ

ಭಾರತದಲ್ಲಿ ನಿನ್ನೆ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 48,200 ರೂ. ಇತ್ತು. ಇಂದು ಸಹ ಅದೇ ದರ ಇದೆ. ಅಂತೆಯೇ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ನಿನ್ನೆ 52,590 ರೂ. ಇತ್ತು. ಇಂದು ಸಹ ಅದೇ ದರ ಇದೆ. ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ (Gold Price) 52,590 ರೂ. ಇತ್ತು. ಇಂದು ಸಹ ಅದೇ ದರ ಇದೆ. ಅದೇ ರೀತಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ನಿನ್ನೆ 48,200 ರೂ. ಇತ್ತು. ಇಂದು ಸಹ ಅಷ್ಟೇ ದರ ಇದೆ. ರಾಜ್ಯದ ಇತರೆ ಪ್ರಮುಖ ನಗರಗಳಾದ ಮೈಸೂರು, ಮಂಗಳೂರಿನಲ್ಲೂ ಇದೇ ಬೆಲೆ ಇದೆ. ದೇಶದಲ್ಲಿಂದು ಚಿನ್ನದ ಬೆಲೆ ಸ್ಥಿರತೆ ಕಾಯ್ದುಕೊಂಡಂತೆ ಬೆಳ್ಳಿ ದರ (Silver Rate) ದಲ್ಲೂ ಯಾವುದೇ ವ್ಯತ್ಯಾಸವಾಗಿಲ್ಲ. ನಿನ್ನೆ 1 ಕೆಜಿ ಬೆಳ್ಳಿಗೆ 68,900 ರೂ. ಇತ್ತು. ಇಂದಿನ ಬೆಲೆಯೂ ಅಷ್ಟೇ ಇದೆ.

4.Viral Video: ಇನ್ನೊಬ್ಬರ ಸಂಸಾರದಲ್ಲಿ ಹುಳಿ ಹಿಂಡೋ ಕೆಲಸ ಮಾಡಿದ ಮಹಿಳೆ

ಆಸ್ಟ್ರೇಲಿಯಾ (Australia Woman) ಮೂಲದ ಮಹಿಳೆಯೊಬ್ಬರು ತಮ್ಮ ಟಿಕ್ ಟಾಕ್ (Tiktok) ನಲ್ಲಿ ವಿಚಿತ್ರ ವಿಡಿಯೋ ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಇದು ನಿಮಗೆ ತಮಾಷೆಯಾಗಿ ಕಾಣಬಹುದು. ಆದರೆ ಮತ್ತೊಬ್ಬರ ಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದ ಎಂದು ನೆಟ್ಟಿಗರು ಕ್ಲಾಸ್ ತೆಗದುಕೊಂಡಿದ್ದಾರೆ. ಈ ವಿಡಿಯೋವನ್ನು ಸೇಂಟ್ ಪ್ಯಾಟ್ರಿಕ್ಸ್ ಡೇಯಂದು ಸೆರೆ ಹಿಡಿಯಲಾಗಿದೆ. ಸಿಡ್ನಿಯ ಕ್ಲಬ್‌ನ ಲ್ಲಿ ಮಹಿಳೆ ಸಿಕ್ಕ ಸಿಕ್ಕ ಪುರಷರ ಟೀ ಶರ್ಟ್ ಮೇಲೆ ಕಿಸ್ ಕೊಟ್ಟಿದ್ದಾಳೆ . ಇದೀಗ ಈ ವಿಡಿಯೋ ವೈರಲ್ ಆಗಿದೆ.

ಈ ಸುದ್ದಿ ಪೂರ್ತಿಯಾಗಿ ಓದಲು ಇಲ್ಲಿ ಕ್ಲಿಕ್ ಮಾಡಿ

5.ಕಾಂಡೋಮ್ ಸಂಗ್ರಹಣೆಗೆ ಮುಂದಾಗಿದ್ದೇಕೆ ರಷ್ಯಾದ ಜನತೆ? ಶೇ.170ರಷ್ಟು ಮಾರಾಟ ಏರಿಕೆ

ಯುದ್ಧದ ವಾತಾವರಣ ಹಿನ್ನೆಲೆ ರಷ್ಯಾದಲ್ಲಿ ಜನರು ದಿನಬಳಕೆ ವಸ್ತುಗಳಿಗಾಗಿ ಹೊಡೆದಾಟ ಮಾಡಿಕೊಳ್ಳಲು ಶುರು ಮಾಡಿದ್ದಾರೆ. ಈ ಹಿಂದೆ ಸಕ್ಕರೆಗಾಗಿ ಜನ ಕಿತ್ತಾಡಿಕೊಂಡಿರುವ ವಿಡಿಯೋ ವೈರಲ್ ಆಗಿತ್ತು. ಈಗಾಗಲೇ ಯುರೋಪ್ ನಿಂದ ಆಮದು ಆಗುತ್ತಿದ್ದ ವಸ್ತುಗಳ ಪೂರೈಕೆ ಸ್ಥಗಿತಗೊಂಡಿದೆ. ಯುರೋಪ್ ಬ್ರ್ಯಾಂಡ್ ಗಳನ್ನು ಬಳಸುತ್ತಿದ್ದ ಗ್ರಾಹಕರು, ತಮಗೆ ಬೇಕಾದ ಉತ್ಪನ್ನಗಳನ್ನು ಸಂಗ್ರಹಣೆ ಮಾಡಿಕೊಳ್ಳಲು ಮುಂದಾಗುತ್ತಿದ್ದಾರೆ. ಈ ಎಲ್ಲ ಬೆಳವಣಿಗೆಗಳ ನಡುವೆ ರಷ್ಯಾದಲ್ಲಿ ಕಾಂಡೋಮ್ ಖರೀದಿಸುವವರ ಸಂಖ್ಯೆಯಲ್ಲಿಯೂ ಹೆಚ್ಚಳವಾಗಿದೆ. ವಿವಿಧ ಬ್ರ್ಯಾಂಡ್ ಗಳ ಕಾಂಡೋಮ್ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಕೊರತೆ ಕಾಣಬಹುದು ಎಂಬ ಭಯದಿಂದ ಜನರು ಖರೀದಿಗೆ ಮುಂದಾಗಿದ್ದಾರೆ. ಯುದ್ಧದ ನಂತರ ರಷ್ಯಾ ಕಾಂಡೋಮ್ ಮಾರಾಟ ಶೇ.170ರಷ್ಟು ಏರಿಕೆಯಾಗಿದೆ ಎಂದು ತಿಳಿದು ಬಂದಿದೆ. ಕಾಂಡೋಮ್ ಸರಬರಾಜು ನಿಂತು ಹೋಗಲಿದೆ ಎಂಬ ಭಯದಿಂದ ಜನರು ಖರೀದಿಗೆ ಮುಂದಾಗಿದ್ದಾರೆ ಎನ್ನಲಾಗಿದೆ.
Published by:Mahmadrafik K
First published: