Morning Digest: ಶ್ರೀ ಶಿವಕುಮಾರ ಸ್ವಾಮೀಜಿಗಳ 115ನೇ ಜಯಂತಿ, BBMP ಬಜೆಟ್, ತಮಿಳುನಾಡು ಕಿರಿಕ್; ಬೆಳಗಿನ ಟಾಪ್ ನ್ಯೂಸ್ ಗಳು

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ...

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
1.Sri Shivakumara Swamiji ತ್ರಿವಿಧ ದಾಸೋಹಿ ಶ್ರೀ ಶಿವಕುಮಾರ ಸ್ವಾಮೀಜಿಗಳ 115ನೇ ಜಯಂತಿ

ಇಂದು ತ್ರಿವಿಧ ದಾಸೋಹಿ, ನಡೆದಾಡುವ ದೇವರು ಡಾ.ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಗಳ (Sri Shivakumara Swamiji) 115ನೇ ಜಯಂತಿ ಹಿನ್ನೆಲೆ ತುಮಕೂರಿನ ಸಿದ್ದಗಂಗಾ ಮಠದಲ್ಲಿ (Siddaganga Mutt) ಗುರುವಂದನಾ ಕಾರ್ಯಕ್ರಮ ಆಯೋಜಿಸಲಾಗಿದೆ. ಶ್ರೀಗಳ ಜಯಂತಿ ಕಾರ್ಯಕ್ರಮದಲ್ಲಿ ಸುಮಾರು 4 ಲಕ್ಷ ಜನರು ಭಾಗಿಯಾಗುವ ಸಾಧ್ಯತೆ ಹಿನ್ನೆಲೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಸಿದ್ದಗಂಗಾ ಮಠಕ್ಕೆ ಆಗಮಿಸುವ ಭಕ್ತಾದಿಗಳಿಗಾಗಿ ಎಂಟು ಕಡೆ ಊಟದ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆ ತಿಂಡಿ, ಮಧ್ಯಾಹ್ನ ಹಾಗೂ ರಾತ್ರಿಯ ಊಟದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಇಂದು ಬೆಳಗ್ಗೆ 10 ಗಂಟೆಯ ನಂತರ ಗುರುವಂದನಾ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾಗಿಯಾಗಲಿದ್ದಾರೆ. ಗುರುವಾರ ಕಾಂಗ್ರೆಸ್ ಮಾಜಿ ಅಧ್ಯಕ್ಷ, ಸಂಸದ ರಾಹುಲ್ ಗಾಂಧಿ ಮಠಕ್ಕೆ ಭೇಟಿ ಶ್ರೀಗಳ ಗದ್ದುಗೆಯ ದರ್ಶನ ಪಡೆದುಕೊಂಡಿದ್ದರು.

2.BBMP Budget: ರಾತ್ರೋ ರಾತ್ರಿ ಕದ್ದು ಮುಚ್ಚಿ ಬಜೆಟ್ ಮಂಡನೆ; ಪಾಲಿಕೆ ಇತಿಹಾಸದಲ್ಲಿ ಇದೇ ಮೊದಲು

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(Bruhat Bengaluru Mahanagara Palike)ಯ ಇತಿಹಾಸದಲ್ಲಿಯೇ ಮೊದಲ ಬಾರಿಗೆ ವಾರ್ಷಿಕ ಬಜೆಟ್ ನ್ನು (Budget) ಯಾವುದೇ ಮಾಹಿತಿ ನೀಡದೇ ರಾತ್ರೋ ರಾತ್ರಿ ಕದ್ದುಮುಚ್ಚಿ ಮಂಡಿಸಲಾಗಿದೆ. ಬಜೆಟ್ ಮಂಡನೆಯ ಪ್ರತಿಯನ್ನು ಬಿಬಿಎಂಪಿ ವೆಬ್ ಸೈಟ್ (BBMP Website) ನಲ್ಲಿ ಅಪ್ಲೋಡ್ ಮಾಡಲಾಗಿದೆ. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಮುಸುಕಿನ ಗುದ್ದಾಟದ ಹಿನ್ನೆಲೆ ಈ ರೀತಿ ಬಜೆಟ್ ಮಂಡನೆ ಮಾಡಲಾಗಿದೆ ಎಂದು ವರದಿಯಾಗಿದೆ. ಒಟ್ಟು 10,480.93 ಕೋಟಿ ರೂ. ಗಾತ್ರದ ಬಜೆಟ್ ಮಂಡನೆ ಮಾಡಲಾಗಿದೆ. 2021-22ನೇ ಸಾಲಿನಲ್ಲಿ ಬಿಬಿಎಂಪಿ 9,286.80 ಕೋಟಿ ರೂ.ಗಳ ಬಜೆಟ್ ಅನುಮೋದಿಸಿತ್ತು. ಈ ಕುರಿತ ಎಲ್ಲ ಮಾಹಿತಿಯನ್ನು ಬಿಬಿಎಂಪಿ ವೆಬ್ ಸೈಟ್ ನಲ್ಲಿ ಅಪ್ಲೋಡ್ ಮಾಡಲಾಗಿದೆ. ಸ್ವೀಕೃತಿ (Receipt) ಮತ್ತು ವೆಚ್ಚಗಳು (Payment) ಸರಿಸಮವಾಗಿವೆ. ಮಾರ್ಚ್ 30ರಂದು ಬಜೆಟ್ ಮಂಡನೆ ಸಿದ್ಧತೆ ನಡೆಸಲಾಗಿತ್ತು. ಆದ್ರೆ ಕೊನೆ ಕ್ಷಣದಲ್ಲಿ ಬಜೆಟ್ ಮಂಡನೆಗಳು ಜನಪ್ರತಿನಿಧಿಗಳು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆ ರದ್ದುಗೊಳಿಸಲಾಗಿತ್ತು.

ಈ ವರ್ಷದ ಬಿಬಿಎಂಪಿ ಬಜೆಟ್ ಮಾಹಿತಿ ಓದಲು ಇಲ್ಲಿ ಕ್ಲಿಕ್ ಮಾಡಿ

3.ಕರ್ನಾಟಕದ ವಿರುದ್ಧ ಮತ್ತೆ ತಮಿಳುನಾಡು ಕಿರಿಕ್! ಪ್ರಧಾನಿ Narendra Modiಗೆ ದೂರು ಕೊಟ್ಟ ಎಂ.ಕೆ. ಸ್ಟಾಲಿನ್

ಕರ್ನಾಟಕ (Karnataka) ಹಾಗೂ ತಮಿಳುನಾಡು (Tamil Nadu) ರಾಜ್ಯಗಳ (State) ನಡುವೆ ಜಲ ವಿವಾದ (Water Dispute) ಇಂದು ನಿನ್ನೆಯದ್ದಲ್ಲ. ಅದೆಷ್ಟೋ ವರ್ಷಗಳಿಂದ ಕಾವೇರಿ ನದಿ (Cauvery River) ನೀರಿನ ಹಂಚಿಕೆ ವಿಚಾರದಲ್ಲಿ ಗಲಾಟೆ (Clash) ನಡೆಯುತ್ತಲೇ ಇದೆ. ಕಾವೇರಿ ವಿಚಾರಕ್ಕೆ ಕರ್ನಾಟಕದ ಜೊತೆ ಪದೇ ಪದೇ ಕ್ಯಾತೆ ತೆಗೆಯುವ ತಮಿಳುನಾಡು, ಇದೀಗ ಮೇಕೆದಾಟು ಯೋಜನೆ (Mekedatu Project) ವಿಚಾರಕ್ಕೂ ಕಿರಿಕ್ ಮುಂದುವರೆಸಿದೆ. ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರನ್ನು ಭೇಟಿಯಾಗಿರುವ ತಮಿಳುನಾಡು ಸಿಎಂ (Tamil Nadu CM) ಎಂ.ಕೆ. ಸ್ಟಾಲಿನ್ (M.K. Stalin), ಮೇಕೆದಾಟು ವಿಚಾರ ಪ್ರಸ್ತಾಪಿಸಿದ್ದಾರೆ. “ಯಾವುದೇ ಕಾರಣಕ್ಕೂ ಮೇಕೆದಾಟು ಯೋಜನೆಗೆ ಒಪ್ಪಿಗೆ ನೀಡಬೇಡಿ” ಅಂತ ಮನವಿ ಮಾಡಿದ್ದಾರೆ.

4.Gold Price: ನಾಳಿನ ಯುಗಾದಿ ಹಬ್ಬಕ್ಕೆ ಚಿನ್ನ-ಬೆಳ್ಳಿ ಖರೀದಿಸಲು ಇಂದೇ ಶುಭ ಮುಹೂರ್ತ! ಯಾಕೆ ಅಂತ ಇಲ್ಲಿ ಓದಿ

ಭಾರತದಲ್ಲಿ ನಿನ್ನೆ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 47,650 ರೂ. ಇತ್ತು. ಇಂದು ಸಹ ಅಷ್ಟೇ ಬೆಲೆ ಇದೆ. ಅಂತೆಯೇ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ನಿನ್ನೆ 51,980 ರೂ. ಇತ್ತು. ಇಂದು ಸಹ ಅದೇ ದರ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ ನಿನ್ನೆ 51,980 ರೂ. ಇತ್ತು. ಇಂದು ಸಹ ಅದೇ ದರ ಇದೆ. ಅದೇ ರೀತಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ನಿನ್ನೆ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 47,650 ರೂ. ಇತ್ತು. ಇಂದು ಸಹ ಅಷ್ಟೇ ಬೆಲೆ ಇದೆ. ರಾಜ್ಯದ ಇತರೆ ಪ್ರಮುಖ ನಗರಗಳಾದ ಮೈಸೂರು, ಮಂಗಳೂರಿನಲ್ಲೂ ಇದೇ ಬೆಲೆ ಇದೆ. ದೇಶದಲ್ಲಿಂದು ಚಿನ್ನದ ಬೆಲೆ ಯತಾಸ್ತಿತಿ ಕಾಯ್ದುಕೊಂಡಿದ್ದರೆ ಬೆಳ್ಳಿ ದರ (Silver Rate) ದಲ್ಲಿ ಭಾರಿ ಇಳಿಕೆಯಾಗಿದೆ. ನಿನ್ನೆ 1 ಕೆಜಿ ಬೆಳ್ಳಿಗೆ 72,100 ರೂ. ಇತ್ತು. ಇಂದು 5,300 ರೂ. ಕಡಿಮೆಯಾಗಿ 66,800 ರೂ. ಆಗಿದೆ.

ಇದನ್ನೂ ಓದಿ: Viral Video: ಬೆಳೆ ರಕ್ಷಣೆಗಾಗಿ ಕರಡಿ ತಂದ ರೈತ; ಇದಕ್ಕೆ ಪ್ರತಿದಿನ 500 ರೂ. ಸಂಬಳ

5.TRAI: ಪ್ಲಾನ್ ವ್ಯಾಲಿಡಿಟಿಯಲ್ಲಿ ಬದಲಾವಣೆ ತಂದ ಟ್ರಾಯ್​! ಇನ್ಮುಂದೆ 28 ಅಲ್ಲ, 30 ದಿನಗಳ ಕಾಲ ಬರುತ್ತದೆ

Telecom companies: ಟ್ರಾಯ್ ಟೆಲಿಕಾಂ ಕಂಪನಿಗಳಿಗೆ ಕನಿಷ್ಠ ಒಂದು ವಿಶೇಷ ಸುಂಕದ ವೋಚರ್ ಮತ್ತು ಒಂದು ವಿಶೇಷ ರೀಚಾರ್ಜ್ ಪ್ಲಾನ್ ಅನ್ನು ಇಡೀ ತಿಂಗಳು ವ್ಯಾಲಿಡಿಟಿಯೊಂದಿಗೆ ಇಟ್ಟುಕೊಳ್ಳಬೇಕು ಎಂದು ಹೇಳಿದೆ. ತಿಂಗಳ ಕೊನೆಯವರೆಗೆ ಈ ಸೇವೆಯನ್ನು ನೀಡಬೇಕು ಎಂದು ತಿಳಿಸಿದೆ. ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಟೆಲಿಕಾಂ ಕಂಪನಿಗಳ ಮೇಲೆ ದೊಡ್ಡ ಕ್ರಮ ಕೈಗೊಂಡಿದೆ. ಮಾತ್ರವಲ್ಲದೆ, ಟ್ರಾಯ್ ಟೆಲಿಕಾಂ ಕಂಪನಿಗಳಿಗೆ ಹೊಸ ಆದೇಶವನ್ನು ಹೊರಡಿಸಿದೆ, ಅದರ ಪ್ರಕಾರ, ಕಂಪನಿಗಳು ಇಡೀ ತಿಂಗಳು ಮಾನ್ಯವಾಗಿರುವ ಕನಿಷ್ಠ ಒಂದು ಯೋಜನೆಯನ್ನು ಇರಿಸಿಕೊಳ್ಳಬೇಕು. ಇದಕ್ಕಾಗಿ ಟೆಲಿಕಾಂ ಕಂಪನಿಗಳಿಗೆ 60 ದಿನಗಳ ಕಾಲಾವಕಾಶ ನೀಡಲಾಗಿದೆ.
Published by:Mahmadrafik K
First published: