Morning Digest: ಹಗುರವಾಯ್ತು ಚಿನ್ನ, ತಾಯಿಯನ್ನ ಕೊಂದ ಮಗ, ವಿಧಾನಸೌಧದಲ್ಲಿ ಕಾಂಗ್ರೆಸ್ ಧರಣಿ: ಬೆಳಗಿನ ಟಾಪ್ ನ್ಯೂಸ್

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು? ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
1.ನಡು ರಸ್ತೆಯಲ್ಲೇ ಜೀಪ್ ಹರಿಸಿ ತಾಯಿಯನ್ನು ಕೊಂದ ಮಗ: ಹಣಕಾಸಿನ ವಿಚಾರಕ್ಕೆ ತಾಯಿ ಹಾಗೂ ಮಗನ ನಡುವೆ ನಿತ್ಯ ಗಲಾಟೆ ನಡೆಯುತ್ತಿತ್ತಂತೆ. ಆದರೆ ನಿನ್ನೆ ಆ ಗಲಾಟೆ ವಿಪರೀತಕ್ಕೆ ಹೋಗಿದೆ. ತನ್ನ ಜೊತೆ ಜಗಳವಾಡಿ ರಸ್ತೆ ಮೇಲೆ ಹೋಗುತ್ತಿದ್ದ ತಾಯಿ ಮೇಲೆ ಮಗ ಅಟ್ಯಾಕ್ ಮಾಡಿದ್ದಾನೆ. ಆಕೆಯ ಮೇಲೆ ಹಿಂದಿನಿಂದ ಜೀಪ್ ಹರಿಸಿ, ನಡು ಬೀದಿಯಲ್ಲೇ ಕೊಂದಿದ್ದಾನೆ. ಮೈಸೂರು ಜಿಲ್ಲೆಯ ರಿಯಾಪಟ್ಟಣ ತಾಲೂಕಿನ ಹನುಮಂತಪುರದಲ್ಲಿ ಇಂಥದ್ದೊಂದು ಘಟನೆ ನಡೆದಿದೆ. 65 ವರ್ಷದ ನಾಗಮ್ಮ ಎಂಬಾಕೆಯೇ ಹತ್ಯೆಯಾಗಿದ್ದಾಳೆ. ಇವರ ಮಗ 45 ವರ್ಷದ ಹೇಮರಾಜ್ ಎಂಬಾತನೇ ಕೊಲೆ ಮಾಡಿದ್ದಾನೆ. ತಾಯಿ ನಾಗಮ್ಮ ಹಾಗೂ ಪುತ್ರ ಹೇಮರಾಜ್ ನಡುವೆ ಹಣಕಾಸಿನ ವಿಚಾರವಾಗಿ ನಿತ್ಯ ಗಲಾಟೆ ನಡೆಯುತ್ತಾ ಇತ್ತು. ನಿತ್ಯ ಇದೇ ವಿಚಾರಕ್ಕೆ ಗಲಾಟೆ ನಡೆದು, ತಾಯಿ ಹಾಗೂ ಮಗ ಕಿತ್ತಾಡಿಕೊಳ್ಳುತ್ತಾ ಇದ್ದರು. ನಿನ್ನೆ ಗಲಾಟೆ ವಿಪರೀತಕ್ಕೆ ತಿರುಗಿ, ಕೊಲೆಯಲ್ಲಿ ಅಂತ್ಯವಾಗಿದೆ.

2.ವಿಧಾನಸೌಧದಲ್ಲಿ Congress ನಾಯಕರ ಅಹೋರಾತ್ರಿ ಧರಣಿ: ಸಚಿವ ಕೆ.ಎಸ್.ಈಶ್ವರಪ್ಪ (Minister KS Eshwarappa) ಹೇಳಿಕೆ ಖಂಡಿಸಿರುವ ಕಾಂಗ್ರೆಸ್ (Congress) ರಾಜೀನಾಮೆಗೆ ಒತ್ತಾಯಿಸುತ್ತಿದೆ. ಸದನ ಮುಂದೂಡಿಕೆಯಾದ್ರೂ ಕಾಂಗ್ರೆಸ್ ನಾಯಕರು ವಿಧಾನಸೌಧದಲ್ಲಿ ಅಹೋರಾತ್ರಿ ಧರಣಿಗೆ ಮುಂದಾಗಿದ್ದಾರೆ. ಸುಮಾರು 30 ರಿಂದ 35 ಶಾಸಕರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ವಿಧಾನಸೌಧದಲ್ಲಿ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸುತ್ತಿರುವ ವಿಡಿಯೋ ಮತ್ತು ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಇನ್ನು ಕೆಲ ಶಾಸಕರು ಮೊಬೈಲ್ ನಲ್ಲಿ ತಮ್ಮ ನೆಚ್ಚಿನ ಹಾಡುಗಳನ್ನು ಕೇಳುತ್ತಿರುವ ದೃಶ್ಯಗಳನ್ನು ನೋಡಬಹುದಾಗಿದೆ. ಶಾಸಕಿ ಸೌಮ್ಯಾ ರೆಡ್ಡಿ ಅವರು ವ್ಯಂಗ್ಯವಾಗಿ ಈಶ್ವರಪ್ಪ ಅವರಿಗೆ ಟಾಂಗ್ ನೀಡುತ್ತಾ ಹಾಡು ಹಾಡಿದ್ದಾರೆ.

ಇದನ್ನೂ ಓದಿ: ವಿಧಾನಸೌಧದಲ್ಲಿ ಕಾಂಗ್ರೆಸ್ ನಾಯಕರ ಧರಣಿ ಹೇಗಿತ್ತು? ಫೋಟೋಗಳಲ್ಲಿ ನೋಡಿ

3.ಚಿನ್ನದ ಬೆಲೆಯಲ್ಲಿ ಇಳಿಕೆ:  ಇಂದು ದೇಶದಲ್ಲಿ ಚಿನ್ನದ ಬೆಲೆಯಲ್ಲಿ (Gold Price) ಇಳಿಕೆಯಾಗಿದೆ. ಬೆಂಗಳೂರಿನಲ್ಲಿ (Bengaluru) ಸಹ ಚಿನ್ನದ ಬೆಲೆಯಲ್ಲಿ ಕಡಿಮೆಯಾಗಿದೆ. ಭಾರತದಲ್ಲಿ ನಿನ್ನೆ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 46,200 ರೂ. ಇತ್ತು. ಇಂದು 400 ರೂ. ಇಳಿಕೆಯಾಗಿ 45,800 ರೂ. ಆಗಿದೆ. ಅಂತೆಯೇ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ನಿನ್ನೆ 50,400 ರೂ. ಇತ್ತು. ಇಂದು 430 ರೂ. ಕಡಿಮೆಯಾಗಿ 49,970 ರೂ. ಆಗಿದೆ. ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ (Gold Price) 50,400 ರೂ. ಇತ್ತು.

ಇಂದು 430 ರೂ. ಕಡಿಮೆಯಾಗಿ 49,970 ರೂ. ಆಗಿದೆ. ಅದೇ ರೀತಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ನಿನ್ನೆ 46,200 ರೂ. ಇತ್ತು. ಇಂದು 400 ರೂ. ಇಳಿಕೆಯಾಗಿ 45,800 ರೂ. ಆಗಿದೆ. ರಾಜ್ಯದ ಇತರೆ ಪ್ರಮುಖ ನಗರಗಳಾದ ಮೈಸೂರು, ಮಂಗಳೂರಿನಲ್ಲೂ ಇದೇ ಬೆಲೆ ಇದೆ.

4.ಬೆಂಗಳೂರಿನಲ್ಲಿ ಹಲವು ಏರಿಯಾಗಳಲ್ಲಿ ಪವರ್ ಕಟ್: ಬೆಂಗಳೂರಿನಲ್ಲಿ(Bangalore) ಈಗಾಗಲೇ ಹಲವಾರು ಸಮಸ್ಯೆಗಳಿಂದ(Problem) ಜನರು ಹೈರಾಣಾಗಿ ಹೋಗಿದ್ದಾರೆ.. ಇದು ಸಾಲದು ಎಂಬಂತೆ ಬೆಸ್ಕಾಂ(Bescom) ಪ್ರತಿನಿತ್ಯ ಒಂದಲ್ಲ ಒಂದು ಕಾಮಗಾರಿಗಳ ಹೆಸರಿನಲ್ಲಿ ಬೆಂಗಳೂರಿನ ಜನರಿಗೆ ವಿದ್ಯುತ್ ಕಡಿತ(Power cut) ಮಾಡುವ ಶಾಕ್(Shock) ನೀಡುತ್ತಲೇ ಇದೆ. ಬೆಂಗಳೂರಿನ 4 ವಲಯಗಳಲ್ಲಿ ತುರ್ತು ವಿದ್ಯುತ್ ನಿರ್ವಹಣ ಕಾಮಗಾರಿ ಇರುವುದರಿಂದ ಕೆಲವೊಂದು ಪ್ರದೇಶಗಳಲ್ಲಿ ಫೆಬ್ರವರಿ(February) 19ರಂದು ಬೆಸ್ಕಾಂ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಮಾಡಲಿದೆ.. ಹಾಗಿದ್ದರೆ ಯಾವ ಯಾವ ಪ್ರದೇಶದಲ್ಲಿ ಬೆಸ್ಕಾಂ ವಿದ್ಯುತ್ ಪೂರೈಕೆಯಲ್ಲಿ ವ್ಯಕ್ತಿಯ ಮಾಡುತ್ತಿದೆ ಎನ್ನುವ ಮಾಹಿತಿ ಇಲ್ಲಿದೆ.

ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ: Power Cut: ಬೆಂಗಳೂರಿನ ಹಲವು ಏರಿಯಾಗಳಲ್ಲಿ ಇಂದು ಸಹ ವಿದ್ಯುತ್ ವ್ಯತ್ಯಯ

5.Viral Video: ಹಾರಾಡುತ್ತಲೇ ಬಿದ್ದು ಪ್ರಾಣಬಿಟ್ಟವು ಸಾವಿರಾರು ಪಕ್ಷಿಗಳು! ಮುಂದಿದೆಯಾ ಮಹಾವಿಪತ್ತು? ಫೆಬ್ರವರಿ 7ರಂದು ಮೆಕ್ಸಿಕೋ ಸಿಟಿಯ ಚಿಹೌಹುವಾ ಎಂಬ ಪ್ರದೇಶದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಆಕಾಶದಲ್ಲಿ ಸ್ವಚ್ಛಂದವಾಗಿ ಹಾರಾಡುತ್ತಿದ್ದ ನೂರಾರು ಹಕ್ಕಿಗಳು ಇದ್ದಕ್ಕಿದ್ದಂತೆ ಕಟ್ಟಡಗಳು,  ಪಾದಚಾರಿ ಮಾರ್ಗದ ಮೇಲೆ ಬಿದ್ದು ಸಾವನ್ನಪ್ಪಿವೆ. ಹಳದಿ ತಲೆಯ ಕಪ್ಪು ಹಕ್ಕಿಗಳ ಹಿಂಡು ಏಕಾಏಕಿ ಕುಸಿದು ಆಕಾಶದಿಂದ ನೆಲಕ್ಕೆ ಕುಸಿದು ಬಿದ್ದ ವಿಚಿತ್ರ ಘಟನೆಯ ವಿಡಿಯೋಗಳು ವೈರಲ್ ಆಗಿವೆ.
Published by:Mahmadrafik K
First published: