Morning Digest: ಭಯಾನಕ ಭೂಕುಸಿತ, ಹಿಂದೂ ಯುವಕನ ಸಾವು, ಮುರುಘಾ ಶ್ರೀ ಕೇಸ್ ಅಪ್​ಡೇಟ್; ಬೆಳಗಿನ ಟಾಪ್ ನ್ಯೂಸ್

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

ಈವರೆಗಿನ ಪ್ರಮುಖ ಸುದ್ದಿಗಳು

ಈವರೆಗಿನ ಪ್ರಮುಖ ಸುದ್ದಿಗಳು

  • Share this:
1.Landslide: ಕಡಮಕಲ್ಲು ಅರಣ್ಯದಲ್ಲಿ ಮತ್ತೆ ಭಯಾನಕ ಭೂಕುಸಿತ, ಬೆಚ್ಚಿಬಿದ್ದ ಜನ

ದಕ್ಷಿಣ ಕನ್ನಡ (Dakshina Kannada) ಮತ್ತು ಕೊಡಗು (Kodagu) ಜಿಲ್ಲೆಯ ಅರಣ್ಯ ಭಾಗದಲ್ಲಿ ಉಂಟಾದ ಭೂಕುಸಿತದಿಂದಾಗಿ (Big Landslide) ಮತ್ತೆ ಸುಳ್ಯ ತಾಲೂಕಿನ ಕಲ್ಮಕಾರು, ಕೊಲ್ಲಮೊಗ್ರು, ಹರಿಹರ ಮತ್ತು ಬಾಳುಗೋಡು ಪರಿಸರದ ಜನ ಆತಂಕದಲ್ಲಿದ್ದಾರೆ. ಭಾನುವಾರ ತಡರಾತ್ರಿ ಕಲ್ಮಕಾರಿನ ಕಡಮಕಲ್ಲು ಅರಣ್ಯ ಭಾಗದಲ್ಲಿ ಭಾರೀ ಪ್ರಮಾಣದ ಭೂ ಕುಸಿತ ಉಂಟಾಗಿದ್ದು, ಗುಡ್ಡದ ಮಣ್ಣು (Soil) ಹಾಗು ಮರಗಳು (Wood) ಕಿಲೋಮೀಟರ್ ದೂರದವರೆಗೆ ಹೊಳೆಯಲ್ಲಿ ಹರಿದು ಮತ್ತೆ ಭಾರೀ ನಷ್ಟವನ್ನು ಉಂಟು ಮಾಡಿದೆ. ಕೊಲ್ಲಮೊಗ್ರು- ಉಪ್ಪುಕಳ ಸಂಪರ್ಕಿಸುವ ಸೇತುವೆ ಸಂಪೂರ್ಣ ಕುಸಿದಿದ್ದು, ಉಪ್ಪುಕಳ ಭಾಗದ ಸುಮಾರು 250 ಮಿಕ್ಕಿದ ಮನೆಗಳಿಗೆ ಸಂಪರ್ಕ ಕಡಿತವಾಗಿದೆ.

2. Bengaluru Rains: ನಿಲ್ಲದ ಮಳೆ, ರಸ್ತೆಗಳು ಜಲಾವೃತ; ಇಂದು ಶಾಲಾ ಕಾಲೇಜುಗಳಿಗೆ ರಜೆ

ಕಳೆದ ಒಂದು ವಾರದಿಂದ ರಾಜಧಾನಿ ಬೆಂಗಳೂರಿನಲ್ಲಿ (Bengaluru Rains) ಮಳೆ ಮುಂದುವರಿದಿದೆ. ಇಂದು ಮುನ್ನೆಚ್ಚರಿಕೆ ಕ್ರಮವಾಗಿ ಶಾಲಾ ಕಾಲೇಜುಗಳಿಗೆ ರಜೆ (Schools Holiday) ಸಹ ನೀಡಲಾಗಿದೆ. ಇತ್ತ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಮತ್ತೊಂದು ಕಡೆ ಬೆಂಗಳೂರಿನ ರಸ್ತೆಗುಂಡಿಗಳು (Bengaluru Potholes) ಬಲಿಗಾಗಿ ಕಾದು ಕುಳಿತಿವೆ. ಸಿಲಿಕಾನ್ ಸಿಟಿಯಲ್ಲಿ ಮಳೆ ಮುಂದುವರಿದಿದ್ದು, ಕೆಲವು ಕಡೆ ಬೃಹತ್ ಮರಗಳು ಧರೆಗೆ ಉರುಳಿವೆ. ಯಶವಂತಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮರದ ಕೊಂಬೆ ರಸ್ತೆಗೆ ಅಡ್ಡಲಾಗಿ ಬಿದ್ದಿತ್ತು. ಮಧ್ಯರಾತ್ರಿಯೇ ಬಿಬಿಎಂಪಿ ಸಿಬ್ಬಂದಿ ಕೊಂಬೆ ತೆರವುಗೊಳಿಸಿದ್ದಾರೆ.

3.Murugha Shri: ಇದೆಂತಾ ಎಡವಟ್ಟು ಮಾಡಿದ್ರು ಪೊಲೀಸರು? ಸಾಕ್ಷ್ಯ ನಾಶಕ್ಕೆ ಮುಂದಾಯ್ತಾ ಖಾಕಿ?

ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಶರಣರ (Murugha Shivamurthy Swamiji) ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿ ಮೂರು ದಿನಗಳು ಕಳೆದಿವೆ. ಪ್ರಕರಣ ದಾಖಲಾದ ನಂತರ ಸಂತ್ರಸ್ತೆಯರನ್ನು ಮೈಸೂರಿನಿಂದ ಚಿತ್ರದುರ್ಗಕ್ಕೆ ಕರೆದುಕೊಂಡು ವೈದ್ಯಕೀಯ ಪರೀಕ್ಷೆ ಸಹ ನಡೆಸಲಾಗಿದೆ. ಮಕ್ಕಳು ಚಿತ್ರದುರ್ಗಕ್ಕೆ ತೆರಳಿದ ನಂತರದ ಕ್ಷಣದಿಂದಲೂ ಒಡನಾಡಿ ಸಂಸ್ಥೆ ತನಿಖಾಧಿಕಾರಿಗಳ ಬಗ್ಗೆ ಅಸಮಾಧಾನ ಹೊರ ಹಾಕುತ್ತಿದೆ. ಪ್ರಕರಣದ ತನಿಖೆ ಮತ್ತು ವಿಧಾನಗಳು ಕಾನೂನುಬದ್ಧವಾಗಿ ನಡೆಯುತ್ತಿಲ್ಲ ಎಂದು ಒಡನಾಡಿ ಸಂಸ್ಥೆಯ ಮುಖ್ಯಸ್ಥ ಪರಶು ಗಂಭೀರ ಆರೋಪ ಮಾಡಿದ್ದಾರೆ. ಈ ನಡುವೆ ಪೊಲೀಸರು ಮಾಡಿದ ಎಡವಟ್ಟು ಮತ್ತಷ್ಟು ಅನುಮಾನಕ್ಕೆ ಕಾರಣವಾಗಿದೆ. ಹೌದು, ನಿನ್ನೆ ಪೊಲೀಸರು ಬಾಲಕಿಯರಿಬ್ಬರನ್ನು ಸ್ಥಳ ಮಹಜರು ಮಾಡಲು ಮುರುಘಾ ಮಠಕ್ಕೆ ಕರೆದುಕೊಂಡು ಹೋಗಿದ್ದರು. ಈ ವೇಳೆ ಪ್ರಕರಣದ ಎ1 ಆರೋಪಿ ಶಿವಮೂರ್ತಿ ಸ್ವಾಮೀಜಿ ಮಠದಲ್ಲಿಯೇ ಇದ್ದರು.

4. Beef: ಮುಸ್ಲಿಂ ಹುಡುಗಿ ಮದ್ವೆಯಾದ ಹಿಂದೂ ಯುವಕ ಆತ್ಮಹತ್ಯೆ! ಗೋಮಾಂಸ ತಿನ್ನಿಸಿದ್ದಕ್ಕೆ ನೊಂದು ಸೂಸೈಡ್

ಆತ ಹಿಂದೂ ಯುವಕ (Hindu Man), ಆಕೆ ಮುಸ್ಲಿಂ ಯುವತಿ (Muslim Girl). ಆದರೆ ಪ್ರೀತಿಗೆ (Love) ಜಾತಿ, ಧರ್ಮದ ಹಂಗೇಕೆ ಅಂತ ಅವರಿಬ್ಬರು ಪ್ರೀತಿಸಿದ್ದರು. ಜಾತಿ ಧರ್ಮದ ಎಲ್ಲೆ ಮೀರಿ, ಮನೆಯವರ ವಿರೋಧ (Family Opposition) ಎದುರಿಸಿ ಮದುವೆಯನ್ನೂ (Marriage) ಆಗಿದ್ದರು. ಒಂದು ವರ್ಷ ಸಂಸಾರವೇನೋ ಚೆನ್ನಾಗೇ ನಡೆಯಿತು. ನನಗೆ ನೀನು, ನಿನಗೆ ನಾನು ಅಂತ ಇಬ್ಬರೂ ಅನ್ಯೋನ್ಯವಾಗೇ ಇದ್ದರು. ಆದರೆ ಒಂದು ವರ್ಷದ ಬಳಿಕ ಅದೇನಾಯ್ತೋ ಏನೋ ಆ ಯುವಕ ಆತ್ಮಹತ್ಯೆ (Suicide) ಮಾಡಿಕೊಂಡು ಬಿಟ್ಟಿದ್ದಾನೆ. ಸಾಯುವ ಮುನ್ನ ಆತ ಫೇಸ್‌ಬುಕ್‌ನಲ್ಲಿ (Facebook) ತನ್ನ ಆತ್ಮಹತ್ಯೆಗೆ ಕಾರಣ ಏನು ಅಂತ ಬರೆದಿದ್ದಾನೆ. ಇದನ್ನು ಓದಿ ಆತನ ಮನೆಯವರು, ಸಂಬಂಧಿಕರು, ಸ್ನೇಹಿತರೆಲ್ಲ ಶಾಕ್ ಆಗಿದ್ದಾರೆ. ಅಷ್ಟಕ್ಕೂ ಅವನ ಸಾವಿಗೆ ಕಾರಣವಾಗಿದ್ದು ಗೋಮಾಂಸ (Beef)!

5.Hero Anirudh: ಕೈ ಕುಯ್ದುಕೊಂಡ ಅನಿರುದ್ಧ್ ಅಭಿಮಾನಿ! ಈ ರೀತಿ ಮಾಡಬೇಡಿ ಎಂದು ವಿಷ್ಣುವರ್ಧನ್ ಅಳಿಯ ಮನವಿ

ಜೊತೆ ಜೊತೆಯಲಿ ಧಾರಾವಾಹಿಯಿಂದ ಅನಿರುದ್ಧ್ ಔಟ್ ಆದ ಮೇಲೆ ಅಭಿಮಾನಿಗಳು ನಿರ್ದೇಶಕರು ಮತ್ತು ವಾಹಿನಿ ಮೇಲೆ ಗಂರ ಆಗಿದ್ದರು. ಅನಿರುದ್ಧ್ ಅವರನ್ನು ವಾಪಸ್ ಕರೆಸಿ, ಇಲ್ಲ ಅಂದ್ರೆ ನಾವು ಧಾರಾವಾಹಿ ನೋಡಲ್ಲ ಎಂದಿದ್ದರು. ಆದ್ರೆ ಈಗ ಒಂದು ಹೆಜ್ಜೆ ಮುಂದಾಗಿ, ಅಭಿಮಾನಿ ಕೈ ಕುಯ್ದುಕೊಂಡಿದ್ದಾರಂತೆ. ಅನಿರುದ್ಧ್ ಅವರನ್ನು ಸೀರಿಯಲ್‍ನಿಂದ ತೆಗೆದು ಹಾಕಿದ್ದಕ್ಕೆ ಬೇಸರವಾಗಿ ಈ ರೀತಿ ಮಾಡಿದ್ದಾರಂತೆ. ಅನಿರುದ್ಧ್ ಸರ್ ಅಂದ್ರೆ ನನಗೆ ತುಂಬಾ ಇಷ್ಟ. ಅವರು ಸೀರಿಯಲ್‍ಗೆ ಬರಲಿಲ್ಲ ಅಂದ್ರೆ ನಾನು ಸೀರಿಯಲ್ ನೋಡಲ್ಲ. ಪ್ಲೀಸ್ ಎಲ್ಲಾ ಅಭಿಮಾನಿಗಳು ಸಪೋರ್ಟ್ ಮಾಡಬೇಕು ಅಂತ ನನ್ನ ಮನವಿ ಮಾಡಿದ್ದಾರಂತೆ.
Published by:Mahmadrafik K
First published: