Morning Digest: ರಾಜ್ಯದಲ್ಲಿಂದು ಮಳೆ, ನಟಿ ಅನುಪಮಾಗೆ ಕೊರೋನಾ, ಟಾಪ್ ಸುದ್ದಿಗಳು ಇಲ್ಲಿವೆ

Morning Digest: ನಟಿ ಅನುಪಮಾ ಪರಮೇಶ್ವರನ್​ಗೆ ಕೊರೋನಾ ಪಾಸಿಟಿವ್ ದೃಢ, ರಾಜ್ಯದಲ್ಲಿ ಇಂದು ಮಳೆ, ಹೇಗಿದೆ ಪೆಟ್ರೋಲ್ ಬೆಲೆ? ಇಂದಿನ ಕೆಲವು ಪ್ರಮುಖ ಸುದ್ದಿಗಳ ಕಿರುನೋಟ ಇಲ್ಲಿದೆ.

ಈವರೆಗಿನ ಪ್ರಮುಖ ಸುದ್ದಿಗಳು

ಈವರೆಗಿನ ಪ್ರಮುಖ ಸುದ್ದಿಗಳು

  • Share this:
ನಟಿ ಅನುಪಮಾ ಪರಮೇಶ್ವರನ್​ಗೆ ಕೊರೋನಾ ಪಾಸಿಟಿವ್

ನಟಸಾರ್ವಭೌಮ ಸಿನಿಮಾದಲ್ಲಿ ಅಪ್ಪು ಹೀರೋಯಿನ್ ಆಗಿದ್ದ ಅನುಪಮಾ ಪರಮೇಶ್ವರನ್​ಗೆ ಕೊರೋನಾ ಪಾಸಿಟಿವ್ (Covid 19 Positive) ದೃಢಪಟ್ಟಿದೆ. ಸದ್ಯ ಟಾಲಿವುಡ್ (Tollywood) ಸಿನಿಮಾ ಕಾರ್ತಿಕೇಯ 2 ಯಶಸ್ಸಿನ ಸಂಭ್ರಮದಲ್ಲಿರುವ ನಟಿಗೆ ಕೊರೋನಾ ಸೋಂಕು ತಗುಲಿದೆ. ಜ್ವರ ಮತ್ತು ಶೀತದ ಕಾರಣ ಅನುಪಮಾ ಅವರನ್ನು ಪರೀಕ್ಷೆಗೆ ಒಳಪಡಿಸಿದಾಗ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಸತತ ಸೋಲುಗಳಿಂದ ನಿನ್ನೆ ಮೊನ್ನೆಯವರೆಗೂ ಸೈಡ್ ಪಾತ್ರಕ್ಕೆ ಸೀಮಿತರಾಗಿದ್ದ ನಟಿ ಅನುಪಮಾ ಪರಮೇಶ್ವರನ್ (Anupama Parameshwaran), ಕಾರ್ತಿಕೇಯ 2 (Karthikeya 2) ಯಶಸ್ಸಿನ ಖುಷಿಯಲ್ಲಿದ್ದಾರೆ.

ಪೆಟ್ರೋಲ್ ಬೆಲೆ ಏರಿಕೆಯಾ? ಇಳಿಕೆಯಾ?

ಇಂದು ರಾಜ್ಯದಲ್ಲಿ ಪೆಟ್ರೋಲ್-ಡೀಸೆಲ್ ಬೆಲೆಗಳಲ್ಲಿ (Petrol Diesel Price) ಗಮನಾರ್ಹವಾದ ಏರಿಕೆ ಅಥವಾ ಇಳಿಕೆ ಕಂಡುಬಂದಿಲ್ಲ. ಆದರೂ, ಚಿಕ್ಕಪುಟ್ಟ ವ್ಯತ್ಯಾಸಗಳು ಸಾಮಾನ್ಯವಾಗಿದ್ದು ನಿತ್ಯವು ಒಂದಿಷ್ಟು ಪೈಸೆಗಳಷ್ಟು ಏರಿಳಿತ ಇದ್ದೆ ಇರುತ್ತದೆ. ಅತ್ತ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿಯೂ ಕಚ್ಚಾ ತೈಲದ (Crude Oil) ಬೆಲೆ ಮೊದಲಿನ ಸ್ಥಿತಿಗೆ ಇಳಿಯುತ್ತಿಲ್ಲ, ಹಾಗಾಗಿ, ಬೆಲೆ ಏರಿಳಿತಗಳ ಈ ಕಣ್ಣು ಮುಚ್ಚಾಲೆ ಆಟ ನಡೆಯುತ್ತಲೇ ಇದೆ. ಅಷ್ಟಕ್ಕೂ, ಈ ಹಿಂದೆ ವಾಹನ ಸವಾರರರು ರಸ್ತೆ ಮೇಲೆ ವಾಹನ ಇಳಿಸಲೂ ಸಹ ಪರದಾಡುವಂತಾಗಿತ್ತು.

ಕಲಾಸಿಪಾಳ್ಯ ಮಾರುಕಟ್ಟೆ ಶಿಫ್ಟ್

ಬೆಂಗಳೂರು ನಗರದ ಹೊರವಲಯದ ಸಿಂಗೇನ ಅಗ್ರಹಾರ ಬಳಿಯ ಗೂಳಿಮಂಗಲದಲ್ಲಿ ಆಧುನಿಕ ತರಕಾರಿ ಮಾರುಕಟ್ಟೆ (Vegetable Market) ಸ್ಥಾಪನೆಗೆ ರಾಜ್ಯ ಸರ್ಕಾರ ₹ 100 ಕೋಟಿ ಅನುದಾನ ನೀಡುವ ಪ್ರಸ್ತಾವನೆಗೆ ರಾಜ್ಯ ಸಚಿವ ಸಂಪುಟ ಗುರುವಾರ ಒಪ್ಪಿಗೆ ನೀಡಿದೆ. 42 ಎಕರೆ 31 ಗುಂಟೆಯಲ್ಲಿ ತರಕಾರಿ ಮಾರುಕಟ್ಟೆ ಅಭಿವೃದ್ಧಿಪಡಿಸಲು ಗೂಳಿಮಂಗಲ ಗ್ರಾಮದಲ್ಲಿ ಸರ್ಕಾರ ₹48 ಕೋಟಿ ಭೂಸ್ವಾಧೀನ ಮಾಡಿಕೊಳ್ಳಲು ಮುಂದಾಗಿದೆ. ಸಚಿವ ಜೆ.ಸಿ.ಮಾಧುಸ್ವಾಮಿ ಮಾತನಾಡಿ, 42 ಎಕರೆ ಜಾಗದಲ್ಲಿ ಮಾರುಕಟ್ಟೆ ನಿರ್ಮಾಣವಾಗಲಿದ್ದು, 100 ಕೋಟಿ ಅನುದಾನ ಬಂದಿದೆ, ಅದರಲ್ಲಿ ₹48 ಕೋಟಿ ಭೂಸ್ವಾಧೀನಕ್ಕೆ ಮತ್ತು ಉಳಿದ ₹ 52 ಕೋಟಿ ಮಾರುಕಟ್ಟೆ ಮೂಲಸೌಕರ್ಯ ಸ್ಥಾಪನೆಗೆ ಬಳಸಲಾಗುವುದು ಎಂದು ತಿಳಿಸಿದರು.

ಚಿನ್ನದ ಬೆಲೆ ಏರಿಕೆ, ಹೇಗಿದೆ ಇಂದಿನ ಬೆಲೆ?

ಕೆಲ ದಿನಗಳಿಂದ ಚಿನ್ನ-ಬೆಳ್ಳಿ ದರಗಳ ಏರಿಳಿತಗಳ ಕಣ್ಣು ಮುಚ್ಚಾಲೆ ಆಟ ಮುಂದುವರೆದಿದೆ. ನಿನ್ನೆಯಿಂದ ಆಭರಣ ಪ್ರಿಯರಿಗೆ ಏರಿಕೆಯ ಬಿಸಿ ತಗುಲಿದೆ. ಚಿನ್ನ ಇಂದು ಮತ್ತೆ ನನ್ನ ದರ ಹೆಚ್ಚಿಸಿಕೊಂಡಿದೆ. ನಿನ್ನೆ ಒಂದು ಗ್ರಾಂ ಚಿನ್ನದ ಬೆಲೆ 4,725 ಇದ್ದದ್ದು, ಇಂದು 4,750ಕ್ಕೆ ಏರಿಕೆ ಕಂಡಿದೆ. ಕಳೆದ ಕೆಲ ಸಮಯದಿಂದ ಚಿನ್ನದ ಬೆಲೆಗಳಲ್ಲಿ ಅಲ್ಪ ಪ್ರಮಾಣದ ಏರಿಳಿತಗಳು ಆಗುತ್ತಲೇ ಇದ್ದು ಇದಕ್ಕೆ ಪ್ರಮುಖ ಕಾರಣ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಉಂಟಾಗುತ್ತಿರುವ ಮಾರುಕಟ್ಟೆ ಸಂಬಂಧಿತ ವಿದ್ಯಮಾನಗಳು ಹಾಗೂ ಕಚ್ಚಾ ತೈಲದಲ್ಲಾಗಿರುವ (Crude Oil) ಬೆಲೆ ಏರಿಕೆ ಹಾಗೂ ಇತರೆ ಜಾಗತಿಕ ಅಂಶಗಳೇ ಆಗಿವೆ.

ಎಲೆಕ್ಟ್ರಿಕ್​ ವಾಹನಗಳ ಸಬ್ಸಿಡಿ ಬಗ್ಗೆ ಬಿಗ್​ ಅಪ್​ಡೇಟ್​! ಸೆಪ್ಟೆಂಬರ್​ 1 ರಿಂದ ಹೊಸ ನಿಯಮ ಜಾರಿ

ಮೊದಲೆಲ್ಲಾ ದ್ವಿಚಕ್ರ ವಾಹನ (Two Wheler) ಕೊಂಡುಕೊಳ್ಳುವುದು ಅಂದರೆ ವಿಮಾನ ಕೊಂಡುಕೊಳ್ಳುವಂತೆ ಫೀಲ್​ ಇತ್ತು. ಹಣ (Money) ಹೆಚ್ಚು ಅಂತೇನಲ್ಲ. ಅದೊಂದು ರೀತಿಯ ಪ್ರತಿಷ್ಠೆ ಎಂದರೆ ತಪ್ಪಾಗಲ್ಲ. ಈಗೆಲ್ಲಾ ಎಲ್ಲೇ ನೋಡಿದರೂ ಗಾಡಿಗಳದ್ದೇ ಅಬ್ಬರ. ಪ್ರತಿ ಮನೆ (House) ಗೂ ಕಡಿಮೆ ಅಂದರೆ ಎರಡು ದ್ವಿಚಕ್ರ ವಾಹಗಳಿರುತ್ತೆ. ಈಗೆಲ್ಲಾ ಗಾಡಿ ಖರೀದಿಸುವುದು 5 ನಿಮಿಷದ ಕೆಲಸ. ಯಾರೂ ಬೇಕಾದರೂ ದ್ವಿಚಕ್ರ ವಾಹನ ಖರೀದಿ ಮಾಡಬಹುದು. ಅದ್ರಲ್ಲೂ ಈಗ ಎಲೆಕ್ಟ್ರಿಕ್​ ವಾಹನಗಳ (Electric Vehicles) ಅಬ್ಬರ ಎಂದರೇ ತಪ್ಪಾಗಲ್ಲ. ಹೆಚ್ಚು ಜನರು ಎಲೆಕ್ಟ್ರಿಕ್​ ವಾಹನಗಳ ಮೊರೆ ಹೋಗುತ್ತಿದ್ದಾರೆ. ಎಲೆಕ್ಟ್ರಿಕ್ ವಾಹನ ಸಬ್ಸಿಡಿ (Electric Vehicle Subsidy) ಮತ್ತು ಪಿಎಲ್‌ಐ (PLI) ಯೋಜನೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಕೆಲವು ನಿಯಮಗಳನ್ನು ಬಿಗಿಗೊಳಿಸಿದೆ.
Published by:Divya D
First published: