• Home
  • »
  • News
  • »
  • state
  • »
  • Top 5 News: ಸಿದ್ದರಾಮಯ್ಯಗೆ ಸವಾಲ್ ಹಾಕಿದ್ದವ ಸಸ್ಪೆಂಡ್, ಶೂಟಿಂಗ್​ನಲ್ಲಿ ಅವಾಂತರ, ಶಾಸಕರಿಗೆ ಬೆದರಿಕೆ ಪತ್ರ; ಬೆಳಗಿನ ಟಾಪ್ ನ್ಯೂಸ್

Top 5 News: ಸಿದ್ದರಾಮಯ್ಯಗೆ ಸವಾಲ್ ಹಾಕಿದ್ದವ ಸಸ್ಪೆಂಡ್, ಶೂಟಿಂಗ್​ನಲ್ಲಿ ಅವಾಂತರ, ಶಾಸಕರಿಗೆ ಬೆದರಿಕೆ ಪತ್ರ; ಬೆಳಗಿನ ಟಾಪ್ ನ್ಯೂಸ್

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

  • Share this:

1.Siddaramaiah: ಸಿದ್ದರಾಮಯ್ಯ ಎಸ್ಕಾರ್ಟ್​ ಇಲ್ಲದೇ ಮನೆಗೆ ಹೋಗಲಿ ಅಂತ ಹೇಳಿದ್ದ ಪೊಲೀಸ್ ಪೇದೆ ಸಸ್ಪೆಂಡ್


ಮಾಜಿ ಸಿಎಂ ಸಿದ್ದರಾಮಯ್ಯ (Former CM Siddadaramaih) ಹೇಳಿಕೆ ವಿರುದ್ಧ ಪೋಸ್ಟ್‌ ಹಾಕಿದ್ದ ಪೊಲೀಸ್ ಪೇದೆಯನ್ನು (Police Constable) ಅಮಾನತು ಮಾಡಲಾಗಿದೆ. ಸಿದ್ದರಾಮಯ್ಯ ವಿರುದ್ಧ ಪೋಸ್ಟ್‌ ಮಾಡಿದ್ದ ವಿಜಯಪುರ ಗ್ರಾಮಾಂತರ ಠಾಣೆ ಕಾನ್ಸಟೇಬಲ್ ರಾಜಶೇಖರ್ ಖಾನಾಪುರ ಅವರನ್ನು ಅಮಾನತು ಮಾಡಿ ವಿಜಯಪುರ ಎಸ್ ಪಿ ಎಚ್.ಡಿ.ಆನಂದಕುಮಾರ್ ಆದೇಶ ಮಾಡಿದ್ದಾರೆ. ‘ಪೊಲೀಸರಿಗೆ ಬೈಯುವ ನೀನು ಪೊಲೀಸ್ ಎಸ್ಕಾರ್ಟ್ ಇಲ್ಲದೇ ಮನೆಗೆ ಹೋಗು’ ಎಂದು ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾನ್‌ಸ್ಟೆಬಲ್‌ ರಾಜಶೇಖರ ಖಾನಾಪುರ ಸವಾಲು ಹಾಕಿದ್ದರು. ಸರ್ಕಾರಿ ಉದ್ಯೋಗದಲ್ಲಿ (Government Employee) ಇರೋ ಓರ್ವ ನೌಕರ ಈ ರೀತಿ ಹೇಳಿಕೆ ನೀಡಬಹುದಾ ಅಂತ ಸಾಮಾಜಿಕ ಜಾಲತಾಣದಲ್ಲಿ ಪರ, ವಿರೋಧ ಚರ್ಚೆ ನಡೆದಿವೆ. ಇಂದಿಗೂ ನಡೆಯುತ್ತಿವೆ.


2.Telugu Cinema Shooting: ಮೇಲುಕೋಟೆ ಶೂಟಿಂಗ್​ನಲ್ಲಿ ಅವಾಂತರ; ತೆಲುಗು ಚಿತ್ರತಂಡದ ವಿರುದ್ಧ ಸ್ಥಳೀಯರ ಆಕ್ರೋಶ


ನಟ ನಾಗಚೈತನ್ಯ (Actor Naga Chaitanya) ನಟನೆಯ ಸಿನಿಮಾದ ಚಿತ್ರೀಕರಣಕ್ಕಾಗಿ (Cinema Shooting) ಪ್ರಾಚ್ಯ ಸ್ಮಾರಕವನ್ನು ಬಾರ್ ಆಗಿ ಪರಿವರ್ತನೆ ಮಾಡಿದ್ದಾರೆ ಎಂದು ಮೇಲುಕೋಟೆಯ (Melukote) ಜನರು ಆರೋಪ ಮಾಡಿದ್ದಾರೆ. ತೆಲುಗು ಚಿತ್ರತಂಡದ ವಿರುದ್ಧ ಮಂಡ್ಯದ ಪಾಂಡವಪುರ ತಾಲೂಕಿನ ಮೇಲುಕೋಟೆ ಗ್ರಾಮದ ಕೆಲವು ನಾಗರೀಕರು ಆಕ್ರೋಶ ಹೊರ ಹಾಕಿದ್ದಾರೆ.


Morning Digest 9th October 2022 have quick look of important news today mrq
ಶೂಟಿಂಗ್


ಮೇಲುಕೋಟೆಯ ಪ್ರಸಿದ್ದ ರಾಯಗೋಪುರ (Rayagopura, Melukote) ಸ್ಥಳದ ಬಳಿ ಚಿತ್ರೀಕರಣ ತಂಡದಿಂದ ಚಿತ್ರೀಕರಣಕ್ಕಾಗಿ ಬಾರ್ ನಿರ್ಮಾಣ ಮಾಡಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.


3.PFI: ಮೋದಿ, ಮಥುರಾ, ಅಯೋಧ್ಯೆಯೇ ನಮ್ಮ ಟಾರ್ಗೆಟ್! ಪಿಎಫ್‌ಐನಿಂದ ಶಾಸಕರಿಗೆ ಬೆದರಿಕೆ ಪತ್ರ


ಐದು ವರ್ಷಗಳ ಕಾಲ ದೇಶದಲ್ಲಿ ನಿಷೇಧದ (Ban) ಶಿಕ್ಷೆಗೆ ಒಳಗಾಗಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ಇದೀಗ ತೆರೆ ಮರೆಯಲ್ಲೇ ಕೆಲಸ ಮಾಡುತ್ತಿದೆಯಾ? ಹೀಗೊಂದು ಅನುಮಾನಕ್ಕೆ ಕಾರಣವಾಗಿರೋದು ಮಹಾರಾಷ್ಟ್ರ ಬಿಜೆಪಿ ಶಾಸಕ (Maharashtra BJP MLA) ವಿಜಯ್ ದೇಶಮುಖ್‌ (Vijay Deshmukh) ಅವರ ಗಂಭೀರ ಆರೋಪ. ಪಿಎಫ್ಐ ಸದಸ್ಯನೊಬ್ಬನಿಂದ (PFI Member) ತಮಗೆ ಬೆದರಿಕೆ ಪತ್ರ (Threat letter) ಬಂದಿದ್ದಾಗಿ ವಿಜಯ್ ದೇಶಮುಖ್ ಆರೋಪಿಸಿದ್ದಾರೆ.


Morning Digest 9th October 2022 have quick look of important news today mrq
ಪಿಎಫ್​ಐ


ಪ್ರಧಾನಿ ನರೇಂದ್ರ ಮೋದಿ (PM Narendra Modi), ಮಥುರಾ (Mathura) ಹಾಗೂ ಅಯೋಧ್ಯೆ ರಾಮಮಂದಿರವೇ (Ayodhya Ram Mandir) ನಮ್ಮ ಟಾರ್ಗೆಟ್ (Target) ಅಂತ ಆ ಪತ್ರದಲ್ಲಿ ಬೆದರಿಕೆ ಒಡ್ಡಿದ್ದಾಗಿ ಶಾಸಕ ವಿಜಯ್ ದೇಶಮುಖ್ ಆರೋಪಿಸಿದ್ದಾರೆ.


4.Shiv Sena: ಬಿಲ್ಲೂ ಬೇಡ, ಬಾಣವೂ ಬೇಡ! ಶಿವಸೇನೆ ಚಿಹ್ನೆ ಬಳಸದಂತೆ ಉದ್ಧವ್-ಶಿಂಧೆ ಬಣಕ್ಕೆ ಚುನಾವಣಾ ಆಯೋಗ ಸೂಚನೆ


ಮಹಾರಾಷ್ಟ್ರದ ರಾಜಕೀಯ ಸಂಘರ್ಷ (Maharashtra political conflict) ಮತ್ತೊಂದು ಹಂತ ತಲುಪಿದೆ. ಶಿವಸೇನೆಯ (Shiv Sena) ಬಿಲ್ಲು ಹಾಗೂ ಬಾಣದ ಚಿಹ್ನೆಗಾಗಿ (bow and arrow symbol) ಕಿತ್ತಾಡುತ್ತಿದ್ದ ಮಾಜಿ ಸಿಎಂ ಉದ್ಧವ್ ಠಾಕ್ರೆ (Ex CM Uddhav Thackeray) ಹಾಗೂ ಹಾಲಿ ಸಿಎಂ ಏಕನಾಥ್ ಶಿಂಧೆ ಬಣಕ್ಕೆ (CM Eknath Shinde Team) ಕೇಂದ್ರ ಚುನಾವಣಾ ಆಯೋಗ (Central Election Commission) ಶಾಕ್ ನೀಡಿದೆ.


Morning Digest 9th October 2022 have quick look of important news today mrq
ಶಿವಸೇನೆ ಪಕ್ಷದ ಚಿಹ್ನೆ


ಮುಂದಿನ ಅಂಧೇರಿ ಉಪ ಚುನಾವಣೆಯಲ್ಲಿ (Andheri by-election) ಶಿವಸೇನೆ ಪಕ್ಷಗ ಚಿಹ್ನೆ ಬಳಸದಂತೆ ಖಡಕ್ ಸೂಚನೆ ನೀಡಿದೆ. ಚುನಾವಣಾ ಆಯೋಗದ ಮಧ್ಯಂತರ ಆದೇಶದ ಪ್ರಕಾರ, ಎರಡೂ ಗುಂಪುಗಳು ಈಗ ಹೊಸ ಚಿಹ್ನೆಗಳನ್ನು ಆರಿಸಬೇಕಾಗುತ್ತದೆ. ಸದ್ಯ ಲಭ್ಯವಿರುವ ಉಚಿತ ಚಿಹ್ನೆಗಳ ಪಟ್ಟಿಯಿಂದ ಆಯ್ಕೆಮಾಡಬಹುದಾದ ವಿಭಿನ್ನ ಚಿಹ್ನೆಗಳನ್ನು ಅವರಿಗೆ ಹಂಚಲಾಗುತ್ತದೆ. ಮುಂಬೈನ ಅಂಧೇರಿ ಪೂರ್ವದಲ್ಲಿ ಮುಂಬರುವ ಉಪಚುನಾವಣೆಯಲ್ಲಿ ಎರಡೂ ಬಣಗಳು ಈಗ ಬೇರೆ ಹೆಸರು ಮತ್ತು ಚಿಹ್ನೆಯನ್ನು ಬಳಸಬೇಕಾಗುತ್ತದೆ.


5.Kantara Movie: ಮುಂಬೈ ಪ್ರಸಿದ್ಧ ಥಿಯೇಟರ್​​ನಲ್ಲಿ ಹಿಂದಿಗೆ ಡಬ್ ಆಗದೆ ರಿಲೀಸ್ ಆದ ಮೊದಲ ಸೌತ್ ಸಿನಿಮಾ ಕಾಂತಾರ


Kantara Movie: ಮುಂಬೈನ ಐಕಾನಿಕ್ ಮರಾಠ ಮಂದಿರ್ ಥಿಯೇಟರ್​​ನಲ್ಲಿ ಮೊದಲ ಬಾರಿ ಸೌತ್ ಇಂಡಿಯಾ ಸಿನಿಮಾ ಒಂದು ಡಬ್ ಆಗದೆ ರಿಲೀಸ್ ಆಗಿದೆ. ಸ್ಯಾಂಡಲ್​ವುಡ್ ಸಿನಿಮಾ ಕಾಂತಾರ ಈ ಹೆಮ್ಮೆಗೆ ಪಾತ್ರವಾಗಿದೆ. ರಿಷಬ್ ಶೆಟ್ಟಿಯವರ ಕಾಂತಾರ ಸಿನಿಮಾ ಪ್ರತಿದಿನ ಹೊಸ ಹೊಸ ಅಪ್ಡೇಟ್ ತರುತ್ತಿದೆ.


Morning Digest 9th October 2022 have quick look of important news today mrq
ಕಾಂತಾರ


ಇದೀಗ ಸ್ಯಾಂಡಲ್​ವುಡ್​​ನ ಈ ಸಿನಿಮಾ ಇನ್ನೊಂದು ಹಿರಿಮೆಗೆ ಪಾತ್ರವಾಗಿದೆ. ಮೂಲ ಭಾಷೆಯಲ್ಲಿ ಮುಂಬೈನ ಐಕಾನಿಕ್ ಮರಾಠ ಮಂದಿರದಲ್ಲಿ ಬಿಡುಗಡೆಯಾದ ಮೊದಲ ದಕ್ಷಿಣ ಭಾರತದ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಕಾಂತಾರ.

Published by:Mahmadrafik K
First published: