• Home
  • »
  • News
  • »
  • state
  • »
  • Top 5 News: ಪುಷ್ಪಾ ನಟಿಗೆ 2ನೇ ಮದ್ವೆಯಂತೆ, ಸಿಎಂ ಯಾತ್ರೆಗೆ ಯತ್ನಾಳ್ ವ್ಯಂಗ್ಯ, ಸಮಂತಾ ಫ್ಯಾನ್ಸ್​​​ ಇಲ್ನೋಡಿ; ಬೆಳಗಿನ ಟಾಪ್ ನ್ಯೂಸ್

Top 5 News: ಪುಷ್ಪಾ ನಟಿಗೆ 2ನೇ ಮದ್ವೆಯಂತೆ, ಸಿಎಂ ಯಾತ್ರೆಗೆ ಯತ್ನಾಳ್ ವ್ಯಂಗ್ಯ, ಸಮಂತಾ ಫ್ಯಾನ್ಸ್​​​ ಇಲ್ನೋಡಿ; ಬೆಳಗಿನ ಟಾಪ್ ನ್ಯೂಸ್

ಈವರೆಗಿನ ಪ್ರಮುಖ ಸುದ್ದಿಗಳು

ಈವರೆಗಿನ ಪ್ರಮುಖ ಸುದ್ದಿಗಳು

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

  • Share this:

1.CM Bommai ಅವರೇ ಯಡಿಯೂರಪ್ಪರನ್ನ ಕರ್ಕೊಂಡು ತಿರುಗಾಡಿದ್ರೆ ಲಗಾ ಒಗ್ತೀರಿ; ಯತ್ನಾಳ್


ಮಾಜಿ ಸಿಎಂ ಯಡಿಯೂರಪ್ಪನವರನ್ನು‌ (Former CM BS Yediyurappa) ಕರೆದುಕೊಂಡು‌‌ ತಿರುಗಾಡಿದರೆ ಮುಖ್ಯಮಂತ್ರಿ ಬೊಮ್ಮಾಯಿ‌ (CM Basavaraj Bommai) ಅವರೇ‌ ನೀವು ಲಗಾ ಒಗಿತ್ತಿರಿ ಎಂದು ಪಂಚಮಸಾಲಿ ಮೀಸಲಾತಿ (Panchamasali Reservation) ಹೋರಾಟ‌ ಸಮಿತಿಯ ಅಧ್ಯಕ್ಷ, ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (BJP MLA Basanagowda Patil Yatnal) ಹೇಳಿದ್ದಾರೆ. ಮೂಡಲಗಿ ತಾಲೂಕಿನ ಕಲ್ಲೋಳಿ ಗ್ರಾಮದಲ್ಲಿ ಪ್ರಥಮ ಪಂಚಮಸಾಲಿ ಮೀಸಲಾತಿ ಹಕ್ಕೊತ್ತಾಯ ಬೃಹತ್ ಸಮಾವೇಶದಲ್ಲಿ ಮಾತನಾಡಿ ತಮ್ಮದೇ ಪಕ್ಷದ ನಾಯಕರಿಗೆ ಶಾಸಕ ಯತ್ನಾಳ್ ಎಚ್ಚರಿಕೆ ನೀಡಿದ್ದಾರೆ


2.Anchor Anasuya: ಎರಡನೇ ಮದುವೆಗೆ ರೆಡಿಯಾಗ್ತಿದ್ದಾರಾ ಪುಷ್ಪಾ ನಟಿ?


Anasuya Bharadwaj: ಅನಸೂಯಾ ಭಾರದ್ವಾಜ್ ಯಾವಾಗಲೂ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್. ಜಬರ್ದಸ್ತ್ ನಟಿ ಯಾವಾಗಲೂ ತನ್ನ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿರುತ್ತಾರೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೇ ಮದುವೆ ಬಗ್ಗೆ ನಟಿ ಕೊಟ್ಟ ಪ್ರತಿಕ್ರಿಯೆ ವೈರಲ್ ಆಗಿದೆ. ಪತಿ ಹಾಗೂ ಇಬ್ಬರು ಮಕ್ಕಳೊಂದಿಗೆ ಉತ್ತಮ ಕೌಟುಂಬಿಕ ಜೀವನ ನಡೆಸುತ್ತಿರುವ ಅನಸೂಯಾಗೆ ಅನಿರೀಕ್ಷಿತ ಪ್ರಶ್ನೆ ಎದುರಾಗಿದೆ. ನೆಟ್ಟಿಗರೊಬ್ಬರು ಪುಷ್ಪಾ ನಟಿಗೆ ಪ್ರಪೋಸ್ ಮಾಡಿದ್ದಾರೆ.


Morning Digest 8th October 2022 have quick look of important news today mrq
ಪುಷ್ಪಾ ನಟಿಯ ಕುಟುಂಬ


ಈ ಬಗ್ಗೆ ಅನಸೂಯಾ ಅವರ ಪ್ರತಿಕ್ರಿಯೆ ಹಾಟ್ ಟಾಪಿಕ್ ಆಗಿದೆ. ಅನಸೂಯಾ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್. ತನ್ನ ಅಭಿಮಾನಿಗಳೊಂದಿಗೆ ತಮ್ಮ ವಿಶೇಷಗಳನ್ನು ಹಂಚಿಕೊಳ್ಳುತ್ತಾರೆ. ಆನ್‌ಲೈನ್ ಮಾಧ್ಯಮಗಳಲ್ಲಿ ಯಾವಾಗಲೂ ಅಸೂಯೆಯ ಹವಾ ಇರುತ್ತದೆ. ಜಬರ್ದಸ್ತ್ ನಟಿ ಯಾವಾಗಲೂ ತನ್ನ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿರುತ್ತಾರೆ.


3.Samantha Ruth Prabhu: ಸಮಂತಾ ಫ್ಯಾನ್ಸ್​ಗೆ ಗುಡ್​ನ್ಯೂಸ್! ವರುಣ್ ಧವನ್ ಜೊತೆ ಪ್ರಾಜೆಕ್ಟ್​ ಶುರು


Samantha Ruth Prabhu: ಸಮಂತಾ ಅವರು ಬಾಲಿವುಡ್​ನಿಂದ ಆಫರ್ ಪಡೆಯುತ್ತಿದ್ದಾರೆ. ಇದೀಗ ನಟ ವರುಣ್ ಧವನ್ ಜೊತೆ ಹೊಸ ಪ್ರಾಜೆಕ್ಟ್ ಮಾಡಲಿದ್ದು ಒಟಿಟಿಯಲ್ಲಿ ಮತ್ತೊಮ್ಮೆ ರಾಕ್ ಮಾಡಲಿದ್ದಾರೆ. ಸಮಂತಾ ಒಂದೆಡೆ ಸಿನಿಮಾ ಮಾಡುತ್ತಿದ್ದು, ಇನ್ನೊಂದೆಡೆ ವೆಬ್ ಸೀರಿಸ್ ನಲ್ಲಿ ನಟಿಸುತ್ತಿದ್ದಾರೆ. ಅದರ ಭಾಗವಾಗಿ ಸೌತ್ ನಟಿ ಈಗಾಗಲೇ ಅಮೆಜಾನ್ ಪ್ರೈಮ್‌ಗಾಗಿ ದಿ ಫ್ಯಾಮಿಲಿ ಮ್ಯಾನ್ 2 ವೆಬ್ ಸರಣಿಯಲ್ಲಿ ನಟಿಸಿದ್ದಾರೆ. ಫ್ಯಾಮಿಲಿ ಮ್ಯಾನ್ 2 ಸಕ್ಸಸ್ ಬಗ್ಗೆ ಹೇಳಬೇಕಾಗಿಲ್ಲ. ಈಗ ನಟಿ ಮತ್ತೊಂದು ವೆಬ್ ಸರಣಿಗೆ ಓಕೆ ಅಂದಿದ್ದಾರೆ. ಇದು ಪ್ಯಾನ್ ಇಂಡಿಯಾ ಮಟ್ಟದಲ್ಲಿಯೂ ಬರುತ್ತಿದೆ.


Morning Digest 8th October 2022 have quick look of important news today mrq
ಸಮಂತಾ ರುಥ್ ಪ್ರಭು


4.Indian Army: ಚೀನಾಕ್ಕೆ ಸೆಡ್ಡು ಹೊಡಿಯಲು ಹೊಸ ಬಗೆಯ ಶಸ್ತ್ರಾಸ್ತ್ರದೊಂದಿಗೆ ಭಾರತ ರೆಡಿ!


ಭಾರತ (India) ಮತ್ತು ಚೀನಾ (China) ನಡುವಿನ ಪೂರ್ವ ಲಡಾಖ್ ನಡುವಿನ ತಿಕ್ಕಾಟಕ್ಕೆ ಇನ್ನೂ ವಿರಾಮ ಸಿಕ್ಕಿಲ್ಲ. ಹೀಗಾಗಿ ಭಾರತೀಯ ಸೇನೆಯು (Indian Army) ಚೀನಾದ ಗಡಿಯಲ್ಲಿ ತನ್ನ ಸಾಮರ್ಥ್ಯವನ್ನು ಹೆಚ್ಚಿಸಲು ಶಸ್ತ್ರಾಸ್ತ್ರವನ್ನು ಅಪ್‌ಗ್ರೇಡ್ ಮಾಡಿಕೊಳ್ಳಲು ಸಜ್ಜಾಗಿದೆ ಎಂದು ಮೂಲಗಳು ತಿಳಿಸಿವೆ. ಪೂರ್ವ ಲಡಾಖ್‌ನ ವಾಸ್ತವ ನಿಯಂತ್ರಣ ರೇಖೆಯ (ಎಲ್‌ಎಸಿ) ಪಶ್ಚಿಮ ವಲಯದ ಮೇಲೆ ಗಮನ ಕೇಂದ್ರೀಕರಿಸಿರುವ ಭಾರತೀಯ ಸೇನೆಯು ತನ್ನ ಶಸ್ತ್ರಾಸ್ತ್ರವನ್ನು (weapons) ನವೀಕರಿಸುವುದರ ಜೊತೆಗೆ ಶಸ್ತ್ರಾಸ್ತ್ರ ಸಂಖ್ಯೆಯನ್ನು ಹೆಚ್ಚಿಸಿಕೊಂಡಿದೆ.


Morning Digest 8th October 2022 have quick look of important news today mrq
ಸಾಂಕೇತಿಕ ಚಿತ್ರ


ಫೈರ್‌ಪವರ್ ಅಪ್‌ಗ್ರೇಡ್ ಅನ್ನು ಅನುಸರಿಸುತ್ತಿರುವ ಭಾರತೀಯ ಸೇನೆಯು ಚೀನಾದ ಗಡಿಯಲ್ಲಿ ತನ್ನ ಸಾಮರ್ಥ್ಯವನ್ನು ಹೆಚ್ಚಿಸಲು ಹೆಚ್ಚಿನ ಫಿರಂಗಿ ಬಂದೂಕುಗಳು, ರಾಕೆಟ್‌ಗಳು ಮತ್ತು ಹೆಚ್ಚಿನ ಯುದ್ಧಸಾಮಗ್ರಿಗಳನ್ನು ಸೇರಿಸಲು ಸಜ್ಜಾಗಿದೆ ಎಂದು ಹೆಸರು ಹೇಳಲು ಇಚ್ಛಿಸದ ಕೆಲ ವ್ಯಕ್ತಿಗಳು ಮಾಹಿತಿ ಹಂಚಿಕೊಂಡಿದ್ದಾರೆ.


5.Gold-Silver Price Today: ಚಿನ್ನದ ಏರಿಕೆಯ ಓಟಕ್ಕೆ ಬಿತ್ತು ಬ್ರೇಕ್; ಇಂದೇ ಆಪತ್ಕಾಲದ ಬಂಧುವನ್ನು ಬರಮಾಡಿಕೊಳ್ಳಿ


Gold And Silver Rate 8 October 2022: ನಿನ್ನೆ ಒಂದು ಗ್ರಾಂ ಚಿನ್ನದ ಬೆಲೆ 4,785 ರೂ ಇತ್ತು. ಇಂದು ಚಿನ್ನದ ಬೆಲೆಯಲ್ಲಿ ಯಾವುದೇ ಬದಲಾವಣೆಗಳು ಆಗಿಲ್ಲ. ಚಿನ್ನದ ಬೆಲೆ ಸ್ಥಿರವಾಗಿದೆ. ಕಳೆದ ಎರಡು ದಿನಗಳಿಂದ ಚಿನ್ನದ ಏರಿಕೆಯತ್ತ ಸಾಗಿತ್ತು.


Morning Digest 8th October 2022 have quick look of important news today mrq
ಸಾಂದರ್ಭಿಕ ಚಿತ್ರ


ಮಾರುಕಟ್ಟೆಯಲ್ಲಿ ಇಂದಿನ ಬಂಗಾರದ ದರಗಳ ಕುರಿತು ಒಂದು ನೋಡುವುದಾದರೆ ಒಂದು ಗ್ರಾಂ (1GM) 22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 4,785 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,220 ಆಗಿದೆ. ಎಂಟು ಗ್ರಾಂ (8GM) 22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 38,280 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 41,760 ಆಗಿದೆ.

Published by:Mahmadrafik K
First published: